LIC HFL ಜೂನಿಯರ್ ಸಹಾಯಕ ನೇಮಕಾತಿ: ಇಂದೇ ಅರ್ಜಿ ಸಲ್ಲಿಸಿ
ಸ್ನೇಹಿತರೇ ಮೆಟ್ರೊ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (LIC HFL) ಜೂನಿಯರ್ ಸಹಾಯಕ ಹುದ್ದೆಗಳಿಗಾಗಿ ಅಧಿಕ್ರತ ಅಧಿಸೂಚನೆಯನ್ನು ಹೊರಡಿಸಿದ್ದು, ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ ಅಂತಾನೆ ಹೇಳಬಹುದು. ಏಕೆಂದರೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಸೂಕ್ತ ಸಂಬಳದೊಂದಿಗೆ ತಮ್ಮ ತಮ್ಮ ರಾಜ್ಯಗಳಲ್ಲಿ ಕೆಲಸ ಮಾಡಲು ಅವಕಾಶವನ್ನು ನೀಡಲಾಗಿದೆ. ನೇಮಕಾತಿಗೆ ಸಂಬಂದಿತ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದ್ದು ಲೇಖನವನ್ನು ಪೂರ್ತಿಯಾಗಿ ಓದಿರಿ.
ಮುಖ್ಯ ದಿನಾಂಕಗಳು
- ಅರ್ಜಿಯ ಪ್ರಾರಂಭ ದಿನಾಂಕ: ಆರಂಭವಾಗಿದೆ
- ಅರ್ಜಿಯ ಅಂತಿಮ ದಿನಾಂಕ: 14 ಆಗಸ್ಟ್ 2024
- ಪ್ರಾಥಮಿಕ ಪರೀಕ್ಷೆ ದಿನಾಂಕ: ಸೆಪ್ಟೆಂಬರ್ 2024 (ಇದು ತಾತ್ಕಾಲಿಕ ವಾಗಿರುತ್ತದೆ)
- ಸಂದರ್ಶನ ದಿನಾಂಕ: ಪ್ರಕಟಿಸಲಾಗಲಿಲ್ಲ
ಹುದ್ದೆಗಳ ವಿವರ
ಸ್ನೇಹಿತರೇ ಮೆಟ್ರೊ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (LIC HFL) ಜೂನಿಯರ್ ಸಹಾಯಕರ ಒಟ್ಟು 200 ಹುದ್ದೆಗಳ ಭರ್ತಿಗೆ ನೇಮಕಾತಿ ನಡೆಯಲಿದ್ದು, ರಾಜ್ಯವಾರಿ ಹುದ್ದೆಗಳ ವಿಂಗಡಣೆ ಈ ರೀತಿ ಇದೆ
- ಆಂಧ್ರಪ್ರದೇಶ: 12
- ಅಸ್ಸಾಂ: 05
- ಚತ್ತೀಸ್ಗಡ್: 06
- ಗುಜರಾತ್: 05
- ಹಿಮಾಚಲ ಪ್ರದೇಶ: 03
- ಜಮ್ಮು ಮತ್ತು ಕಾಶ್ಮೀರ: 01
- ಕರ್ನಾಟಕ: 38
- ಮಧ್ಯಪ್ರದೇಶ: 12
- ಮಹಾರಾಷ್ಟ್ರ: 53
- ಪುಡುಚೇರಿ: 01
- ಸಿಕ್ಕಿಂ: 01
- ತಮಿಳುನಾಡು: 10
- ತೆಲಂಗಾಣ: 31
- ಉತ್ತರ ಪ್ರದೇಶ: 17
- ಪಶ್ಚಿಮ ಬಂಗಾಳ: 05
ವಿದ್ಯಾರ್ಹತೆ
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಯು ಮಾನ್ಯತೆ ಪಡೆದಿರುವ ವಿದ್ಯಾಸಂಸ್ಥೆಯಿಂದ ಕನಿಷ್ಠ 55% ಅಂಕಗಳೊಂದಿಗೆ ಡಿಗ್ರಿ ಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ
ಅಭ್ಯರ್ಥಿಗಳ ವಯೋಮಿತಿಯು 01.07.2024 ರಂದು 21 ರಿಂದ 28 ವರ್ಷಗಳಿರಬೇಕು.
ಅರ್ಜಿ ಸಲ್ಲಿಸುವ ವಿಧಾನ
- ಮೆಟ್ರೊ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ LIC HFL ಅಧಿಕ್ರತ ಪೋರ್ಟಲ್ ಗೆ ಭೇಟಿ ನೀಡಿ.
- “Careers” ವಿಭಾಗವನ್ನು ಹುಡುಕಿ, ಜೂನಿಯರ್ ಸಹಾಯ್ಕ ನೇಮಕಾತಿ ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ಎಲ್ಲ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ನಮೂದಿತ ಅರ್ಜಿ ಶುಲ್ಕವನ್ನು ಪಾವತಿಸಿ.
- ಕೊನೆಯಲ್ಲಿ ಎಲ್ಲ ವಿವರಗಳನ್ನು ಪರಿಶೀಲಿಸಿ, ಅರ್ಜಿಯನ್ನು ಸಲ್ಲಿಸಿ.
ಅರ್ಜಿ ಶುಲ್ಕ
ಮೆಟ್ರೊ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (LIC HFL) ಜೂನಿಯರ್ ಸಹಾಯಕ ನೇಮಕಾತಿಗೆ ಅರ್ಜಿ ಸಲ್ಲಿಸಲು ಎಲ್ಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವು ರೂ 800 ಆಗಿರುತ್ತದೆ. ಈ ಅರ್ಜಿ ಶುಲ್ಕವನ್ನು ಅಭ್ಯರ್ಥಿಗಳು ಆನ್ಲೈನ್ ಮೂಲಕ ಪಾವತಿಸಬಹುದು.
ಆಯ್ಕೆ ವಿಧಾನ
- ಅಭ್ಯರ್ಥಿಗಳಿಗೆ ಮೊದಲು ಆನ್ಲೈನ್ ಮೂಲಕ ಪ್ರಾಥಮಿಕ ಪರೀಕ್ಷೆಯನ್ನು ನಡೆಸಲಾಗುವುದು.
- ಪ್ರಾಥಮಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಕರೆಯಲಾಗುವುದು.
- ಅಂತಿಮ ಆಯ್ಕೆಯೂ ಆನ್ಲೈನ್ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಪಡೆದುಕೊಂಡ ಅಂಕಗಳನ್ನು ಸೇರಿಸಿ ಅದರ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
ಪರೀಕ್ಷೆ ವಿವರಗಳು
- ಮೋಡ್: ಆನ್ಲೈನ್
- ಕಾಲಾವಧಿ: 120 ನಿಮಿಷಗಳು
- ಮಾರ್ಕಿಂಗ್ ಸ್ಕೀಮ್: ತಪ್ಪು ಉತ್ತರಗಳಿಗೆ 0.25 ಅಂಕಗಳನ್ನು ಕಡಿತ ಮಾಡಲಾಗುತ್ತದೆ.
ಪರೀಕ್ಷಾ ಪ್ಯಾಟರ್ನ್ ಮತ್ತು ಪಠ್ಯಕ್ರಮ
- ಒಟ್ಟು ಅಂಕಗಳು: 200
- ಪ್ರಶ್ನೆಗಳ ಸಂಖ್ಯೆ: 200
- ಇಂಗ್ಲಿಷ್ ಭಾಷೆ: 40 ಪ್ರಶ್ನೆಗಳು
- ಲಾಜಿಕಲ್ ರೀಸನಿಂಗ್: 40 ಪ್ರಶ್ನೆಗಳು
- ಸಾಮಾನ್ಯ ಜ್ಞಾನ: 40 ಪ್ರಶ್ನೆಗಳು
- ನ್ಯೂಮೆರಿಕಲ್ ಅಬಿಲಿಟಿ : 40 ಪ್ರಶ್ನೆಗಳು
- ಕಂಪ್ಯೂಟರ್ ಕೌಶಲ್ಯ: 40 ಪ್ರಶ್ನೆಗಳು
ವಿಶದ ಪಠ್ಯಕ್ರಮ: ಸಾಮಾನ್ಯ ಜ್ಞಾನ, ನ್ಯೂಮೆರಿಕಲ್ ಅಬಿಲಿಟಿ, ಲಾಜಿಕಲ್ ರೀಸನಿಂಗ್, ಇಂಗ್ಲಿಷ್ ಭಾಷೆ ಮತ್ತು ಕಂಪ್ಯೂಟರ್ ಸ್ಕಿಲ್ಸ್.
ವೇತನ ಮತ್ತು ಸೌಲಭ್ಯಗಳು
- ಮೂಲ ವೇತನ: ₹20,000
- ಒಟ್ಟು ಮಾಸಿಕ ವೇತನ: ₹32,000 ರಿಂದ ₹35,200
ನಗರಗಳ ಸೀಮಿತ ವೇತನ:
- ನಗರ ವರ್ಗ I: ₹35,200
- ನಗರ ವರ್ಗ II: ₹33,600
- ನಗರ ವರ್ಗ III: ₹32,400
ಪ್ರಮುಖ ಲಿಂಕುಗಳು
- LIC HFL ಜೂನಿಯರ್ ಸಹಾಯಕ ಅರ್ಜಿ : ಇಲ್ಲಿ ಒತ್ತಿ
- LIC HFL ಜೂನಿಯರ್ ಸಹಾಯಕ ನೋಟಿಫಿಕೇಶನ್: ಇಲ್ಲಿ ಒತ್ತಿ