ರಾಜ್ಯ ಸರ್ಕಾರದಿಂದ ವಿವಿಧ ಅಭಿವ್ರದ್ದಿ ನಿಗಮಗಳ ಸಾಲ ಯೋಜನೆ ಅಡಿಯಲ್ಲಿ ಅರ್ಜಿ ಆಹ್ವಾನ
ಸ್ನೇಹಿತರೇ ರಾಜ್ಯ ಸರ್ಕಾರ ಸಾಲವನ್ನು ಪಡೆಯಲು ಬಯಸುವ ರಾಜ್ಯದ ಜನರಿಗೆ ವಿವಿಧ ಅಭಿವ್ರದ್ದಿ ನಿಗಮಗಳ ಸಾಲ ಯೋಜನೆಯಡಿಯಲ್ಲಿ ಅರ್ಜಿ ಆಹ್ವಾನಿಸಿದ್ದು ಆಸಕ್ತರು ಈ ಸಾಲ ಸೌಲಭ್ಯಗಳ ಲಾಭ ಪಡೆಯಲು ಸೆಪ್ಟೆಂಬರ್ 15, 2024 ರ ಒಳಗಾಗಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು.
ಯಾವೆಲ್ಲ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು?
ಆಸಕ್ತರು ರಾಜ್ಯ ಸರ್ಕಾರದ ಸುತ್ತೋಲೆಯಲ್ಲಿ ಸೂಚಿಸಿರುವ ಈ ಕೆಳಗಿನ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು.
- ಡಿ ದೇವರಾಜ್ ಅರಸು ಸ್ವಯಂ ಉದ್ಯೋಗ ನೆರಸಾಲ / ಪಂಚವ್ರತ್ತಿ ಶ್ರೀ ಶಹಾಜೀ ರಾಜೆ ಸಮ್ರದ್ದಿ ಯೋಜನೆ
- ಗಂಗಾ ಕಲ್ಯಾಣ/ಜೀವಜಲ/ಜೀಹಾವು ಜಲಭಾಗ್ಯ ಯೋಜನೆ
- ಅರಿವು ಶೈಕ್ಷಣಿಕ ಸಾಲ/ಬಸವಬೆಳಗು ಯೋಜನೆ
- ವಿದೇಶಿ ವಿಶ್ವ ವಿದ್ಯಾನಿಲಯಗಳಲ್ಲಿ ಉನ್ನತ ವ್ಯಾಸಾಂಗಕ್ಕೆ ಸಾಲ ಯೋಜನೆ
- ಮರಾಠಾ ಮಿಲಿಟ್ರೀ ಹೊಟೇಲ್ ಯೋಜನೆ (ಮರಾಠಾ ಸಮುದಾಯದವರಿಗೆ ಮಾತ್ರ)
- ಭೋಜನಾಲಯ ಕೇಂದ್ರ ಯೋಜನೆ (ಲಿಂಗಾಯತ ಸಮುದಾಯದವರಿಗೆ ಮಾತ್ರ)
- ವಿಭೂತಿ ನಿರ್ಮಾಣ ಘಟಕ (ಲಿಂಗಾಯತ ಸಮುದಾಯದವರಿಗೆ ಮಾತ್ರ)
- ಉಚಿತ ಹೊಲಿಗೆ ಯಂತ್ರ ಯೋಜನೆ (ಡಿ ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವ್ರದ್ದಿ ನಿಗಮದವರಿಗೆ ಮಾತ್ರ)
- ಸ್ವಾತಂತ್ರ ಅಮ್ರತ ಮಹೋತ್ಸವದ ಮುನ್ನಡೆ ಯೋಜನೆ
- ಸ್ವಯಂ ಉದ್ಯೋಗ ಸಾಲ ಯೋಜನೆ
ಯಾರಿಗೆಲ್ಲ ಸಾಲ ಸಿಗಲಿದೆ?
ಈ ಮೇಲೆ ತಿಳಿಸಿದ ಯೋಜನೆಗಳ ಸಾಲ ಸೌಲಭ್ಯವನ್ನು ರಾಜ್ಯ ಸರ್ಕಾರ ವಿವಿಧ ಅಭಿವ್ರದ್ದಿ ನಿಗಮ ಮತ್ತು ವಾಣಿಜ್ಯ ಬ್ಯಾಂಕುಗಳ ಸಹಕಾರದಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ಒಕ್ಕಲಿಗ, ಲಿಂಗಾಯತ, ಅಂಬಿಗ,ಸವಿತಾ ಸಮಾಜ, ಮಡಿವಾಳ, ಉಪ್ಪಾರ, ಕರ್ನಾಟಕ ವಿಶ್ವಕರ್ಮ ಸಮುದಾಯ, ಕಾಡುಗೊಲ್ಲ, ಅಲೆಮಾರಿ, ಅರೆ ಅಲೆಮಾರಿ ಸಮುದಾಯ, ಮರಾಠಾ ಮತ್ತು ಹಿಂದುಳಿದ ವರ್ಗದ ಪ್ರವರ್ಗ-1, 2ಎ, 3ಎ ಹೀಗೆ ಹಲವಾರು ಸಮುದಾಯದ ಜನರು ಸಾಲ ಸೌಲಭ್ಯ ಯೋಜನೆಯ ವ್ಯಾಪ್ತಿಯಲ್ಲಿ ಬರಲಿದ್ದಾರೆ.
ಅರ್ಜಿ ಸಲ್ಲಿಕೆ ಹೇಗೆ?
2024-25 ನೇ ಸಾಲಿನ ಈ ಮೇಲೆ ತಿಳಿಸಿದ ವಿವಿಧ ಅಭಿವ್ರದ್ದಿ ನಿಗಮಗಳ ಎಲ್ಲ ಯೋಜನೆಗಳಿಗೆ ಅರ್ಜಿಯನ್ನು ಹಾಕಲು ಗ್ರಾಮ್ ಒನ್, ಕರ್ನಾಟಕ ಒನ್, ಸೇವಾ ಕೇಂದ್ರಗಳಿಗೆ ಭೇಟಿ ನೀಡಿ, ಸೇವಸಿಂಧು ಪೋರ್ಟಲ್ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು. 2023-24 ನೇ ಸಾಲಿನಲ್ಲಿ ಈ ಯೋಜನೆಗಳ ಅಡಿಯಲ್ಲಿ ಸಾಲ ಪಡೆದ ಫಲಾನುಭವಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ಈ ವಿವಿಧ ಅಭಿವ್ರದ್ದಿ ನಿಗಮಗಳ ಅಡಿಯಲ್ಲಿ ಒಮ್ಮೆ ಸಾಲ ಪಡೆದರೆ ಅಂತಹ ಸದಸ್ಯರು ಅಥವಾ ಅವರ ಕುಟುಂಬಸ್ಥರು ಮತ್ತೊಮ್ಮೆ ಸಾಲ ಪಡೆಯಲು ಅರ್ಹರಾಗಿರುವುದಿಲ್ಲ.
ಅರ್ಜಿ ಸಲ್ಲಿಸುವಾಗ ಅರ್ಜಿದಾರರು ನೈಜ ಮತ್ತು ಜಾಲ್ತಿಯಲ್ಲಿರುವ ದಾಖಲಾತಿಗಳನ್ನು ನೀಡಬೇಕಾಗುತ್ತದೆ. ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಬ್ಯಾಂಕ್ ಪಾಸ್ ಬುಕ್ ನಲ್ಲಿರುವ ಅರ್ಜಿದಾರರ ವಿವರಗಳು ತಾಳೆಯಾಗದಿದ್ದರೆ ಅರ್ಜಿಯನ್ನು ನಿಷ್ಕ್ರಿಯಗೊಳಿಸಲಾಗುವುದು.