BIS ನೇಮಕಾತಿ 2024: ಒಟ್ಟು 343 ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

BIS ನೇಮಕಾತಿ 2024: ಒಟ್ಟು 343 ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ವಿವಿಧ ಗುಂಪು A, B ಮತ್ತು C ಯ ಒಟ್ಟು 345 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ, ಇದರಲ್ಲಿ ಪ್ರಮುಖವಾಗಿ ಸಹಾಯಕ ನಿರ್ದೇಶಕರು, ವೈಯಕ್ತಿಕ ಸಹಾಯಕರು, ಸಹಾಯಕ ವಿಭಾಗ ಅಧಿಕಾರಿ (ASO), ಸಹಾಯಕ, ಸ್ಟೆನೋಗ್ರಾಫರ್, ಹಿರಿಯ ಕಾರ್ಯದರ್ಶಿ ಸಹಾಯಕರು , ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ, ತಾಂತ್ರಿಕ ಸಹಾಯಕ (ಪ್ರಯೋಗಾಲಯ), ಮತ್ತು ಹಿರಿಯ ತಂತ್ರಜ್ಞ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. BIS ನೇಮಕಾತಿ 2024 ರ ಆನ್‌ಲೈನ್ ಅರ್ಜಿ ಪ್ರಕ್ರಿಯೆಯು 9ನೇ ಸೆಪ್ಟೆಂಬರ್ 2024 ರಂದು ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 30, 2024 ರವರೆಗೆ ಅವಕಾಶ ಮಾಡಿಕೊಡಲಾಗಿದೆ. ಅರ್ಹ ಅಭ್ಯರ್ಥಿಗಳು ಅಧಿಕ್ರತ ಪೋರ್ಟಲ್ bis.gov.in ಮೂಲಕ ಅರ್ಜಿ ಸಲ್ಲಿಸಬಹುದು.

BIS ನೇಮಕಾತಿ 2024 ರ ಆಯ್ಕೆ ಪ್ರಕ್ರಿಯೆಯು ಮೊದಲ ಹಂತದಲ್ಲಿ ಲಿಖಿತ ಪರೀಕ್ಷೆಯನ್ನು ಒಳಗೊಂಡಿರುತ್ತದೆ, ನಂತರ ಕೌಶಲ್ಯ ಪರೀಕ್ಷೆ (ಅದು ಅಗತ್ಯವಿರುವ ಪೋಸ್ಟ್‌ಗಳಿಗೆ), ದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ಒಳಗೊಂಡಿರುತ್ತದೆ. BIS ನೇಮಕಾತಿ 2024 ರ ಸೂಚಿತ ಹುದ್ದೆಗಳಿಗೆ ನಿರ್ದಿಷ್ಟವಾದ ವಯೋಮಿತಿಗಳು ಮತ್ತು ವಿದ್ಯಾರ್ಹತೆಯನ್ನು ನಿಗದಿ ಪಡಿಸಲಾಗಿದೆ. ಸದರಿ ಹುದ್ದೆಗಳಿಗೆ ಪದವಿ , ಡಿಪ್ಲೋಮಾ ಮತ್ತು ITI ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅಗತ್ಯವಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು. BIS ನೇಮಕಾತಿ ಹುದ್ದೆಗಳ ವೇತನ ಶ್ರೇಣಿಯು ಸಹಾಯಕ ನಿರ್ದೇಶಕರ ಹುದ್ದೆಗೆ ರೂ. 1,77,500/- ತಿಂಗಳಿಗೆ, ಮತ್ತು ಇತರ ಹುದ್ದೆಗಳಾದ ಪರ್ಸನಲ್ ಅಸಿಸ್ಟೆಂಟ್ ಮತ್ತು ಸೀನಿಯರ್ ಟೆಕ್ನಿಷಿಯನ್‌ಗಳಿಗೆ ರೂ. 81,100/- ವರೆಗೆ (ತಿಂಗಳಿಗೆ) ಸಂಬಳವನ್ನು ನೀಡಲಾಗುವುದು.

BIS ನೇಮಕಾತಿ 2024 ರ ಅರ್ಜಿ ಸಲ್ಲಿಕೆ ಮಾಡಲು ವಿವಿಧ ವರ್ಗದ ವಿದ್ಯಾರ್ಥಿಗಳಿಗೆ ಅಂದರೆ ಸಾಮಾನ್ಯ, OBC, ಮತ್ತು EWS ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ. 500, ಆದರೆ SC/ST/PWD ಮತ್ತು ಮಹಿಳಾ ಅಭ್ಯರ್ಥಿಗಳು ಶುಲ್ಕದಿಂದ ವಿನಾಯಿತಿ ಪಡೆದಿರುತ್ತಾರೆ.

BIS ನೇಮಕಾತಿ 2024 ಪ್ರಮುಖ ದಿನಾಂಕಗಳು

  • ಅಧಿಸೂಚನೆ ಬಿಡುಗಡೆ ದಿನಾಂಕ: 29 ಆಗಸ್ಟ್ 2024
  • ಆನ್‌ಲೈನ್ ಅಪ್ಲಿಕೇಶನ್ ಪ್ರಾರಂಭ: 9 ಸೆಪ್ಟೆಂಬರ್ 2024
  • ಆನ್‌ಲೈನ್ ಅಪ್ಲಿಕೇಶನ್ ಅಂತ್ಯ: 30 ಸೆಪ್ಟೆಂಬರ್ 2024
  • ಲಿಖಿತ ಪರೀಕ್ಷೆ (ತಾತ್ಕಾಲಿಕ): ನವೆಂಬರ್ 2024

BIS ನೇಮಕಾತಿ 2024 ಹುದ್ದೆಗಳ ವಿವರ

  • ಸಹಾಯಕ ನಿರ್ದೇಶಕ: 3
  • ವೈಯಕ್ತಿಕ ಸಹಾಯಕ: 27
  • ASO (ಸಹಾಯಕ ವಿಭಾಗ ಅಧಿಕಾರಿ): 43
  • ಸ್ಟೆನೋಗ್ರಾಫರ್: 19
  • ಹಿರಿಯ ಸೆಕ್ರೆಟರಿಯೇಟ್ ಸಹಾಯಕ: 128
  • ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ: 78
  • ತಾಂತ್ರಿಕ ಸಹಾಯಕ (ಲ್ಯಾಬ್): 27
  • ಹಿರಿಯ ತಂತ್ರಜ್ಞ:18

BIS ನೇಮಕಾತಿ 2024 ವಿದ್ಯಾರ್ಹತೆ

  • ಸಹಾಯಕ ನಿರ್ದೇಶಕ: ಸಂಬಂಧಿತ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ.
  • ವೈಯಕ್ತಿಕ ಸಹಾಯಕ: ಶೀಘ್ರಲಿಪಿ ಪ್ರಾವೀಣ್ಯತೆಯೊಂದಿಗೆ ಪದವೀಧರ.
  • ASO ಮತ್ತು ಹಿರಿಯ ಸೆಕ್ರೆಟರಿಯೇಟ್ ಸಹಾಯಕ: ಕಂಪ್ಯೂಟರ್ ಕೌಶಲ್ಯದೊಂದಿಗೆ ಪದವಿ ಪೂರ್ಣಗೊಳಿಸಿರಬೇಕು.
  • ತಾಂತ್ರಿಕ ಸಹಾಯಕ (ಲ್ಯಾಬ್): ಸಂಬಂಧಿತ ಕ್ಷೇತ್ರದಲ್ಲಿ ಡಿಪ್ಲೊಮಾ.
  • ಹಿರಿಯ ತಂತ್ರಜ್ಞ: ಅನುಭವದೊಂದಿಗೆ ಐಟಿಐ ಮುಗಿಸಿರಬೇಕು.

BIS ನೇಮಕಾತಿ 2024 ವೇತನ

  • ಸಹಾಯಕ ನಿರ್ದೇಶಕ: ರೂ. 1,77,500/- ತಿಂಗಳಿಗೆ.
  • ವೈಯಕ್ತಿಕ ಸಹಾಯಕ: ರೂ. 81,100/- ತಿಂಗಳಿಗೆ.
  • ASO ಮತ್ತು ಸ್ಟೆನೋಗ್ರಾಫರ್: ವೇತನ ಶ್ರೇಣಿಗಳು ರೂ. 35,400/- ರಿಂದ ರೂ. 1,12,400/-.
  • ಹಿರಿಯ ಸೆಕ್ರೆಟರಿಯೇಟ್ ಸಹಾಯಕ: ರೂ. 81,100/- ತಿಂಗಳಿಗೆ.
  • ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ: ರೂ. 63,200/- ತಿಂಗಳಿಗೆ.
  • ತಾಂತ್ರಿಕ ಸಹಾಯಕ (ಲ್ಯಾಬ್): ವೇತನ ಶ್ರೇಣಿಗಳು ರೂ. 29,200/- ರಿಂದ ರೂ. 92,300/-.
  • ಹಿರಿಯ ತಂತ್ರಜ್ಞ: ರೂ. 69,100/- ತಿಂಗಳಿಗೆ

BIS ನೇಮಕಾತಿ 2024 ವಯಸ್ಸಿನ ಮಿತಿ:

ಸಾಮಾನ್ಯ ವರ್ಗದ ಅಭ್ಯರ್ಥಿಗಳು: ಸದರಿ ಹುದ್ದೆಗಳ ಆಧಾರದ ಮೇಲೆ ವಯೋಮಿತಿಯು 27 ರಿಂದ 35 ವರ್ಷಗಳ ನಡುವೆ ಇರುತ್ತದೆ.

ಕಾಯ್ದಿರಿಸಿದ ವರ್ಗಗಳಿಗೆ ವಯಸ್ಸಿನ ಸಡಿಲಿಕೆ:

  • SC/ST: 5 ವರ್ಷಗಳ ಸಡಿಲಿಕೆ
  • OBC (ನಾನ್-ಕ್ರೀಮಿ ಲೇಯರ್): 3 ವರ್ಷಗಳ ಸಡಿಲಿಕೆ
  • ವಿಕಲಾಂಗ ವ್ಯಕ್ತಿಗಳು (PWD): 10 ವರ್ಷಗಳು (ಎಸ್‌ಸಿ/ಎಸ್‌ಟಿಗೆ ಹೆಚ್ಚುವರಿ 5 ವರ್ಷಗಳು ಮತ್ತು ಒಬಿಸಿಗೆ 3 ವರ್ಷಗಳು)
  • ಮಾಜಿ ಸೈನಿಕರು: ಭಾರತ ಸರ್ಕಾರದ ನಿಯಮಗಳ ಪ್ರಕಾರ
  • ವಿಭಾಗೀಯ ಅಭ್ಯರ್ಥಿಗಳು: ಈಗಾಗಲೇ BIS ನಲ್ಲಿ ಸೇವೆ ಸಲ್ಲಿಸುತ್ತಿರುವ ಅಭ್ಯರ್ಥಿಗಳಿಗೆ 5 ವರ್ಷಗಳವರೆಗೆ ಸಡಿಲಿಕೆ

BIS ನೇಮಕಾತಿ 2024 ಅರ್ಜಿ ಶುಲ್ಕ:

ಸಾಮಾನ್ಯ, OBC, EWS: ₹500
SC, ST, PWD, ಮಹಿಳೆಯರು: ಅರ್ಜಿ ಶುಲ್ಕವಿರುವುದಿಲ್ಲ

BIS ನೇಮಕಾತಿ 2024 ಆಯ್ಕೆ ಪ್ರಕ್ರಿಯೆ

ಲಿಖಿತ ಪರೀಕ್ಷೆ: ಎಲ್ಲಾ ಹುದ್ದೆಗಳಿಗೂ ಕಡ್ಡಾಯ.
ಕೌಶಲ್ಯ ಪರೀಕ್ಷೆ: ಅಗತ್ಯವಿರುವ ಹುದ್ದೆಗಳಿಗೆ (ಉದಾ., ವೈಯಕ್ತಿಕ ಸಹಾಯಕ).
ದಾಖಲೆ ಪರಿಶೀಲನೆ: ಲಿಖಿತ ಮತ್ತು ಕೌಶಲ್ಯ ಪರೀಕ್ಷೆಗಳ ನಂತರ ಕ್ಲಿಯರಿಂಗ್ ಹಂತ.
ವೈದ್ಯಕೀಯ ಪರೀಕ್ಷೆ: ನೇಮಕಾತಿಯ ಅಂತಿಮ ಹಂತ.

BIS ನೇಮಕಾತಿ 2024 ಅರ್ಜಿ ಸಲ್ಲಿಕೆ ಪ್ರಕ್ರಿಯೆ

  • BIS ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ವೃತ್ತಿ ಅವಕಾಶಗಳು” ವಿಭಾಗಕ್ಕೆ ಹೋಗಿ.
  • ಅಧಿಕ್ರತ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ಮತ್ತು ಅರ್ಹತೆಯನ್ನು ಪರಿಶೀಲಿಸಿ.
  • ಆನ್‌ಲೈನ್ ಅರ್ಜಿ ನಮೂನೆಯನ್ನು ಪೂರ್ಣಗೊಳಿಸಿ ಮತ್ತು ನಿಮ್ಮ ವರ್ಗಕ್ಕೆ ಸಂಬಂದಿಸಿದ ಅರ್ಜಿ ಶುಲ್ಕವನ್ನು ಪಾವತಿಸಿ.

BIS ನೇಮಕಾತಿ 2024 ಪ್ರಮುಖ ಲಿಂಕುಗಳು

ಅರ್ಜಿ ಸಲ್ಲಿಕೆ ಇಲ್ಲಿ ಒತ್ತಿ
ನೋಟಿಫಿಕೇಶನ್ ಇಲ್ಲಿ ಒತ್ತಿ
ಲೇಖನವನ್ನು ಶೇರ್ ಮಾಡಿ

Leave a Reply

Your email address will not be published. Required fields are marked *