IIT Tirupati Recruitment 2024: ಗ್ರೂಪ್ A ಮತ್ತು ಗ್ರೂಪ್ B ಹುದ್ದೆಗಳು ಭರ್ತಿಗೆ ಆದೇಶ

IIT Tirupati Recruitment 2024: ಗ್ರೂಪ್ A ಮತ್ತು ಗ್ರೂಪ್ B ಹುದ್ದೆಗಳು ಭರ್ತಿಗೆ ಆದೇಶ

ಸ್ನೇಹಿತರೇ, ಐ‌ಐ‌ಐ‌ಟಿ ತಿರುಪತಿ (IIT Tirupati) 2024 ನೇ ಸಾಲಿನ ಹೊಸ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯು ನೇರ ನೇಮಕಾತಿ ಆಧಾರಿತವಾಗಿದ್ದು, ಗ್ರೂಪ್ A ಮತ್ತು ಗ್ರೂಪ್ B ಹುದ್ದೆಗಳು ಸೇರಿದಂತೆ ರಿಜಿಸ್ಟ್ರಾರ್, ಡೆಪ್ಯುಟಿ ರಿಜಿಸ್ಟ್ರಾರ್ ಮತ್ತು ಜೂನಿಯರ್ ಟೆಕ್ನಿಶಿಯನ್ ಗಳ ಒಟ್ಟು 04 ಹುದ್ದೆಗಳ ಭರ್ತಿಗೆ ಆದೇಶ ನೀಡಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ದಿನಾಂಕ 11 ಸೆಪ್ಟೆಂಬರ್ 2024 ರಂದು ಆರಂಭಗೊಂಡಿದ್ದು, ಅಭ್ಯರ್ಥಿಗಳಿಗೆ ಅಕ್ಟೋಬರ್ 10, 2024 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಅಭ್ಯರ್ಥಿಗಳು ಐ‌ಐ‌ಟಿ ತಿರುಪತಿ ನೇಮಕಾತಿ 2024 (IIT Tirupati Recruitment 2024) ರ ಅರ್ಜಿ ಸಲ್ಲಿಸಲು ನಿಯಮಿತವಾದ ವಿದ್ಯಾರ್ಹತೆ, ಅನುಭವ ಮತ್ತು ವಯೋಮಿತಿ ಅರ್ಹತಾ ಮಾನದಂಡಗಳನ್ನು ಪೂರೈಸುವುದು ಕಡ್ಡಾಯವಾಗಿರುತ್ತದೆ. ಇದರ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಲೇಖನವನ್ನು ಪೂರ್ತಿಯಾಗಿ ಓದಿರಿ

ಪ್ರಮುಖ ದಿನಾಂಕಗಳು

IIT ತಿರುಪತಿ ನೇಮಕಾತಿ 2024 ರ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ದಿನಾಂಕ 11 ಸೆಪ್ಟೆಂಬರ್ 2024 ರಂದು ಆರಂಭಗೊಂಡಿದ್ದು, ಅಭ್ಯರ್ಥಿಗಳಿಗೆ ಅಕ್ಟೋಬರ್ 10, 2024 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಹುದ್ದೆಗಳ ವಿವರ

IIT ತಿರುಪತಿ ನೇಮಕಾತಿ 2024 ರಲ್ಲಿ ವಿವಿಧ ಹುದ್ದೆಗಳು ಪ್ರಕಟಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ ಒಟ್ಟು 04 ಹುದ್ದೆಗಳು ಖಾಲಿ ಇದ್ದು, ಪ್ರತಿ ಹುದ್ದೆಗೆ ವಿನಿಯೋಜನೆಯಾದ ಖಾಲಿ ಹುದ್ದೆಗಳ ವಿವರ ಹೀಗಿದೆ.

  • ನಿಬಂಧಕ (Registrar) ಹುದ್ದೆ: ಆಡಳಿತ ವಿಭಾಗದ ಅಡಿಯಲ್ಲಿ ಗುಂಪು A ನಲ್ಲಿ 1 ಹುದ್ದೆ.
  • ಉಪನಿಬಂಧಕ (Deputy Registrar) ಹುದ್ದೆ: ಆಡಳಿತ ವಿಭಾಗದ ಅಡಿಯಲ್ಲಿ ಗುಂಪು A ನಲ್ಲಿ 1 ಹುದ್ದೆ.
  • ಜೂನಿಯರ್ ಟೆಕ್ನಿಷಿಯನ್ – ರಸಾಯನಶಾಸ್ತ್ರ (Junior Technician – Chemistry) ಹುದ್ದೆ: ರಸಾಯನಶಾಸ್ತ್ರ ವಿಭಾಗದ ಅಡಿಯಲ್ಲಿ ಗುಂಪು B ನಲ್ಲಿ 2 ಹುದ್ದೆಗಳು

ವಿದ್ಯಾರ್ಹತೆ

IIT ತಿರುಪತಿ ನೇಮಕಾತಿ 2024 ರಲ್ಲಿ ವಿವಿಧ ಹುದ್ದೆಗಳಿಗೆ ಅನ್ವಯಿಸಬಹುದಾದ ವಿದ್ಯಾರ್ಹತೆ ವಿವರಗಳನ್ನು ಕೆಳಗಿನಂತೆ ನೀಡಲಾಗಿದೆ.

ನಿಭಂದಕ (Registrar):

    • ಕನಿಷ್ಠ 55% ಅಂಕಗಳು ಅಥವಾ 10 ಪಾಯಿಂಟ್ ಪ್ರಮಾಣದ 5.5 CGPA ಇರುವ ಮಾಸ್ಟರ್ ಪದವಿ ಅಗತ್ಯ.
    • ಅಭ್ಯರ್ಥಿಗೆ ಕನಿಷ್ಠ 15 ವರ್ಷಗಳ ಅನುಭವ ಇರಬೇಕು. ಅವುಗಳಲ್ಲಿ 5 ವರ್ಷ ಶೈಕ್ಷಣಿಕ ಆಡಳಿತ ವಿಷಯದಲ್ಲಿ ಅನುಭವವಿರಬೇಕು.

    ಉಪನಿಬಂಧಕ (Deputy Registrar):

    • ಕನಿಷ್ಠ 55% ಅಂಕಗಳು ಅಥವಾ 10 ಪಾಯಿಂಟ್ ಪ್ರಮಾಣದ 5.5 CGPA ಇರುವ ಮಾಸ್ಟರ್ ಪದವಿ ಅಗತ್ಯ.
    • ಅಭ್ಯರ್ಥಿಗೆ 10 ವರ್ಷಗಳ ಶೈಕ್ಷಣಿಕ ಅಥವಾ ಆಡಳಿತ ಅನುಭವ ಇದ್ದಿರಬೇಕು.

    ಜೂನಿಯರ್ ಟೆಕ್ನಿಷಿಯನ್ – ರಸಾಯನಶಾಸ್ತ್ರ (Junior Technician – Chemistry):

    • M.Sc. ಅಥವಾ B.Sc. ರಸಾಯನಶಾಸ್ತ್ರದಲ್ಲಿ ಕನಿಷ್ಠ 55% ಅಂಕಗಳು ಅಥವಾ 5.5 CGPA ಜೊತೆಗೆ, B.Sc. ಅರ್ಹರಿಗೆ 2 ವರ್ಷಗಳ ಸಂಬಂಧಿತ ಕ್ಷೇತ್ರದಲ್ಲಿ ಅನುಭವ ಅಗತ್ಯ

    ವಯೋಮಿತಿ

    IIT ತಿರುಪತಿ ನೇಮಕಾತಿ 2024 ರಲ್ಲಿ ವಿವಿಧ ಹುದ್ದೆಗಳ ವಯೋಮಿತಿ ಈ ಕೆಳಗಿನಂತಿದೆ.

    • ನಿಬಂಧಕ (Registrar): ಗರಿಷ್ಠ ವಯೋಮಿತಿ 57 ವರ್ಷ.
    • ಉಪನಿಬಂಧಕ (Deputy Registrar): ಗರಿಷ್ಠ ವಯೋಮಿತಿ 50 ವರ್ಷ.
    • ಜೂನಿಯರ್ ಟೆಕ್ನಿಷಿಯನ್ – ರಸಾಯನಶಾಸ್ತ್ರ (Junior Technician – Chemistry): ಗರಿಷ್ಠ ವಯೋಮಿತಿ 32 ವರ್ಷ.

    ವೇತನ

    IIT ತಿರುಪತಿ ನೇಮಕಾತಿ 2024 ರಲ್ಲಿ ಸದರಿ ಹುದ್ದೆಗಳಿಗೆ ಸಂಬಂದಿತ ವೇತನ ಶ್ರೇಣಿ ಈ ಕೆಳಗಿನಂತಿದೆ.

    • ನಿಬಂಧಕ (Registrar): ಮಾಸಿಕ ವೇತನ ₹1,44,200 ರಿಂದ ₹2,18,200.
    • ಉಪನಿಬಂಧಕ (Deputy Registrar): ಮಾಸಿಕ ವೇತನ ₹78,800 ರಿಂದ ₹2,09,200.
    • ಜೂನಿಯರ್ ಟೆಕ್ನಿಷಿಯನ್ – ರಸಾಯನಶಾಸ್ತ್ರ (Junior Technician – Chemistry): ಮಾಸಿಕ ವೇತನ ₹25,500 ರಿಂದ ₹81,100.

    ಅರ್ಜಿ ಶುಲ್ಕ ಮತ್ತು ವಿನಾಯಿತಿ

    IIT ತಿರುಪತಿ ನೇಮಕಾತಿ 2024 ಅರ್ಜಿ ಶುಲ್ಕ ಹಾಗೂ ವಿನಾಯಿತಿ ವಿವರ ಈ ಕೆಳಗಿನಂತಿದೆ.

    • ಗುಂಪು A ಹುದ್ದೆಗಳಿಗೆ: ₹500
    • ಗುಂಪು B ಹುದ್ದೆಗಳಿಗೆ: ₹200

    ವಿನಾಯಿತಿ: SC/ST, ಮಾಜಿ ಸೈನಿಕರು, ಮಹಿಳೆಯರು, ತೃತೀಯಲಿಂಗಿ ಮತ್ತು ಅಂಗವಿಕಲ (PwD) ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ಇದೆ, ಎಂದರೆ ಅವರು ಯಾವುದೇ ಶುಲ್ಕವನ್ನು ನೀಡಬೇಕಾಗಿಲ್ಲ.

    ಅರ್ಜಿ ಶುಲ್ಕ ಪಾವತಿ: ಅಭರ್ತಿಗಳು ಆನ್ಲೈನ್ ಮುಖಾಂತರ ಅರ್ಜಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ.

    ಆಯ್ಕೆ ಪ್ರಕ್ರಿಯೆ

    ಗುಂಪು A ಹುದ್ದೆಗಳಿಗೆ (Registrar, Deputy Registrar):

    • ಸ್ಕ್ರೀನಿಂಗ್ ಪರೀಕ್ಷೆ ಅಥವಾ ಸಂದರ್ಶನ ಅಥವಾ ಎರಡೂ, ಅವುಗಳ ಆಧಾರ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಅರ್ಹ ಅಭ್ಯರ್ಥಿಗಳನ್ನು ಪರೀಕ್ಷೆಯ ಆಧಾರದ ಮೇಲೆ ತಪಾಸಣೆ ಮಾಡಿ ಸಂದರ್ಶನಕ್ಕೆ ಕರೆಯಲಾಗುತ್ತದೆ.
    • ಅಭ್ಯರ್ಥಿಗಳು ಈ ಎಲ್ಲಾ ಹಂತಗಳಲ್ಲಿ ಯಶಸ್ವಿಯಾದ ಬಳಿಕ ಅಂತಿಮ ಆಯ್ಕೆಯನ್ನು ಮಾಡಲಾಗುತ್ತದೆ.

    ಗುಂಪು B ಹುದ್ದೆಗಳಿಗೆ (Junior Technician – Chemistry):

    • ಆಬ್ಜೆಕ್ಟಿವ್ ಆಧಾರಿತ ಪರೀಕ್ಷೆ: ಈ ಪರೀಕ್ಷೆಯು ಪ್ರಶ್ನೋತ್ತರ ಮಾದರಿಯಲ್ಲಿರುತ್ತದೆ.
    • ವೃತ್ತಿಪರ ಲಿಖಿತ ಪರೀಕ್ಷೆ (ವಿವರಣಾತ್ಮಕ): ಈ ಪರೀಕ್ಷೆಯಲ್ಲಿ ಲಿಖಿತವಾಗಿ ವಿವರಣೆಗಳನ್ನು ನೀಡುವ ಪ್ರಶ್ನೆಗಳನ್ನು ಉತ್ತರಿಸಲು ಸೂಚಿಸಲಾಗುತ್ತದ್ದೆ.
    • ಕೌಶಲ್ಯ ಪರೀಕ್ಷೆ / ವೃತ್ತಿ ಪರೀಕ್ಷೆ (Trade Test): ಈ ಪರೀಕ್ಷೆಯಲ್ಲಿ ತಾಂತ್ರಿಕ ಮತ್ತು ಕೌಶಲ್ಯಮಟ್ಟದ ಪರಿಶೀಲನೆ ನಡೆಯುತ್ತದೆ.
    • ಅಭ್ಯರ್ಥಿಗಳು ಈ ಎಲ್ಲಾ ಹಂತಗಳಲ್ಲಿ ಯಶಸ್ವಿಯಾದ ಬಳಿಕ ಅಂತಿಮ ಆಯ್ಕೆಯನ್ನು ಮಾಡಲಾಗುತ್ತದೆ.

    ಅರ್ಜಿ ಸಲ್ಲಿಕೆ

    IIT ತಿರುಪತಿ ನೇಮಕಾತಿ 2024ಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಕೆಳಗಿನ ಹಂತಗಳನ್ನು ಅನುಸರಿಸಬಹುದು:

    • IIT ತಿರುಪತಿ ಅಧಿಕ್ರತ ವೆಬ್ಸೈಟ್ ಗೆ ಭೇಟಿ ನೀಡಿ.
    • ನೀವು ಹೊಸ ಬಳಕೆದಾರಗಿದ್ದಾರೆ ನೊಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
    • ನಿಮಗೆ ದೊರಕುವ ಅರ್ಜಿ ಫಾರ್ಮ್ ಅಲ್ಲಿ ಅಗತ್ಯ ಮಾಹಿತಿಯನ್ನು ನಮೂದಿಸಿ.
    • ಫೋಟೋ, ಸಹಿ, ಮತ್ತು ಇತರ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
    • ನಿಮ್ಮ ವರ್ಗಕ್ಕೆ ಸೂಚಿಸಿದ ಅರ್ಜಿ ಶುಲ್ಕವನ್ನು ಪಾವತಿಸಿ
    • ಕೊನೆಯಲ್ಲಿ ನಮೂದಿಸಿದ ಎಲ್ಲ ವಿವರಗಳನ್ನು ನಮೂದಿಸಿದ ನಂತರ ಅರ್ಜಿಯನ್ನು ಸಲ್ಲಿಸಿ.

    ಪ್ರಮುಖ ಲಿಂಕುಗಳು

    ಲೇಖನವನ್ನು ಶೇರ್ ಮಾಡಿ

    Leave a Reply

    Your email address will not be published. Required fields are marked *