ಇಂಡಿಯನ್ ಬ್ಯಾಂಕ್ ಸ್ಥಳೀಯ ಬ್ಯಾಂಕ್ ಅಧಿಕಾರಿ ನೇಮಕಾತಿ 2024: ಆಯ್ಕೆಯಾದ ಅಭ್ಯರ್ಥಿಗಳಿಗೆ ಕರ್ನಾಟಕದಲ್ಲೂ ಸೇವೆ ನಿರ್ವಹಿಸಲು ಅವಕಾಶ

ಇಂಡಿಯನ್ ಬ್ಯಾಂಕ್ ಸ್ಥಳೀಯ ಬ್ಯಾಂಕ್ ಅಧಿಕಾರಿ ನೇಮಕಾತಿ 2024: ಆಯ್ಕೆಯಾದ ಅಭ್ಯರ್ಥಿಗಳಿಗೆ ಕರ್ನಾಟಕದಲ್ಲೂ ಸೇವೆ ನಿರ್ವಹಿಸಲು ಅವಕಾಶ

ಸ್ನೇಹಿತರೇ ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಆಗಿರುವ ಇಂಡಿಯನ್ ಬ್ಯಾಂಕ್ ಪದವೀಧರರಿಗೆ  ಸ್ಥಳೀಯ ಬ್ಯಾಂಕ್ ಅಧಿಕಾರಿ (ಸ್ಕೆಲ್-1) ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿದ್ದು, ಆಯ್ಕೆಯಾದ ಅಭ್ಯರ್ಥಿಗಳನ್ನು ಕರ್ನಾಟಕ, ತಮಿಳುನಾಡು, ಆಂದ್ರಪ್ರದೇಶ, ಪುದುಚೇರಿ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಲ್ಲಿ 300 ಹುದ್ದೆಗಳಿಗೆ ನಿಯೂಜಿಸಲಾಗುವುದು. ಆಸಕ್ತ ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಲು ಆಗಸ್ಟ್ 13, 2024 ರ ತನಕ ಕಾಲಾವಕಾಶ ನೀಡಲಾಗಿದ್ದು ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗಾಗಿ ಅರ್ಜಿ ಸಲ್ಲಿಕೆ ಮಾಡಬೇಕು.

ಪ್ರಮುಖ ದಿನಾಂಕಗಳು

  • ಆನ್‌ಲೈನ್ ಅರ್ಜಿ ಪ್ರಾರಂಭ ದಿನಾಂಕ: ಆಗಸ್ಟ್ 13, 2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 2, 2024
  • ಅರ್ಜಿ ಸಂಪಾದನೆಯ ಕೊನೆಯ ದಿನಾಂಕ: ಸೆಪ್ಟೆಂಬರ್ 2, 2024
  • ಅರ್ಜಿ ಮುದ್ರಣದ ಕೊನೆಯ ದಿನಾಂಕ: ಸೆಪ್ಟೆಂಬರ್ 17, 2024
  • ಆನ್‌ಲೈನ್ ಶುಲ್ಕ ಪಾವತಿ ಅವಧಿ: ಆಗಸ್ಟ್ 13, 2024ರಿಂದ ಸೆಪ್ಟೆಂಬರ್ 2, 2024

ಹುದ್ದೆಗಳ ವಿವರಗಳು

ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳ ನೇಮಕಾತಿ ಒಟ್ಟು 300 ಹುದ್ದೆಗಳಿಗೆ ನಡೆಯಲಿದ್ದು, ರಾಜ್ಯಾನುಸಾರ ಹುದ್ದೆಗಳ ಹಂಚಿಕೆ ಈ ಕೆಳಗಿನಂತಿದೆ.

  • ತಮಿಳುನಾಡು / ಪುದುಚೇರಿ: ತಮಿಳು – 160
  • ಕರ್ನಾಟಕ: ಕನ್ನಡ – 35
  • ಆಂಧ್ರಪ್ರದೇಶ ಮತ್ತು ತೆಲಂಗಾಣ: ತೆಲುಗು – 50
  • ಮಹಾರಾಷ್ಟ್ರ: ಮರಾಠಿ – 40
  • ಗುಜರಾತ್: ಗುಜರಾತಿ – 15

ಶೈಕ್ಷಣಿಕ ಅರ್ಹತೆ

ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ವಿಭಾಗದಿಂದ ಪದವಿ (ಬಾಚ್‌ಲರ್ ಡಿಗ್ರಿ) ಹೊಂದಿರಬೇಕು.

ವಯೋಮಿತಿ

ಅಭ್ಯರ್ಥಿಗಳ ಕನಿಷ್ಠ ವಯಸ್ಸು: 20 ವರ್ಷ ಮತ್ತು ಗರಿಷ್ಠ ವಯಸ್ಸು: 30 ವರ್ಷ ಆಗಿರಬೇಕು.

ವಯೋಮಿತಿ ಸಡಿಲಿಕೆ

  • SC/ST: 5 ವರ್ಷ
  • OBC (NCL): 3 ವರ್ಷ
  • PwBD: 10 ವರ್ಷ
  • ಮಾಜಿ ಸೈನಿಕರು / ECOs / SSCOs / 1984ರ ದಂಗೆಗಳನ್ನೊಳಗೊಂಡವರು: 5 ವರ್ಷ

ವೇತನ

ಆಯ್ಕೆಯಾದ ಅಧಿಕಾರಿಗಳನ್ನು ₹48,480 ರಿಂದ ₹85,920 ವೇತನ ಶ್ರೇಣಿಯಲ್ಲಿ ನಿಯೋಜಿಸಲಾಗುವುದು. ಹಾಗೂ ಬ್ಯಾಂಕಿನ ನೀತಿಗಳ ಪ್ರಕಾರ ವಿವಿಧ ಭತ್ಯೆ ಮತ್ತು ವಿವಿಧ ಪ್ರಯೋಜನಗಳನ್ನು ಪಡೆಯಲಿದ್ದಾರೆ.

ಅರ್ಜಿ ಸಲ್ಲಿಕೆ

ಅರ್ಹ ಅಭ್ಯರ್ಥಿಗಳು ಇಂಡಿಯನ್ ಬ್ಯಾಂಕ್ ಸ್ಥಳೀಯ ಬ್ಯಾಂಕ್ ಅಧಿಕಾರಿ 2024 – IBPS ಅರ್ಜಿ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು (ibpsonline.ibps.in/iblbojul24/)

ಅರ್ಜಿ ಸಲ್ಲಿಕೆ ವಿಧಾನ

  • ಅಧಿಕೃತ ಅರ್ಜಿ ಪೋರ್ಟಲ್‌ಗೆ ಭೇಟಿ ನೀಡಿ.
  • ನಿಮ್ಮ  ವೈಯಕ್ತಿಕ  ವಿವರಗಳನ್ನು ನಮೂದಿಸಿ ಮತ್ತು ಲಾಗಿನ್ ಆಗಿರಿ.
  • ಅಲ್ಲಿ ಕೇಳುವ ಪ್ರತಿಯೊಂದು ಮಾಹಿತಿಯನ್ನು ಸೂಕ್ಷಮವಾಗಿ ನಮೂದಿಸಿ.
  • ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ (ಇತ್ತೀಚಿನ ಛಾಯಾಚಿತ್ರ, ಸಹಿ, ಎಡ ಕೈ ಮುದ್ರಣ, ಕೈಯಿಂದ ಬರೆಯಲಾದ ಘೋಷಣಾ ಪತ್ರ).
  • ಕೊನೆಯಲ್ಲಿ ಅರ್ಜಿ ಶುಲ್ಕವನ್ನು ಪಾವತಿಸಿ.

ಅರ್ಜಿ ಶುಲ್ಕ

  • ಸಾಮಾನ್ಯ / OBC / EWS: ₹1000/-
  • SC / ST / PwBD: ₹175/-
  • ಪಾವತಿ ವಿಧಾನ: ಆನ್‌ಲೈನ್ ಪಾವತಿ

ಆಯ್ಕೆ ಪ್ರಕ್ರಿಯೆ

ಇಂಡಿಯನ್ ಬ್ಯಾಂಕ್ ಸ್ಥಳೀಯ ಬ್ಯಾಂಕ್ ಅಧಿಕಾರಿ ನೇಮಕಾತಿ 2024 ರ ಆಯ್ಕೆ ಪ್ರಕ್ರಿಯೆಯು ಈ ಕೆಳಗಿನ ಹಂತಗಳಲ್ಲಿ ನಡೆಯಲಿದೆ.

  • ಅರ್ಜಿಗಳ ಶಾರ್ಟ್‌ಲಿಸ್ಟಿಂಗ್: ಅರ್ಹತೆ ಆಧಾರದಲ್ಲಿ.
  • ಲಿಖಿತ / ಆನ್‌ಲೈನ್ ಪರೀಕ್ಷೆ: ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ.
  • ಸಂದರ್ಶನ: ಆಯ್ಕೆ ಪ್ರಕ್ರಿಯೆಯ ಅಂತಿಮ ಹಂತ.

ಪ್ರಮುಖ ಲಿಂಕ್‌ಗಳು

ಅಧಿಕ್ರತ ನೋಟಿಫಿಕೇಶನ್: ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಅರ್ಜಿ ಸಲ್ಲಿಕೆ: ಇಲ್ಲಿ ಕ್ಲಿಕ್ ಮಾಡಿ

ಲೇಖನವನ್ನು ಶೇರ್ ಮಾಡಿ

Leave a Reply

Your email address will not be published. Required fields are marked *