NHAI ನೇಮಕಾತಿ 2024: ಮ್ಯಾನೇಜರ್ ಹುದ್ದೆಗಾಗಿ ಹೊಸ ಅಧಿಸೂಚನೆ ಪ್ರಕಟ

NHAI ನೇಮಕಾತಿ 2024: ಮ್ಯಾನೇಜರ್ ಹುದ್ದೆಗಾಗಿ ಹೊಸ ಅಧಿಸೂಚನೆ ಪ್ರಕಟ

ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯ (NHAI) 2024 ನೇ ಸಾಲಿನ ಹೊಸ ನೇಮಕಾತಿ ಅಧಿಸೂಚನೆಯನ್ನು ಪ್ರಕಟಗೊಳಿಸಿದ್ದು ಸಂಷೆಯಲ್ಲಿ ಖಾಲಿ ಇರುವ ಜನರಲ್ ಮ್ಯಾನೇಜರ್, ಡೆಪ್ಯುಟಿ ಮ್ಯಾನೇಜರ್ ಮತ್ತು ಮ್ಯಾನೇಜರ್ ನ ಒಟ್ಟು 60 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. NHAI ನೇಮಕಾತಿಯು 3 ವರ್ಷಗಳ ಅವಧಿಗಾಗಿ ನಡೆಯಲಿದ್ದು ಆಯ್ಕೆಯಾದ ಅಭ್ಯರ್ಥಿಗಳು NHAI ಅನುಮೋದನೆಯೊಂದಿಗೆ ಹೆಚ್ಚುವರಿ 01 ವರ್ಷ ವಿಸ್ತರಣೆ ಪಡೆಯುವ ಆಯ್ಕೆ ಹೊಂದಿರುತ್ತಾರೆ.

ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು NHAI ನೇಮಕಾತಿ 2024 ರ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ ಅರ್ಜಿ ಹಾಕಿರಿ.

NHAI ನೇಮಕಾತಿ 2024 ವಿವರ

ಸಂಸ್ಥೆಯ ಹೆಸರು ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯ (NHAI)
ಹುದ್ದೆಯ ಹೆಸರು ಜನರಲ್ ಮ್ಯಾನೇಜರ್, ಡೆಪ್ಯುಟಿ ಮ್ಯಾನೇಜರ್ ಮತ್ತು ಮ್ಯಾನೇಜರ್
ಒಟ್ಟು ಹುದ್ದೆಗಳು 60
ವೇತನ ಪೆ ಸ್ಕೇಲ್ 13, ಪೆ ಸ್ಕೇಲ್ 12, ಪೆ ಸ್ಕೇಲ್ 11
ಅಧಿಕ್ರತ ಪೋರ್ಟಲ್nhai.gov.in
ಕೆಲಸದ ಸ್ವಭಾವ ಡೆಪ್ಯುಟೇಶನ್ (3+1)

NHAI ನೇಮಕಾತಿ 2024 ಪ್ರಮುಖ ದಿನಾಂಕಗಳು

NHAI ನೇಮಕಾತಿ 2024 ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆರಂಭಗೊಂಡಿದ್ದು ಆಸಕ್ತ ಅಭ್ಯರ್ಥಿಗಳಿಗೆ ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 23-09-2024 ಆಗಿರುತ್ತದೆ ಮತ್ತು ಅರ್ಜಿಯ ಹಾರ್ಡ್ ಕಾಫಿ ಸಲ್ಲಿಸಲು ಕೊನೆಯ ದಿನಾಂಕ 22-10-2024 ಆಗಿರುತ್ತದೆ.

NHAI ನೇಮಕಾತಿ 2024 ವಯೋಮಿತಿ

NHAI ನೇಮಕಾತಿ 2024ರ ಸದರಿ ಹುದ್ದೆಗಳ ಆಯ್ಕೆಗೆ ಅಭ್ಯರ್ಥಿಗಳ ಗರಿಷ್ಠ ವಯಸ್ಸು 56 ವರ್ಷಗಳು.

NHAI ನೇಮಕಾತಿ 2024 ವಿದ್ಯಾರ್ಹತೆ

ಹುದ್ದೆ ಹೆಸರು ವಿದ್ಯಾರ್ಹತೆ
ಜನರಲ್ ಮ್ಯಾನೇಜರ್ ಮಾನ್ಯತೆ ಪಡೆದ ವಿಶ್ವವಿದ್ಯಾಲದಿಂದ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಡಿಗ್ರಿ +14 ವರ್ಷಗಳ ಅನುಭವ, ಅದರಲ್ಲಿ 9 ವರ್ಷ ರಾಷ್ಟ್ರೀಯ/ರಾಜ್ಯ ಹೆದ್ದಾರಿ ಯೋಜನೆಗಳಲ್ಲಿ.
ಡೆಪ್ಯುಟಿ ಮ್ಯಾನೇಜರ್ ಮಾನ್ಯತೆ ಪಡೆದ ವಿಶ್ವವಿದ್ಯಾಲದಿಂದ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಡಿಗ್ರಿ + ರಾಷ್ಟ್ರೀಯ/ರಾಜ್ಯ ಹೆದ್ದಾರಿ ಯೋಜನೆಗಳಲ್ಲಿ 9 ವರ್ಷ ಅನುಭವ
ಮ್ಯಾನೇಜರ್ ಮಾನ್ಯತೆ ಪಡೆದ ವಿಶ್ವವಿದ್ಯಾಲದಿಂದ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಡಿಗ್ರಿ + ರಾಷ್ಟ್ರೀಯ/ರಾಜ್ಯ ಹೆದ್ದಾರಿ ಯೋಜನೆಗಳಲ್ಲಿ 3 ವರ್ಷ ಅನುಭವ

NHAI ನೇಮಕಾತಿ 2024 ಆಯ್ಕೆ ವಿಧಾನ

NHAI ನೇಮಕಾತಿ 2024 ಆಯ್ಕೆಯು ಕ್ವಾಲಿಫಿಕೇಶನ್, ಅನುಭವ ಪರಿಶೀಲನೆ ಮತ್ತು ಸಂದರ್ಶನವನ್ನು ಒಳಗೊಂಡಿರುತ್ತದೆ.

NHAI ನೇಮಕಾತಿ 2024 ಅರ್ಜಿ ಸಲ್ಲಿಕೆ

  • NHAI ನೇಮಕಾತಿ 2024 ಅರ್ಜಿ ಸಲ್ಲಿಕೆಗೆ ಅಭ್ಯರ್ಥಿಗಳು NHAI ಅಧಿಕ್ರತ ಪೋರ್ಟಲ್ ಗೆ ಭೇಟಿ ನೀಡಿ ಅಲ್ಲಿರುವ ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ ಆನ್ಲೈನ್ ನಲ್ಲಿ ಸಲ್ಲಿಕೆ ಮಾಡಬೇಕು. ಆನ್ಲೈನ್ ಅರ್ಜಿಯನ್ನು ಅಭ್ಯರ್ಥಿಗಳು ಸೆಪ್ಟೆಂಬರ್ 23, 2024 ರ ಒಳಗಾಗಿ ಸಲ್ಲಿಸಬೇಕಾಗುತ್ತದೆ.
  • ಭರ್ತಿಯಾದ ಆನ್ಲೈನ್ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಮುದ್ರಿಸಬೇಕು. ನಂತರ ಕಡ್ಡಾಯವಾಗಿ ಮುದ್ರಿತ ಅರ್ಜಿ ನಮೂನೆಯನ್ನು ಮತ್ತು ಅಗತ್ಯ ದಾಖಲೆಗಳನ್ನು ಪೋಸ್ಟ್ ಮೂಲಕ ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ. ಮುದ್ರಿತ ಅರ್ಜಿ ನಮೂನೆಯ ದಿನಾಂಕ 22-10-2024 ರ ಒಳಗಾಗಿ NHAI ಗೆ ತಲುಪಬೇಕಾಗುತ್ತದೆ.
  • ಅರ್ಜಿ ಸಲ್ಲಿಕೆ ವಿಳಾಸ: DGM (HR/ADMN)-III, NHAI
    Plot No. G-5 ಮತ್ತು 6, Sector-10
    Dwarka, New Delhi-110075

NHAI ನೇಮಕಾತಿ 2024 ಪ್ರಮುಖ ಲಿಂಕುಗಳು

ಅರ್ಜಿ ಸಲ್ಲಿಕೆಇಲ್ಲಿ ಒತ್ತಿ
ನೋಟಿಫಿಕೇಶನ್ ಇಲ್ಲಿ ಒತ್ತಿ
ಲೇಖನವನ್ನು ಶೇರ್ ಮಾಡಿ

Leave a Reply

Your email address will not be published. Required fields are marked *