Army Technical Graduate Course (TGC) 141 Recruitment 2024: ಭಾರತೀಯ ಸೇನಯಲ್ಲಿ ಉದ್ಯೋಗಾವಕಾಶ
ಸ್ನೇಹಿತರೇ ಭಾರತೀಯ ತಾಂತ್ರಿಕ ಗ್ರಾಜುಯೇಟ್ ಕೋರ್ಸ್ (TGC) 141 ನೇಮಕಾತಿಗೆ ಇದೀಗ 30 ವಿವಿಧ ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿ (New recruitment) ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಭಾರತೀಯ ಸೇನಾ ತಾಂತ್ರಿಕ ಪದವಿ ಕೋರ್ಸ್ 141 ಅಧಿಕೃತ ಅಧಿಸೂಚನೆಯಲ್ಲಿ (Army TGC 141 Official notification) ನೀಡಿರುವ ಅರ್ಹತಾ ಮಾನದಂಡಗಳ ಮಾಹಿತಿಯನ್ನು ಪಡೆದುಕೊಂಡು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಎಂಜಿನಿಯರಿಂಗ್ ಪದವಿಯನ್ನು (Engineering Degree) ಪೂರ್ಣಗೊಳಿಸಿರಬೇಕು ಅಥವಾ ಎಂಜಿನಿಯರಿಂಗ್ ಪದವಿಯ ಅಂತಿಮ ವರ್ಷದಲ್ಲಿ ಓದುತ್ತಿರುವುದಾಗಿರಬೇಕು. ಅಭ್ಯರ್ಥಿಗಳು ಅಂತಿಮ ವರ್ಷದಲ್ಲಿ ಓದುತ್ತಿದ್ದರೆ ಜುಲೈ 01, 2025 ರೊಳಗಾಗಿ ತಾವು ಪದವಿ ಮುಗಿಸಿರುವ ದ್ರಢೀಕರಣವನ್ನು ಒದಗಿಸಬೇಕಾಗುತ್ತದೆ.
Army TGC 141 Recruitment 2024 ರ ಅರ್ಜಿ ಪ್ರಕ್ರಿಯೆಯು ಸೆಪ್ಟೆಂಬರ್ 18, 2024 ರಂದು ಆರಂಭಗೊಂಡಿದ್ದು, ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ ಅಕ್ಟೋಬರ್ 17, 2024 ಆಗಿದೆ. ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ. Army TGC 141 ನೇಮಕಾತಿ 2024 ರ ಆಯ್ಕೆ ಪ್ರಕ್ರಿಯೆಯು ಅರ್ಜಿಗಳ ಶಾರ್ಟ್ ಲಿಸ್ಟಿಂಗ್, ಎಸ್ಎಸ್ಬಿ ಸಂದರ್ಶನ, ವೈದ್ಯಕೀಯ ಪರೀಕ್ಷೆ ಹೀಗೆ ಹಲವು ಹಂತಗಳನ್ನು ಒಳಗೊಂಡಿರುತ್ತದೆ.
ಪ್ರಮುಖ ದಿನಾಂಕಗಳು
Army Technical Graduate Course (TGC) 141ರ ಅಧಿಸೂಚನೆಯು ಸೆಪ್ಟೆಂಬರ್ 18, 2024 ರಂದು ಬಿಡುಗಡೆಯಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸೆಪ್ಟೆಂಬರ್ 18, 2024 ರಂದು ಮಧ್ಯಾಹ್ನ 3 ಗಂಟೆಗೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 17, 2024 ರಂದು ಮಧ್ಯಾಹ್ನ 3 ಗಂಟೆಗೆ ಮುಗಿಯಲಿದೆ.
ಹುದ್ದೆಗಳ ವಿವರ
Army TGC 141 Recruitment 2024 ಅಧಿಸೂಚನೆಯ ಪ್ರಕಾರ, ಒಟ್ಟು 30 ಹುದ್ದೆಗಳ ಭರ್ತಿಗೆ ಆದೇಶ ನೀಡಲಾಗಿದೆ.
ಹುದ್ದೆಗಳ ವಿತರಣಾ ವಿವರಗಳು ಈ ಕೆಳಗಿನಂತಿವೆ:
- ಸಿವಿಲ್ ಇಂಜಿನಿಯರಿಂಗ್: 8 ಹುದ್ದೆಗಳು
- ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್: 6 ಹುದ್ದೆಗಳು
- ಎಲೆಕ್ಟ್ರಿಕಲ್ ಇಂಜಿನಿಯರಿಂಗ್: 2 ಹುದ್ದೆಗಳು
- ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್: 6 ಹುದ್ದೆಗಳು
- ಮೇಖ್ಯಾನಿಕಲ್ ಇಂಜಿನಿಯರಿಂಗ್: 6 ಹುದ್ದೆಗಳು
- ಇತರ ಇಂಜಿನಿಯರಿಂಗ್ ಶ್ರೇಣಿಗಳು: 2 ಹುದ್ದೆಗಳು
ವಿದ್ಯಾರ್ಹತೆ
Army TGC 141 Recruitment 2024 ರ ಪ್ರಕಾರ, ಅಭ್ಯರ್ಥಿಗಳು ಈ ಕೆಳಗಿನ ವಿದ್ಯಾರ್ಹತೆಗಳನ್ನು ಹೊಂದಿರಬೇಕು:
- ಇಂಜಿನಿಯರಿಂಗ್ ಪದವಿಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಇಂಜಿನಿಯರಿಂಗ್ ಪದವಿ ಕೋರ್ಸ್ನ ಅಂತಿಮ ವರ್ಷದ ವಿದ್ಯಾರ್ಥಿಗಳಾಗಿರಬೇಕು. ಅಂತಿಮ ವರ್ಷದ ವಿದ್ಯಾರ್ಥಿಗಳು 2025 ಜುಲೈ 1 ಕ್ಕೆ ಪ್ರಮಾಣಪತ್ರದ ದೃಢೀಕರಣ ಸಲ್ಲಿಸಲು ಕಡ್ಡಾಯವಾಗಿದೆ.
ವಯೋಮಿತಿ
Army TGC 141 Recruitment 2024 ರ ಪ್ರಕಾರ, ಅಭ್ಯರ್ಥಿಯ ಕನಿಷ್ಠ ವಯಸ್ಸು 20 ವರ್ಷ ಮತ್ತು ಗರಿಷ್ಠ ವಯಸ್ಸು 27 ವರ್ಷವಾಗಿರಬೇಕು (2025 ಜುಲೈ 1 ರಂದು 20 ರಿಂದ 27 ವರ್ಷಗಳು, ಜುಲೈ 2, 1998 ರಿಂದ ಜುಲೈ 1, 2005 ರ ನಡುವಿನ ಜನನ ದಿನಾಂಕ).
ವೇತನ
Army TGC 141 Recruitment 2024 ಪ್ರಕಾರ, ಅಭ್ಯರ್ಥಿಗಳು ತರಬೇತಿ ಸಂದರ್ಭದಲ್ಲಿ ಭಾರತೀಯ ಸೇನೆಯ ನಿಯಮಗಳ ಅನುಸಾರ ಬಡ್ತಿ ಪಡೆಯುತ್ತಾರೆ. ಆಯುಕ್ತನಾದ ಬಳಿಕ, 7ನೇ ವೇತನ ಆಯೋಗದ ಆಧಾರದ ಮೇಲೆ, ಭಾರತೀಯ ಸೇನಿಯ ಅಧಿಕಾರಿಗಳಿಗೆ ಅನ್ವಯಿಸುವ ವೇತನ ಮತ್ತು ಅನುಕೂಲಗಳನ್ನು ಪಡೆಯಲಿದ್ದಾರೆ.
ಅರ್ಜಿ ಶುಲ್ಕ
Army TGC 141 Recruitment 2024 ಪ್ರಕಾರ, ಸಾಮಾನ್ಯ ಮತ್ತು ಓಬಿಸಿಗಳ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ, ಮತ್ತು ಎಸ್ಸಿ/ಎಸ್ಟಿ ಅಭ್ಯರ್ಥಿಗಳು ಕೂಡ ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
ಆಯ್ಕೆ ಪ್ರಕ್ರಿಯೆ
Army TGC 141 Recruitment 2024 ರ ಆಯ್ಕೆ ಪ್ರಕ್ರಿಯೆಯು ಪ್ರಕ್ರಿಯೆಯು ಹೀಗೆ ನಡೆಯಲಿದೆ:
- ಶಾರ್ಟ್ ಲಿಸ್ಟಿಂಗ್: ಇಂಜಿನಿಯರಿಂಗ್ ಡಿಗ್ರಿಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ.
- SSB ಸಂದರ್ಶನ: ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳು ಸೆರ್ವೀಸಸ್ ಸೆಲೆಕ್ಷನ್ ಬೋರ್ಡ್ (SSB) ಸಂದರ್ಶನಕ್ಕೆ ಒಳಪಡುತ್ತಾರೆ.
- ವೈದ್ಯಕೀಯ ಪರೀಕ್ಷೆ: SSB ಸಂದರ್ಶನವನ್ನು ದಾಟಿದ ಅಭ್ಯರ್ಥಿಗಳು ವೈದ್ಯಕೀಯ ಪರೀಕ್ಷೆಗೆ ಒಳಪಡುತ್ತಾರೆ.
- ಅಂತಿಮ ಮೆರಿಟ್ ಪಟ್ಟಿ: SSB ಸಂದರ್ಶನ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿನ ಪ್ರದರ್ಶನದ ಆಧಾರದ ಮೇಲೆ ಅಂತಿಮ ಮೆರಿಟ್ ಪಟ್ಟಿ ತಯಾರಿಸಲಾಗುತ್ತದೆ.
ಅರ್ಜಿ ಸಲ್ಲಿಕೆ
- Army TGC 141 Recruitment 2024 ರ ಅರ್ಜಿ ಸಲ್ಲಿಕೆಯ ಮೊದಲು ಅಭ್ಯರ್ಥಿಗಳು ಅಧಿಕ್ರತ ಅಧಿಸೂಚನೆಯಲ್ಲಿ ನೀಡಿರುವ ಎಲ್ಲ ಅರ್ಹತಾ ಮಾನದಂಡಗಳನ್ನು (ವಿದ್ಯಾರ್ಹತೆ ಮತ್ತು ವಯೋಮಿತಿ) ಪರಿಶೀಲಿಸಿ ತಾವು ತಾವು ಅರ್ಹರು ಎಂದು ಖಚಿತ ಪಡಿಸಿಕೊಳ್ಳಬೇಕು.
- ಭಾರತೀಯ ಸೇನಾ (joinindianarmy.nic.in) ಅಧಿಕ್ರತ ಪೋರ್ಟಲ್ ಗೆ ಭೇಟಿ ನೀಡಿ.
- ಪ್ರೊಫೈಲ್ನಲ್ಲಿ ಲಾಗಿನ್ ಮಾಡಲು ಆಯ್ಕೆ ಪಡೆಯುವಿರಿ, ನಿಮ್ಮ ಇಮೇಲ್ ಅಥವಾ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ನೊಂದಣಿಯನ್ನು ಮಾಡಿಸಿಕೊಳ್ಳಿ.
- ಅರ್ಜಿ ನಮೂನೆಯನ್ನು ಎಲ್ಲ ಅಗತ್ಯ ಮಾಹಿತಿಯೊಂದಿಗೆ ಭರ್ತಿ ಮಾಡಿದ ಬಳಿಕ ಶೈಕ್ಷಣಿಕ ಪ್ರಮಾಣಪತ್ರಗಳು, ಐಡಿ ಪ್ರೂಫ್, ಇತ್ತೀಚಿನ ಭಾವಚಿತ್ರ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
- ಅರ್ಜಿಯಲ್ಲಿ ನಮೂದಿಸಿರುವ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.
ಪ್ರಮುಖ ಲಿಂಕುಗಳು
- ಅರ್ಜಿ ಸಲ್ಲಿಕೆ: ಇಲ್ಲಿ ಒತ್ತಿ
- ನೋಟಿಫಿಕೇಶನ್: ಇಲ್ಲಿ ಒತ್ತಿ