GESCOM ಅಪ್ರೆಂಟಿಸ್ ನೇಮಕಾತಿ 2024: ಐಟಿಐ ಆದವರಿಗೆ ಸುವರ್ಣಾವಕಾಶ
ಸ್ನೇಹಿತರೇ, ಗುಲ್ಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ (GESCOM) 221 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿ ಆದೇಶ ನೀಡಿದೆ. ಎಸ್ಎಸ್ಎಲ್ಸಿ ನಂತರ ಐಟಿಐ (ಎಲೆಕ್ಟ್ರಿಶಿಯನ್ ವ್ರತ್ತಿ, NCVT/SCVT ಪ್ರಮಾಣಪತ್ರ) ಪೊರೈಸಿರುವ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಐ ನೇಮಕಾತಿ ಮೂಲಕ ಗ್ರಾಜುಯೆಟ್ ಅಪ್ರೆಂಟಿಸ್, ಡಿಪ್ಲೋಮಾ ಅಪ್ರೆಂಟಿಸ್, ಐಟಿಐ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲಿದ್ದು, ಆಯ್ಕೆಯಾದ ಅಭ್ಯರ್ಥಿಗಳನ್ನು ಕಲಬುರಗಿ ಜಿಲ್ಲೆಯಲ್ಲಿ ನಿಯೋಜನ ಮಾಡಲಾಗುವುದು.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಗೆ ದಿನಾಂಕ 23 ಆಗಸ್ಟ್ 2024 ರಿಂದ 13 ಸೆಪ್ಟೆಂಬರ್ 2024 ರವರೆಗೆ ಅರ್ಜಿ ಸಲ್ಲಿಕೆಗೆ ಕಾಲವಕಾಶವಿರುತ್ತದೆ. ಅಭ್ಯರ್ಥಿಗಳ ವಯೊಮಿತಿಯು 16 ರಿಂದ 25 ವರ್ಷಗಳ ನಡುವೆ ಇರಬೇಕು ಹಾಗೂ ಅರ್ಜಿ ಸಲ್ಲಿಕೆಗೆ ಯಾವುದೇ ಅರ್ಜಿ ಶುಲ್ಕ ಪಾವತಿ ಮಾಡಬೇಕಾಗಿರುವುದಿಲ್ಲ. GESCOM ಅಪ್ರೆಂಟಿಸ್ ನೇಮಕಾತಿ 2024 ಕ್ಕೆ ಅಭ್ಯರ್ಥಿಗಳನ್ನು ಐಟಿಐ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
GESCOM ಅಪ್ರೆಂಟಿಸ್ ನೇಮಕಾತಿ 2024 ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 23 ಆಗಸ್ಟ್ 2024
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13 ಸೆಪ್ಟೆಂಬರ್ 2024
GESCOM ಅಪ್ರೆಂಟಿಸ್ ನೇಮಕಾತಿ 2024 ಹುದ್ದೆಗಳ ವಿವರ
GESCOM ಅಪ್ರೆಂಟಿಸ್ ನೇಮಕಾತಿ 2024 ಒಟ್ಟು 221 (ಗ್ರಾಜುಯೆಟ್ ಅಪ್ರೆಂಟಿಸ್, ಡಿಪ್ಲೋಮಾ ಅಪ್ರೆಂಟಿಸ್, ಐಟಿಐ ಅಪ್ರೆಂಟಿಸ್) ಹುದ್ದೆಗಳ ಭರ್ತಿಗೆ ನಡೆಯಲಿದೆ.
GESCOM ಅಪ್ರೆಂಟಿಸ್ ನೇಮಕಾತಿ 2024 ವಿದ್ಯಾರ್ಹತೆ
ಅಭ್ಯರ್ಥಿಗಳು ಎಲೆಕ್ಟ್ರೀಷಿಯನ್ ವೃತ್ತಿ (Electrician Vocational) ನಲ್ಲಿ ITI (Industrial Training Institute) ತರಬೇತಿ ಪೂರೈಸಿರಬೇಕು. ಅಭ್ಯರ್ಥಿಗಳು ಈ ತರಬೇತಿ National Council for Vocational Training (NCVT) ಅಥವಾ State Council for Vocational Training (SCVT) ದೃಢೀಕೃತ ಸಂಸ್ಥೆಯ ಅಧೀನದಲ್ಲಿ ಮಾಡಿದವರಾಗಿರಬೇಕು. ತರಬೇತಿ ಪೂರ್ಣಗೊಳಿಸಿದ ನಂತರ, ಅಭ್ಯರ್ಥಿಗಳು ರಾಷ್ಟೀಯ ವೃತ್ತಿ ಪ್ರಮಾಣಪತ್ರ (National Vocational Certificate) ಅಥವಾ ರಾಜ್ಯ ವೃತ್ತಿ ಪ್ರಮಾಣಪತ್ರ (State Vocational Certificate) ಪಡೆದುಕೊಂಡಿರುವುದು ಅವಶ್ಯಕ.
GESCOM ಅಪ್ರೆಂಟಿಸ್ ನೇಮಕಾತಿ 2024 ಅರ್ಜಿ ಶುಲ್ಕ
GESCOM ಅಪ್ರೆಂಟಿಸ್ ನೇಮಕಾತಿ 2024 ಕ್ಕೆ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿ ಮಾಡಬೇಕಾಗಿಲ್ಲ.
GESCOM ಅಪ್ರೆಂಟಿಸ್ ನೇಮಕಾತಿ 2024 ವಯೋಮಿತಿ
- ಕನಿಷ್ಠ ವಯಸ್ಸು: 16 ವರ್ಷ (23-08-2024ಕ್ಕೆ)
- ಗರಿಷ್ಠ ವಯಸ್ಸು: 25 ವರ್ಷ (13-09-2024ಕ್ಕೆ)
ವಯೋ ಸಡಲಿಕೆ
- ಪ.ಜಾತಿ/ಪ.ಪಂಗಡದ ಅಭ್ಯರ್ಥಿಗಳಿಗೆ: 5 ವರ್ಷ ವಯೋಮಿತಿ ಸಡಿಲಿಕೆ
- OBC (Non-Creamy Layer) ಅಭ್ಯರ್ಥಿಗಳಿಗೆ: 3 ವರ್ಷ ಸಡಿಲಿಕೆ
GESCOM ಅಪ್ರೆಂಟಿಸ್ ನೇಮಕಾತಿ 2024 ವೇತನ
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 5,500 ರೂ ಸ್ಟೈಪಂಡ್ ನೀಡಲಾಗುವುದು.
GESCOM ಅಪ್ರೆಂಟಿಸ್ ನೇಮಕಾತಿ 2024 ಆಯ್ಕೆ ವಿಧಾನ
ಅಭ್ಯರ್ಥಿಯ ಐಟಿಐ ತರಬೇತಿಯ ಅಂಕಗಳು ಪ್ರಮುಖ ನಿರ್ಣಾಯಕವಾಗಿದ್ದು, ಹೆಚ್ಚಿನ ಅಂಕ ಪಡೆದವರಿಗೆ ಮೊದಲ ಆದ್ಯತೆ. ನಿಯಮಿತ ಮೀಸಲಾತಿ ಮಾದರಿಯನ್ನು ಅನುಸರಿಸಿ, ವಿವಿಧ ವರ್ಗಗಳಿಗೆ ಮೀಸಲಾದ ಹುದ್ದೆಗಳ ಆಯ್ಕೆಯನ್ನು ಜಾರಿಗೊಳಿಸಲಾಗುತ್ತದೆ.
GESCOM ಅಪ್ರೆಂಟಿಸ್ ನೇಮಕಾತಿ 2024 ಅರ್ಜಿ ಸಲ್ಲಿಕೆ
- ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಯ ಮುಂಚೆ ಅಧಿಸೂಚನೆ ಮತ್ತು ಎಲ್ಲ ಮಾಹಿತಿಗಳನ್ನು ಪೂರ್ಣವಾಗಿ ಓದಿ, ನಂತರ ಅರ್ಜಿಯನ್ನು ಸಲ್ಲಿಸಬೇಕು.
- ಅಧಿಕೃತ ಅಧಿಸೂಚನೆಯಲ್ಲಿ ನೀಡಲಾದ ಅರ್ಜಿಯ ನಮೂನೆ ಡೌನ್ಲೋಡ್ ಮಾಡಿ.
- ನಿಮ್ಮ ವಿವರಗಳು, ವಿದ್ಯಾರ್ಹತೆ, ವಯೋಮಿತಿ, ಸುರಕ್ಷಿತವಾಗಿ ನಮೂದಿಸಿ.
- ಭರ್ತಿಯಾದ ಅರ್ಜಿಯನ್ನು ಕೆಳಗಡೆ ನೀಡಲಾದ ವಿಳಾಸಕ್ಕೆ ನೋಂದಾಯಿತ ಪೋಸ್ಟ್ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿ.
ಅರ್ಜಿ ಸಲ್ಲಿಕೆ ವಿಳಾಸ
ಪ್ರಧಾನ ವ್ಯವಸ್ಥಾಪಕರು (ಆ ಮತ್ತು ಮಾ.ಸಂ.ಅ),
ನಿಗಮ ಕಛೇರಿ,
GESCOM,
ಸ್ಟೇಷನ್ ರೋಡ್,
ಕಲಬುರ್ಗಿ, 585102, ಕರ್ನಾಟಕ.
GESCOM ಅಪ್ರೆಂಟಿಸ್ ನೇಮಕಾತಿ 2024 ಪ್ರಮುಖ ಲಿಂಕುಗಳು
- ಅಧಿಕೃತ ಅಧಿಸೂಚನೆ: Click Here
- ಅರ್ಜಿಯ ನಮೂನೆ: Click Here
- ಅಧಿಕೃತ ವೆಬ್ಸೈಟ್: gescom.karnataka.gov.in