ಕೇಂದ್ರ ರೇಷ್ಮೆ ಮಂಡಳಿ (CSB) ನೇಮಕಾತಿ 2024: ಒಟ್ಟು 122 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಸ್ನೇಹಿತರೇ ಕೇಂದ್ರ ರೇಷ್ಮೆ ಮಂಡಳಿ (CSB) ಯು ಇಲಾಖೆಯಲ್ಲಿ ಖಾಲಿ ಇರುವ ವಿಜ್ನಾನಿ-ಬಿ (ಪ್ರೀ-ಕೂಕೂನ್ ವಿಭಾಗ) ಹುದ್ದೆಗಳ ಭರ್ತಿಗೆ ಕೇಂದ್ರ ರೇಷ್ಮೆ ಮಂಡಳಿ (CSB) ನೇಮಕಾತಿ 2024 ರ ಅಧಿಕ್ರತ ನೋಟಿಫಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಸಿಎಸ್ಬಿ ನೇಮಕಾತಿಯು ಒಟ್ಟು 122 ಹುದ್ದೆಗಳ ಭರ್ತಿಗೆ ನಡೆಯಲಿದ್ದು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಯನ್ನು ಮಾಡಬಹುದಾಗಿದೆ. ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಕೆಯು ಆರಂಭಗೊಂಡಿದ್ದು ಸೆಪ್ಟಂಬರ್ 05, 2024 ರಂದು ಕೊನೆಗೊಳ್ಳಲಿದೆ.
ಕೇಂದ್ರ ರೇಷ್ಮೆ ಮಂಡಳಿ (CSB) ನೇಮಕಾತಿ 2024 ರ ವಿಜ್ನಾನಿ-ಬಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಮೊದಲು ನೇಮಕಾತಿಯ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ, ತಾವು ಅರ್ಹರು ಎಂದು ಖಚಿತ ಪಡಿಸಿಕೊಂಡು ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸುವುದು ಉತ್ತಮ.
ಕೇಂದ್ರ ರೇಷ್ಮೆ ಮಂಡಳಿ (CSB) ನೇಮಕಾತಿ 2024 ವಿವರ
ಸಂಸ್ಥೆಯ ಹೆಸರು | ಕೇಂದ್ರ ರೇಷ್ಮೆ ಮಂಡಳಿ (CSB), ಬಟ್ಟೆ ಮತ್ತು ಕೈಗಾರಿಕಾ ಸಚಿವಾಲಯ, ಭಾರತ ಸರ್ಕಾರ |
ಹುದ್ದೆಯ ಹೆಸರು | ವಿಜ್ಞಾನಿ-ಬಿ (ಪ್ರೀ-ಕೂಕೂನ್ ವಿಭಾಗ) |
ಒಟ್ಟು ಹುದ್ದೆಗಳು | 122 |
ವೇತನ | ₹56,100 |
ಅಧಿಕ್ರತ ಪೋರ್ಟಲ್ | www.csb.gov.in |
ಕೆಲಸದ ಸ್ವಭಾವ | ಶಾಶ್ವತ |
ಕೇಂದ್ರ ರೇಷ್ಮೆ ಮಂಡಳಿ (CSB) ನೇಮಕಾತಿ 2024 ಪ್ರಮುಖ ದಿನಾಂಕಗಳು
ಕೇಂದ್ರ ರೇಷ್ಮೆ ಮಂಡಳಿ (CSB) ನೇಮಕಾತಿ 2024 ರ ಅರ್ಜಿ ಸಲ್ಲಿಕೆ ಪ್ರಕ್ರಿಯೆ ದಿನಾಂಕ 22-08-2024 ರಂದು ಆರಂಭಗೊಂಡಿದ್ದು, ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 05-09-2024 ಆಗಿರುತ್ತದೆ.
ಕೇಂದ್ರ ರೇಷ್ಮೆ ಮಂಡಳಿ (CSB) ನೇಮಕಾತಿ 2024 ಅರ್ಜಿ ಶುಲ್ಕ
ಕೇಂದ್ರ ರೇಷ್ಮೆ ಮಂಡಳಿ (CSB) ನೇಮಕಾತಿ 2024 ರ ಅರ್ಜಿ ಶುಲ್ಕವು ವಿವಿಧ ವರ್ಗದ ಅಭ್ಯರ್ಥಿಗಳಿಗೆ ಹೀಗಿದೆ. ಅನ್ ರಿಸರ್ವ್ದ್, ಈಡಬಲ್ಯುಎಸ್, ಓಬಿಸಿ, ಎಕ್ಸ್- ಸೇರ್ವಿಸ್ ಮ್ಯಾನ್ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವು ರೂ 1000. ಎಸ್ಸಿ/ಎಸ್ಟಿ/ಪಿಡಬಲ್ಯುಬಿಡಿ/ ಮಹಿಳೆಯರಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ. ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಚಲನ್ ತೆಗಿಸಿ ಇಂಡಿಯನ್ ಪೋಸ್ಟ್ ಆಫೀಸ್ ಕಚೇರಿಗೆ ಭೇಟಿ ನೀಡಿ ಪಾವತಿಸಬೇಕಾಗುತ್ತದೆ.
ಕೇಂದ್ರ ರೇಷ್ಮೆ ಮಂಡಳಿ (CSB) ನೇಮಕಾತಿ 2024 ವಯೋಮಿತಿ
ಕೇಂದ್ರ ರೇಷ್ಮೆ ಮಂಡಳಿ (CSB) ನೇಮಕಾತಿ 2024 ರ ವಿಜ್ನಾನಿ-ಬಿ ಹುದ್ದೆಗಳ ಗರಿಷ್ಠ ವಯೋಮಿತಿಯು 35 ವರ್ಷಗಳು.
ಕೇಂದ್ರ ರೇಷ್ಮೆ ಮಂಡಳಿ (CSB) ನೇಮಕಾತಿ 2024 ವಿದ್ಯಾರ್ಹತೆ
ಕೇಂದ್ರ ರೇಷ್ಮೆ ಮಂಡಳಿ (CSB) ನೇಮಕಾತಿ 2024 ವಿದ್ಯಾರ್ಹತೆ ಹೀಗಿದೆ.
- ಅಭ್ಯರ್ಥಿಗಳು ಮಾಸ್ಟರ್ಸ್ ಡಿಗ್ರಿ ಇನ್ ಸೈನ್ಸ್ ಅಥವಾ ಅಗ್ರಿಕಲ್ಚರ್ ಸೈನ್ಸ್ ಪದವಿಯನ್ನು ಪೂರ್ಣಗೊಳಿಸಿರಬೇಕು.
- ICAR AICE-JRF/SRF (Ph.D.) – 2024 ರ ಪರೀಕ್ಷೆಯನ್ನು ಬರೆದಿರಬೇಕು.
ಕೇಂದ್ರ ರೇಷ್ಮೆ ಮಂಡಳಿ (CSB) ನೇಮಕಾತಿ 2024 ಆಯ್ಕೆ ಪ್ರಕ್ರಿಯೆ
ಕೇಂದ್ರ ರೇಷ್ಮೆ ಮಂಡಳಿ (CSB) ನೇಮಕಾತಿ 2024 ರ ಆಯ್ಕೆ ಪ್ರಕ್ರಿಯೆಯು ಈ ಕೆಳಗಿನ ಹಂತಗಳಲ್ಲಿ ನಡೆಯಲಿದೆ.
- ICAR AICE-JRF/SRF (Ph.D.) – 2024 ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ CSB ಮಂಡಳಿಯಿಂದ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗುವುದು.
- ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಿ ಸದರಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.
ಕೇಂದ್ರ ರೇಷ್ಮೆ ಮಂಡಳಿ (CSB) ನೇಮಕಾತಿ 2024 ಅರ್ಜಿ ಸಲ್ಲಿಕೆ ಪ್ರಕ್ರಿಯೆ
ಕೇಂದ್ರ ರೇಷ್ಮೆ ಮಂಡಳಿ (CSB) ನೇಮಕಾತಿ 2024 ರ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೀಗಿದೆ.
- ಕೇಂದ್ರ ರೇಷ್ಮೆ ಮಂಡಳಿ (CSB) ಅಧಿಕ್ರತ ಪೋರ್ಟಲ್ ಗೆ ಭೇಟಿ ನೀಡಿ.
- ನಂತರ ಆನ್ಲೈನ್ ಅಪ್ಲಿಕೇಷನ್ ಅರ್ಜಿಯನ್ನು ಸೂಕ್ತ ವೈಯಕ್ತಿಕ ವಿವರಗಳೊಂದಿಗೆ ತಪ್ಪದೆ ಭರ್ತಿ ಮಾಡಬೇಕು.
- ಅಗತ್ಯ ದಾಖಲೆಗಳನ್ನು ಲಗತ್ತಿಸಿ. ಕೊನೆಯಲ್ಲಿ ನಿಮ್ಮ ವರ್ಗಕ್ಕೆ ಸೂಚಿತ ಅರ್ಜಿ ಶುಲ್ಕವನ್ನು ಪಾವತಿಸಿ.
ಕೇಂದ್ರ ರೇಷ್ಮೆ ಮಂಡಳಿ (CSB) ನೇಮಕಾತಿ 2024 ಪ್ರಮುಖ ಲಿಂಕುಗಳು
ಅರ್ಜಿ ಸಲ್ಲಿಕೆ | ಇಲ್ಲಿ ಒತ್ತಿ |
ನೋಟಿಫಿಕೇಶನ್ | ಇಲ್ಲಿ ಒತ್ತಿ |