ಈ‌ಪಿ‌ಎಫ್‌ಓ ದಲ್ಲಿ ಭಾರಿ ಬದಲಾವಣೆ: ಈ ಹೊಸ ನಿಯಮ 6 ಕೋಟಿ ಖಾತೆದಾರರಿಗೆ ಅನ್ವಯಿಸಲಿದೆ

ಈ‌ಪಿ‌ಎಫ್‌ಓ ದಲ್ಲಿ ಭಾರಿ ಬದಲಾವಣೆ: ಈ ಹೊಸ ನಿಯಮ 6 ಕೋಟಿ ಖಾತೆದಾರರಿಗೆ ಅನ್ವಯಿಸಲಿದೆ

ಸ್ನೇಹಿತರೇ, ನೌಕರರ ಭವಿಷ್ಯ ನಿಧಿ ಸಂಘಟನೆ (EPFO)  ತನ್ನ 6 ಕೋಟಿಗೂ ಹೆಚ್ಚು ಖಾತೆದಾರರಿಗೆ ಅನುಕೂಲವಾಗುವಂತೆ ಹಲವಾರು ಹೊಸ ನಿಯಮಗಳನ್ನು ಜಾರಿ ಮಾಡಿದೆ. ಈ ಬದಲಾವಣೆಯಲ್ಲಿ, ವೈದ್ಯಕೀಯ, ಶಿಕ್ಷಣ, ಮದುವೆ ಮತ್ತು ಹೌಸಿಂಗ್ ಉದ್ದೇಶಗಳಿಗೆ ಪ್ರಮುಖವಾಗಿ ಸ್ವಯಂಚಾಲಿತ ಸೆಟೆಲ್ಮೆಂಟ್ ಸೌಲಭ್ಯವನ್ನು ಪರಿಚಯಿಸಿದೆ. ಇನ್ಮುಂದೆ ಖಾತೆದಾರರು ತುರ್ತಿ ಪರಿಸ್ಥಿಯಲ್ಲಿ ತ್ವರಿತ ಹಣಕಾಸಿನ ಸಹಾಯವನ್ನು ಪಡೆಯಬಹುದಾಗಿದೆ.

3 ರಿಂದ 4 ದಿನಗಳಲ್ಲಿ ಕ್ಲೈಮ್ ಸೆಟೆಲ್ಮೆಂಟ್

ಮೊದಲು ಈ‌ಪಿ‌ಎಫ್‌ಓ (EPFO) ಕ್ಲೈಮ್ ಪ್ರಕ್ರಿಯೆಗೆ 15 ರಿಂದ 20 ದಿನಗಳು ಬೇಕಾಗಿದ್ದವು ಏಕೆಂದರೆ ಸದಸ್ಯರ ಅರ್ಹತೆ , ಕೆ‌ವೈ‌ಸಿ ಪರಿಶೀಲನೆ, ದಾಖಲೆಗಳು ಮತ್ತು ಬ್ಯಾಂಕ್ ಖಾತೆ ಮಾಹಿತಿಯನ್ನು ಪರಿಶೀಲಿಸಲು ಸಮಯ ಬೇಕಾಗುತ್ತಿತ್ತು. ಆದರೆ, ಈ ಹೊಸ ಸ್ವಯಂಚಾಲಿತ ವ್ಯವಸ್ಥೆಯ ಮೂಲಕ ಖಾತೆದಾರರ ಕ್ಲೈಮ್ ಗಳನ್ನು ಕೇವಲ 3 ರಿಂದ 4 ದಿನಗಳಲ್ಲಿ ತೆರವುಗೊಳಿಸಲಾಗುವುದು.

ಸ್ನೇಹಿತರೇ ಈ ಸ್ವಯಂಚಾಲಿತ ಕ್ಲೈಮ್ ಸೆಟೆಲ್ಮೆಂಟ್ ಸೌಲಭ್ಯವನ್ನು ಏಪ್ರಿಲ್ 2020 ರಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗಾಗಿ ಪರಿಚಯಿಸಲಾಗಿತ್ತು. ಇನ್ಮುಂದೆ ಈ ಸೌಲಭ್ಯಗಳ ವ್ಯಾಪ್ತಿಯನ್ನು ಶಿಕ್ಷಣ, ಮದುವೆ ಮತ್ತು ಹೌಸಿಂಗ್ ಸೇವೆಗಳಿಗೆ ವಿಸ್ತರಿಸಲಾಗಿದೆ.

ಮುಂಗಡ ಹಣಕಾಸು ಹಿಂಪಡೆಯುವ ಮಿತಿ ಹೆಚ್ಚಳ

ಅದಲ್ಲದೆ, ಮುಂಗಡ ಹಣಕಾಸು ಹಿಂಪಡೆಯುವ ಮಿತಿಯನ್ನು ರೂ 1 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ಈ ಹಿಂದೆ ಈ ಮಿತಿಯು ರೂ 50,000 ಆಗಿತ್ತು. ಈಗ ಸಂಪೂರ್ಣ ಪ್ರಕ್ರಿಯೆಯನ್ನು ಆನ್ಲೈನ್ ಮೂಲಕ ನಿರ್ವಹಿಸಲಾಗುವುದು. ಹಿಂದಿನ ಪ್ರಕ್ರಿಯೆ ತರಹ ಯಾವುದೇ ಹೆಚ್ಚುವರಿ ಅನುಮೋದನೆಗಳ ಅಗತ್ಯವಿರುವುದಿಲ್ಲ. ಖಾತೆದಾರರ ನಿಧಿಯನ್ನು 3 ರಿಂದ 4 ದಿನಗಳಲ್ಲಿ ಜಮೆ ಮಾಡಲಾಗುವುದು.

ಹಣಕಾಸು ಹಿಂಪಡೆಯುವ ಪ್ರಕ್ರಿಯೆ

ಮೊದಲು ನಿಧಿಗಳನ್ನು ಹಿಂಪಡೆಯಲು, ಸದಸ್ಯರು ತಮ್ಮ ಯೂ‌ಏ‌ಎನ್ (UAN) ಮತ್ತು ಪಾಸ್ವರ್ಡ್ ಬಳಸಿ ಈ‌ಪಿ‌ಎಫ್‌ಓ (EPFO) ಪೋರ್ಟಲ್ ನಲ್ಲಿ ಲಾಗಿನ್ ಆಗಬೇಕು. ‘ಆನ್ಲೈನ್ ಸೇವೆಗಳು’ ವಿಭಾಗಕ್ಕೆ ಹೋಗಿ ‘ಕ್ಲೈಮ್’ ಸೆಕ್ಷನ್ ಮೇಲೆ ಒತ್ತಬೇಕು. ನಂತರ ಅಗತ್ಯವಿರುವ ವಿವರಗಳು ಮತ್ತು ದಾಖಲೆಗಳನ್ನು ಸಲ್ಲಿಸಿದ ನಂತರ ಕ್ಲೈಮ್ ಗಳನ್ನು ಪ್ರಕ್ರಿಯೆಗೊಳಿಸಿ ಅದನ್ನು ಉದ್ಯೋಗದಾರಿಗೆ ಅನುಮೋದನೆಗಾಗಿ ಕಳುಹಿಸಲಾಗುತ್ತದೆ. ನೌಕರರು ತಮ್ಮ ಕ್ಲೈಮ್ ಸ್ಥಿತಿಯನ್ನು ಆನ್ಲೈನ್ ನಲ್ಲಿ ವೀಕ್ಷಿಸಬಹುದು.

ಲೇಖನವನ್ನು ಶೇರ್ ಮಾಡಿ

Leave a Reply

Your email address will not be published. Required fields are marked *