ಇಂಡಿಯನ್ ಓವರ್ಸೀಸ್ ಬ್ಯಾಂಕ್ ನೇಮಕಾತಿ 2024: ಪದವಿ ಮುಗಿಸಿರುವ ಅಭ್ಯರ್ಥಿಗಳಿಗೆ 550 ಹುದ್ದೆಗಳ ಭರ್ತಿ
ಸ್ನೇಹಿತರೇ ಇಂಡಿಯನ್ ಓವರ್ಸೀಸ್ ಬ್ಯಾಂಕ್ 550 ಅಪ್ರೆಂಟೀಸ್ (Apprentice)ಹುದ್ದೆಗಳ ಭರ್ತಿಗೆ ಅಧಿಕ್ರತ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಲು ಬಯಸುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ. ಈ ಇಂಡಿಯನ್ ಓವರ್ಸೀಸ್ ಬ್ಯಾಂಕ್ ಅಪ್ರೆಂಟೀಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 1, 2020 ರಿಂದ ಆಗಸ್ಟ್ 1, 2024 ರವರೆಗೆ ತಮ ಪದವಿಯನ್ನು ಪೂರ್ಣಗೊಳಿಸಿರಬೇಕಾಗುತ್ತದೆ. IOB ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆಗಸ್ಟ್ 28, 2024 ರಂದು ಆರಂಭಗೊಳ್ಳಲಿದ್ದು, ಸೆಪ್ಟೆಂಬರ್ 10, 2024 ರ ವರೆಗೆ ಆಸಕ್ತರಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.
ಇಂಡಿಯನ್ ಓವರ್ಸೀಸ್ ಬ್ಯಾಂಕ್ ನೇಮಕಾತಿ 2024 (Indian Overseas Bank Recruitment 2024) ರಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಭಾರತದ ವಿವಿಧ ರಾಜ್ಯಗಳಲ್ಲಿ ಒಂದು ವರ್ಷದ ಅಪ್ರೆಂಟಿಸ್ಶಿಪ್ ಕಾರ್ಯಕ್ರಮದ ಭಾಗವಾಗಿ ನಿಯೋಜಿಸಲಾಗುವು ಮತ್ತು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗೆ ಆಯ್ಕೆ ಪ್ರಕ್ರಿಯೆಯಲ್ಲಿ ಆನ್ಲೈನ್ ಪರೀಕ್ಷೆ, ಸ್ಥಳೀಯ ಭಾಷಾ ಪ್ರಾವೀಣ್ಯತೆಯ ಪರೀಕ್ಷೆ ಮತ್ತು ವೈಯಕ್ತಿಕ ಸಂವಹನವನ್ನು ಒಳಗೊಂಡಿರುತ್ತದೆ.
ಇಂಡಿಯನ್ ಓವರ್ಸೀಸ್ ಬ್ಯಾಂಕ್ ನೇಮಕಾತಿ 2024
ಸಂಸ್ಥೆಯ ಹೆಸರು | ಇಂಡಿಯನ್ ಓವರ್ಸೀಸ್ ಬ್ಯಾಂಕ್ |
ಹುದ್ದೆಯ ಹೆಸರು | ಅಪ್ರೆಂಟಿಸ್ಶಿಪ್ |
ಒಟ್ಟು ಹುದ್ದೆಗಳು | 550 |
ವೇತನ | ₹10,000 – ₹15,000 ಮಾಸಿಕ |
ಅಧಿಕ್ರತ ಪೋರ್ಟಲ್ | bfsissc.com |
ಕೆಲಸದ ಸ್ವಭಾವ | ಅಪ್ರೆಂಟಿಸ್ಶಿಪ್ |
ಇಂಡಿಯನ್ ಓವರ್ಸೀಸ್ ಬ್ಯಾಂಕ್ ನೇಮಕಾತಿ 2024 ಪ್ರಮುಖ ದಿನಾಂಕಗಳು
ಇಂಡಿಯನ್ ಓವರ್ಸೀಸ್ ಬ್ಯಾಂಕ್ ನೇಮಕಾತಿ 2024 ರ ಆಯ್ಕೆ ಪ್ರಕ್ರಿಯೆಯ ಪ್ರಮುಖ ದಿನಾಂಕಗಳು ಹೀಗಿವೆ:
- ಆನ್ಲೈನ್ ಅರ್ಜಿ ಪ್ರಾರಂಭ ದಿನಾಂಕ: ಆಗಸ್ಟ್ 28, 2024
- ಆನ್ಲೈನ್ ಅರ್ಜಿಯ ಕೊನೆಯ ದಿನಾಂಕ: ಸೆಪ್ಟೆಂಬರ್ 10, 2024
- ಅರ್ಜಿ ಶುಲ್ಕ ಪಾವತಿ: ಆಗಸ್ಟ್ 28, 2024 ರಿಂದ ಸೆಪ್ಟೆಂಬರ್ 15, 2024 ರವರೆಗೆ
- ಆನ್ಲೈನ್ ಪರೀಕ್ಷೆಯ ತಾತ್ಕಾಲಿಕ ದಿನಾಂಕ: ಸೆಪ್ಟೆಂಬರ್ 22, 2024
ಇಂಡಿಯನ್ ಓವರ್ಸೀಸ್ ಬ್ಯಾಂಕ್ ನೇಮಕಾತಿ 2024 ವಯೋಮಿತಿ
ಇಂಡಿಯನ್ ಓವರ್ಸೀಸ್ ಬ್ಯಾಂಕ್ ನೇಮಕಾತಿ 2024 ಅಭ್ಯರ್ಥಿಗಳ ವಯೋಮಿತಿ ಹೀಗಿದೆ. ಆಗಸ್ಟ್ 1, 2024 ರಂತೆ, ಅರ್ಜಿದಾರರು ಕನಿಷ್ಠ 20 ವರ್ಷ ಮತ್ತು ಗರಿಷ್ಠ 28 ವರ್ಷಗಳ ನಡುವಿರಬೇಕು. ಸರ್ಕಾರದ ಮಾರ್ಗಸೂಚಿಯಂತೆ ವಿಶೇಷ ವರ್ಗದ ಅಭ್ಯರ್ಥಿಗಳಿಗೆ ವಯೋ ಸಡಲಿಕೆ ಲಭ್ಯವಿದೆ.
- SC/ST ಅಭ್ಯರ್ಥಿಗಳಿಗೆ: 5 ವರ್ಷ
- OBC ಅಭ್ಯರ್ಥಿಗಳಿಗೆ: 3 ವರ್ಷ
- PwBD (ಜನರಲ್/EWS) ಅಭ್ಯರ್ಥಿಗಳಿಗೆ: 10 ವರ್ಷ
- PwBD (SC/ST) ಅಭ್ಯರ್ಥಿಗಳಿಗೆ: 15 ವರ್ಷ
- PwBD (OBC) ಅಭ್ಯರ್ಥಿಗಳಿಗೆ: 13 ವರ್ಷ
ಇಂಡಿಯನ್ ಓವರ್ಸೀಸ್ ಬ್ಯಾಂಕ್ ನೇಮಕಾತಿ 2024 ವೇತನ
ಇಂಡಿಯನ್ ಓವರ್ಸೀಸ್ ಬ್ಯಾಂಕ್ ನೇಮಕಾತಿ 2024 ವೇತನವು ಅಭ್ಯರ್ಥಿಗಳು ನಿಯೋಜನೆಗೊಂಡ ಸ್ಥಳದ ಆಧಾರದ ಮೇಲೆ ತಿಂಗಳಿಗೆ ಸ್ಟೈಫಂಡ್ ರೂಪದಲ್ಲಿ ನೀಡಲಾಗುವುದು.
- ಮೆಟ್ರೋ ಪ್ರದೇಶಗಳು: ₹15,000
- ನಗರ ಪ್ರದೇಶಗಳು: ₹12,000
- ಸೆಮೀ-ನಗರ/ಗ್ರಾಮೀಣ ಪ್ರದೇಶಗಳು: ₹10,000
ಇಂಡಿಯನ್ ಓವರ್ಸೀಸ್ ಬ್ಯಾಂಕ್ ನೇಮಕಾತಿ 2024 ಅರ್ಜಿ ಶುಲ್ಕ
ಇಂಡಿಯನ್ ಓವರ್ಸೀಸ್ ಬ್ಯಾಂಕ್ ನೇಮಕಾತಿ 2024 ಅರ್ಜಿ ಶುಲ್ಕಗಳು ವಿವಿಧ ವರ್ಗದ ಅಭ್ಯರ್ಥಿಗಳಿಗೆ ಈ ಕೆಳಗಿನಂತಿವೆ.
- ಸಾಮಾನ್ಯ/OBC/EWS ಅಭ್ಯರ್ಥಿಗಳಿಗೆ: ₹944 (GST ಸೇರಿ)
- ಮಹಿಳೆ/SC/ST ಅಭ್ಯರ್ಥಿಗಳಿಗೆ: ₹708 (GST ಸೇರಿ)
- PwBD ಅಭ್ಯರ್ಥಿಗಳಿಗೆ: ₹472 (GST ಸೇರಿ)
- ಈ ಮೇಲೆ ತಿಳಿಸಿದ ಎಲ್ಲಾ ಅರ್ಜಿ ಶುಲ್ಕಗಳನ್ನು ಅಭ್ಯರ್ಥಿಗಳು ಆನ್ಲೈನ್ ಮೂಲಕ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬೇಕಾಗುತ್ತದೆ.
ಇಂಡಿಯನ್ ಓವರ್ಸೀಸ್ ಬ್ಯಾಂಕ್ ನೇಮಕಾತಿ 2024 ಶೈಕ್ಷಣಿಕ ಅರ್ಹತೆಗಳು
ಇಂಡಿಯನ್ ಓವರ್ಸೀಸ್ ಬ್ಯಾಂಕ್ ನೇಮಕಾತಿ 2024 ಕ್ಕೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಒಂದು ವಿಭಾಗದಿಂದ ಪದವಿಯನ್ನು ಪೂರ್ಣಗೊಳಿಸಿಯಬೇಕು. ಈ ಡಿಗ್ರಿಯನ್ನು ಅಭ್ಯರ್ಥಿಗಳು ಏಪ್ರಿಲ್ 1, 2020 ಮತ್ತು ಆಗಸ್ಟ್ 1, 2024 ರ ನಡುವೆ ಮುಗಿಸಿರಬೇಕು.
ಇಂಡಿಯನ್ ಓವರ್ಸೀಸ್ ಬ್ಯಾಂಕ್ ನೇಮಕಾತಿ 2024 ಆಯ್ಕೆ ಪ್ರಕ್ರಿಯೆ
ಇಂಡಿಯನ್ ಓವರ್ಸೀಸ್ ಬ್ಯಾಂಕ್ ನೇಮಕಾತಿ 2024 ಆಯ್ಕೆ ಪ್ರಕ್ರಿಯೆ ಈ ಮೂರು ಹಂತಗಳಲ್ಲಿ ನಡೆಸಲಾಗುವುದು.
- ಆನ್ಲೈನ್ ಪರೀಕ್ಷೆ: ಆಬ್ಜೆಕ್ಟಿವ್ ಟೈಪ್(ಸಾಮಾನ್ಯ ಜ್ಞಾನವನ್ನು ಅಂದಾಜಿಸಲು)
- ಸ್ಥಳೀಯ ಭಾಷೆ ಪರೀಕ್ಷೆ: ಪ್ರಾವೀಣ್ಯತೆಯ ಮೌಲ್ಯಮಾಪನ ಮಾಡಲು
- ವೈಯಕ್ತಿಕ ಪರಸ್ಪರ ಮೌಲ್ಯಮಾಪನ
ಇಂಡಿಯನ್ ಓವರ್ಸೀಸ್ ಬ್ಯಾಂಕ್ ನೇಮಕಾತಿ 2024 ಅರ್ಜಿ ಸಲ್ಲಿಕೆ
ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಇಂಡಿಯನ್ ಓವರ್ಸೀಸ್ ಬ್ಯಾಂಕ್ ನೇಮಕಾತಿ 2024 ರ ಅರ್ಜಿ ಸಲ್ಲಿಸಬಹುದು:
- ಮೊದಲು ಅಭ್ಯರ್ಥಿಗಳು ಇಂಡಿಯನ್ ಓವರ್ಸೀಸ್ ಬ್ಯಾಂಕ್ ಅಧಿಕ್ರತ ಪೋರ್ಟಲ್ ಗೆ ಭೇಟಿ ನೀಡಬೇಕು
- ಮುಖಪುಟದಲ್ಲಿ ಬಿಂಬಿಸುವ “Careers” ವಿಭಾಗಕ್ಕೆ ಹೋಗಿ ಮತ್ತು “Engagement of Apprentices” ಸೆಕ್ಷನ್ನಲ್ಲಿ ಕಾಣುವ “Apply Online” ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಂತರ ವೈಯಕ್ತಿಕ ಮತ್ತು ಶೈಕ್ಷಣಿಕ ಮಾಹಿತಿಯ ವಿವರವನ್ನು ತಪ್ಪದೆ ನಮೂದಿಸಿ.
- ಅಗತ್ಯ ದಾಖಲೆಗಳಾದ ಪದವಿ ಪ್ರಮಾಣಪತ್ರ, ಭಾವಚಿತ್ರ , ಸಹಿಯನ್ನು ಅಪ್ಲೋಡ್ ಮಾಡಿ
- ನಿಮ್ಮ ವರ್ಗಕ್ಕೆ ಸಂಬಂದಿತ ಅರ್ಜಿಶುಲ್ಕವನ್ನು ಪಾವತಿಸಿ, ಅರ್ಜಿ ಸಲ್ಲಿಕೆಯನ್ನು ಪೂರ್ಣಗೊಳಿಸಿ.
ಇಂಡಿಯನ್ ಓವರ್ಸೀಸ್ ಬ್ಯಾಂಕ್ ನೇಮಕಾತಿ 2024 ರಾಜ್ಯಾವಾರು ಹುದ್ದೆಗಳ ವಿಂಗಡಣೆ
- ಅಂಡಮಾನ್ ಮತ್ತು ನಿಕೋಬಾರ್: 1
- ಆಂಧ್ರ ಪ್ರದೇಶ: 22
- ಅರುಣಾಚಲ ಪ್ರದೇಶ: 1
- ಅಸ್ಸಾಂ: 2
- ಬಿಹಾರ: 11
- ಚಂಡೀಗಢ: 2
- ಛತ್ತೀಸ್ಗಢ: 7
- ದಮನ್ ಮತ್ತು ದಿಯು: 1
- ದಿಲ್ಲಿ: 36
- ಗುಜರಾತ್: 22
- ಗೋವಾ: 9
- ಹಿಮಾಚಲ ಪ್ರದೇಶ: 3
- ಹರಿಯಾಣ: 11
- ಜಮ್ಮು ಮತ್ತು ಕಾಶ್ಮೀರ: 1
- ಜಾರ್ಖಂಡ್: 7
- ಕರ್ನಾಟಕ: 50
- ಕೇರಳ: 25
- ಮಣಿಪುರ: 1
- ಮೇಘಾಲಯ: 1
- ಮಹಾರಾಷ್ಟ್ರ: 29
- ಮಿಜೋರಾಮ್: 1
- ಮಧ್ಯಪ್ರದೇಶ: 12
- ನಾಗಲ್ಯಾಂಡ್: 1
- ಒಡಿಷಾ: 19
- ಪಂಜಾಬ್: 16
- ಪಾಂಡಿಚೇರಿ: 14
- ರಾಜಸ್ಥಾನ್: 13
- ಸಿಕ್ಕಿಂ: 1
- ತೆಲಂಗಾಣ: 29
- ತಮಿಳುನಾಡು: 130
- ಟ್ರಿಪುರಾ: 2
- ಉತ್ತರಾಖಂಡ: 7
- ಉತ್ತರ ಪ್ರದೇಶ: 41
- ಪಶ್ಚಿಮ ಬಂಗಾಳ: 22
ಇಂಡಿಯನ್ ಓವರ್ಸೀಸ್ ಬ್ಯಾಂಕ್ ನೇಮಕಾತಿ 2024 ಪ್ರಮುಖ ಲಿಂಕುಗಳು
ಅರ್ಜಿ ಸಲ್ಲಿಕೆ | ಇಲ್ಲಿ ಒತ್ತಿ |
ನೋಟಿಫಿಕೇಶನ್ | ಇಲ್ಲಿ ಒತ್ತಿ |