ಎಚ್‌ಡಿ‌ಎಫ್‌ಸಿ ಬ್ಯಾಂಕ್ ಪರಿವರ್ತನ್ ECSS (Education Crisis Scholarship Support) ವಿದ್ಯಾರ್ಥಿವೇತನ: ಆಯ್ಕೆಯಾದ ವಿದ್ಯಾರ್ಥಿಗಳಿಗೆ ರೂ 75 ಸಾವಿರದ ಆರ್ಥಿಕ ನೆರವು

ಎಚ್‌ಡಿ‌ಎಫ್‌ಸಿ ಬ್ಯಾಂಕ್ ಪರಿವರ್ತನ್ ECSS (Education Crisis Scholarship Support) ವಿದ್ಯಾರ್ಥಿವೇತನ: ಆಯ್ಕೆಯಾದ ವಿದ್ಯಾರ್ಥಿಗಳಿಗೆ ರೂ 75 ಸಾವಿರದ ಆರ್ಥಿಕ ನೆರವು

ಸ್ನೇಹಿತರೇ ವಿದ್ಯಾರ್ಥಿವೇತನವು ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ಒದಗಿಸುವ ಪ್ರಮುಖ ಸಾಧನ ಅಂತಾನೆ ಹೇಳಬಹುದು. ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣವನ್ನು ನಿಲ್ಲಿಸದೆ ಯಶಸ್ವಿಯಾಗಿ ಮುಂದುವರೆಸಲು ಅನುಕೂಲವನ್ನು ಮಾಡಿಕೊಡುತ್ತದೆ. ಕಷ್ಟಕರ ಪರಿಸ್ಥಿತಿಯಲ್ಲಿ ತಮ್ಮ ಅಭ್ಯಾಸವನ್ನು ಮುಂದುವರೆಸಲು ಸಾಧ್ಯವಾಗದ ವಿಧ್ಯಾರ್ಥಿಗಳ ಶಿಕ್ಷಣ ನಿರ್ವಹಣೆಗೆ ಪ್ರೇರಣೆ ಕೊಡುತ್ತದೆ.

ದೇಶದ ಪ್ರಮುಖ ಹಣಕಾಸು ಸಂಸ್ಥೆಗಳಲ್ಲಿ ಒಂದಾದ ಎಚ್‌ಡಿ‌ಎಫ್‌ಸಿ ಬ್ಯಾಂಕ್ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬದ ಅಭ್ಯರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಬೆಂಬಲ ನೀಡಲು ಎಚ್‌ಡಿ‌ಎಫ್‌ಸಿ ಬ್ಯಾಂಕ್ ಪರಿವರ್ತನ್ ECSS (Education Crisis Scholarship Support) ವಿದ್ಯಾರ್ಥಿವೇತನವನ್ನು ಘೋಷಿಸಿದೆ.

ಎಚ್‌ಡಿ‌ಎಫ್‌ಸಿ ಬ್ಯಾಂಕ್ ಪರಿವರ್ತನ್ ECSS (Education Crisis Scholarship Support) ವಿದ್ಯಾರ್ಥಿವೇತನ ಲಾಭ ಪಡೆಯಲು ಅರ್ಜಿದಾರರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಸೆಪ್ಟೆಂಬರ್ 04, 2024 ರಂದು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕೊನೆಗೊಳ್ಳಲಿದೆ.

ಯಾರಿಗೆಲ್ಲ ಸಿಗಲಿದೆ ಎಚ್‌ಡಿ‌ಎಫ್‌ಸಿ ಬ್ಯಾಂಕ್ ಪರಿವರ್ತನ್ ECSS (Education Crisis Scholarship Support) ವಿದ್ಯಾರ್ಥಿವೇತನ?

1 ರಿಂದ 12 ನೇ ತರಗತಿ , ಡಿಪ್ಲೋಮಾ, ಐಟಿಐ ಮತ್ತು ಪಾಲಿಟೆಕ್ನಿಕ್ ಕೋರ್ಸ್‌ಗಳಿಗೆ, ಅಂಡರ್‌ಗ್ರಾಜುಯೇಟ್ ಕೋರ್ಸ್‌ಗಳಿಗೆ ಮತ್ತು ಪೋಸ್ಟ್‌ಗ್ರಾಜುಯೇಟ್ ಕೋರ್ಸ್‌ಗಳಿಗೆ ಲಭ್ಯವಿದ್ದು ಅವುಗಳ ಪೂರ್ಣ ಮಾಹಿತಿ ಈ ಕೆಳಗಿನಂತಿದೆ.

ಅರ್ಜಿ ಸಲ್ಲಿಕೆಗೆ ಯಾರಿಗೆಲ್ಲ ಅರ್ಹತೆ ಇದೆ

  • ವಿದ್ಯಾರ್ಥಿಗಳು ಖಾಸಗಿ, ಸರ್ಕಾರಿ ಅಥವಾ ಅನುದಾನಿತ ಶಾಲೆಗಳಲ್ಲಿ ಪ್ರಸ್ತುತ ವ್ಯಾಸಾಂಗ ಮಾಡುತ್ತಿರಬೇಕು.
  • ಹಿಂದಿನ ತರಗತಿಯ ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ 55% ಅಂಕಗಳನ್ನು ಪಡೆದಿರಬೇಕು.
  • ವಾರ್ಷಿಕ ಕುಟುಂಬದ ಆದಾಯ ರೂ 2.5 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇರಬೇಕು.
  • ಕಳೆದ ಮೂರು ವರ್ಷಗಳ್ಳಿ ವೈಯಕ್ತಿಕ ಅಥವಾ ಕೌಟುಂಬಿಕ ಬಿಕ್ಕಟ್ಟನ್ನು ಎದುರಿಸಿರುವ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?

  • ಪ್ರಸ್ತುತ 1 ರಿಂದ 12 ನೇ ತರಗತಿಯಲ್ಲಿ ಓಡುತ್ತಿರುವ ವಿದ್ಯಾರ್ಥಿಗಳು , ಡಿಪ್ಲೋಮಾ, ಐಟಿಐ ಮತ್ತು ಪಾಲಿಟೆಕ್ನಿಕ್ ಕೋರ್ಸ್‌ಗಳಿಗೆ ನೊಂದಣಿ ಮಾಡಿಕೊಂಡಿರುವ ವಿದ್ಯಾರ್ಥಿಗಳು.
  • ಸಾಮಾನ್ಯ ಅಂಡರ್‌ಗ್ರಾಜುಯೇಟ್ ಕೋರ್ಸ್‌ಗಳನ್ನು (ಉದಾಹರಣೆಗೆ, BCom, BSc, BA) ಅಥವಾ ವೃತ್ತಿಪರ ಅಂಡರ್‌ಗ್ರಾಜುಯೇಟ್ ಕೋರ್ಸ್‌ಗಳನ್ನು (ಉದಾಹರಣೆಗೆ, BTech, MBBS, LLB) ವಿಶ್ವವಿದ್ಯಾಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು.
  • ಸಾಮಾನ್ಯ ಪೋಸ್ಟ್‌ಗ್ರಾಜುಯೇಟ್ ಕೋರ್ಸ್‌ಗಳನ್ನು (ಉದಾಹರಣೆಗೆ, MCom, MA) ಅಥವಾ ವೃತ್ತಿಪರ ಪೋಸ್ಟ್‌ಗ್ರಾಜುಯೇಟ್ ಕೋರ್ಸ್‌ಗಳನ್ನು (ಉದಾಹರಣೆಗೆ, MTech, MBA) ಓದುತ್ತಿರುವ ವಿದ್ಯಾರ್ಥಿಗಳು.

ಯಾರಿಗೆ ಎಷ್ಟು ಹಣ ಸಿಗಲಿದೆ?

  • ಕ್ಲಾಸ್ 1 ರಿಂದ 6: INR 15,000
  • ಕ್ಲಾಸ್ 7 ರಿಂದ 12, ಡಿಪ್ಲೋಮಾ, ಐಟಿಐ ಮತ್ತು ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ: INR 18,000
  • ಸಾಮಾನ್ಯ ಅಂಡರ್‌ಗ್ರಾಜುಯೇಟ್ ಕೋರ್ಸ್‌ಗಳಿಗೆ: INR 30,000
  • ವೃತ್ತಿಪರ ಅಂಡರ್‌ಗ್ರಾಜುಯೇಟ್ ಕೋರ್ಸ್‌ಗಳಿಗೆ: INR 50,000
  • ಸಾಮಾನ್ಯ ಪೋಸ್ಟ್‌ಗ್ರಾಜುಯೇಟ್ ಕೋರ್ಸ್‌ಗಳಿಗೆ: INR 35,000
  • ವೃತ್ತಿಪರ ಪೋಸ್ಟ್‌ಗ್ರಾಜುಯೇಟ್ ಕೋರ್ಸ್‌ಗಳಿಗೆ: INR 75,000

ಏನೆಲ್ಲಾ ದಾಖಲೆಗಳು ಬೇಕು?

  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
  • ಹಿಂದಿನ ವರ್ಷದ ಅಂಕಪಟ್ಟಿ (2023-24)
  • ಗುರುತಿನ ವಿಳಾಸ (ಆಧಾರ್ ಕಾರ್ಡ್/ವೋಟಿಂಗ್ ಕಾರ್ಡ್/ಡ್ರೈವಿಂಗ್ ಲೈಸೆನ್ಸ್)
  • ಪ್ರಸ್ತುತ ವರ್ಷದ ಪ್ರವೇಶ ಪತ್ರ (ಫೀ ರಸೀದಿ/ಪ್ರವೇಶ ಪತ್ರ/ಕಾಲೇಜ್ ಐಡಿ ಕಾರ್ಡ್/ಬೊನಾಫೈಡ್ ಪ್ರಮಾಣಪತ್ರ) (2024-25)
  • ಅರ್ಜಿದಾರರ ಬ್ಯಾಂಕ್ ಖಾತೆಯ ವಿವರ
  • ಆದಾಯ ಪ್ರಮಾಣ ಪತ್ರ. ಅರ್ಜಿದಾರರ ಆದಾಯವು 2.5 ಲಕ್ಷಕ್ಕಿಂತ ಕಡಿಮೆ ಇರಬೇಕು.
  • ಕೌಟುಂಬಿಕ ಬಿಕ್ಕಟ್ಟಿನ ದಾಖಲೆ ( ಲೋನ್ ಪಡೆದಿದ್ದರೆ, ಅದರ ದಾಖಲೆಗಳು ಅಥವಾ ಆರೋಗ್ಯ ಸಮಸ್ಯೆ ಉಂಟಾಗಿದ್ದಲ್ಲಿ ಆಸ್ಪತ್ರೆಗೆ ದಾಖಲಾದ ಪತ್ರಗಳು.

ಅರ್ಜಿ ಸಲ್ಲಿಕೆ ಹೇಗೆ

  • ಮೊದಲು ಅರ್ಜಿದಾರರು ಇಲ್ಲಿ ಕೊಟ್ಟಿರುವ (https://www.buddy4study.com/page/hdfc-bank-parivartans-ecss-programme) ಲಿಂಕನ್ನು ಓಪೆನ್ ಮಾಡಬೇಕು.
  • ನಂತರ ನಿಮ್ಮ ಇಮೇಲ್/ಮೊಬೈಲ್/ಜೀಮೇಲ್ ಬಳಸಿಕೊಂಡು ಅಪ್ಲಿಕೇಷನ್ ಐ‌ಡಿ ಮತ್ತು ಪಾಸ್ ವರ್ಡ್ ರಚಿಸಿ ಲಾಗಿನ್ ಆಗಬೇಕು.
  • ‘HDFC ಬ್ಯಾಂಕ್ ಪರಿವರ್ತನ್ ECSS ಸ್ಕಾಲರ್ಷಿಪ್ ಯೋಜನೆ 2024-25’ ಅರ್ಜಿ ನಮೂನೆಯ ಹೊಸ ಪುಟ ತೆರೆಯುವುದು.
  • ಅರ್ಜಿ ಪ್ರಕ್ರಿಯೆ ಪ್ರಾರಂಭಿಸಲು ‘ಅರ್ಜಿ ಪ್ರಾರಂಭಿಸಿ’ ಬಟನ್ ಮೇಲೆ ಕ್ಲಿಕ್ ಮಾಡಿ.
  • ಅರ್ಜಿ ನಮೂನೆಯಲ್ಲಿ ಅಗತ್ಯ ಮಾಹಿತಿಯನ್ನು ತುಂಬಿ ಸಂಬಂದಿತ ದಾಖಲೆಗಳನ್ನು ಅಪ್ಲೋಡ್ ಮಾಡಿ.
  • ನಂತರ ‘ನಿಯಮಗಳು ಮತ್ತು ಶರತ್ತುಗಳನ್ನು’ ಒಪ್ಪಿಸಿ ಮತ್ತು ‘ಪ್ರೀವ್ಯೂ’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ನೀವು ನಮೂದಿಸಿರುವ ಎಲ್ಲ ವಿವರಗಳು ಸರಿಯಾಗಿದೆಯೇ ಎಂದು ಚೆಕ್ ಮಾಡಿ ನಂತರ ಅಪ್ಲೈ ಬಟನ್ ಮೇಲೆ ಕ್ಲಿಕ್ ಮಾಡಿ.
ಲೇಖನವನ್ನು ಶೇರ್ ಮಾಡಿ

Leave a Reply

Your email address will not be published. Required fields are marked *