ರೇಷನ್ ಕಾರ್ಡ್ ಕೆವೈಸಿ ಮಾಡಿಸಲು ಆಗಸ್ಟ್ 31 ಕೊನೆಯ ದಿನ! ಮೊಬೈಲ್ ನಲ್ಲಿ ಒಂದೇ ನಿಮಿಷದಲ್ಲಿ ಕೆವೈಸಿಯನ್ನು ಮಾಡವ ಕ್ರಮ ತಿಳಿಯಿರಿ
ಸ್ನೇಹಿತರೇ ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಕರ್ನಾಟಕ ಆಹಾರ ಮತ್ತು ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ಅವಿನ್.ಆರ್ ಅವರು ಈ ಕುರಿತು ಹೊಸ ಸೂಚನೆಯನ್ನು ಹೊರಡಿಸಿದ್ದು ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರು ಈ ನಿಯಮವನ್ನು ಪಾಲಿಸುವುದು ಕಡ್ಡಾಯವಾಗಿದೆ. ಹಾಗಾದರೆ ಏನಿದು ಸರ್ಕಾರದ ಹೊಸ ಸುತ್ತೋಲೆ ತಿಳಿಯೋನ ಬನ್ನಿ.
ಈ-ಕೆವೈಸಿ (e-kyc) ಕಡ್ಡಾಯ
ಹೌದು ಕರ್ನಾಟಕ ರಾಜ್ಯ ಸರ್ಕಾರ ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಫಲಾನುಭವಿಗೂ ಈ ಆದೇಶವನ್ನು ನೀಡಿದ್ದು ಎಲ್ಲರೂ ಆಗಸ್ಟ್ 31 ರ ಒಳಗಾಗಿ ಪಡಿತರ ಚೀಟಿಯ ಈ-ಕೆವೈಸಿ (e-kyc) ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಸರ್ಕಾರದ ಈ ಸೂಚನೆಯನ್ನು ಪಾಲಿಸದೆ ಇದ್ದರೆ ರೇಷನ್ ಕಾರ್ಡ್ ಸೌಲಭ್ಯಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದೆ.
ರೇಷನ್ ಕಾರ್ಡ್ ಹೊಂದಿರುವವರಿಗೆ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಸಿಗುವ ಹಣವನ್ನು ಮತ್ತು ಪಡಿತರವನ್ನು ನಿಲ್ಲಿಸಲಾಗುವುದು ಎಂದು ಹೇಳಲಾಗಿದೆ. ಹೀಗಾಗಿ ಎಲ್ಲರೂ ಆಗಸ್ಟ್ 31 ರ ಒಳಗೆ ಉಚಿತವಾಗಿ ಈ-ಕೆವೈಸಿ (e-kyc) ಮಾಡಿಸುವುದು ಕಡ್ಡಾಯ.
ಈ-ಕೆವೈಸಿ (e-kyc) ಕಡ್ಡಾಯ ಯಾಕೆ?
ಈ-ಕೆವೈಸಿ ಪ್ರಕ್ರಿಯೆಯು ಪಡಿತರ ಚೀಟಿಯಲ್ಲಿ ನೋಂದಾಯಿಸಲಾದ ಎಲ್ಲಾ ಸದಸ್ಯರ ಮಾಹಿತಿಯನ್ನು ನವೀಕರಿಸಲು ಸಹಾಯ ಮಾಡುತ್ತದೆ ಮತ್ತು ಇದು ಪಡಿತರ ವಿತರಣೆಯಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಸರ್ಕಾರದ ಉಪಕ್ರಮ ಅಂತಾನೆ ಹೇಳಬಹುದು. ಜನರು ಸುಳ್ಳು ದಾಖಲೆಗಳನ್ನು ನೀಡಿ ಅನರ್ಹತೆ ಇದ್ದರೂ ಪಡಿತರವನ್ನು ಪಡೆಯುತ್ತಿರುವ ಸಾಕಷ್ಟು ಘಟನೆಗಳು ನಾವು ದಿನನಿತ್ಯ ಕಾಣುತ್ತೇವೆ. ಇಂತಹ ಅಕ್ರಮ ಮತ್ತು ಭ್ರಷ್ಟಾಚಾರವನ್ನು ತಡೆಯಲು ಸರ್ಕಾರ ರೇಷನ್ ಕಾರ್ಡ್ ಫಲಾನುಭವಿಗಳು ಈ-ಕೆವೈಸಿ (e-kyc) ಮಾಡಿಸುವುದು ಕಡ್ಡಾಯಗೊಳಿಸಿದೆ.
ಆನ್ಲೈನ್ ನಲ್ಲಿ ಈ-ಕೆವೈಸಿ (e-kyc) ಮಾಡಿಸುವುದು ಹೇಗೆ?
- ಮೊದಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕ್ರತ ಪೋರ್ಟಲ್ ಗೆ ಹೋಗಿ.
- ಅಲ್ಲಿ ನಿಮಗೆ ಮೇಲ್ಭಾಗದ ಮೆನುವಿನಲ್ಲಿ “ಈ ಸೇವೆಗಳು” (e- services) ಆಯ್ಕೆ ಕಾಣುವುದು ಅದರ ಮೇಲೆ ಒತ್ತಿ.
- ಈಗ ಎಡ ಭಾಗದ ಮೆನುವಿನಲ್ಲಿ “ಲಿಂಕಿಂಗ್ ಯೂಐಡಿ” ಆಯ್ಕೆ ಮೇಲೆ ಒತ್ತಿ, ನಂತರದ ಆಯ್ಕೆಯಲ್ಲಿ ನಿಮ್ಮ ಜಿಲ್ಲೆಯ ಆಯ್ಕೆಯನ್ನು ಮಾಡಿ.
- ಹೊಸ ತೆರೆಯುವುದು. ಎಡಭಾಗದಲ್ಲಿ “ಪಡಿತರ ಚೀಟಿ ವಿವರ” ಆಯ್ಕೆಯ ಮೇಲೆ ಒತ್ತಿರಿ.
- ಈವಾಗ “ವಿತ್ ಓಟಿಪಿ” ಆಯ್ಕೆಯ ಮೇಲೆ ಒತ್ತಿದರೆ ಹೊಸ ಪುಟ ತೆರೆಯುತ್ತದೆ ಅದರಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ನಮೂದಿಸಿ, ಗೋ “Go” ಮೇಲೆ ಕ್ಲಿಕ್ ಮಾಡಿ.