ಕ್ರಷಿಭಾಗ್ಯ ಯೋಜನೆಗೆ ಅರ್ಜಿ ಆಹ್ವಾನ: ಈ ದಾಖಲೆಗಳು ಇರಬೇಕು ನೋಡಿ
ಸ್ನೇಹಿತರೇ ಕ್ರಷಿಭಾಗ್ಯ ಯೋಜನೆಯು ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ರೂಪಿತಗೊಂಡ ಯೋಜನೆಯಾಗಿದ್ದು, ಮಳೆ ನೀರಿನ ಸಂರಕ್ಷಣೆಯ ಮೂಲಕ ಶಾಶ್ವತ ಕ್ರಷಿ ಚಟುವಟಿಕೆಗಳನ್ನು ಉತ್ತೇಜಿಸುವು ಇದರ ಮೂಲ ಗುರುಯಾಗಿದೆ. ಈ ಯೋಜನೆಯ ಮೂಲಕ 25 ಜಿಲ್ಲೆಯ 131 ತಾಲೂಕುಗಳ ಮಳೆ ಸುರಿಯುವ ಪ್ರದೇಶಗಳಲ್ಲಿ 1 ಲಕ್ಷಕ್ಕೂ ಹೆಚ್ಚು ರೈತರಿಗೆ ರೂ 968.37 ಕೋಟಿಗಳ ಆರ್ಥಿಕ ನೆರವನ್ನು ಸರ್ಕಾರ ಒದಗಿಸಿದೆ.
ಬದು ನಿರ್ಮಾಣ, ಕ್ರಷಿ ಹೊಂಡ ನಿರ್ಮಾಣ, ಕ್ರಷಿ ಹೊಂಡಕ್ಕೆ ಬೇಲಿ ನಿರ್ಮಾಣ, ಪಂಪ್ ಸೆಟ್ ಅಳವಡಿಕೆ ಹೀಗೆ ಮುಂತಾದ ಕ್ರಶಿ ಚಟುವಟಿಕೆಳಿಗೆ ಆರ್ಥಿಕ ಸಹಾಯಧನ ರಾಜ್ಯ ಸರ್ಕಾರ ನೀಡುತ್ತದೆ. ಮಳೆ ನೀರನ್ನು ಸಂಗ್ರಹಿಸಲು ಹೊಂಡಗಳಂತಹ ಹೊಸ ಮಾದರಿಯ ಕ್ರಷಿ ಚಟುವಟಿಕೆಗೆ ರೈತರ ಸಹಾಯ ಮಾಡಲು ಸರ್ಕಾರ ಮುಂದಾಗಿದೆ.
ಕ್ರಷಿಭಾಗ್ಯ ಯೋಜನೆಯ ಅರ್ಹತೆ ಪಡೆಯಲು ರೈತರು ಕೆಲವು ಅರ್ಹತಾ ಮಾನದಂಡಗಳನ್ನು ಪೂರೈಸಬೇಕಾಗಿದ್ದು, ಕನಿಷ್ಠ ಒಂದು ಎಕರೆ ಭೂಮಿಯನ್ನು ಹೊಂದಿರುವ ರೈತರು ಈ ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ. ಕಳೆದ ಮೂರು ವರ್ಷಗಳಲ್ಲಿ ಪಂಪ್ ಸೆಟ್ ಗಳನ್ನು ಖರೀದಿಸಿ ಸರ್ಕಾರದಿಂದ ಅದರ ಮೇಲೆ ಸಬ್ಸಿಡಿ ಪಡೆದಿರುವ ರೈತರು ಅರ್ಹರಾಗಿರುವುದಿಲ್ಲ, ಆದರೆ ಅಂತಹ ರೈತರು ಹೊಂಡಗಳ ನಿರ್ಮಾಣಕ್ಕೆ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಬಹುದು.
ಕ್ರಷಿಭಾಗ್ಯ ಯೋಜನೆ ಅಡಿಯಲ್ಲಿ ಸಾಮಾನ್ಯ ವರ್ಗದ ರೈತರೀಗೆ 80% ರಷ್ಟು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ರೈತರಿಗೆ ಸುಮಾರು 90% ರಷ್ಟು ಸಹಾಯಧನ ನೀಡಲು ಸರ್ಕಾರ ಮುಂದಾಗಿದೆ.
ಕ್ರಷಿಭಾಗ್ಯ ಯೋಜನೆಗೆ ಅರ್ಜಿ ಸಲ್ಲಿಸಲು ರೈತರು ತಮ್ಮ ಸಮೀಪದ ಕ್ರಷಿ ಕಚೇರಿಗೆ (ರೈತ ಸಂಪರ್ಕ ಕೇಂದ್ರ) ಅಥವಾ ಕರ್ನಾಟಕ ಕ್ರಷಿ ಇಲಾಖೆಯ ಅಧಿಕ್ರತ ಪೋರ್ಟಲ್ ಭೇಟಿ ನೀಡಬೇಕು. ಕ್ರಷಿ ಇಲಾಖೆ ಕಚೇರಿಯಿಂದ ಅರ್ಜಿಯನ್ನು ಪಡೆದು ಭೂಮಿ ಮಾಲೀಕತ್ವದ ಬಗ್ಗೆ ಸರಿಯಾದ ವಿವರಗಳನ್ನು ನೀಡಿ, ಅರ್ಜಿಯನ್ನು ಭರ್ತಿ ಮಾಡಬೇಕು.
ಅಲ್ಲದೆ ಭೂಮಿ ಮಾಲೀಕತ್ವದ ಸಾಕ್ಷ್ಯ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರಗಳು, ಭಾವಚಿತ್ರ, ಪಹಣಿ ಪತ್ರದ ವಿವರಗಳು ಸೇರಿದಂತೆ ಅಗತ್ಯ ದಾಖಲೆಗಳನ್ನು ಲಗತ್ತಿಸಬೇಕು.