ರದ್ದಾಗಲಿದೆ ಅನರ್ಹರ ಬಿ‌ಪಿ‌ಎಲ್ ಕಾರ್ಡ್: ಇಲ್ಲಿದೆ ನೋಡಿ ರಾಜ್ಯ ಸರ್ಕಾರದ ಮಾಸ್ಟರ್ ಪ್ಲ್ಯಾನ್

ರದ್ದಾಗಲಿದೆ ಅನರ್ಹರ ಬಿ‌ಪಿ‌ಎಲ್ ಕಾರ್ಡ್: ಇಲ್ಲಿದೆ ನೋಡಿ ರಾಜ್ಯ ಸರ್ಕಾರದ ಮಾಸ್ಟರ್ ಪ್ಲ್ಯಾನ್

ಸ್ನೇಹಿತರೇ ರಾಜ್ಯ ಸರ್ಕಾರ ಅನರ್ಹರ ಬಿ‌ಪಿ‌ಎಲ್ ರೇಷನ್ ಕಾರ್ಡ್ ರದ್ದುಗೊಳಿಸಲು ಮಾಸ್ಟರ್ ಪ್ಲ್ಯಾನ್ ನಡೆಸುತ್ತಿರುವ ಸುದ್ದಿ ಇದೀಗ ಹೊರಗಡೆ ಬಂದಿದ್ದು. ಈ ಸುದ್ದಿ ಕೇಳಿ ಹಲವರಲ್ಲಿ ಆತಂಕ ಉಂಟಾಗಿರಬಹುದು. ಹಾಗಾದರೆ ಕರ್ನಾಟಕ ಆಹಾರ ಇಲಾಖೆಯ ಮಾಸ್ಟರ್ ಪ್ಲ್ಯಾನ್ ಏನು ಎಂಬುದರ ಮಾಹಿತಿ ವಿವರವಾಗಿ ತಿಳಿಯೋಣ ಬನ್ನಿ.

ಹೌದು ಕೆಲ ದಿನಗಳ ಹಿಂದೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ನೇತ್ರತ್ವದಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಸಿ‌ಈ‌ಓ ಗಳ ಸಭೆಯಲ್ಲಿ ಈ ಕುರಿತು ವರದಿ ಪಡೆದುಕೊಂಡಾಗ ತಿಳಿದು ಬಂದಿರುವುದೇನೆಂದರೆ ರಾಜ್ಯದಲ್ಲಿ 80% ಜನರು ಬಿ‌ಪಿ‌ಎಲ್ ರೇಷನ್ ಕಾರ್ಡ್ ಯೋಜನೆ ಅಡಿಯಲ್ಲಿ ಸರ್ಕಾರದ ಯೋಜನೆಗಳ ಲಾಭವನ್ನು ಪಡೆದುಕೊಳ್ಳುತ್ತಿದ್ದರೆ.

ಹೌದು ಅಕ್ರಮವಾಗಿ ಸುಳ್ಳು ದಾಖಲೆಗಳನ್ನು ನೀಡಿ ಬೊಗಸ್ ಬಿ‌ಪಿ‌ಎಲ್ ರೇಷನ್ ಕಾರ್ಡ್ ಮಾಡಿಸಿಕೊಂಡಿರುವುದು ಇಲ್ಲಿ ಸ್ಪಷ್ಟವಾಗಿ ತಿಳಿದು ಬಂದಿದೆ. ಬಡವರ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ಪಾಲಗಬೇಕಿದ್ದ ಸರ್ಕಾರಿ ಸೌಲಭ್ಯವನ್ನು ಮಧ್ಯವರ್ತಿಗಳ ಸಹಾಯದಿಂದ ಅನರ್ಹತೆ ಪಡೆದಿದ್ದರು, ಆರ್ಥಿಕವಾಗಿ ಸಬಲರಾಗಿದ್ದರು ಕಾನೂನು ವಿರುದ್ದವಾಗಿ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ.

ಇನ್ನೂ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದರಿಂದ ಸುಳ್ಳು ದಾಖಲೆಗಳನ್ನು ತಯಾರಿಸಿ ಹೊಸ ಬಿ‌ಪಿ‌ಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಜೋರಾಗಿ ನಡೆಯುತ್ತಿರುವುದು ಕಾಣಬಹುದು. ಸ್ನೇಹಿತರೇ ನೀತಿ ಆಯೋಗದ ಪ್ರಕಾರ ರಾಜ್ಯದಲ್ಲಿ ಕೇವಲ 5.67% ಜನರು ಮಾತ್ರ ಬಿ‌ಪಿ‌ಎಲ್ ಕಾರ್ಡ್ ಪಡೆಯಬಹುದುಆದರೆ ರಾಜ್ಯದಲ್ಲಿ ಒಟ್ಟು 1.47 ಕೋಟಿ ಕುಟುಂಬದ 4.67 ಕೋಟಿ ಜನರು ಬಿ‌ಪಿ‌ಎಲ್ ಕಾರ್ಡ್ ಹೊಂದಿರುವುದು ಮುಖ್ಯಮಂತ್ರಿಗಳ ಕಳವಳಕ್ಕೆ ಕಾರಣವಾಗಿದೆ.

ಹೌದು, ರಾಜ್ಯದಲ್ಲಿ 80% ಜನ ಬಿ‌ಪಿ‌ಎಲ್ ಕಾರ್ಡ್ ಹೊಂದಿರುವ ಕಾರಣದಿಂದ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಲ್ಲಿ ಹೆಚ್ಚು ಖರ್ಚು ಮಾಡುವ ಸಂಗತಿ ಉಂಟಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟು ನಷ್ಟ ಉಂಟಾಗಿರುವುದು ನಾವು ಗಮನಿಸಬಹುದು.

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಮಾಸ್ಟರ್ ಪ್ಲ್ಯಾನ್ ತಯಾರಿಸಿದ್ದು ಇದರಿಂದ ಸರ್ಕಾರಕ್ಕೆ ಒಟ್ಟು 25,000 ಕೋಟಿ ಉಳಿತಾಯವಾಗಲಿದೆ ಮತ್ತು 14 ಲಕ್ಷಕ್ಕೂ ಹೆಚ್ಚು ಅನರ್ಹರ ಬಿ‌ಪಿ‌ಎಲ್ ರೇಷನ್ ಕಾರ್ಡ್ ರದ್ದಾಗಲಿದೆ ಅಂತ ಹೇಳಲಾಗಿದೆ. ಆಹಾರ ಇಲಾಖೆ ಅಧಿಕಾರಿಗಳು ರಾಜ್ಯ ಸರ್ಕಾರದ ಖಡಕ್ ಸೂಚೆನೆಯಿಂದ ಎಚ್ಚೆತ್ತುಕೊಂಡಿದ್ದು ಮುಲಾಜಿಲ್ಲದೆ ಅನರ್ಹರ ಬಿ‌ಪಿ‌ಎಲ್ ರದ್ದು ಮಾಡಲು ಮುಂದಾಗಿದ್ದಾರೆ.

ಯಾರ ಬಿ‌ಪಿ‌ಎಲ್ ಕಾರ್ಡ್ ರದ್ದು?

ಯಾರೆಲ್ಲಾ ಬಿ‌ಪಿ‌ಎಲ್ ರತಿನ್ ಕಾರ್ಡ್ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸುವುದಿಲ್ಲವೋ ಅಂದರೆ ನೈಜ ದಾಖಲೆಗಳನ್ನು ಹೊಂದಿರದೇ ಇರುವ ಕುಟುಂಬಗಳ ಬಿ‌ಪಿ‌ಎಲ್ ರೇಷನ್ ಕಾರ್ಡ್ ರದ್ದಾಗಲಿದೆ. ಯಾವೆಲ್ಲ ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂಪಾಯಿ ಮಿರಿದೆಯೋ ಅಥವಾ ರಾಜ್ಯ ಸರ್ಕಾರ ನಿಗದಿಗಿಂತ ಹೆಚ್ಚು ಜಮೀನನ್ನು ಹೊಂದಿರುತ್ತಾರೋ ಅಥವಾ 4 ಚಕ್ರದ ವಾಹನಗಳನ್ನು ಹೊಂದಿರುವರೋ ಅಥವಾ ಸರ್ಕಾರಿ ಕಚೇರಿಯಲ್ಲಿ ಸೇವೆ ಸಲ್ಲಿಸಿಸುತ್ತಿದ್ದು ಬಿ‌ಪಿ‌ಎಲ್ ರೇಷನ್ ಕಾರ್ಡ್ ಸೌಲಭ್ಯವನ್ನು ಪಡೆದುಕೊಳ್ಳುವವರ ಕಾರ್ಡ್ ರದ್ದಗುವುದು ಖಚಿತ.

ಲೇಖನವನ್ನು ಶೇರ್ ಮಾಡಿ

Leave a Reply

Your email address will not be published. Required fields are marked *