Central Tobacco Research Institute (CTRI) Recruitment 2024: ಇಂದೇ ಅರ್ಜಿ ಸಲ್ಲಿಸಿ
ಸ್ನೇಹಿತರೇ ಸೆಂಟ್ರಲ್ ಟೋಬಾಕೊ ರಿಸರ್ಚ್ ಇನ್ಸ್ಟಿಟ್ಯೂಟ್ (Central Tobacco Research Institute) ಹೊಸ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಈ ನೇಮಕಾತಿಯ ಮೂಲಕ ಜೂನಿಯರ್ ರಿಸರ್ಚ್ ಫೆಲ್ಲೋ (JRF), ಯಂಗ್ ಪ್ರೊಫೆಷನಲ್-2 (YP-2), ಯಂಗ್ ಪ್ರೊಫೆಷನಲ್-1 (YP-1), ಗಳ ಒಟ್ಟು 07 ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಈ ನೇಮಕಾತಿಯ ಅಧಿಕ್ರತ ಅಧಿಸೂಚನೆಯನ್ನು ಸೆಪ್ಟೆಂಬರ್ 12, 2024 ರಂದು ಬಿಡುಗಡೆ ಮಾಡಲಾಗಿದ್ದು ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ. ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 27, 2024 ರವರೆಗೆ ಅರ್ಜಿ ಸಲಿಕೆಯನ್ನು ಮಾಡಬಹುದು. CTRI ನೇಮಕಾತಿಯಲ್ಲಿ ಅಭ್ಯರ್ಥಿಗಳ ಆಯ್ಕೆಯು ಮೊದಲ ಹಂತದಲ್ಲಿ ಶೈಕ್ಷಣಿಕ ಅರ್ಹತೆ ಮತ್ತು ಅನುಭವವನ್ನು ಪರಿಶೀಲಿಸಿ ಶಾರ್ಟ್ ಲಿಸ್ಟ್ ಮಾಡಲಾಗುವುದು ನಂತರ ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಆರಂಭ: ಸೆಪ್ಟೆಂಬರ್ 12, 2024
- ಅರ್ಜಿ ಸಲ್ಲಿಕೆಗೆ ಅಂತಿಮ ದಿನಾಂಕ: ಸೆಪ್ಟೆಂಬರ್ 27, 2024
ಹುದ್ದೆಗಳ ವಿವರ
Central Tobacco Research Institute Recruitmant 2024 ರ ಹುದ್ದೆಗಳ ವಿವರ ಹೀಗಿದೆ. CTRI ನಲ್ಲಿ ಖಾಲಿ ಇರುವ ಜೂನಿಯರ್ ರಿಸರ್ಚ್ ಫೆಲ್ಲೋ (JRF) ನ 01 ಹುದ್ದೆ, ಯಂಗ್ ಪ್ರೊಫೆಷನಲ್-2 (YP-2) ನ 02 ಹುದ್ದೆಗಳುಮತ್ತು ಯಂಗ್ ಪ್ರೊಫೆಷನಲ್-1 (YP-1) 04 ಹುದ್ದೆಗಳು ಸೇರಿ ಒಟ್ಟು 07 ಹುದ್ದೆಗಳಿಗೆ CTRI ನೇಮಕಾತಿ ನಡೆಯಲಿದೆ.
ವಿದ್ಯಾರ್ಹತೆ
Central Tobacco Research Institute (CTRI) Recruitment 2024 ರ ಹುದ್ದೆಗಳು ಮತ್ತು ಅವುಗಳಿಗೆ ಬೇಕಾಗುವ ವಿದ್ಯಾರ್ಹತೆ ಮಾನದಂಡಗಳು ಈ ಕೆಳಗಿನಂತಿವೆ.
- ಜೂನಿಯರ್ ರಿಸರ್ಚ್ ಫೆಲ್ಲೋ (JRF): B.S. 4 ವರ್ಷದ ಕೋರ್ಸ್/ ಇಂಟಿಗ್ರೇಟಡ್ ಬಿಎಸ್-ಎಮ್‌ಎಸ್ / ಆರ್ಗಾನಿಕ್ ಕೆಮಿಸ್ಟ್ರಿ ಅಥವಾ ಕೃಷಿ ರಾಸಾಯನಿಕತೆ (Agricultural Chemicals) ನಲ್ಲಿ MSc / BE / BTech ಅಥವಾ ಸಮಾನಾಂತರ ಡಿಗ್ರಿ, 55% ಅಂಕಗಳೊಂದಿಗೆ ಮತ್ತು NET/GATE ಪರೀಕ್ಷೆ ಪಾಸ್ ಆಗಿರಬೇಕು.
- ಯಂಗ್ ಪ್ರೊಫೆಷನಲ್-2 (YP-2): ಪ್ರಥಮ ಶ್ರೇಣಿಯ ಮಾಸ್ಟರ್ ಡಿಗ್ರಿಯಲ್ಲಿ ಕೃಷಿ ಅಥವಾ ಜೀವಶಾಸ್ತ್ರದ ಪದವಿ.
- ಯಂಗ್ ಪ್ರೊಫೆಷನಲ್-1 (YP-1): ಪ್ರಥಮ ಶ್ರೇಣಿಯ ಬಿ.ಎಸ್.ಸಿ. (ಕೃಷಿ) / ಬಿ.ಎಸ್.ಸಿ. (ಹಾರ್ಟಿಕಲ್ಚರ್) ಅಥವಾ ಜೀವಶಾಸ್ತ್ರದಲ್ಲಿ ಪ್ರಥಮ ಶ್ರೇಣಿಯ ಬ್ಯಾಚುಲರ್ ಡಿಗ್ರಿ ಮತ್ತು ಒಂದು ವರ್ಷದ ಕೆಲಸದ ಅನುಭವ ಅಥವಾ ಕೃಷಿಯಲ್ಲಿ ಡಿಪ್ಲೋಮಾ ಮತ್ತು 03 ವರ್ಷಗಳ ಅನುಭವ
ವಯೋಮಿತಿ
ಜುನಿಯರ್ ರಿಸರ್ಚ್ ಫೆಲೋ (JRF) ಹುದ್ದೆಗಾಗಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳು 28 ವರ್ಷಗಳ ವರೆಗೆ ವಯಸ್ಸು ಹೊಂದಿರಬೇಕು. ಯಂಗ್ ಪ್ರೊಫೆಷನಲ್-II ಮತ್ತು ಯಂಗ್ ಪ್ರೊಫೆಷನಲ್-I ಹುದ್ದೆಗಳಿಗೆ, ಅಭ್ಯರ್ಥಿಗಳ ವಯೋಮಿತಿ 21 ರಿಂದ 45 ವರ್ಷಗಳ ವರೆಗೆ ಇದೆ. ವಯೋಮಿತಿಯಲ್ಲಿ ನಿಯಮಿತ ರಿಸರ್ವ್ ವರ್ಗದ ಅಭ್ಯರ್ಥಿಗಳಿಗೆ ಸದಳಿಕೆ ನೀಡಲಾಗಿದ್ದು ಹಲವು ವರ್ಗದ ಅಭ್ಯರ್ಥಿಗಳಿಗೆ ವಯೋ ಸಡಲಿಕೆ ಹೀಗಿದೆ
- SC/ST ಅಭ್ಯರ್ಥಿಗಳಿಗೆ: 5 ವರ್ಷಗಳ ವರೆಗೆ
- OBC ಅಭ್ಯರ್ಥಿಗಳಿಗೆ: 3 ವರ್ಷಗಳ ವರೆಗೆ
- PwD ಅಭ್ಯರ್ಥಿಗಳಿಗೆ: 10 ವರ್ಷಗಳ ವರೆಗೆ (SC/ST ಅಭ್ಯರ್ಥಿಗಳಿಗೆ 15 ವರ್ಷಗಳು ಮತ್ತು OBC ಅಭ್ಯರ್ಥಿಗಳಿಗೆ 13 ವರ್ಷಗಳು)
- ವಿಭಾಗೀಯ ಅಭ್ಯರ್ಥಿಗಳಿಗೆ: ಗುಂಪು ‘C’ ಹುದ್ದೆಗಳಿಗಾಗಿ 40 ವರ್ಷಗಳ ವರೆಗೆ (SC/ST ಅಭ್ಯರ್ಥಿಗಳಿಗೆ 45 ವರ್ಷಗಳು)
ವೇತನ
Central Tobacco Research Institute (CTRI) Recruitment 2024 ರ ಮುನ್ಸೂಚನೆಯಂತೆ, ವಿವಿಧ ಹುದ್ದೆಗಳಿಗೆ ವಿವರ ಹುದ್ದೆಯ ಶ್ರೇಣಿಯನ್ನು ಆಧರಿಸಿ ವೇತನವನ್ನು ನೀಡಲಾಗುವುದು.
- ಜುನಿಯರ್ ರಿಸರ್ಚ್ ಫೆಲೋ (JRF) ಹುದ್ದೆಗೆ ₹37,000 ರಿಂದ ₹42,000 ಮಾಸಿಕ ವೇತನ ನೀಡಲಾಗುವುದು.
- ಯಂಗ್ ಪ್ರೊಫೆಷನಲ್-II ಹುದ್ದೆಗೆ ₹42,000 ಮಾಸಿಕ ವೇತನ ನೀಡಲಾಗುವುದು.
- ಯಂಗ್ ಪ್ರೊಫೆಷನಲ್-I ಹುದ್ದೆಯು ₹30,000 ಮಾಸಿಕ ವೇತನ ನೀಡಲಾಗುವುದು.
ಅರ್ಜಿ ಶುಲ್ಕ
Central Tobacco Research Institute (CTRI) Recruitment 2024 ಗೆ ಸಂಬಂಧಿಸಿದಂತೆ, ಅರ್ಜಿ ಶುಲ್ಕ ಮತ್ತು ಶುಲ್ಕ ರಿಯಾಯಿತಿ ವಿವರ ಹೀಗಿದೆ, ಸಾಮಾನ್ಯ/OBC ಅಭ್ಯರ್ಥಿಗಳಿಗೆ ₹500 ಅರ್ಜಿ ಶುಲ್ಕವನ್ನು ವಿಧಿಸಲಾಗಿದೆ. SC/ST/PwD/ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ
Central Tobacco Research Institute (CTRI) Recruitment 2024ರ ಆಯ್ಕೆ ಪ್ರಕ್ರಿಯೆಯು ಈ ಕೆಳಗಿನ ಹಂತಗಳಲ್ಲಿ ನಡೆಯಲಿದೆ.
- ಮೊದಲು ಅಭ್ಯರ್ಥಿಗಳ ಶೈಕ್ಷಮಿಕ ಅರ್ಹತೆಗಳು ಮತ್ತು ಅನುಭವದ ಆಧಾರದ ಮೇಲೆ ಅರ್ಜಿಗಳನ್ನು ವಿಮರ್ಶಿಸಿ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗುವುದು.
- ನಂತರ ಶಾರ್ಟ್ ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಸಂದರ್ಶನದ ವಿವರಗಳನ್ನು ಇಮೇಲ್ ಮೂಲಕ ತಿಳಿಸಲಾಗುವುದು ಹೀಗಾಗಿ ಅರ್ಜಿ ನಮೂನೆಯಲ್ಲಿ ನಿಮ್ಮ ಪ್ರಸ್ತುತ ಬಳಕೆಯಲ್ಲಿರುವ ಮಾನ್ಯ ಇಮೇಲ್ ವಿಳಾಸವನ್ನು ನಮೂದಿಸುವುದು ಕಡ್ಡಾಯ.
ಅರ್ಜಿ ಸಲ್ಲಿಕೆ
- Central Tobacco Research Institute ಅಧಿಕ್ರತ ಪೋರ್ಟಲ್ ಗೆ ಭೇಟಿ ನೀಡಿ.
- ವೆಬ್ಸೈಟ್ ನಿಂದ ಅರ್ಜಿ ಸಲ್ಲಿಕೆ ನಮೂನೆಯನ್ನು ಡೌನ್ಲೋಡ್ ಮಾಡಿರಿ.
- ಅರ್ಜಿ ನಮೂನೆಯನ್ನು ಸರಿಯಾದ ಮತ್ತು ಸೂಕ್ತ ಮಾಹಿತಿಯೊಂದಿಗೆ ಭರ್ತಿ ಮಾಡಿ.
- ಶೈಕ್ಷಣಿಕ ಪ್ರಮಾಣಪತ್ರಗಳು, ಅನುಭವದ ಪ್ರಮಾಣಪತ್ರಗಳು ಮತ್ತು ಇತರ ಅಗತ್ಯ ದಾಖಲೆಗಳನ್ನು ಲಗತ್ತಿಸಿ.
- ನಂತರ ಆನ್ಲೈನ್ ನಲ್ಲಿ ಅರ್ಜಿ ಶುಲ್ಕವನ್ನು ಪಾವತಿಸಿ.
- ಪೂರ್ಣಗೊಂಡ ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮೂಲಕ ಕಳುಹಿಸಿ
- ನಿರ್ದೇಶಕರು,
ಐಸಿಎಆರ್ – ಸೆಂಟ್ರಲ್ ಟೊಬಾಕೊ ರಿಸರ್ಚ್ ಇನ್‌ಸ್ಟಿಟ್ಯೂಟ್,
ರಾಜಮಂಡ್ರಿ – 533105,
ಪೂರ್ವ ಗೋದಾವರಿ ಜಿಲ್ಲೆ,
ಆಂಧ್ರಪ್ರದೇಶ.
ಪ್ರಮುಖ ಲಿಂಕುಗಳು
- ಅರ್ಜಿ ಸಲ್ಲಿಕೆ: ಇಲ್ಲಿ ಒತ್ತಿ
- ನೋಟಿಫಿಕೇಶನ್: ಇಲ್ಲಿ ಒತ್ತಿ