Income Tax Recruitment 2024: ಗ್ರೂಪ್ ಸಿ 25 ಕ್ಯಾಂಟೀನ್ ಅಟೆಂಡೆಂಟ್ ಹುದ್ದೆಗೆ ಅರ್ಜಿ ಆಹ್ವಾನ
ಸ್ನೇಹಿತರೇ ಇನ್ಕಮ್ ಟಾಕ್ಸ್ ಇಲಾಖೆಯುಲ್ಲಿ (Income Tax Department) ಖಾಲಿ ಇರುವ ಗ್ರೂಪ್ ಸಿ 25 ಕ್ಯಾಂಟೀನ್ ಅಟೆಂಡೆಂಟ್ (Canteen Attendant position under Group “C” Cadre) ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿ (New recruitment) ಆದೇಶ ನೀಡಲಾಗಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಇನ್ಕಮ್ ಟಾಕ್ಸ್ ನೇಮಕಾತಿ 2024 ಕ್ಕೆ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳನ್ನು ಚೆನ್ನೈ ಮತ್ತು ಪುದುಚೇರಿ ಇಲಾಖಾ ಕಛೇರಿಗಳಲ್ಲಿ ನೇಮಕ ಮಾಡಲಾಗುವುದು. ಈ ನೇಮಕಾತಿಯು ಆದಾಯ ತೆರಿಗೆ ಇಲಾಖೆಯಲ್ಲಿ (Income Tax Department jobs) ಕೆಲಸ ನಿರ್ವಹಿಸಲು ಆಸಕ್ತರಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ.
ಆದಾಯ ತೆರಿಗೆ ಇಲಾಖೆಯ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 08, 2024 ರಿಂದ ಸೆಪ್ಟೆಂಬರ್ 09, 2024 ರವರೆಗೆ ಕಾಲಾವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್‌ನಿಂದ ಮ್ಯಾಟ್ರಿಕ್ಯುಲೇಶನ್ (SSLC jobs) ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು ಮತ್ತು ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಆಗಿರಬೇಕು ಹಾಗೂ ಗರೀಷ್ಟ ವಯೋಮಿತಿಯು 25 ವರ್ಷವನ್ನು ದಾಟಿರಬಾರದು
ಪ್ರಮುಖ ದಿನಾಂಕಗಳು
Income Tax Recruitment 2024 ಕುರಿತಂತೆ, ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು ಹೀಗಿವೆ. ಇಲಾಖೆಯ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 08, 2024 ರಿಂದ ಸೆಪ್ಟೆಂಬರ್ 09, 2024 ರವರೆಗೆ ಕಾಲಾವಕಾಶ ನೀಡಲಾಗಿದೆ. ಇಲಾಖೆಯು ಲಿಖಿತ ಪರೀಕ್ಷೆಯಲ್ಲಿ ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳ ಪಟ್ಟಿಯ ಪ್ರಕಟನೆಯನ್ನು ಅಕ್ಟೋಬರ್ 01, 2024 ರಂದು ಮಾಡಲಿದೆ.
ಹುದ್ದೆಗಳ ವಿವರ
Income Tax Recruitment 2024 ರ ಅಧಿಸೂಚನೆಯ ಪ್ರಕಾರ ಇಲಾಖೆಯಲ್ಲಿ ಕ್ಯಾಂಟೀನ್ ಅಟೆಂಡೆಂಟ್ ಹುದ್ದೆಯ 25 ಸ್ಥಾನಗಳು ಖಾಲಿ ಇವೆ. ಈ ಹುದ್ದೆಗಳನ್ನು ತಮಿಳುನಾಡು ಮತ್ತು ಪುದುಚೇರಿ ಪ್ರದೇಶದ ಇನ್ಕಮ್ ಟಾಕ್ಸ್ ಇಲಾಖೆಯ ಇಲಾಖಾ ಕ್ಯಾಂಟೀನ್ ಗಳಲಿ ನೇಮಕ ಮಾಡಲಾಗುತ್ತದೆ.
ವಿದ್ಯಾರ್ಹತೆ
Income Tax Recruitment 2024 ಕ್ಯಾಂಟೀನ್ ಅಟೆಂಡೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್‌ನಿಂದ ಮ್ಯಾಟ್ರಿಕ್ಯುಲೇಶನ್ (SSLC) ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ವಯೋಮಿತಿ
Income Tax Recruitment 2024 ರಲ್ಲಿ ಕ್ಯಾಂಟೀನ್ ಅಟೆಂಡೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಆಗಿರಬೇಕು ಮತ್ತು ಗರೀಷ್ಟ ವಯೋಮಿತಿಯು 25 ವರ್ಷವನ್ನು ದಾಟಿರಬಾರದು. ಹಾಗೂ ಇನ್‌ಕಮ್ ಟ್ಯಾಕ್ಸ್ ನೇಮಕಾತಿ 2024 ಅಡಿಯಲ್ಲಿ ವಿವಿಧ ವರ್ಗಗಳಿಗೆ ವಯೋಸಡಲಿಕೆ ಈ ಕೆಳಗಿನಂತಿದೆ:
- ಎಸ್ಸಿ/ಎಸ್ಟಿ ಅಭ್ಯರ್ಥಿಗಳು: 5 ವರ್ಷಗಳ ಸಡಿಲಿಕೆ
- ಒಬಿಸಿ (ನಾನ್-ಕ್ರೀಮಿ ಲೇಯರ್): 3 ವರ್ಷಗಳ ಸಡಿಲಿಕೆ
- ಶಾರೀರಿಕ ಅಪಂಗತೆ ಹೊಂದಿರುವವರು (PwD): 10 ವರ್ಷಗಳ ಸಡಿಲಿಕೆ (ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ಹೆಚ್ಚುವರಿ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ)
- ಮಾಜಿ ಸೈನಿಕರು: ಸರ್ಕಾರದ ನಿಯಮಾನುಸಾರ
ವೇತನ
Income Tax Recruitment 2024 ರಲ್ಲಿ ಆಯ್ಕೆಯಾದ ಕ್ಯಾಂಟೀನ್ ಅಟೆಂಡೆಂಟ್ ಹುದ್ದೆಯ ಅಭ್ಯರ್ಥಿಗಳಿಗೆ ಮಾಸಿಕ ವೇತನ ರೂ. 18,000 ನಿಂದ ರೂ. 56,900 ವರೆಗೆ ನಿಗದಿಯಾಗಿದೆ.
ಅರ್ಜಿ ಶುಲ್ಕ
Income Tax Recruitment 2024 ಅರ್ಜಿದಾರರು ಅರ್ಜಿ ಸಲ್ಲಿಸಲು ಕೆಳಗಿನ ಶುಲ್ಕವನ್ನು ಪಾವತಿಸಬೇಕಾಗಿದೆ:
- ಸಾಮಾನ್ಯ/ಒಬಿಸಿ/EWS ಅಭ್ಯರ್ಥಿಗಳು: ₹500
- ಎಸ್ಸಿ/ಎಸ್ಟಿ/ಶಾರೀರಿಕ ಅಪಂಗತೆ ಹೊಂದಿರುವವರು (PwD)/ಮಹಿಳೆಯರು: ಅರ್ಜಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ
- ಮಾಜಿ ಸೈನಿಕರು: ಅರ್ಜಿ ಶುಲ್ಕದಲ್ಲಿ ವಿನಾಯಿತಿ
ಆಯ್ಕೆ ಪ್ರಕ್ರಿಯೆ
Income Tax Recruitment 2024 ರ ಆಯ್ಕೆ ಪ್ರಕ್ರಿಯೆ ಸಂಪೂರ್ಣವಾಗಿ ಲಿಖಿತ ಪರೀಕ್ಷೆ ಆಧಾರಿತವಾಗಿರುತ್ತದೆ. ಈ ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ಸಾಮಾನ್ಯ ಜ್ಞಾನ, ನ್ಯೂಮರಿಕಲ್ ಆಪ್ಟಿಟ್ಯೂಡ್, ಸಾಮಾನ್ಯ ಇಂಗ್ಲಿಷ್ ಮತ್ತು ಇತರೆ ಸಂಬಂಧಿತ ವಿಷಯಗಳಲ್ಲಿನ ಪ್ರಶ್ನೆಗಳನ್ನು ಕೇಳಲಾಗುವುದು.
ಅರ್ಜಿ ಸಲ್ಲಿಕೆ
- ಅಧಿಕ್ರತ ಇನ್ಕಮ್ ಟಾಕ್ಸ್ ವೆಬ್ಸೈಟ್ ಗೆ ಹೋಗಿ ‘recruitment‘ ವಿಬಾಗದ ಮೇಲೆ ಕ್ಲಿಕ್ ಮಾಡಿ.
- ನಂತರ ನೇಮಕಾತಿಗೆ ಸಂಬಂದಿತ ಲಿಂಕ್ ಮೇಲೆ ಒತ್ತಿರಿ.
- ಅರ್ಜಿ ಸಲ್ಲಿಕೆ ಲಿಂಕನ್ನು ತೆರೆದು ಆನ್ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ (ವೈಯಕ್ತಿಕ ವಿವರಗಳು, ವಿದ್ಯಾರ್ಹತೆ, ಇನ್ನಿತರ ಸೂಚಿತ ಮಾಹಿತಿ).
- ಎಲ್ಲ ಅಗತ್ಯವಾದ ದಾಖಲಾತಿಗಳನ್ನು (ಮೌಲಿಕ ದಾಖಲೆಗಳು, ಫೋಟೋ, ಸಹಿ) ಅಪ್ಲೋಡ್ ಮಾಡಿ.
- ನಿಮ್ಮ ವರ್ಗಕ್ಕೆ ಸಂಬಂದಿತ ಅರ್ಜಿಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ.
- ಕೊನೆಯಲ್ಲಿ ಅರ್ಜಿ ನಮೂನೆಯನ್ನು ಇನ್ನೊಮ್ಮೆ ಪರಿಶೀಲಿಸಿ ಅರ್ಜಿಯನ್ನು ಸಲ್ಲಿಸಿ
ಅರ್ಜಿ ಸಲ್ಲಿಕೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗಾಗಿ, ಅಭ್ಯರ್ಥಿಗಳು ಅಧಿಕೃತ ಸಹಾಯವಾಣಿ ಅಥವಾ ಇಮೇಲ್ ಮೂಲಕ ಸಂಪರ್ಕಿಸಬಹುದು.
ಪ್ರಮುಖ ಲಿಂಕುಗಳು
- ಅರ್ಜಿ ಸಲ್ಲಿಕೆ: ಇಲ್ಲಿ ಒತ್ತಿ
- ನೋಟಿಫಿಕೇಶನ್: ಇಲ್ಲಿ ಒತ್ತಿ