ಪಿ‌ಎಮ್ ಸ್ವನಿಧಿ ಯೋಜನೆ ಅಡಿಯಲ್ಲಿ ಸಿಗಲಿದೆ ರೂ 50 ಸಾವಿರ… ಅರ್ಹತೆ ಏನು ಗೊತ್ತಾ

ಪಿ‌ಎಮ್ ಸ್ವನಿಧಿ ಯೋಜನೆ ಅಡಿಯಲ್ಲಿ ಸಿಗಲಿದೆ ರೂ 50 ಸಾವಿರ… ಅರ್ಹತೆ ಏನು ಗೊತ್ತಾ

ಸ್ನೇಹಿತರೇ ಕೇಂದ್ರ ಸರ್ಕಾರವು ಜನವರಿ 1, 2020 ರಂದು ಸಣ್ಣ ಮತ್ತು ಬೀದಿ ಬದಿ ವ್ಯಾಪಾರಿಗಳ ಉದ್ಯೋಗವನ್ನು ಉತ್ತೇಜಿಸಲು ಪಿ‌ಎಮ್ ಸ್ವನಿಧಿ ಅಥವಾ ಪಿ‌ಎಮ್ ಸ್ಟ್ರೀಟ್ ವೆಂಡರ್ಸ್ ಆತ್ಮನಿರ್ಭರ್ ನಿಧಿ ಅನ್ನುವ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆ ಅಡಿಯಲ್ಲಿ ವ್ಯಾಪಾರಿಗಳಿಗೆ ಅವರ ಉದ್ಯೋಗಕ್ಕೆ ಪುನರ್ ಉತ್ತೇಜನ ನೀಡಲು 10,000 ರೂ ಯಿಂದ 50,000 ರೂಪಾಯಿಗಳ ವರೆಗೆ ಸಾಲ ಸೌಲಭ್ಯವನ್ನು ನೀಡುತ್ತದೆ.

ಹೌದು ಸ್ನೇಹಿತರೆ ಇಂದು ಸಣ್ಣ ಮತ್ತು ಬೀದಿ ಬದಿ ವ್ಯಾಪಾರಿ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ಕೈ ಜೋಡಿಸಿದ್ದು, ಅವರ ಹೆಣಗಾಡುತ್ತಿರುವ ವ್ಯಾಪಾರದ ಸ್ಥಿತಿಯನ್ನು ತ್ವರಿತವಾಗಿ ಸರಿ ಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪಿ‌ಎಮ್ ಸ್ವನಿಧಿ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ವ್ಯಾಪಾರಿಗಳ ಗಳ (ಅರ್ಜಿದಾರರ) ಯಾವುದೇ ಗ್ಯಾರಂಟಿಗಳಿಲ್ಲದೇ ಸಾಲವನ್ನು ಒದಗಿಸುವ (collateral-free loan) ಜವಾಬ್ದಾರಿಯನ್ನು ವಹಿಸುತ್ತದೆ.

ಮೊದಲ ಹಂತದಲ್ಲಿ ವ್ಯಾಪಾರಿಗಳಿಗೆ ಸರ್ಕಾರವು 10,000 ಸಾಲವನ್ನು ನೀಡುತ್ತದೆ. ಎರಡನೇ ಮತ್ತು ಮೂರನೆ ಹಂತದಲ್ಲಿ ಕ್ರಮವಾಗಿ 20,000 ಮತ್ತು 50,000 ರೂಪಾಯಿಯನ್ನು ನೀಡಲಿದೆ. ವ್ಯಾಪಾರಿಗಳು ಈ ಸಾಲವನ್ನು ಈ‌ಎಮ್‌ಐ ರೀತಿಯಲ್ಲಿ ಸಣ್ಣ ಸಣ್ಣ ಕಂತುಗಳಲ್ಲಿ ಕಡಿಮೆ ಬಡ್ಡಿಯೊಂದಿಗೆ (7%) ಕೇಂದ್ರ ಸರ್ಕಾರಕ್ಕೆ ಮರು ಪಾವತಿ ಮಾಡಬೇಕಾಗುತ್ತದೆ.

ಒಂದು ವೇಳೆ ಈ ಹಿಂದೆ ನೀವು ಸಾಲವನ್ನು ತಗೊಂಡಿರುವ ಹೊಣೆ ನಿಮ್ಮ ಮೇಲಿದ್ದರೆ ಮತ್ತು ಅದನ್ನು ಮರು ಪಾವತಿ ಮಾಡದೆ ಇದ್ದರೆ ನೀವು ಮತ್ತೆ ಸಾಲವನ್ನು ಪಡೆಯಲು ಅನರ್ಹರಾಗಿರುತ್ತಿರಾ.

ಪಿ‌ಎಮ್ ಸ್ವನಿಧಿ ಸಾಲ ಪಡೆಯಲು ಯಾರು ಅರ್ಹರು?

  • ಫಲಾನುಭವಿಗಳು ಬೀದಿ ವ್ಯಾಪಾರಿಗಳ (ಜೀವನದ ರಕ್ಷಣೆ ಮತ್ತು ಬೀದಿ ವ್ಯಾಪಾರದ ನಿಯಂತ್ರಣ) ಕಾಯಿದೆ, 2014 ರ ಅಡಿಯಲ್ಲಿ ನಿಯಮ ಮತ್ತು ಯೋಜನೆಗಳನ್ನು ಸೂಚಿಸಿರುವ ರಾಜ್ಯಗಳು/UT ಗಳಿಗೆ ಸೇರಿದವರಾಗಿರಬೇಕು.
  • ನಗರ ಸ್ಥಳೀಯ ಸಂಸ್ಥೆಗಳು (ಯುಎಲ್‌ಬಿಗಳು)/ಮುನ್ಸಿಪಾಲಿಟಿಗಳು ನಡೆಸಿದ ಸಮೀಕ್ಷೆಗಳಲ್ಲಿ ಒಳಗೊಂಡಿರುವ ಬೀದಿ ವ್ಯಾಪಾರಿಗಳು ಅರ್ಹರಾಗಿದ್ದಾರೆ.

ಅರ್ಜಿ ಪ್ರಕ್ರಿಯೆ

  • ಮೊದಲು ಸಾಲದ ಅರ್ಜಿ ಸಲ್ಲಿಸಲು ಅಗತ್ಯವಿರುವ ವಿದ್ಯಾಮಾನಗಳನ್ನು ಅರ್ಥಮಾಡಿಕೊಳ್ಳಬೇಕು.
  • ನಂತರ ದಾಖಲೆಗಳನ್ನಿ ಸಂಗ್ರಹಿಸಿ.
  • ನಿಮ್ಮ ಮೊಬೈಲ್ ಸಂಖ್ಯೆ, ಆಧರ್ ಕಾರ್ಡ್ ಸಂಖ್ಯೆಗೆ ಲಿಂಕ್ ಮಾಡಿರುವುದನ್ನು ಖಚಿತ ಪಡಿಸಿಕೊಳ್ಳಿ.
  • ಸೂಕ್ಷವಾಗಿ ಪಿ‌ಎಮ್ ಸ್ವನಿಧಿ ಯೋಜನೆಯ ನಿಯಮ ಮತ್ತು ಅರ್ಹತೆಯನ್ನು ಪರಿಶೀಲಿಸಿ.
  • ಹತ್ತಿರದ ಗ್ರಾಹಕ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಕೆಯನ್ನು ಮಾಡಿ.
ಲೇಖನವನ್ನು ಶೇರ್ ಮಾಡಿ

Leave a Reply

Your email address will not be published. Required fields are marked *