HSRP: ಸರ್ಕಾದಿಂದ ಎಚ್‌ಎಸ್‌ಆರ್‌ಪಿ ಅಳವಡಿಕೆ ಕುರಿತು ಮಹತ್ವದ ನಿರ್ಧಾರ
ಸ್ನೇಹಿತರೇ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಕುರಿತಾಗಿ ರಾಜ್ಯ ಸರ್ಕಾರ ವಾಹನ ಮಾಲಿಕರಿಗೆ ಮಹತ್ವದ ಮಾಹಿತಿ ನೀಡಿದ್ದು, ನಿಯಮ ಪಾಲಿಸದೆ ಇದ್ದರೆ ವಾಹನ ಮಾಲಿಕರಿಗೆ ಭಾರಿ ದಂಡ ಬೀಳಲಿದೆ. ಈ ಕುರಿತು ವಿವಿರವಾಗಿ ತಿಳಿದುಕೊಳ್ಳೋಣ ಬನ್ನಿ.
ಎಚ್‌ಎಸ್‌ಆರ್‌ಪಿ (HSRP)
ಎಚ್‌ಎಸ್‌ಆರ್‌ಪಿ (ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್) ಸರ್ಕಾರದಿಂದ ನೀಡಲಾಗುವ ಲೈಸೆನ್ಸ್ ಪ್ಲೇಟ್ ಗಳು ಎಂದು ಹೇಳಬಹುದು. ಈ ಎಚ್‌ಎಸ್‌ಆರ್‌ಪಿ ಪ್ಲೇಟ್ ಗಳನ್ನು ರಸ್ತೆ ಸಾರಿಗೆ ವ್ಯವಸ್ಥೆಯಲ್ಲಿ ಭದ್ರತೆ ಮತ್ತು ಸುರಕ್ಷೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ. ಈ ಆಧುನಿಕ ಮಾದರಿಯ ಎಚ್‌ಎಸ್‌ಆರ್‌ಪಿ ಪ್ಲೇಟ್ ಗಳು ವಾಹನ ನೊಂದನಿಯನ್ನು ಬಹಳ ಸುಲಭವಾಗಿ ಪರಿಶೀಲಿಸಲು ಸಹಾಯ ಮಾಡುತ್ತವೆ. ಇದರಿಂದ ವಾಹನಗಳು ಕಳುವಾದರೆ ಅಥವಾ ಇನ್ನಿತರ ಯಾವುದೇ ಅಹಿತಕರ ಘಟನೆ ಸಂಭವಿಸಿದರೆ ಪೊಲೀಸ್ ಅಧಿಕಾರಿ ಈ ಎಚ್‌ಎಸ್‌ಆರ್‌ಪಿ ಪ್ಲೇಟ್ ಗಳ ಸಹಾಯದಿಂದ ತ್ವರಿತವಾಗಿ ಪತ್ತೆ ಹಚ್ಚುತ್ತಾರೆ.
ಸರ್ಕಾರದ ಆದೇಶ ಏನು?
ರಾಜ್ಯ ಸರ್ಕಾರ ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಈ ಹಿಂದೆ ನವೆಂಬರ್ 17, 2023 ರಿಂದ ಇಲ್ಲಿಯವರೆಗೆ ಮೂರು ಬಾರಿ ಗಡುವನ್ನು ನೀಡಿದ್ದು, ಸಾರಿಗೆ ಇಲಾಖೆ ವಾಹನ ಸವಾರರಿಗೆ ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಗಡುವನ್ನು ವಿಸ್ತರಿಸಿ ಮತ್ತೊಮ್ಮೆ ರಿಲೀಫ್ ನೀಡಿದೆ.
ಇಲಾಖೆ ಕೊನೆಯದಾಗಿ ಮೇ 17, 2024 ರ ಒಳಗೆ ವಾಹನ ಸವಾರರು ಕಡ್ಡಾಯವಾಗಿ ಎಚ್‌ಎಸ್‌ಆರ್‌ಪಿ ಅಳವಡಿಕೆ ಮಾಡಬೇಕು ಎಂದು ಆದೇಶ ನೀಡಿತ್ತು. ಆದರೆ ಸಾರಿಗೆ ಇಲಾಖೆ ಹಳೆಯ ವಾಹನಗಳಿಗೆ ಅಂದರೆ 2019, ಏಪ್ರಿಲ್ 01 ರ ಮುಂಚೆ ನೊಂದನಿಯಾದ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಕೆ ಮಾಡಲು ಸೆಪ್ಟೆಂಬರ್ 15, 2024 ರವರೆಗೆ ಕಾಲಾವಕಾಶ ನೀಡಲಾಗಿದೆ.
ವಾಹನ ಸವಾರರು ಎಚ್‌ಎಸ್‌ಆರ್‌ಪಿ ಪ್ಲೇಟ್ ಇಲ್ಲದೆ ರಸ್ತೆ ಮೇಲೆ ವಾಹನ ಇಳಿಸಿದರೆ ಭಾರಿ ದಂಡ ಭರಿಸಬೇಕಾಗುವುದು ಎಂದು ಸಾರಿಗೆ ಇಲಾಖೆ ಸೂಚಿಸಿದೆ. ಸೆಪ್ಟೆಂಬರ್ 15, 2024 ರ ಒಳಗಾಗಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡದೆ ಇದ್ದರೆ ರೂ 500 ರಿಂದ ರೂ 1000 ವರಗೆ ದಂಡ ಹಾಕಲಾಗುವುದು.
ವಾಹನ ಸವಾರರು ತಮ್ಮ ವಾಹನದ ಎಚ್‌ಎಸ್‌ಆರ್‌ಪಿ ಯನ್ನು ಆನ್ಲೈನ್ ಮೂಲಕ ಮಾಡಬಹುದು. ಈ ಕೆಳಗೆ ಸೂಚಿಸಿದ ಕ್ರಮಗಳನ್ನು ಅನುಸರಿಸಿದರೆ ಆನ್ಲೈನ್ ನಲ್ಲೇ ಎಚ್‌ಎಸ್‌ಆರ್‌ಪಿ ಯನ್ನು ಅಳವಡಿಕೆ ಮಾಡಬಹುದು.
ಆನ್ಲೈನ್ ಮೂಲಕ ಎಚ್‌ಎಸ್‌ಆರ್‌ಪಿ ಅಳವಡಿಕೆ ಹೇಗೆ?
- ರಾಜ್ಯ ಸರ್ಕಾರದ ಪ್ರಾಧಿಕ್ರತ ಎಚ್‌ಎಸ್‌ಆರ್‌ಪಿ (HSRP) ಪ್ಲೇಟ್ ಜಾರಿ ವೆಬ್ಸೈಟ್ ಅಥವಾ bookmyhsrp.com ಗೆ ಭೇಟಿ ನೀಡಬೇಕು.
- ನಂತರ ಅಲ್ಲಿ ನಿಮ್ಮ ವಾಹನದ ನೊಂದಣಿ ಸಂಖ್ಯೆ ಚಾಸಿನ್ ಸಂಖ್ಯೆ ಮತ್ತು ಇಂಜಿನ್ ಸಂಖ್ಯೆಯನ್ನು ಸರಿಯಾಗೀ ನಮೂದಿಸಿ.
- ಹಾಗೂ ನಿಮ್ಮ ಹೆಸರು, ಸಂಪರ್ಕ ವಿಳಾಸ, ಮೊಬೈಲ್ ಸಂಖ್ಯೆಯ ವಿವರಗಳನ್ನು ನಮೂದಿಸಿ.
- ನಂತರ ನಿಮ್ಮ ವಾಹನದ ಪ್ರಕಾರಕ್ಕೆ ಅನುಗುಣವಾಗಿ ಸರಿಯಾದ ಎಚ್‌ಎಸ್‌ಆರ್‌ಪಿ (ಫ್ರಂಟ್ ಮತ್ತು ರಿಯರ್ ಪ್ಲೇಟ್) ಯನ್ನು ಆಯ್ಕೆ ಮಾಡಿ.
- ನೀವು ಆಯ್ಕೆ ಮಾಡಿದ ಫಿಟ್ಮೆಂಟ್ ಸೆಂಟರ್ ನಲ್ಲಿ ವಾಹನದ ಪ್ಲೇಟ್ ಅಳವಡಿಕೆಗಾಗಿ ಸೂಕ್ತ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಿ.
- ಪ್ಲೇಟ್ ಅಳವಡಿಕೆಯ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕಾಗುತ್ತದೆ.
- ನೀವು ಆಯ್ಕೆ ಮಾಡಿದ ದಿನಾಂಕದಂದು ಫಿಟ್ಮೆಂಟ್ ಸೆಂಟರ್ ಗೆ ಭೇಟಿ ನೀಡಿ ಎಚ್‌ಎಸ್‌ಆರ್‌ಪಿ ಅಳವಾಡಿಕೊಳ್ಳಿ.