ಎಸ್‌ಬಿ‌ಐ ನಲ್ಲಿ ಕಾರ್ ಲೋನ್ ಮಾಡಿಸಿದವರಿಗೆ ಆಫರ್! ಕಾರ್ ಲೋನ್ ಮಾಡಿಸುವ ಮೊದಲು ಇದನ್ನು ಓದಿ

ಎಸ್‌ಬಿ‌ಐ ನಲ್ಲಿ ಕಾರ್ ಲೋನ್ ಮಾಡಿಸಿದವರಿಗೆ ಆಫರ್! ಕಾರ್ ಲೋನ್ ಮಾಡಿಸುವ ಮೊದಲು ಇದನ್ನು ಓದಿ

ಸ್ನೇಹಿತರೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರ ಅನೂಕೂಲಕ್ಕೆ ತಕ್ಕಂತೆ ಅನೇಕ ಕಾರ್ ಲೋನ್ ನೀಡುವ ಯೋಜನೆಗಳನ್ನು ಹೊಂದಿದೆ. ಹೌದು ಇದರಿಂದ ಗ್ರಾಹಕರು ಮುಂದೆ ಹಲವು ಆಯ್ಕೆಗಳು ಇರುತ್ತವೆ, ಎಸ್‌ಬಿ‌ಐ ಕಾರ್ ಲೋನ್ ಮಾರ್ಕೆಟ್ ಅಲ್ಲಿ ಇತರ ಬ್ಯಾಂಕ್ ಗಳಿಗಿಂತ ಕಡಿಮೆ ಬಡ್ಡಿದರದಲ್ಲಿ (8.85%) ಸಾಲವನ್ನು ನೀಡುತ್ತಿದ್ದು ಹೆಚ್ಚು ಜನಪ್ರಿಯತೆ ಗಳಿಸಿದೆ.

ಎಸ್‌ಬಿ‌ಐ  ನಾಲ್ಕು ವಿಶಿಷ್ಟ ಕಾರ್ ಲೋನ್ ಯೋಜನೆಗಳನ್ನು ಹೊಂದಿದ್ದು ಅದರಲ್ಲಿ ಎಸ್‌ಬಿ‌ಐ ನ್ಯೂ ಕಾರ್ ಲೋನ್, ಎಸ್‌ಬಿ‌ಐ ಲಾಯಲ್ಟಿ ಕಾರ್ ಲೋನ್, ಎಸ್‌ಬಿ‌ಐ ಅಶ್ಯುರ್ಡ್ ಕಾರ್ ಲೋನ್ ಮತ್ತು ಗ್ರೀನ್ ಕಾರ್ ಲೋನ್ ಯೋಜನೆಗಳು. ಎಸ್‌ಬಿ‌ಐ ನಲ್ಲಿ ಗ್ರಾಹಕರು ಕಾರಿನ ರಸ್ತೆ ಮೌಲ್ಯದ 90% ರವರೆಗೆ ಸಾಲವನ್ನು ಪಡೆಯಬಹುದು. ಇದರಲ್ಲಿ ನೊಂದಣಿ, ಆಭರಣ, ವಿಮೆ, ವಿಸ್ತರಿತ ವಾರಂಟಿ ಮತ್ತು ನಿರ್ವಹಣಾ ಒಪ್ಪಂದಗಳ ವೆಚ್ಚವೂ ಒಳಗೊಂಡಿರುತ್ತದೆ. ಜೊತೆಗೆ ಎಸ್‌ಬಿ‌ಐ ತನ್ನ ಸಾಲಗಾರರಿಗೆ ಐಚ್ಛಿಕ ಜೀವ ವಿಮಾ ಕವರ್ ಅನ್ನು ಸಹ ಓದಗಿಸುತ್ತದೆ.

ಎಸ್‌ಬಿ‌ಐ ನ್ಯೂ ಕಾರ್ ಲೋನ್

ಎಸ್‌ಬಿ‌ಐ ನ್ಯೂ ಕಾರ್ ಲೋನ್ ಯೋಜನೆಗೆ 21 ರಿಂದ 70 ವರ್ಷದ ವ್ಯಕ್ತಿಗಳು ಅರ್ಹರಾಗಿದ್ದು, ಈ ಯೋಜನೆ ಆದಿಯಲ್ಲಿ ಸಾಲಗಾರರು 7 ವರ್ಷಗಳ ವರೆಗೆ ಸಾಲದ ಅವಧಿಯನ್ನು ಆಯ್ಕೆ ಮಾಡಬಹುದು. ಸಾಲದ ಮೊತ್ತವು ಸಾಲಗಾರರ ಆದಾಯದ ಮೇಲೆ ಅವಲಂಬಿತವಾಗಿರುತ್ತದೆ. ವೇತನದವರು ತಮ್ಮ ಶುದ್ದ ಮಾಸಿಕ ಆದಾಯದ 48 ಪಟ್ಟು ಮತ್ತು ಸ್ವಯಂ ಉದ್ಯೋಗಿಗಳು ತಮ್ಮ ಒಟ್ಟು ತೆರಿಗೆ ಯೋಗ್ಯ ಆದಾಯದ 4 ಪಟ್ಟು ಮತ್ತು ಕ್ರಶಿಕರು ತಮ್ಮ ಶುದ್ದ ವಾರ್ಷಿಕ  ಆದಾಯದ 3 ಪಟ್ಟು ಸಾಲ ಪಡೆಯಲು ಅರ್ಹರಾಗಿರುತ್ತಾರೆ.

ಎಸ್‌ಬಿ‌ಐ ಲಾಯಲ್ಟಿ ಕಾರ್ ಲೋನ್

ಈ ಲೋನ್ ಪಡೆಯಲು ವಾರ್ಷಿಕ ಆದಾಯದ ಕನಿಷ್ಠ ಷರತ್ತು ರೂ 2 ಲಕ್ಷ. ಈ ಯೋಜನೆಯಡಿ ಸಾಲಗಾರರು ಸಾಲದ ಅವಧಿಯನ್ನು 7 ವರ್ಷಗಳವರೆಗೆ ವಿಸ್ತರಿಸಬಹುದು ಮತ್ತು ಸಾಲದ ಮೊತ್ತವು ವಿವಿಧ ಅಂಶಗಳ ಆಧಾರದ ಮೇಲೆ ವ್ಯತ್ಯಾಸಗೊಳ್ಳುತ್ತದೆ.

ಎಸ್‌ಬಿ‌ಐ ಅಸ್ಯುರ್ಡ್ ಲೋನ್

ಈ ಯೋಜನೆಯ ಮೂಲಕ ಶಾಲಾ ಪಡೆಯಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಸಾಲದ ಅವಧಿ 3 ರಿಂದ 7 ವರ್ಷಗಳವರೆಗೆ ಸಾಲಗಾರರು ವಿಸ್ತರಿಸಬಹುದು ಮತ್ತು ಕನಿಷ್ಠ ಸಾಲದ ಮೊತ್ತ 1 ಲಕ್ಷ ರೂ ಹಾಗೂ ಗರಿಷ್ಠ ಮೊತ್ತದ ಪಡೆಯಲು ಮಿತಿ ಇರುವುದಿಲ್ಲ.

ಎಸ್‌ಬಿ‌ಐ  ಗ್ರೀನ್ ಲೋನ್

ಈ ಯೋಜನೆಯಲ್ಲಿ ಸಾಲ ಪಡೆಯಲು ಸಾಲಗಾರರು 21 ರಿಂದ 70 ವರ್ಷ ವಯಸ್ಸಿನವರಾಗಿರಬೇಕು. ಸಾಲದ ಅವಧಿಯನ್ನು ಸಾಲಗಾರರು 3 ರಿಂದ 8 ವರ್ಷಗಳವರೆಗೆ ವಿಸ್ತರಿಸಬಹುದು.

ಲೇಖನವನ್ನು ಶೇರ್ ಮಾಡಿ

Leave a Reply

Your email address will not be published. Required fields are marked *