ಜಲಶಕ್ತಿ ಮಂತ್ರಾಲಯ ನೇಮಕಾತಿ 2024: ವಿವಿಧ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ
ಸ್ನೇಹಿತರೇ ಶಕ್ತಿ ಮಂತ್ರಾಲಯದಿಂದ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಗೆ ಇಲಾಖೆಯಲ್ಲಿ ಖಾಲಿ ಇರುವ ಚೇರ್ ಪರ್ಸನ್, ಸದಸ್ಯ ಮತ್ತು ಕಾರ್ಯದರ್ಶಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು , ಆಯ್ಕೆಯಾದ ಅಭ್ಯರ್ಥಿಗಳನ್ನು ಡಿಪ್ಯೂಟೇಶನ್ (ಸಣ್ಣ ಅವಧಿಯ ಒಪ್ಪಂದ ಸಹಿತ) ಆಧಾರದ ಮೇಲೆ ಭರ್ತಿ ಮಾಡಲಾಗುವುದು. ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಯನ್ನು ನೋಟಿಫಿಕೇಶನ್ ಬಿಡುಗಡೆಯಾದ 30 ದಿನಗೊಳಗಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.
ಗಮನಿಸಿ: ಅರ್ಜಿ ಸಲ್ಲಿಸುವ ಮೊದಲು ಆಸಕ್ತ ಅಭ್ಯರ್ಥಿಗಳು ಜಲಶಕ್ತಿ ಮಂತ್ರಾಲಯ ನೇಮಕಾತಿ 2024 ರ ಅರ್ಹತೆಯನ್ನು ಪರಿಶೀಲಿಸಿ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಉತ್ತಮ.
ಜಲಶಕ್ತಿ ಮಂತ್ರಾಲಯ ನೇಮಕಾತಿ 2024 ವಿವರ
ಸಂಸ್ಥೆಯ ಹೆಸರು | ಜಲಶಕ್ತಿ ಮಂತ್ರಾಲಯ (Department of Water Resources, River Development & Ganga Rejuvenation) |
ಹುದ್ದೆಯ ಹೆಸರು | ಚೇರ್ಪರ್ಸನ್, ಸದಸ್ಯ (ಪರಿಸರ ಸಮಸ್ಯೆಗಳು, ಹೈಡ್ರಾಲಜಿ, ಮೀಸಲಾತಿ ಮತ್ತು ನಿಯಂತ್ರಣ) ಮತ್ತು ಕಾರ್ಯದರ್ಶಿ ಹುದ್ದೆಗಳು |
ಒಟ್ಟು ಹುದ್ದೆಗಳು | 05 |
ವೇತನ | ವಿವಿಧ ಹುದ್ದೆಗಳಿಗೆ ವಿವಿಧ ಹಂತದ ವೇತನ ಶ್ರೇಣಿ ಇರುತ್ತದೆ |
ಅಧಿಕ್ರತ ಪೋರ್ಟಲ್ | jalshakti-dowr.gov.in |
ಜಲಶಕ್ತಿ ಮಂತ್ರಾಲಯ ನೇಮಕಾತಿ 2024 ವಯೋಮಿತಿ
ಜಲಶಕ್ತಿ ಮಂತ್ರಾಲಯ ನೇಮಕಾತಿ 2024 ಅಭ್ಯರ್ಥಿಗಳ ವಯೋಮಿತಿಯು ಹೀಗಿದೆ. ಚೇರ್ಪರ್ಸನ್, ಸದಸ್ಯ (ಪರಿಸರ ಸಮಸ್ಯೆಗಳು, ಹೈಡ್ರಾಲಜಿ, ಮೀಸಲಾತಿ ಮತ್ತು ನಿಯಂತ್ರಣ) ಹುದ್ದೆಗಳಿಗೆ ಅಭ್ಯರ್ಥಿಗಳ ಗರಿಷ್ಠ ವಯಸ್ಸು 58 ವರ್ಷ ಮತ್ತು ಕಾರ್ಯದರ್ಶಿ ಹುದ್ದೆಗೆ ಅಭ್ಯರ್ಥಿಗಳ ಗರಿಷ್ಠ ವಯಸ್ಸು 56 ವರ್ಷ.
ಜಲಶಕ್ತಿ ಮಂತ್ರಾಲಯ ನೇಮಕಾತಿ 2024 ವಿದ್ಯಾರ್ಹತೆ
ಹುದ್ದೆಯ ಹೆಸರು | ವಿದ್ಯಾರ್ಹತೆ |
ಚೇರ್ಪರ್ಸನ್ | ಸಿವಿಲ್ ಇಂಜಿನಿಯರಿಂಗ್ ಅಥವಾ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ |
ಸದಸ್ಯ (environmental issues) | ಇಂಜಿನಿಯರಿಂಗ್/ಪರಿಸರ ಇಂಜಿನಿಯರಿಂಗ್ ಪದವಿ |
ಸದಸ್ಯ (ಹೈಡ್ರಾಲಜಿ) | ಸಿವಿಲ್ ಇಂಜಿನಿಯರಿಂಗ್/ಜಲ ಸಂಪನ್ಮೂಲ/ಹೈಡ್ರಾಲಿಕ್ಸ್/ಸೇತುವೆಗಳು/ಮಣ್ಣು ಮತ್ತು ನೀರಿನ ಸಂರಕ್ಷಣಾ ಇಂಜಿನಿಯರಿಂಗ್ |
ಸದಸ್ಯ( ಮಾನಿಟರಿಂಗ್ ಮತ್ತು ರೇಗುಲೇಷನ್) | ಸಿವಿಲ್/ಮೆಕಾನಿಕಲ್/ಉಪಕರಣ ಇಂಜಿನಿಯರಿಂಗ್ ಪದವಿ |
ಕಾರ್ಯದರ್ಶಿ | ಯಾವುದೇ ಪದವಿ + 10 ವರ್ಷಗಳ ಅನುಭವ |
ಜಲಶಕ್ತಿ ಮಂತ್ರಾಲಯ ನೇಮಕಾತಿ 2024 ಆಯ್ಕೆ ಪ್ರಕ್ರಿಯೆ
ಜಲಶಕ್ತಿ ಮಂತ್ರಾಲಯ ನೇಮಕಾತಿ 2024 ಹುದ್ದೆಗಳ ಆಯ್ಕೆ ಪ್ರಕ್ರಿಯೆಯು ಅರ್ಜಿದಾರರ ಶೈಕ್ಷಣಿಕ ಅರ್ಹತೆ, ಅನುಭವವನ್ನು ಪರಿಶೀಲಿಸಿ ನಂತರ ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಡಿಪ್ಯೂಟೇಶನ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
ಜಲಶಕ್ತಿ ಮಂತ್ರಾಲಯ ನೇಮಕಾತಿ 2024 ವೇತನ
ಹುದ್ದೆಯ ಹೆಸರು | ವೇತನ |
ಚೇರ್ಪರ್ಸನ್ | ರೂ. 182200-224100/- |
ಸದಸ್ಯ (Environmental Issues) | ರೂ. 144200-218200/- |
ಸದಸ್ಯ (ಹೈಡ್ರಾಲಜಿ) | ರೂ. 144200-218200/- |
ಸದಸ್ಯ( ಮಾನಿಟರಿಂಗ್ ಮತ್ತು ರೇಗುಲೇಷನ್) | ರೂ. 144200-218200/- |
ಕಾರ್ಯದರ್ಶಿ | ರೂ. 123100-215900/- |
ಜಲಶಕ್ತಿ ಮಂತ್ರಾಲಯ ನೇಮಕಾತಿ 2024 ಅರ್ಜಿ ಸಲ್ಲಿಕೆ ಪ್ರಕ್ರಿಯೆ
- ಜಲಶಕ್ತಿ ಮಂತ್ರಾಲಯ ನೇಮಕಾತಿ 2024 ಅರ್ಜಿ ಸಲ್ಲಿಕೆ ಅರ್ಜಿ ಸಲ್ಲಿಕೆಯ ನೀವು ಮೊದಲು ಅರ್ಹತಾ ಮಾನದಂಡಗಳನ್ನು (ವಿದ್ಯಾರ್ಹತೆ, ಅನುಭವ, ವಯೋಮಿತಿ) ಪೂರೈಸಿದಿರೋ ಎಂದು ಖಚಿತಪಡಿಸಿಕೊಳ್ಳಿ.
- ಅರ್ಜಿಯ ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಲಗತ್ತಿಸಿ.
- ಅರ್ಜಿಯನ್ನು ಸಿದ್ದಪಡಿಸಿದ ನಂತರ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮೂಲಕ ಕಳುಹಿಸಿ.
- ಉಪ ಕಾರ್ಯದರ್ಶಿ (ಸಂಸ್ಥಾಪನೆ IV), ಜಲ ಸಂಪನ್ಮೂಲ, ನದಿಗಳ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆ, Ministry of Jal Shakti, Room No. 428, Shram Shakti Bhavan, Rafi Marg, New Delhi — 110 001
- ಇಮೇಲ್ ಮೂಲಕ ಕಳುಹಿಸಲು use4-mowr@nic.in ಮತ್ತು soe4-mowr@gov.in ಮೇಲ್ ಅನ್ನು ಬಳಸಿ.
- ಅರ್ಜಿ ಸಲ್ಲಿಕೆಯನ್ನು 30 ದಿನಗೊಳಗಾಗಿ ಸಲ್ಲಿಕೆ ಮಾಡಬೇಕಾಗುತ್ತದೆ. ಹೆಚ್ಚಿನ ಮಾಹಿತಿಯನ್ನು ಅಧಿಕ್ರತ ನೋಟಿಫಿಕೇಶನ್ ಅನ್ನು ಪರಿಶೀಲಿಸಿ
ಜಲಶಕ್ತಿ ಮಂತ್ರಾಲಯ ನೇಮಕಾತಿ 2024 ಪ್ರಮುಖ ಲಿಂಕುಗಳು
ಅರ್ಜಿ ಸಲ್ಲಿಕೆ | ಇಲ್ಲಿ ಒತ್ತಿ |
ನೋಟಿಫಿಕೇಶನ್ | ಇಲ್ಲಿ ಒತ್ತಿ |