CISF ಕಾನ್ಸ್ಟೆಬಲ್ ನೇಮಕಾತಿ 2024: 12 ನೇ ತರಗತಿ ಪಾಸಾದವರಿಗೆ ಅವಕಾಶ

CISF ಕಾನ್ಸ್ಟೆಬಲ್ ನೇಮಕಾತಿ 2024: 12 ನೇ ತರಗತಿ ಪಾಸಾದವರಿಗೆ ಅವಕಾಶ

ಸ್ನೇಹಿತರೇ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (CISF) ಇಲಾಖೆಯಲ್ಲಿ ಖಾಲಿ ಇರುವ ಕಾನ್ಸ್ಟೆಬಲ್ ಹುದ್ದೆಗಳ ಭರ್ತಿಗೆ ಅಧಿಕ್ರತ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಈ ಸುಮಾರು 1,130 ಸಿ‌ಐ‌ಎಸ್‌ಎಫ್ ಕಾನ್ಸ್ಟೆಬಲ್ ಹುದ್ದೆಗಳ ಭರ್ತಿಗೆ ಮುಂದಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು CISF ಅಧಿಕ್ರತ ಪೋರ್ಟಲ್ ಗೆ ಭೇಟಿ ನೀಡಿ ಆನ್ಲೈನ್ ಅರ್ಜಿ ಸಲ್ಲಿಕೆ ಮಾಡಬಹುದು. CISF ಕಾನ್ಸ್ಟೆಬಲ್ ನೇಮಕಾತಿ 2024 ರ (CISF Constable Recruitment 2024) ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ದಿನಾಂಕ ಆಗಸ್ಟ್ 31 ರಂದು ಆರಂಭಗೊಳ್ಳಲಿದ್ದು, ದಿನಾಂಕ ಸೆಪ್ಟೆಂಬರ್ 30, 2024 ರಂದು ಕೊನೆಗೊಳ್ಳಲಿದೆ.

CISF ಕಾನ್ಸ್ಟೆಬಲ್ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು CISF ಕಾನ್ಸ್ಟೆಬಲ್ ನೇಮಕಾತಿ 2024 ನೋಟಿಫಿಕೇಶನ್ ನಲ್ಲಿ ನೀಡಿರುವ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ ತಾವು ಅರ್ಹರೋ ಎಂದು ಖಚಿತ ಪಡಿಸಿ, ದಿನಾಂಕ ಸೆಪ್ಟೆಂಬರ್ 30, 2024 ರ ಒಳಗಾಗಿ ಅರ್ಜಿ ಸಲ್ಲಿಕೆ ಮಾಡುವುದು ಉತ್ತಮ.

CISF ಕಾನ್ಸ್ಟೆಬಲ್ ನೇಮಕಾತಿ 2024 ವಿವರ

ಸಂಸ್ಥೆಯ ಹೆಸರು ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್
ಹುದ್ದೆಯ ಹೆಸರು ಕಾನ್ಸ್ಟೆಬಲ್
ಒಟ್ಟು ಹುದ್ದೆಗಳು 1,130
ವೇತನ NIL
ಅಧಿಕ್ರತ ಪೋರ್ಟಲ್cisfrectt.cisf.gov.in
ಕೆಲಸದ ಸ್ವಭಾವ ಶಾಶ್ವತ

CISF ಕಾನ್ಸ್ಟೆಬಲ್ ನೇಮಕಾತಿ 2024 ಪ್ರಮುಖ ದಿನಾಂಕಗಳು

CISF ಕಾನ್ಸ್ಟೆಬಲ್ ನೇಮಕಾತಿ 2024 ರ ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು CISF ಅಧಿಕ್ರತ ಪೋರ್ಟಲ್ ನಲ್ಲಿ ದಿನಾಂಕ ಆಗಸ್ಟ್ 31 ರಂದು ಆರಂಭಗೊಳ್ಳಲಿದ್ದು, ದಿನಾಂಕ ಸೆಪ್ಟೆಂಬರ್ 30, 2024 ರಂದು ಕೊನೆಗೊಳ್ಳಲಿದೆ, ಹೀಗಾಗಿ ಅಸ್ಸಾಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗಾಗಿ ಅರ್ಜಿ ಸಲ್ಲಿಕೆಯನ್ನು ಮಾಡತಕ್ಕದ್ದು.

CISF ಕಾನ್ಸ್ಟೆಬಲ್ ನೇಮಕಾತಿ 2024 ಅರ್ಜಿ ಶುಲ್ಕ

CISF ಕಾನ್ಸ್ಟೆಬಲ್ ನೇಮಕಾತಿ 2024 ರ ಅರ್ಜಿ ಶುಲ್ಕವು ವಿವಿಧ ವರ್ಗದ ಅಭ್ಯರ್ಥಿಗಳಿಗೆ ಹೀಗಿದೆ. ಎಸ್‌ಸಿ/ಎಸ್‌ಟಿ/ಎಕ್ಸ್ ಸೆರ್ವಿಸ್ ಮ್ಯಾನ್ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ ಮತ್ತು ಉಳಿದ ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವು 100 ರೂ ಇರುತ್ತದೆ. ಅಭ್ಯರ್ಥಿಗಳು ಆನ್ಲೈನ್ ನಲ್ಲಿ ನೆಟ್ ಬ್ಯಾಕಿಂಗ್ ಅಥವಾ ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

CISF ಕಾನ್ಸ್ಟೆಬಲ್ ನೇಮಕಾತಿ 2024 ವಯೋಮಿತಿ

CISF ಕಾನ್ಸ್ಟೆಬಲ್ ನೇಮಕಾತಿ 2024 ವಯೋಮಿತಿ ಮತ್ತು ವಯೋ ಸಡಳಿಕೆ ಹೀಗಿದೆ. CISF ಕಾನ್ಸ್ಟೆಬಲ್ ಹುದ್ದೆಗೆ ಅರ್ಜಿ ಸಲ್ಲಿಸುಯಾವ್ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 23 ವರ್ಷಗಳಾಗಿರುತ್ತದೆ. ವಯೋ ಸಡಲಿಕೆಯು ಈ ಕೆಳಗಿನಂತಿದೆ.

  • SC/ST ಅಭ್ಯರ್ಥಿಗಳಿಗೆ: 5 ವರ್ಷ, OBC ಅಭ್ಯರ್ಥಿಗಳಿಗೆ: 3 ವರ್ಷ, ಎಕ್ಸ್-ಸೇನಾನಿಗೆ 3 ವರ್ಷ
  • 1984 ರ ದಂಗೆಗಳು ಅಥವಾ 2002 ಗುಜರಾತ್ ಕಲ್ಲು ತೂರಾಟಗಳಲ್ಲಿ ಮೃತರಾದವರ ಮಕ್ಕಳಗೆ ಮತ್ತು ಅವಲಂಬಿತರಿಗೆ:UR/EWS: 5 ವರ್ಷOBC: 8 ವರ್ಷ, SC/ST: 10 ವರ್ಷ

CISF ಕಾನ್ಸ್ಟೆಬಲ್ ನೇಮಕಾತಿ 2024 ವಿದ್ಯಾರ್ಹತೆ

CISF ಕಾನ್ಸ್ಟೆಬಲ್ ನೇಮಕಾತಿ 2024 ಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 12 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು ಅಥವಾ ತತ್ಸಮಾನ.

CISF ಕಾನ್ಸ್ಟೆಬಲ್ ನೇಮಕಾತಿ 2024 ಆಯ್ಕೆ ಪ್ರಕ್ರಿಯೆ

ಅರ್ಜಿ ಪ್ರಕ್ರಿಯೆಯಲ್ಲಿನ ಆಯ್ಕೆ ಪ್ರಕ್ರಿಯೆಯು ಶರೀರ ದಕ್ಷತೆಯ ಪರೀಕ್ಷೆ (Physical Efficiency Test), ಶರೀರದ ಮಾನದಂಡ ಪರೀಕ್ಷೆ (Physical Standard Test), ಮತ್ತು ದಾಖಲೆ ಪರಿಶೀಲನೆ (Document Verification) ಅನ್ನು ಒಳಗೊಂಡಿದೆ. ಈ ಪರೀಕ್ಷೆಗಳನ್ನು ಯಶಸ್ವಿಯಾಗಿ ಪಾಸ್ ಮಾಡಿದ ಅಭ್ಯರ್ಥಿಗಳನ್ನು OMR/ಕಂಪ್ಯೂಟರ್-ಆಧಾರಿತ ಪರೀಕ್ಷೆ (CBT) ಮಾದರಿಯಲ್ಲಿನ ಬರಹ ಪರೀಕ್ಷೆಗೆ ಆಯ್ಕೆಮಾಡಲಾಗುವುದು. ಬರಹ ಪರೀಕ್ಷೆಯು ಈ ಕೆಳಗಿನ ನಿಯಮಗಳನ್ನು ಹೊಂದಿದೆ.

  • ಮಾದರಿ: OMR/ಕಂಪ್ಯೂಟರ್-ಆಧಾರಿತ ಪರೀಕ್ಷೆ (CBT)
  • ಫಾರ್ಮ್ಯಾಟ್: ಆಬ್ಜೆಕ್ಟಿವ್ ಟೈಪ್
  • ಪ್ರಶ್ನೆಗಳ ಸಂಖ್ಯೆ: 100
  • ಒಟ್ಟು ಪರೀಕ್ಷಾ ಅಂಕಗಳು: 100
  • ಪರೀಕ್ಷೆ ಭಾಷೆ: ಇಂಗ್ಲಿಷ್ ಮತ್ತು ಹಿಂದಿ
  • ನಕಾರಾತ್ಮಕ ಅಂಕಗಳು: ಇಲ್ಲ

CISF ಕಾನ್ಸ್ಟೆಬಲ್ ನೇಮಕಾತಿ 2024 ಅರ್ಜಿ ಸಲ್ಲಿಕೆ

ಅಭ್ಯರ್ಥಿಗಳು CISF ಕಾನ್ಸ್ಟೆಬಲ್ ನೇಮಕಾತಿ 2024 ಅರ್ಜಿ ಸಲ್ಲಿಕೆಯನು ಅಧಿಕ್ರತ CISF ಪೋರ್ಟಲ್ ಗೆ ಭೇಟಿ ನೀಡಿ ಆನ್ಲೈನ್ ಅಪ್ಲಿಕೇಷನ್ ಫಾರ್ಮ ಅನ್ನು ಸರಿಯಾದ ವಿವರಗಳೊಂದಿಗೆ ಭರ್ತಿ ಮಾಡಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸತಕ್ಕದ್ದು.

CISF ಕಾನ್ಸ್ಟೆಬಲ್ ನೇಮಕಾತಿ 2024 ಪ್ರಮುಖ ಲಿಂಕುಗಳು

ಅರ್ಜಿ ಸಲ್ಲಿಕೆಇಲ್ಲಿ ಒತ್ತಿ
ನೋಟಿಫಿಕೇಶನ್ ಇಲ್ಲಿ ಒತ್ತಿ
ಲೇಖನವನ್ನು ಶೇರ್ ಮಾಡಿ

Leave a Reply

Your email address will not be published. Required fields are marked *