BMRCL ನೇಮಕಾತಿ 2024: 58 ಸಹಾಯಕ ಭದ್ರತಾ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
ಸ್ನೇಹಿತರೇ ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) 2024ನೇ ಸಾಲಿನ ಹೊಸ ನೇಮಕಾತಿ ಅಧಿಕ್ರತ ಅಧಿಸೂಚನೆಯನ್ನು ಪ್ರಕಟಿಸಿದ್ದು, 58 ಸಹಾಯಕ ಭದ್ರತಾ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಬೆಂಗಳೂರು ಮೆಟ್ರೊ ರೈಲು ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಲು ಒಚ್ಚಿಸುವ ಆಸಕ್ತ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶ ಅಂತಾನೆ ಹೇಳಬಹುದು. ಅಧಿಕ್ರತ ಅಧಿಸೂಚನೆಯನ್ನು ಆಗಸ್ಟ್ 21, 2024 ರಂದು ಹೊರಡಿಸಲಾಗಿದ್ದು, BMRCL ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಸೆಪ್ಟೆಂಬರ್ 09, 204 ರವರೆಗೆ ಅರ್ಜಿ ಸಲ್ಲಿಸಬಹುದು.
BMRCL ನೇಮಕಾತಿ 2024 ಅರ್ಜಿ ಸಲ್ಲಿಸಲು ಆಸಕ್ತರಿರುವ ಅಭ್ಯರ್ಥಿಗಳು BMRCL ನಿರ್ಧಾರಿತ ಅರ್ಹತಾ ಮಾನದಂಡಗಳನ್ನು ಪೂರೈಸತಕ್ಕದ್ದು. ಪ್ರಮುಖವಾಗಿ, ಆಗಸ್ಟ್ 13, 2024 ರವರೆಗೆ ಅಭ್ಯರ್ಥಿಯ ವಯಸ್ಸು 62 ವರ್ಷ ದಾಟಿರಬಾರದು. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಶಾರೀರಿಕ ಪರೀಕ್ಷೆ, ಶೈಕ್ಷಣಿಕ ಅರ್ಹತೆಗಳು ಮತ್ತು ಸಂಬಂದಿತ ಅನುಭವ ಹಾಗೂ ಇಂಟರ್ವಿವ್ ಅನ್ನು ಒಳಗೊಂಡಿರುತ್ತದೆ. ಸಹಾಯಕ ಭದ್ರತಾ ಅಧಿಕಾರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ 30,000 ರಿಂದ 32,920 ರೂ ವರೆಗೆ ವೇತನ ನೀಡಲಾಗುವುದು.
ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು BMRCL ಅಧಿಕ್ರತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ ಮತ್ತು ಅಗತ್ಯಾ ದಾಖಗಳೊಂದಿಗೆ ಅರ್ಜಿಯ ಮುದ್ರಿತ ಕಾಪಿಯನ್ನು ಜನರಲ್ ಮ್ಯಾನೇಜರ್ (HR), BMRCL ಗೆ ಸೆಪ್ಟೆಂಬರ್ 13, 2024 ರ ಒಳಗಾಗಿ ಕಳುಹಿಸಬೇಕು.
BMRCL ನೇಮಕಾತಿ 2024 ಪ್ರಮುಖ ದಿನಾಂಕಗಳು
- ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 13-08-2024
- ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 09-09-2024
- ಅಗತ್ಯ ದಾಖಲೆಗಳೊಂದಿಗೆ ಅರ್ಜಿಯ ಮುದ್ರಿತ ಕಾಪಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 13-09-2024
BMRCL ನೇಮಕಾತಿ 2024 ವಿದ್ಯಾರ್ಹತೆ
- ಡಿಫೆನ್ಸ್ ಸೇವೆಗಳಲ್ಲಿ ಜೂನಿಯರ್ ಕಮೀಷನ್ಡ್ ಆಫೀಸರ್ / ಸುಬೇದಾರ್ ಮೇಜರ್ / ಸುಬೇದಾರ್ / ಪೆಟ್ಟಿ ಆಫೀಸರ್ / ಮಾಸ್ಟರ್ ಚೀಫ್ ಪೆಟ್ಟಿ ಆಫೀಸರ್ / ವಾರೆಂಟ್ ಆಫೀಸರ್ ಅಥವಾ ಸಮಾನ ಸ್ಥಾನದಲ್ಲಿರುವವರು.
- ರಾಜ್ಯ ಪೊಲೀಸ್ ಇಲಾಖೆಯಿಂದ ಇನ್ಸ್‌ಪೆಕ್ಟರ್ / ಸಬ್ ಇನ್ಸ್‌ಪೆಕ್ಟರ್ / ಎಎಸ್ಐ ಅಥವಾ ಸಮಾನ ಸ್ಥಾನದಲ್ಲಿರುವವರು.
BMRCL ನೇಮಕಾತಿ 2024 ಒಪ್ಪಂದ
- 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಭ್ಯರ್ಥಿಗಳಿಗೆ, ಒಪ್ಪಂದವು ಪ್ರಾರಂಭದಲ್ಲಿ 3 ವರ್ಷ ಅವಧಿಯನ್ನು ಹೊಂದಿರುತ್ತದೆ.
- 60 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಅಭ್ಯರ್ಥಿಗಳಿಗೆ, ಒಪ್ಪಂದವು ಪ್ರಾರಂಭದಲ್ಲಿ 1 ವರ್ಷ ಅವಧಿಯನ್ನು ಹೊಂದಿರುತ್ತದೆ. (ಈ ಒಪ್ಪಂದ ಅವಧಿಯನ್ನು ವಿಸ್ತರಿಸಲಾಗಬಹುದು)
BMRCL ನೇಮಕಾತಿ 2024 ವೇತನ
- 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಭ್ಯರ್ಥಿಗಳಿಗೆ: ₹32,950/- ಪ್ರತಿ ತಿಂಗಳು
- 60 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಅಭ್ಯರ್ಥಿಗಳಿಗೆ: ₹30,000/- ಪ್ರತಿ ತಿಂಗಳು
- ಭತ್ಯೆಗಳು: ವಾಹನ ಭತ್ಯೆ, ಜಿಎಪಿಎ ಮತ್ತು ಜಿಎಂಸಿ, ನಿವೃತ್ತಿವೇತನ ಯೋಜನೆ (NPS), ಕಂಪನಿಯ ನಿಯಮಾವಳಿಗಳ ಪ್ರಕಾರ ಇತರ ಅನುಕೂಲಗಳು
BMRCL ನೇಮಕಾತಿ 2024 ವಯೋಮಿತಿ
ದಿನಾಂಕ 13-08-2024 ರಷ್ಟರಲ್ಲಿ ಅಭ್ಯರ್ಥಿಯ ವಯಸ್ಸು 62 ವರ್ಷ ದಾಟಿರಬಾರದು.
BMRCL ನೇಮಕಾತಿ 2024 ಅರ್ಜಿ ಶುಲ್ಕ
BMRCL ನೇಮಕಾತಿಯ ಈ ಅಧಿಸೂಚನೆಯ ಪ್ರಕಾರ, ಅರ್ಜಿ ಶುಲ್ಕ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ. ಅಧಿಕೃತ ಅಧಿಸೂಚನೆಯಲ್ಲಿನ ಮಾಹಿತಿ ಪ್ರಕಾರ, ಅರ್ಜಿ ಶುಲ್ಕವು ನಿಗದಿಯಾಗದಿರುವುದು ಅಥವಾ ಅರ್ಜಿಯ ಪ್ರಕ್ರಿಯೆಯಲ್ಲಿ ಅಂತರಗತವಾಗಿ ನಿರ್ಧಾರವಾಗಬಹುದು. ಮುಂಬರುವ ಅಧಿಸೂಚನೆಗಳು ಮತ್ತು ಸಲಹೆಗಳಿಗಾಗಿ ಅಧಿಕೃತ ವೆಬ್ಸೈಟ್ ಅಥವಾ ಅಧಿಸೂಚನೆಯನ್ನು ನಿಯಮಿತವಾಗಿ ಪರಿಶೀಲಿಸಲು ಸೂಕ್ತ.
BMRCL ನೇಮಕಾತಿ 2024 ಆಯ್ಕೆ ಪ್ರಕ್ರಿಯೆ
- ಶಾರೀರಿಕ ಪರೀಕ್ಷೆ: ಅಭ್ಯರ್ಥಿಗಳನ್ನು ಶಾರೀರಿಕ ಸ್ಥಿತಿಯ ಪರಿಶೀಲನೆಗಾಗಿ ಪರೀಕ್ಷಿಸಲಾಗುತ್ತದೆ.
- ಶೈಕ್ಷಣಿಕ ಅರ್ಹತೆಗಳು: ಅರ್ಜಿದಾರರ ಶೈಕ್ಷಣಿಕ ಅರ್ಹತೆಗಳು ಪರಿಶೀಲಿಸಲಾಗುತ್ತದೆ.
- ಅನುಭವ: ಸಂಬಂಧಿತ ಕ್ಷೇತ್ರದಲ್ಲಿ ಅನುಭವವನ್ನು ಪರಿಶೀಲಿಸಲಾಗುತ್ತದೆ.
- ಇಂಟರ್ವಿವ್: ಹುದ್ದೆಗೆ ಸೂಕ್ತತೆಯನ್ನು ಇಂಟರ್ವಿವ್ ಮೂಲಕ ನಿರ್ಧರಿಸುತ್ತದೆ.
BMRCL ನೇಮಕಾತಿ 2024 ಅರ್ಜಿ ಸಲ್ಲಿಕೆ
BMRCL ನೇಮಕಾತಿ 2024 ಅರ್ಜಿ ಸಲ್ಲಿಕೆಯನ್ನು ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಮಾಡಬಹುದು.
ಆನ್ಲೈನ್ ಅರ್ಜಿ ಸಲ್ಲಿಕೆ
ಅರ್ಜಿದಾರರು BMRCL ಅಧಿಕೃತ ವೆಬ್ಸೈಟ್ english.bmrc.co.in ನಲ್ಲಿ ಆನ್‌ಲೈನ್ ಅರ್ಜಿಯನ್ನು 13-08-2024 ರಿಂದ 09-09-2024 ರವರೆಗೆ ಸಲ್ಲಿಸಬಹುದು.
ಆಫ್ಲೈನ್ ಅರ್ಜಿ ಸಲ್ಲಿಕೆ
- ಆನ್‌ಲೈನ್ ಅರ್ಜಿಯ ನಂತರ, ಅರ್ಜಿಯ ಪ್ರಿಂಟ್‌ಔಟ್ ಅನ್ನು ತೆಗೆದು, ಸಂಬಂಧಿತ ದಾಖಲೆಗಳೊಂದಿಗೆ ಮುದ್ರಿತ ಕಾಪಿಯನ್ನು ಜನರಲ್ ಮ್ಯಾನೇಜರ್ (HR), BMRCL ಗೆ ಕಳುಹಿಸಲು 13-09-2024 ರ ಒಳಗಾಗಿ ಸಲ್ಲಿಸಬೇಕು.
- ವಿಳಾಸ: ಮೂರನೇ ಮಹಡಿ, ಬಿಎಂಟಿಸಿ ಸಂಕೀರ್ಣ, ಕೆ.ಎಚ್. ರಸ್ತೆ, ಶಾಂತಿನಗರ, ಬೆಂಗಳೂರು-560027.
BMRCL ನೇಮಕಾತಿ 2024 ಪ್ರಮುಖ ಲಿಂಕುಗಳು
ಅರ್ಜಿ ಸಲ್ಲಿಕೆ | ಇಲ್ಲಿ ಒತ್ತಿ |
ನೋಟಿಫಿಕೇಶನ್ | ಇಲ್ಲಿ ಒತ್ತಿ |