EXIM Bank Management Trainee Recruitment 2024: ಎಕ್ಸಿಮ್ ಬ್ಯಾಂಕಿನಲ್ಲಿ 50 ಮ್ಯಾನೇಜ್ಮೆಂಟ್ ಟ್ರೈನೀ ಹುದ್ದೆಗಳಿಗೆ ಅರ್ಜಿ ಆಹ್ವಾನ

EXIM Bank Management Trainee Recruitment 2024: ಎಕ್ಸಿಮ್ ಬ್ಯಾಂಕಿನಲ್ಲಿ 50 ಮ್ಯಾನೇಜ್ಮೆಂಟ್ ಟ್ರೈನೀ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸ್ನೇಹಿತರೇ EXIM Bank ನಿಂದ 50 ಮ್ಯಾನೇಜ್ಮೆಂಟ್ ಟ್ರೈನೀ ಹುದ್ದೆಗಳ ಭರ್ತಿ ಮಾಡಲು ಹೊಸ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಬ್ಯಾಂಕಿಂಗ್ ವಲಯದಲ್ಲಿ ಸೇವೆ ಸಲ್ಲಿಸಲು ಆಸಕ್ತಿ ಹೊಂದಿರುವ ಮತ್ತು ಕನಿಷ್ಠ 60% ಅಂಕಗಳೊಂದಿಗೆ ಪದವಿಯನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ದಿನಾಂಕ 18 ಸೆಪ್ಟೆಂಬರ್ 2024 ರಂದು ಆರಂಭಗೊಳ್ಳಲಿದ್ದು 7 ಅಕ್ಟೋಬರ್ 2024 ರವರೆಗೆ ಕಾಲಾವಕಾಶ ನೀಡಲಾಗಿದೆ.

ಈ ನೇಮಕಾತಿ ಆಯ್ಕೆ ಪ್ರಕ್ರಿಯೆಯು ಹಲವು ಹಂತಗಳಲ್ಲಿ ನಡೆಯಲಿದ್ದು ಆನ್ಲೈನ್ ಪರೀಕ್ಷೆ, ವೈಯಕ್ತಿಕ ಸಂದರ್ಶನ, ಗುಂಪು ಚರ್ಚೆ, ದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ಒಳಗೊಂಡಿದೆ. ಅರ್ಜಿ ಶುಲ್ಕವು ಸಾಮಾನ್ಯ ಮತ್ತು ಓಬಿಸಿ ವರ್ಗದ ಅಭ್ಯರ್ಥಿಗಳಿಗೆ ರೂ 600, ಹಾಗೂ ಎಸ್‌ಸಿ‌ಎಸ್‌ಟಿ/ಪಿಡಬ್ಲ್ಯುಡಿ/ಈಡಬ್ಲ್ಯುಎಸ್ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ರೂ 100 ಆಗಿದೆ.

ಪ್ರಮುಖ ದಿನಾಂಕಗಳು

EXIM Bank Management Trainee Recruitment 2024: ಎಕ್ಸಿಮ್ ಬ್ಯಾಂಕ್ ಮ್ಯಾನೇಜ್ಮೆಂಟ್ ಟ್ರೈನೀ ನೇಮಕಾತಿ ಆನ್ಲೈನ್ ಅರ್ಜಿ ಸಲ್ಲಿಕೆ ಮತ್ತು ಅರ್ಜಿ ಶುಲ್ಕ ಪಾವತಿಯು ದಿನಾಂಕ 18 ಸೆಪ್ಟೆಂಬರ್ 2024 ರಂದು ಆರಂಭಗೊಳ್ಳಲಿದ್ದು ದಿನಾಂಕ 7 ಅಕ್ಟೋಬರ್ 2024 ರಂದು ಅಂತ್ಯಗೊಳ್ಳಲಿದೆ. ಹಾಗೂ ಲಿಖಿತ ಪರೀಕ್ಷೆಯನ್ನು ಅಕ್ಟೋಬರ್ ತಿಂಗಳಿನಲ್ಲಿ ನಡೆಸಲಾಗುವುದು.

ಹುದ್ದೆಗಳ ವಿವರ

EXIM Bank Management Trainee Recruitment 2024 ನೇಮಕಾತಿ ಪ್ರಕ್ರಿಯೆಯಡಿ ಒಟ್ಟು 50 ಮ್ಯಾನೇಜ್‌ಮೆಂಟ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ವಿಭಾಗವಾರು ಹಂಚಿಕೆ ಈ ರೀತಿ ಇದೆ: ಸಾಮಾನ್ಯ ವರ್ಗಕ್ಕೆ (Unreserved – UR) 22 ಹುದ್ದೆಗಳು, ನಿಗದಿತ ಜಾತಿಗೆ (Scheduled Caste – SC) 7 ಹುದ್ದೆಗಳು, ನಿಗದಿತ ಜನಜಾತಿಗೆ (Scheduled Tribe – ST) 3 ಹುದ್ದೆಗಳು, ಹಿಂದಿನ ವರ್ಗಗಳ (Other Backward Classes – OBC) 13 ಹುದ್ದೆಗಳು, ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ (Economically Weaker Sections – EWS) 5 ಹುದ್ದೆಗಳು

  • ಮ್ಯಾನೇಜ್‌ಮೆಂಟ್ ಟ್ರೈನಿ (ಕೋರ್ಪೊರೇಟ್ ಲೋನ್ಸ್ & ಅಡ್ವಾನ್ಸಸ್): 10
  • ಮ್ಯಾನೇಜ್‌ಮೆಂಟ್ ಟ್ರೈನಿ (ಪ್ರಾಜೆಕ್ಟ್ ಫೈನಾನ್ಸ್): 8
  • ಮ್ಯಾನೇಜ್‌ಮೆಂಟ್ ಟ್ರೈನಿ (ಲೈನ್ಸ್ ಆಫ್ ಕ್ರೆಡಿಟ್): 6
  • ಮ್ಯಾನೇಜ್‌ಮೆಂಟ್ ಟ್ರೈನಿ (ಇಂಟರ್ನಲ್ ಕ್ರೆಡಿಟ್ ಆಡಿಟ್): 5
  • ಮ್ಯಾನೇಜ್‌ಮೆಂಟ್ ಟ್ರೈನಿ (ರಿಸ್ಕ್ ಮ್ಯಾನೇಜ್‌ಮೆಂಟ್): 7
  • ಮ್ಯಾನೇಜ್‌ಮೆಂಟ್ ಟ್ರೈನಿ (ಕಾಂಪ್ಲೈಯನ್ಸ್): 4
  • ಮ್ಯಾನೇಜ್‌ಮೆಂಟ್ ಟ್ರೈನಿ (ಟ್ರೆಷರಿ ಮತ್ತು ಅಕೌಂಟ್ಸ್): 9
  • ಮ್ಯಾನೇಜ್‌ಮೆಂಟ್ ಟ್ರೈನಿ (ಮಾಹಿತಿ ತಂತ್ರಜ್ಞಾನ): 6
  • ಮ್ಯಾನೇಜ್‌ಮೆಂಟ್ ಟ್ರೈನಿ (ಮಾನವ ಸಂಪತ್ತು): 5
  • ಮ್ಯಾನೇಜ್‌ಮೆಂಟ್ ಟ್ರೈನಿ (ಕಾನೂನು): 3

ವಿದ್ಯಾರ್ಹತೆ

EXIM Bank Management Trainee Recruitment 2024 ರ ಅರ್ಜಿ ಸಲ್ಲಿಕೆಗೆ ಅಭ್ಯರ್ಥಿಗಳ ವಿದ್ಯಾರ್ಹತೆಯು ಈ ಕೆಳಗಿನಂತಿದೆ.

  • ಗ್ರ್ಯಾಜುಯೇಶನ್: ಕನಿಷ್ಠ 60% ಅಗ್ರೀಗೆಟ್ ಅಂಕಗಳು ಅಥವಾ ಇದಕ್ಕೆ ಸಮಾನಾವಾದ CGPA ಸಹಿತ ಪದವಿ ಪೂರೈಸಿರಬೇಕು
  • ಪೋಸ್ಟ್ ಗ್ರ್ಯಾಜುಯೇಶನ್: MBA, PGDBM, MMS ( ಫೈನಾನ್ಸ್, ಇಂಟರ್ ನೇಷನಲ್ ಬಿಸಿನೆಸ್, ಪಾರೆನ್ ಟ್ರೇಡ್) ಅಥವಾ ಚಾರ್ಟೆಡ್ ಅಕೌಂಟೆಂಟ್ ಪೂರ್ಣಗೊಳಿಸಿರಬೇಕು.

ವಯೋಮಿತಿ

EXIM Bank Management Trainee Recruitment 2024 ರ ಅರ್ಜಿ ಸಲ್ಲಿಕೆಗೆ ಅಭ್ಯರ್ಥಿಗಳ ವಯೋಮಿತಿಯು ಹೀಗಿದೆ. ಅಭ್ಯರ್ಥಿಗಳು ಆಗಸ್ಟ್ 1, 2024 ರ ವರೆಗೆ ಕನಿಷ್ಠ 21 ವರ್ಷ ಮತ್ತು ಗರಿಷ್ಟ 28 ವರ್ಷಗಳ ನಡುವೆ ವಯೋಮಿತಿಯನ್ನು ಹೊಂದಿರಬೇಕು. ಹಾಗೂ ರಿಸರ್ವ್ ಕೆಟೆಗೇರಿಯ (reserve cateogories age relaxations) ಅಭ್ಯರ್ಥಿಗಳಿಗೆ ವಯೋ ಸಡಲಿಕೆಯು ಈ ಕೆಳಗಿನಂತಿದೆ.

  • SC/ST: 5 ವರ್ಷ
  • OBC- ನಾನ್ ಕ್ರೀಮಿ ಲೆಯರ್: 3 ವರ್ಷ
  • PWD: 10 ವರ್ಷ
  • ಎಕ್ಸ್ ಸೇರ್ವಿಸ್ ಮ್ಯಾನ್: 10 ವರ್ಷ

ವೇತನ

EXIM Bank Management Trainee Recruitment 2024 ರಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಟ್ರೈನಿಂಗ್ ಸಮಯದಲ್ಲಿ ಮಾಸಿಕ 55,000 ರೂ ಸ್ಟಿಪೆಂಡ್ ನೀಡಲಾಗುವುದು. ಹಾಗೂ ಟ್ರೈನಿಂಗ್ ಮುಗಿದ ಬಳಿಕ ಭತ್ಯೆ ಮತ್ತು ಇತರ ಸೌಲಭ್ಯಗಳನ್ನು ಒಳಗೊಂಡು ಒಟ್ಟು ರೂ 70,000 ರಿಂದ ರೂ 1,00,000 ವರೆಗೆ ಮಾಸಿಕ ವೇತನ ನೀಡಲಾಗುವುದು.

ಅರ್ಜಿ ಶುಲ್ಕ

EXIM Bank Management Trainee Recruitment 2024 ರ ಅರ್ಜಿ ಸಲ್ಲಿಕೆಗೆ ಸಾಮಾನ್ಯ ಮತ್ತು ಓ‌ಬಿ‌ಸಿ (General and OBC) ವರ್ಗದ ಅಭ್ಯರ್ಥಿಗಳಿಗೆ ಅರ್ಹಿ ಶುಲ್ಕವು ರೂ 600 ಆಗಿರುತ್ತದೆ. ಹಾಗೂ ಎಸ್‌ಸಿ/ಎಸ್‌ಟಿ/ಪಿ‌ಡಬಲ್ಯು‌ಬಿ‌ಡಿ/ಈ‌ಡಬಲ್ಯು‌ಎಸ್ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವು ರೂ 100 ಆಗಿರುತ್ತದೆ.

ಆಯ್ಕೆ ಪ್ರಕ್ರಿಯೆ

EXIM Bank Management Trainee Recruitment 2024 ಆಯ್ಕೆ ಪ್ರಕ್ರಿಯೆಯು 5 ಹಂತಗಳಲ್ಲಿ ನಡೆಯಲಿದ್ದು ಅದರ ಸಂಪೂರ್ಣ ವಿವರ ಹೀಗಿದೆ.

  • ಆನ್ಲೈನ್ ಪರೀಕ್ಷೆ: ರೀಸನಿಂಗ್, ಕ್ವಾಂಟಿಟೆಟಿವ್ ಆಪ್ಟಿಟ್ಯೂಡ್, ಇಂಗ್ಲಿಷ್, ಪ್ರೊಫೆಷನಲ್ ನಾಲೆಡ್ಜ್
  • ವೈಯಕ್ತಿಕ ಸಂದರ್ಶನ: ಕಮ್ಯೂನಿಕೇಷನ್ ಸ್ಕಿಲ್ಸ್ ಮತ್ತು ಸಬ್ಜೆಕ್ಟ್ ನಾಲೆಡ್ಜ್
  • ಗುಂಪು ಚರ್ಚೆ
  • ದಾಖಲೆಗಳ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

ಅರ್ಜಿ ಸಲ್ಲಿಕೆ

EXIM Bank Management Trainee Recruitment 2024 ರ ಅರ್ಜಿ ಸಲ್ಲಿಕೆ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

  • EXIM Bank ಕರಿಯರ್ಸ್ ಅಧಿಕ್ರತ ಪುಟಕ್ಕೆ ಭೇಟಿ ನೀಡಿ.
  • Management Trainee Recruitment ಲಿಂಕ್ ಮೇಲೆ ಒತ್ತಿ ಅಲ್ಲಿ ಕೇಳುವ ಮಾಹಿತಿಯನ್ನು ನಮೂದಿಸುವುದರ ಮೂಲಕ ರಿಜಿಸ್ಟ್ರೇಷನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
  • ನಿಮ್ಮ ರಿಜಿಸ್ಟ್ರೇಷನ್ ಡೀಟೆಲ್ಸ್ ಮೂಲಕ ಲಾಗಿನ್ ಆಗಿ, ಅಗತ್ಯ ಮಾಹಿತಿಯನ್ನು ನಮೂದಿಸುವುದರ ಮೂಲಕ ಅರ್ಜಿ ಫಾರ್ಮ್ (application form) ಅನ್ನು ಭರ್ತಿ ಮಾಡಿ
  • ಈವಾಗ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
  • ನಂತರ ನಿಮ್ಮ ವರ್ಗಕ್ಕೆ ಸೂಚಿತ ಅರ್ಜಿ ಶುಲ್ಕವನ್ನು ಪಾವತಿಸಿ

ಪ್ರಮುಖ ಲಿಂಕುಗಳು

ಲೇಖನವನ್ನು ಶೇರ್ ಮಾಡಿ

Leave a Reply

Your email address will not be published. Required fields are marked *