IIIT ಅಲಹಾಬಾದ್ ಫ್ಯಾಕಲ್ಟಿ ನೇಮಕಾತಿ 2024: ಭೋದನಾ ಹುದ್ದೆಗಳ ಅರ್ಜಿ ಸಲ್ಲಿಕೆ ಆರಂಭ

IIIT ಅಲಹಾಬಾದ್ ಫ್ಯಾಕಲ್ಟಿ ನೇಮಕಾತಿ 2024: ಭೋದನಾ ಹುದ್ದೆಗಳ ಅರ್ಜಿ ಸಲ್ಲಿಕೆ ಆರಂಭ

ಸ್ನೇಹಿತರೇ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ (IIIT) ಅಲಹಾಬಾದ್ ಶೈಕ್ಷಣಿಕ ವ್ರತ್ತಿಪರರ ವಿವಿಧ ಭೋದನಾ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕ್ರತಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಪ್ರಮುಖವಾಗಿ ಸಹಾಯಕ ಪ್ರಾದ್ಯಾಪಕ, ಸಹ ಪ್ರಾಧ್ಯಾಪಕ, ಮತ್ತು ಪ್ರಾಧ್ಯಾಪಕರ ಒಟ್ಟು 147 ಭೋಧನ ಹುದ್ದೆಗಳನ್ನು ಭರ್ತಿ ಮಾಡಲು ಆದೇಶ ನೀಡಿದೆ. ಅಗತ್ಯ ಅರ್ಹತೆ ಮತ್ತು ಅನುಭವವನ್ನು ಹೊಂದಿರುವ ಅಭ್ಯರ್ಥಿಗಳು ಆಗಸ್ಟ್ 22, 2024 ರಿಂದ ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ.

ಪ್ರೊಫೆಸರ್ ಹುದ್ದೆಗಳಿಗೆ ಸೆಪ್ಟೆಂಬರ್ 17, 2024, ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳಿಗೆ ಸೇಪೆತೆಂಬರ್ 18, 2024 ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಸೆಪ್ಟೆಂಬರ್ 19, 2024 ರ ಒಳಗೆ ಅರ್ಜಿಗಳನ್ನು ಸಲ್ಲಿಸತಕ್ಕದ್ದು. IIIT ಅಲಹಾಬಾದ್ ನೇಮಕಾತಿಯು ಅರ್ಹ ಅಭ್ಯರ್ಥಿಗಳಿಗೆ ಪ್ರಖ್ಯಾತ ಶಿಕ್ಷಣ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿ ಕೊಡಲಿದ್ದು ಭೋಧನಾ ಕ್ಷೇತ್ರದಲ್ಲಿ ಅಭಿರುಚಿಯನ್ನು ಹೊಂದಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶ.

IIIT ಅಲಹಾಬಾದ್ ಫ್ಯಾಕಲ್ಟಿ ನೇಮಕಾತಿ 2024ಕ್ಕೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಸಂಬಂಧಿಸಿದ ಕ್ಷೇತ್ರದಲ್ಲಿ ಪಿಎಚ್.ಡಿ. ಪದವಿ ಮತ್ತು ಅಧಿಕೃತ ಅಧಿಸೂಚನೆಯಲ್ಲಿ ವಿವರಿಸಿರುವ ಅನುಭವವನ್ನು ಹೊಂದಿರಬೇಕು. ಆಯ್ಕೆ ಪ್ರಕ್ರಿಯೆ ಪ್ರೇಸೆಂಟೇಶನ್ ಮತ್ತು ಸಂದರ್ಶನಗಳಂತಹ ಹಂತಗಳನ್ನು ಒಳಗೊಂಡಿರುತ್ತದೆ.

IIIT ಅಲಹಾಬಾದ್ ಫ್ಯಾಕಲ್ಟಿ ನೇಮಕಾತಿ 2024

ಸಂಸ್ಥೆಯ ಹೆಸರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ (IIIT) ಅಲಹಾಬಾದ್
ಹುದ್ದೆಯ ಹೆಸರು ಸಹಾಯಕ ಪ್ರಾದ್ಯಾಪಕ, ಸಹ ಪ್ರಾಧ್ಯಾಪಕ, ಮತ್ತು ಪ್ರಾಧ್ಯಾಪಕ
ಒಟ್ಟು ಹುದ್ದೆಗಳು 147
ವೇತನ ಸಹಾಯಕ ಪ್ರಾಧ್ಯಾಪಕ: ವೇತನ ಶ್ರೇಣಿ 10, 11, 12
ಸಹ ಪ್ರಾಧ್ಯಾಪಕ: ವೇತನ ಶ್ರೇಣಿ 13A2
ಪ್ರಾಧ್ಯಾಪಕ : ವೇತನ ಶ್ರೇಣಿ 14A
ಅಧಿಕ್ರತ ಪೋರ್ಟಲ್apply.iiita.ac.in
ಕೆಲಸದ ಸ್ವಭಾವ ಶಾಶ್ವತ

IIIT ಅಲಹಾಬಾದ್ ಫ್ಯಾಕಲ್ಟಿ ನೇಮಕಾತಿ 2024 ಪ್ರಮುಖ ದಿನಾಂಕಗಳು

IIIT ಅಲಹಾಬಾದ್ ಫ್ಯಾಕಲ್ಟಿ ನೇಮಕಾತಿ 2024 ಪ್ರಕ್ರಿಯೆಯ ಪ್ರಮುಖ ದಿನಾಂಕಗಳು ಹೀಗಿವೆ:

  • ಅರ್ಜಿ ಪ್ರಾರಂಭ ದಿನಾಂಕ: ಆಗಸ್ಟ್ 22, 2024.
  • ಪ್ರೊಫೆಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 17, 2024.
  • ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 18, 2024.
  • ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 19, 2024.
  • ಹಾರ್ಡ್ ಕಾಪಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 24, 2024.

IIIT ಅಲಹಾಬಾದ್ ಫ್ಯಾಕಲ್ಟಿ ನೇಮಕಾತಿ 2024 ಹುದ್ದೆಗಳ ವಿವರ

IIIT ಅಲಹಾಬಾದ್ ಫ್ಯಾಕಲ್ಟಿ ನೇಮಕಾತಿ 2024 ರಲ್ಲಿ ವಿವಿಧ ಭೋದನಾ ಹುದ್ದೆಗಳ ಒಟ್ಟು 147 ಸ್ಥಾನಗಳು ಖಾಲಿ ಇದ್ದು, ಈ ಸ್ಥಾನಗಳು ಹೀಗಿವೆ. ಸಹಾಯಕ ಪ್ರಾಧ್ಯಾಪಕ, ಅಸೋಸಿಯೇಟ್ ಪ್ರೊಫೆಸರ್, ಮತ್ತು ಪ್ರಾಧ್ಯಾಪಕರಾಗಿ ಹಂಚಲ್ಪಟ್ಟಿವೆ. ಈ ಹುದ್ದೆಗಳ ವೇತನ ಶ್ರೇಣಿ ಮತ್ತು ಒಟ್ಟು ಸಂಖ್ಯೆ ಹೀಗಿದೆ.

  • ಸಹಾಯಕ ಪ್ರಾಧ್ಯಾಪಕ: 47 ಹುದ್ದೆಗಳು, ವೇತನ ಶ್ರೇಣಿ 10, 11, 12.
  • ಅಸೋಸಿಯೇಟ್ ಪ್ರಾಧ್ಯಾಪಕ: 44 ಹುದ್ದೆಗಳು, ವೇತನ ಶ್ರೇಣಿ 13A2.
  • ಪ್ರಾಧ್ಯಾಪಕ: 56 ಹುದ್ದೆಗಳು, ವೇತನ ಶ್ರೇಣಿ 14A.

IIIT ಅಲಹಾಬಾದ್ ಫ್ಯಾಕಲ್ಟಿ ನೇಮಕಾತಿ 2024 ಹುದ್ದೆಗಳ ವಯೋಮಿತಿ

ಅಭ್ಯರ್ಥಿಗಳು IIIT ಅಲಹಾಬಾದ್ ಫ್ಯಾಕಲ್ಟಿ ನೇಮಕಾತಿ 2024 ರ ಅರ್ಜಿ ಸಲ್ಲಿಸುವ ಮೊದಲು ಸದರಿ ಹುದ್ದೆಗಳ ವಯೋಮಿತಿಯನ್ನು ಗಮನಿಸಬೇಕು.

  • ಸಹಾಯಕ ಪ್ರಾಧ್ಯಾಪಕ: ಕನಿಷ್ಠ ವಯೋಮಿತಿ 18 ವರ್ಷ; ಗರಿಷ್ಠ ವಯೋಮಿತಿ ನಿಗದಿಪಡಿಸಿಲ್ಲ.
  • ಅಸೋಸಿಯೇಟ್ ಪ್ರಾಧ್ಯಾಪಕ ಮತ್ತು ಪ್ರಾಧ್ಯಾಪಕ: ಕನಿಷ್ಠ ವಯೋಮಿತಿ 18 ವರ್ಷ; ಗರಿಷ್ಠ ವಯೋಮಿತಿ ನಿಗದಿಪಡಿಸಿಲ್ಲ.
  • IIIT ಅಲಹಾಬಾದ್ ಫ್ಯಾಕಲ್ಟಿ ನೇಮಕಾತಿ 2024 ರ ಯಾವುದೇ ಹುದ್ದೆಗೆ ಗರಿಷ್ಠ ವಯೋಮಿತಿ ನಿಗದಿಪಡಿಸಿಲ್ಲ, ಹೀಗಾಗಿ ಯಾವುದೇ ವರ್ಗಕ್ಕೆ ವಯೋ ಸಡಳಿಕೆ ಅನ್ವಯಿಸುವುದಿಲ್ಲ.

IIIT ಅಲಹಾಬಾದ್ ಫ್ಯಾಕಲ್ಟಿ ನೇಮಕಾತಿ 2024 ಅರ್ಜಿ ಶುಲ್ಕ ಮತ್ತು ವಿನಾಯಿತಿ

IIIT ಅಲಹಾಬಾದ್ ಫ್ಯಾಕಲ್ಟಿ ನೇಮಕಾತಿ 2024 ರ ಅರ್ಜಿ ಶುಲ್ಕವನ್ನು, ಅರ್ಜಿದಾರರ ವರ್ಗಕ್ಕೆ ಸಂಬಂದಿಸಿದ ಆಧಾರದ ಮೇಲೆಪಾವತಿಸಬೇಕು.

  • ಸಾಮಾನ್ಯ / OBC / EWS: ₹1,180 (18% GST ಸೇರಿ).
  • SC / ST / PH: ಯಾವುದೇ ಶುಲ್ಕವಿಲ್ಲ.
  • ಆಸಕ್ತ ಅರ್ಜಿ ಶುಲ್ಕವನ್ನು ಕೇವಲ ಆನ್‌ಲೈನ್ ಮೂಲಕ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬೇಕಾಗುತ್ತದೆ. ಇತರೆ ಯಾವುದೇ ರೀತಿಯ ಪಾವತಿ ವಿಧಾನಕ್ಕೆ ಅನುಮತಿ ಇರುವುದಿಲ್ಲ

IIIT ಅಲಹಾಬಾದ್ ಫ್ಯಾಕಲ್ಟಿ ನೇಮಕಾತಿ 2024 ಶೈಕ್ಷಣಿಕ ಅರ್ಹತೆ

IIIT ಅಲಹಾಬಾದ್ ಫ್ಯಾಕಲ್ಟಿ ನೇಮಕಾತಿ 2024 ರ ಸದರಿ ಹುದ್ದೆಗಳಿಗೆ ಅರ್ಜಿದಾರರು ಹೊಂದಿರಬೇಕಾದ ಕನಿಷ್ಠ ವಿದ್ಯಾರ್ಹತೆಗಳನ್ನು ವಿಈ ಕೆಳಗಡೆ ನೀಡಲಾಗಿದೆ.

  • ಸಹಾಯಕ ಪ್ರಾಧ್ಯಾಪಕ: ಸಂಬಂಧಿಸಿದ ವಿಷಯದಲ್ಲಿ ಪಿಎಚ್.ಡಿ. ಮತ್ತು ಅನುಭವ.
  • ಅಸೋಸಿಯೇಟ್ ಪ್ರಾಧ್ಯಾಪಕ: ಸಂಬಂಧಿಸಿದ ವಿಷಯದಲ್ಲಿ ಪಿಎಚ್.ಡಿ. ಮತ್ತು ಹೆಚ್ಚಿನ ಅನುಭವ.
  • ಪ್ರಾಧ್ಯಾಪಕ: ಸಂಬಂಧಿಸಿದ ವಿಷಯದಲ್ಲಿ ಪಿಎಚ್.ಡಿ. ಮತ್ತು ಅನುಭವ.

IIIT ಅಲಹಾಬಾದ್ ಫ್ಯಾಕಲ್ಟಿ ನೇಮಕಾತಿ 2024 ಆಯ್ಕೆ ಪ್ರಕ್ರಿಯೆ

IIIT ಅಲಹಾಬಾದ್ ಫ್ಯಾಕಲ್ಟಿ ನೇಮಕಾತಿ 2024 ರ ಆಯ್ಕೆ ಪ್ರಕ್ರಿಯೆಯು ಹಲವು ಹಂತಗಳನ್ನು ಒಳಗೊಂಡಿದ್ದು ಅಭ್ಯರ್ಥಿಗಳಿಗೆ ಪ್ರೇಸೆಂಟೇಶನ್ ಮತ್ತು ಇಂಟರ್ವಿವ್ ತೆಗೆದುಕೊಳ್ಳುವುದರ ಮೂಲಕ ಮೌಲ್ಯಮಾಪನ ಮಾಡಲಾಗುತ್ತದೆ. ಸದರಿ ಹುದ್ದೆಗಳ ಅಗತ್ಯಕ್ಕೆ ಅನುಗುಣವಾಗಿಯೇ ಆಯ್ಕೆ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡುವ ಸಾಧ್ಯತೆಗಳಿರುತ್ತವೆ.

IIIT ಅಲಹಾಬಾದ್ ಫ್ಯಾಕಲ್ಟಿ ನೇಮಕಾತಿ 2024 ಕ್ಕೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಪ್ರೇಸೆಂಟೇಶನ್ ಮತ್ತು ಇಂಟರ್ವಿವ್ ಗಳ ದಿನಾಂಕ ಮತ್ತು ಸಮಯವನ್ನು ಅಧಿಕ್ರತ ವೆಬ್ಸೈಟ್ ಅಥವಾ ಇಮೇಲ್ ಮೂಲಕ ತಿಳಿಸಲಾಗುವುದು. ಹೀಗಾಗಿ ಅಭ್ಯರ್ಥಿಗಳು ನೇಮಕಾತಿಗೆ ಸಂಬದಿತ ನೂತನ ಅಪ್ಡೇಟ್ ಗಳಿಗಾಗಿ ದಿನನಿತ್ಯ ಅಧಿಕ್ರತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.

IIIT ಅಲಹಾಬಾದ್ ಫ್ಯಾಕಲ್ಟಿ ನೇಮಕಾತಿ 2024 ಅರ್ಜಿ ಸಲ್ಲಿಕೆ ಪ್ರಕ್ರಿಯೆ

IIIT ಅಲಹಾಬಾದ್ ಫ್ಯಾಕಲ್ಟಿ ನೇಮಕಾತಿ 2024 ರ ಅರ್ಜಿ ಸಲ್ಲಿಸುವ ವಿಧಾನ ಈ ಕೆಳಗಿನಂತಿದೆ.

  • ಆಸಕ್ತ ಅಭ್ಯರ್ಥಿಗಳು ತಾವು ಬಯಸುವ ಈ ಮೇಲೆ ತಿಳಿಸಿದ ಸದರಿ ಹುದ್ದೆಗಳಿಗೆ (ಸಹಾಯಕ ಪ್ರಾಧ್ಯಾಪಕ, ಅಸೋಸಿಯೇಟ್ ಪ್ರಾಧ್ಯಾಪಕ, ಪ್ರಾಧ್ಯಾಪಕ) ಅಧಿಕ್ರತ ಪೋರ್ಟಳ್ ಗೆ ಭೇಟಿ ನೀಡುವುದರ ಮೂಲಕ ಆನ್‌ಲೈನ್ ನಲ್ಲಿ ಅರ್ಜಿ ಭಾರ್ಟ್ ಮಾಡಬೇಕು.
  • ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ನಂತರ ಅದರ ಮುದ್ರಿತ ಪ್ರತಿ (ಹಾರ್ಡ್ ಕಾಪಿ) ಅನ್ನು ಅಗತ್ಯ ದಾಖಲೆಗಳೊಂದಿಗೆ (ಶೈಕ್ಷಣಿಕ ಪ್ರಮಾಣಪತ್ರಗಳು, ಅನುಭವದ ಪ್ರಮಾಣಪತ್ರಗಳು,ಇತರೆ) ಈ ಕೆಳಗಿನ ವಿಳಾಸಕ್ಕೆ ನಿಗದಿತ ದಿನಾಂಕದೊಳಗಾಗಿ ಕಳುಹಿಸತಕ್ಕದ್ದು.
  • ಅಂಚೆ ವಿಳಾಸ: ಜಂಟಿ ರಿಜಿಸ್ಟ್ರಾರ್ (ಸ್ಥಾಪನೆ), IIIT ಅಲಹಾಬಾದ್, ದೇವಘಾಟ್, ಜಲ್ವಾ, ಪ್ರಯಾಗರಾಜ-211015 (ಯು.ಪಿ.), ಇಂಡಿಯಾ.
  • ಅರ್ಜಿದಾರರ ಹಾರ್ಡ್ ಕಾಪಿ ಈ ಮೇಲೆ ತಿಳಿಸಿದ ವಿಳಾಸಕ್ಕೆ ಸೆಪ್ಟೆಂಬರ್ 24, 2024 ರೊಳಗೆ ತಲುಪಬೇಕು.

ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಯನ್ನು ಮಾಡುವ ಮೊದಲು ಅಧಿಕ್ರತ ಅಧಿಸೂಚನೆಯನ್ನು ಪೂರ್ತಿಯಾಗಿ ಓದಿ ಮತ್ತು ಅದರಲ್ಲಿ ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸುವುದು ಬಹಳ ಮುಖ್ಯ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಳಿಗಾಗಿ ಮತ್ತು ನೂತನ ಅಪ್ಡೇಟ್ ಗಳಿಗಾಗಿ, ದಯವಿಟ್ಟು IIIT ಅಲಹಾಬಾದ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

ಪ್ರಮುಖ ಲಿಂಕುಗಳು

ಅರ್ಜಿ ಸಲ್ಲಿಕೆಇಲ್ಲಿ ಒತ್ತಿ
ಪ್ರಾಧ್ಯಾಪಕ ಹುದ್ದೆ ನೋಟಿಫಿಕೇಶನ್ಇಲ್ಲಿ ಒತ್ತಿ
ಸಹಾಯಕ ಪ್ರಾಧ್ಯಾಪಕ ಹುದ್ದೆ ನೋಟಿಫಿಕೇಶನ್ಇಲ್ಲಿ ಒತ್ತಿ
ಅಸೋಸಿಯೇಟ್ ಪ್ರಾಧ್ಯಾಪಕ ಹುದ್ದೆ ನೋಟಿಫಿಕೇಶನ್ಇಲ್ಲಿ ಒತ್ತಿ
ಲೇಖನವನ್ನು ಶೇರ್ ಮಾಡಿ

Leave a Reply

Your email address will not be published. Required fields are marked *