BRBNMPL (ಮೈಸೂರು ನೋಟು ಮುದ್ರಣ ಇಲಾಖೆ) ನೇಮಕಾತಿ 2024: ಸಹಾಯಕ ವ್ಯವಸ್ಥಾಪಕ ಮತ್ತು ಭದ್ರತಾ ವ್ಯವಸ್ಥಾಪಕ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ
ಸ್ನೇಹಿತರೇ ಮೈಸೂರಿನ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಇಲಾಖೆ BRBNMPL ಯಲ್ಲಿ ಖಾಲಿ ಇರುವ ಸಹಾಯಕ ವ್ಯವಸ್ಥಾಪಕ ಮತ್ತು ಭದ್ರತಾ ವ್ಯವಸ್ಥಾಪಕ ಹುದ್ದೆಗಳು ಸೇರಿ ಒಟ್ಟು 4 ಹುದ್ದೆಗಳ ಭರ್ತಿಗೆ ಅಧಿಕ್ರತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆಗಸ್ಟ್ 12, 2024 ರಿಂದ ಪ್ರಾರಂಭಗೊಂಡಿದ್ದು, ಸೆಪ್ಟಂಬರ್ 06, 2024 ರಂದು ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿರುತ್ತದೆ.
ಸರ್ಕಾರಿ ಉದ್ಯೋಗವನ್ನು ಪಡೆಯಲು ಬಯಸುವ ಅಭ್ಯರ್ಥಿಗಳು ಈ ಸದಾವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಆಸಕ್ತರು ಅರ್ಜಿ ಸಲ್ಲಿಕೆಯ ಮುಂಚೆ BRBNMPL ನೇಮಕಾತಿ 2024 ಅರ್ಹತೆಗಳನ್ನು ಪರಿಶೀಲಿಸಿ, ಕೊನೆಯ ದಿನಾಂಕ ಮುಗಿಯುವುದೊರಳಗಾಗಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
BRBNMPL ನೇಮಕಾತಿ 2024 ವಿವರ
ಸಂಸ್ಥೆಯ ಹೆಸರು | ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಇಲಾಖೆ ಮೈಸೂರು (BRBNMPL) |
ಹುದ್ದೆಯ ಹೆಸರು | ಸಹಾಯಕ ವ್ಯವಸ್ಥಾಪಕ ಮತ್ತು ಭದ್ರತಾ ವ್ಯವಸ್ಥಾಪಕ |
ಒಟ್ಟು ಹುದ್ದೆಗಳು | 04 |
ಅಧಿಕ್ರತ ಪೋರ್ಟಲ್ | www.brbnmpl.co.in |
BRBNMPL ನೇಮಕಾತಿ 2024 ಯ ಪ್ರಮುಖ ದಿನಾಂಕಗಳು
BRBNMPL ನೇಮಕಾತಿ 2024 ರ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ದಿನಾಂಕ ಆಗಸ್ಟ್ 12, 2024 ರಂದು ಆರಂಭಗೊಂಡಿದ್ದು, ದಿನಾಂಕ ಸೆಪ್ಟಂಬರ್ 06, 2024 ರಂದು ಕೊನೆಗೊಳ್ಳಲಿದೆ. ಹೀಗಾಗಿ ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
BRBNMPL ನೇಮಕಾತಿ 2024 ಅರ್ಜಿ ಶುಲ್ಕ
BRBNMPL ನೇಮಕಾತಿ 2024 ರ ಅರ್ಜಿ ಶುಲ್ಕವು ಜನರಲ್/ಓಬಿಸಿ ವರ್ಗದ ಅಭ್ಯರ್ಥಿಗಳಿಗೆ ರೂ. 300 ಮತ್ತು ಎಸ್ಸಿ/ಎಸ್ಟಿ/ಪಿಡಬಲ್ಯುಡಿ ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯ ಸಮಯದಲ್ಲಿ ಅಭ್ಯರ್ಥಿಗಳು ಡಿಮಾಂಡ್ ಡ್ರಾಫ್ಟ್ ಅಥವಾ ಬ್ಯಾಂಕ್ ಪೇ ಮುಖಾಂತರ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
BRBNMPL ನೇಮಕಾತಿ 2024 ವಯೋಮಿತಿ
BRBNMPL ನೇಮಕಾತಿ 2024 ರ ಅಭ್ಯರ್ಥಿಗಳ ವಯೋಮಿತಿಯ ಮಾನದಂಡವು ಹೀಗಿರುತ್ತದೆ. ಅಭ್ಯರ್ಥಿಗಳ ಕನಿಷ್ಠ ವಯಸ್ಸು 23 ವರ್ಷ ಮತ್ತು ಗರಿಷ್ಠ 52 ವರ್ಷಗಳು.
BRBNMPL ನೇಮಕಾತಿ 2024 ವಿದ್ಯಾರ್ಹತೆ
ಹುದ್ದೆಯ ಹೆಸರು | ಸಂಖ್ಯೆ | ವಿದ್ಯಾರ್ಹತೆ | ವೇತನ |
ಸಹಾಯಕ ವ್ಯವಸ್ಥಾಪಕ | 03 | 1) ಕನಿಷ್ಠ 10 ವರ್ಷಗಳ ಸೇವೆಯೊಂದಿಗೆ ಹಳೆಯ ಜೂನಿಯರ್ ಆಯುಕ್ತ ಅಧಿಕಾರಿ (JCO) ಆಗಿರಬೇಕು, ಮತ್ತು ಕೆಳಗಿನ ವಿಭಾಗಗಳಲ್ಲಿ ಒಂದರಲ್ಲಿ ಸೇವೆ ಸಲ್ಲಿಸಿರಬೇಕು: 2) ಭಾರತೀಯ ಸೇನೆಯ EME/ಸಿಗ್ನಲ್ಸ್ ವಿಭಾಗ ಅಥವಾ ತಾಂತ್ರಿಕ ವಿಭಾಗದ ಭಾರತೀಯ ವಾಯುಸೇನೆ/ಭಾರತೀಯ ನೌಕಾಪಡೆಗೆ ಸಮನಾದ ಹುದ್ದೆ. 3) ಭಾರತೀಯ ಸೇನೆಯ ಅಥವಾ ಸಮಾನ ಹುದ್ದೆಯುಳ್ಳ ಭಾರತೀಯ ವಾಯುಸೇನೆ/ಭಾರತೀಯ ನೌಕಾಪಡೆಯ ಆಧಿಕಾರಿಗಳು, ತಾಂತ್ರಿಕ ಡಿಪ್ಲೊಮಾ ಹೊಂದಿರಬೇಕು. NSG ನಲ್ಲಿ ಸೇವೆ – ಕನಿಷ್ಠ 10 ವರ್ಷಗಳ ಸೇವೆಯೊಂದಿಗೆ JCO ಆಗಿರಬೇಕು. ಸೂಚನೆ: EME/ಸಿಗ್ನಲ್ಸ್ ವಿಭಾಗದಲ್ಲಿ ತಾಂತ್ರಿಕ ಡಿಪ್ಲೊಮಾ ಹೊಂದಿರುವ ಮತ್ತು ಇಂಗ್ಲಿಷ್ನಲ್ಲಿ ನುಡಿ ತಟ್ಟಾಗಿ ಮಾತನಾಡುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. | ರೂ.56100/- |
ಭದ್ರತಾ ವ್ಯವಸ್ಥಾಪಕ | 01 | 1) ಕನಿಷ್ಠ 5 ವರ್ಷಗಳ ಆಯುಕ್ತ ಸೇವೆಯೊಂದಿಗೆ ಭಾರತೀಯ ಸೇನೆ/ಭಾರತೀಯ ನೌಕಾಪಡೆ/ಭಾರತೀಯ ವಾಯುಸೇನೆಯ ಕೆಪ್ಟನ್ ಅಥವಾ ಅದಕ್ಕಿಂತ ಮೇಲಿನ ಹುದ್ದೆಯಲ್ಲಿ ಸೇವೆ ಸಲ್ಲಿಸಿರಬೇಕು. ಅಥವಾ 1) ಕನಿಷ್ಠ 5 ವರ್ಷಗಳ ಸೇವೆಯೊಂದಿಗೆ, ಅಸಿಸ್ಟೆಂಟ್ ಕಮಾಂಡಂಟ್ ಅಥವಾ ಅದಕ್ಕಿಂತ ಮೇಲಿನ ಹುದ್ದೆಯಲ್ಲಿ ಪ್ಯಾರಾ-ಸೈನಿಕ ದಳಗಳಲ್ಲಿ (ಉದಾಹರಣೆ: BSF, CRPF, ಅಸ್ಸಾಂ ರೈಫಲ್ಸ್, ITBP, CISF) ಹುದ್ದೆ ಹೊಂದಿರಬೇಕು. ಸೂಚನೆ: ಉದ್ಯಮ ಭದ್ರತೆ ಮತ್ತು ಸಾರ್ವಜನಿಕ/ದೊಡ್ಡ ಖಾಸಗಿ ಕ್ಷೇತ್ರ ಸಂಸ್ಥೆಗಳಲ್ಲಿ ಭದ್ರತಾ ಅಧಿಕಾರಿ ಆಗಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. | ರೂ.69700/- |
BRBNMPL ನೇಮಕಾತಿ 2024 ಆಯ್ಕೆ ಪ್ರಕ್ರಿಯೆ
BRBNMPL ನೇಮಕಾತಿ 2024 ರ ಆಯ್ಕೆ ಪ್ರಕ್ರಿಯೆಯು ಹೀಗಿದೆ. ಅಭ್ಯರ್ಥಿಗಳನ್ನು ಅವರ ಶೈಕ್ಷಣಿಕ ಅರ್ಹತೆಯನ್ನು ಪರಿಶೀಲಿಸಿ, ಶಾರ್ಟ್ ಲಿಸ್ಟ್ ಮಾಡಲಾಗುವುದು. ಕೊನೆಯದಾಗಿ ಶಾರ್ಟ್ ಲಿಸ್ಟ್ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು.
BRBNMPL ನೇಮಕಾತಿ 2024 ಅರ್ಜಿ ಸಲ್ಲಿಕೆ ವಿಳಾಸ
BRBNMPL ಅಧಿಕ್ರತ ಪೋರ್ಟಲ್ ಗೆ ಭೇಟಿ ನೀಡಿ ಅರ್ಜಿ ಫಾರ್ಮ್ ಅನ್ನು ಡೌನ್ಲೋಡ್ ಮಾಡಿಕೊಂಡು ವೈಯಕ್ತಿಕ ಮಾಹಿತಿಯನ್ನು ನಮೂದಿಸಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.
ಅರ್ಜಿ ಸಲ್ಲಿಕೆ ವಿಳಾಸ: ಮುಖ್ಯ ಜನರಲ್ ಮ್ಯಾನೇಜರ್, ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರನ್ ಪ್ರೈವೇಟ್ ಲಿಮಿಟೆಡ್ ನಂ.3 & 4, I ಹಂತ, I ಹಂತ, B.T.M. ಲೇಔಟ್, ಬನ್ನೇರುಘಟ್ಟ ರಸ್ತೆ ಅಂಚೆ ಪೆಟ್ಟಿಗೆ ಸಂಖ್ಯೆ 2924, ಡಿ.ಆರ್. ಕಾಲೇಜು P.O., ಬೆಂಗಳೂರು-560029.
BRBNMPL ನೇಮಕಾತಿ 2024 ಪ್ರಮುಖ ಲಿಂಕುಗಳು
ಅರ್ಜಿ ಫಾರ್ಮ್ | ಇಲ್ಲಿ ಒತ್ತಿ |
ನೋಟಿಫಿಕೇಶನ್ | ಇಲ್ಲಿ ಒತ್ತಿ |