ಪಿಎಮ್ ಕಿಸಾನ್ ಯೋಜನೆ ಕುರಿತು ರಾಜ್ಯ ಸರ್ಕಾರದಿಂದ ರೈತರಿಗೆ ಮಹತ್ವದ ಸೂಚನೆ
ಸ್ನೇಹಿತರೇ ಪಿಎಮ್ ಕಿಸಾನ್ 18 ಕಂತಿನ ಹಣ ಈ ತಿಂಗಳಿನಲ್ಲಿ ಬಿಡುಗಡೆಯಾಗಲಿದ್ದು ಈ ಕುರಿತಾಗಿ ರಾಜ್ಯ ಸರ್ಕಾರ ರೈತ ಭಾಂದವರಿಗೆ ಮಹತ್ವದ ಸುತ್ತೋಲೆಯನ್ನು ಬಿಡುಗಡೆ ಮಾಡಿದೆ. ರೈತರು ಸರ್ಕಾರದ ಈ ನಿಯಮವನ್ನು ಪಾಲಿಸುವುದು ಕಡ್ಡಾಯವಾಗಿದ್ದು, ಈ ಸೂಚನೆ ಪಾಲಿಸದೆ ಇದ್ದರೆ ಪಿಎಮ್ ಕಿಸಾನ್ 18 ನೇ ಕಂತಿನ ಜಮೆ ಆಗುವುದಿಲ್ಲ. ಹಾಗಾದರೆ ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ಏನಿದೆ ತಿಳಿಯೋನ ಬನ್ನಿ.
ಪಿಎಮ್ ಕಿಸಾನ್ ಯೋಜನೆ
ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಫೆಬ್ರುವರಿ 24, 2019 ರಲ್ಲಿ ಜಾರಿಗೊಳಿಸಿರುವ ಯೋಜನೆಯಾಗಿದ್ದು, ಪಿಎಮ್ ಕಿಸಾನ್ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ರೈತರಿಗೆ ಒಂದು ಆರ್ಥಿಕ ವರ್ಷದಲ್ಲಿ ಪ್ರತಿ ಕಂತಿಗೆ 2,000 ರೂಪಾಯಿಯಂತೆ 4 ತಿಂಗಳಿಗೊಮ್ಮೆ ಹಣ ಬಿಡುಗಡೆ ಮಾಡಿ ಒಟ್ಟು ಮೂರು ಕಂತುಗಳಲ್ಲಿ 6,000 ರೂ ಆರ್ಥಿಕ ನೆರವು ನೀಡುತ್ತದೆ.
ಇದೀಗ ರಾಜ್ಯ ಸರ್ಕಾರ ಪಿಎಮ್ ಕಿಸಾನ್ 18 ನೇ ಕಂತಿನ ಹಣವನ್ನು ಪಡೆಯಲು ರೈತರು ಪಿಎಮ್ ಕಿಸಾನ್ ಖಾತೆಯ ಈ-ಕೆವೈಸಿ (e-kyc) ಮಾಡಿಸಬೇಕು ಅಂತ ಸೂಚನೆ ನೀಡಿದ್ದು, ಈ ಸೂಚನೆ ಪಾಲಿಸದೆ ಇದ್ದರೆ ಖಾತೆಗೆ ಹಣ ಜಮೆ ಆಗದೆ ಇರಬಹುದು.
ಹೀಗಾಗಿ ಪಿಎಮ್ ಕಿಸಾನ್ ಖಾತೆಯ ಈ- ಕೆವೈಸಿ ಯನ್ನು ನಾವು ಕೂತ ಜಾಗದಿಂದ ಮೊಬೈಲ್ ಮೂಲಕ ಆನ್ಲೈನ್ ನಲ್ಲಿ ಹೇಗೆ ಮಾಡಬಹುದು ಎಂಬುದನ್ನೂ ತಿಳಿಯೋನ ಬನ್ನಿ
ಪಿಎಮ್ ಕಿಸಾನ್ ಈ-ಕೆವೈಸಿ ಆನ್ಲೈನ್ ನಲ್ಲಿ ಮಾಡುವುದು ಹೇಗೆ?
- ಮೊಟ್ಟ ಮೊದಲು ರೈತರು ಪಿಎಮ್ ಕಿಸಾನ್ ಅಧಿಕ್ರತ ಪೋರ್ಟಲ್ ಗೆ ಭೇಟಿ ನೀಡಬೇಕು.
- ಮುಖಪುಟದ ಬಲ ಭಾಗದಲ್ಲಿ ಕಾಣುವ “eKYC” ಆಯ್ಕೆಯ ಮೇಲೆ ಒತ್ತಿರಿ.
- ಈಗ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ.
- ಅಲ್ಲಿ ಕಾಣುವ ಕ್ಯಾಪ್ಚಾ ಕೋಡ್ ಅನ್ನು ಸೂಚಿತ ಜಾಗದಲ್ಲಿ ನಮೂದಿಸಿ.
- ನಂತರ ಸರ್ಚ್ ಬಟನ್ ಮೇಲೆ ಒತ್ತಿ.
- ಈಗ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಅನ್ನು ನಮೂದಿಸಿ.
- “Get OTP” ಬಟನ್ ಮೇಲೆ ಒತ್ತಿ.
- ಈಗ ನಿಮ್ಮ ಮೊಬೈಲ್ ನಲ್ಲಿ ರಿಸಿವ್ ಆಗಿರುವ ಓಟಿಪಿ ಯನ್ನು ಸೂಚಿತ ಜಾಗದಲ್ಲಿ ನಮೂದಿಸಿ.
- ಇದಾದ ಬಳಿಕ “Submit” ಆಯ್ಕೆಯ ಮೇಲೆ ಒತ್ತಿ.
ಹೀಗೆ ಮಾಡುವುದರಿಂದ ನಿಮ್ಮ ಪಿಎಮ್ ಕಿಸಾನ್ ಈ-ಕೆವೈಸಿ ರಿಜಿಸ್ಟ್ರೇಶನ್ ಪೂರ್ಣಗೊಳ್ಳುವುದು. ಕೆಲವೊಮ್ಮೆ ರೈತರಿಗೆ ತಮ್ಮ ಪಿಎಮ್ ಕಿಸಾನ್ ಖಾತೆಯ ಈ-ಕೆವೈಸಿ ಆಗಿದೆಯೋ ಅಥವಾ ಇಲ್ಲವೋ ಎನ್ನುವುದರ ಗೊಂದವಿರುತ್ತದೆ. ಹೀಗಾಗಿ ಪಿಎಮ್ ಕಿಸಾನ್ ಈ-ಕೆವೈಸಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ ಎಂಬುದನ್ನೂ ತಿಳಿಯುವುದು ಮುಖ್ಯವಾಗಿದೆ.
ಪಿಎಮ್ ಕಿಸಾನ್ ಈ-ಕೆವೈಸಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
- ರೈತರು ಪಿಎಮ್ ಕಿಸಾನ್ ಅಧಿಕ್ರತ ಪೋರ್ಟಲ್ ಗೆ ಭೇಟಿ ನೀಡಿ.
- ನಿಮ್ಮ ಆಧಾರ್ ಸಂಖ್ಯೆಯನ್ನು ಸೂಚಿತ ಜಾಗದಲ್ಲಿ ನಮೂದಿಸಿ.
- ಈವಾಗ ಕ್ಯಾಪ್ಚ ಕೋಡ್ ನಮೂದಿಸಿ
- ನಂತರ “Search” ಬಟನ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಪಿಎಮ್ ಕಿಸಾನ್ ಖಾತೆಯ ಸ್ಟೇಟಸ್ ತೋರಿಸುವ ಹೊಸ ಪುಟ ನಿಮ್ಮ ಮೊಬೈಲ್ ನಲ್ಲಿ ತೆರೆಯುವುದು.