ISRO HSFC Recruitment 2024: ಇಸ್ರೋ ಬಾಹ್ಯಾಕಾಶ ಕೇಂದ್ರದಲ್ಲಿ 103 ಹುದ್ದೆಗಳ ನೇಮಕಕ್ಕೆ ಆದೇಶ
ಸ್ನೇಹಿತರೇ ಇಂಡಿಯನ್ ಸ್ಪೇಸ್ ರೀಸರ್ಚ್ ಆರ್ಗನೈಜೇಷನ್ (ISRO) ಅಂಗ ಸಂಸ್ಥೆಯಾಗಿರುವ ಹ್ಯೂಮನ್ ಸ್ಪೇಸ್ ಫ್ಲಯಿಟ್ ಸೆಂಟರ್ (Human Space Flight Centre) ಖಾಲಿ ಇರುವ ವಿವಿಧ 103 ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿ (New recruitment) ಆದೇಶವನ್ನು ನೀಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು HSFC ಅಧಿಕ್ರತ ಅಧಿಸೂಚನೆಯಲ್ಲಿ (HSFC Official notification) ನೀಡಿರುವ ಅರ್ಹತಾ ಮಾನದಂಡಗಳ ಮಾಹಿತಿಯನ್ನು ಪಡೆದುಕೊಂಡು ಅರ್ಜಿ ಸಲ್ಲಿಸಬಹುದು. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಮತ್ತು HSFC ನಲ್ಲಿ ಉದ್ಯೋಗವನ್ನು ಪಡೆಯಲು ಬಯಸುವ ಅಭ್ಯರ್ಥಿಗಳು ಕನಿಷ್ಠ MBBS, ME/M.Tech, Diploma in Engineering, B.Sc, ಯಂತಹ ಕೊರ್ಸುಗಳನ್ನು ಪೂರ್ಣಗೊಳಿಸಿರಬೇಕು. ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯನ್ನು 35 ವರ್ಷಗಳಿಗೆ ನಿಗದೀಪಡಿಸಲಾಗಿದೆ.
ಎಚ್‌ಎಸ್‌ಎಫ್‌ಸಿ ನೇಮಕಾತಿ 2024 (HSFC Recruitment 2024) ರ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಸೆಪ್ಟೆಂಬರ್ 19, 2024 ರಂದು ಆರಂಭಗೊಳ್ಳಲಿದ್ದು ಅಭ್ಯರ್ಥಿಗಳು ದಿನಾಂಕ ಅಕ್ಟೋಬರ್ 9, 2024 ರವರೆಗೆ ಕಾಲಾವಕಾಶ ನೀಡಲಾಗಿದೆ. ಎಚ್‌ಎಸ್‌ಎಫ್‌ಸಿ ನೇಮಕಾತಿಯ ಅರ್ಜಿ ಸಲ್ಲಿಕೆಗೆ ಜನರಲ್ ಮತ್ತು ಓಬಿಸಿ ವರ್ಗದ ಅಭ್ಯರ್ಥಿಗಳಿಗೆ 250 ರೂ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದ್ದು, ಎಸ್‌ಸಿ/ಎಸ್‌ಟಿ/ಪಿಡಬಲ್ಯುಡಿ/ಎಕ್ಸ್ ಸೇರ್ವಿಸ್ ಮ್ಯಾನ್/ಮಹಿಳೆಯರಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಸದರಿ ಹುದ್ದೆಗಳ ಆಯ್ಕೆ ಪ್ರಕ್ರಿಯೆಯು ಸ್ಕ್ರೀನಿಂಗ್, ಲಿಖಿತ ಪರೀಕ್ಷೆ ಮತ್ತು ಸಂದರ್ಶನವನ್ನು ಒಳಗೊಂಡಿರುತ್ತದೆ.
ಪ್ರಮುಖ ದಿನಾಂಕಗಳು
HSFC Recruitment 2024 ರ ಅರ್ಜಿ ಸಲ್ಲಿಕೆ ದಿನಾಂಕ 19 ಸೆಪ್ಟೆಂಬರ್ 2024 ರಂದು ಆರಂಭಗೊಳ್ಳಲಿದ್ದು ದಿನಾಂಕ 9 ಅಕ್ಟೋಬರ್ 2024 ರಂದು ಕೊನೆಗೊಳ್ಳಲಿದೆ ಹಾಗೂ ಅಭ್ಯರ್ಥಿಗಳು ಅಕ್ಟೋಬರ್ 9, 2024 ರೊಳಗಾಗಿ ಅರ್ಜಿ ಶುಲ್ಕ ಪಾವತಿಯನ್ನು ಮಾಡಬೇಕಾಗುತ್ತದೆ.
ಹುದ್ದೆಗಳ ವಿವರ
HSFC Recruitment 2024 ರ ಅಧಿಕ್ರತ ಅಧಿಸೂಚನೆಯಲ್ಲಿ ನೀಡಿರುವ ಪ್ರಕಾರ ಒಟ್ಟು 103 ಹುದ್ದೆಗಳ ಭರ್ತಿಗೆ ಆದೇಶ ನೀಡಲಾಗಿದೆ.
- ಮೆಡಿಕಲ್ ಆಫೀಸರ್ ಎಸ್‌ಡಿ (ಏವಿಯೇಷನ್ ಮೆಡಿಸಿನ್ /ಸ್ಪೋರ್ಟ್ಸ್ ಮೆಡಿಸಿನ್): 02 ಹುದ್ದೆಗಳು
- ಮೆಡಿಕಲ್ ಆಫೀಸರ್ ಎಸ್‌ಸಿ: 01 ಹುದ್ದೆ
- ಸೈಂಟಿಸ್ಟು/ಎಂಜಿನಿಯರ್ ಎಸ್‌ಸಿ: 10 ಹುದ್ದೆಗಳು
- ಟೆಕ್ನಿಕಲ್ ಅಸಿಸ್ಟೆಂಟ್: 28 ಹುದ್ದೆಗಳು
- ಸೈಂಟಿಫಿಕ್ ಅಸಿಸ್ಟೆಂಟ್: 01 ಹುದ್ದೆಗಳು
- ಟೆಕ್ನಿಕಲ್ ಬಿ: 43 ಹುದ್ದೆಗಳು
- Draughtsman: 13 ಹುದ್ದೆಗಳು
- ಅಸಿಸ್ಟೆಂಟ್ (rajbhasha): 05 ಹುದ್ದೆಗಳು
HSFC Recruitment 2024 ಒಟ್ಟು 103 ಹುದ್ದೆಗಳನ್ನು ವಿವಿಧ ವರ್ಗದ ಅಭ್ಯರ್ಥಿಗಳಿಗೆ ಈ ಕೆಳಗಿನಂತೆ ಹಂಚಲಾಗಿದೆ. ಜನರಲ್ 52 ಹುದ್ದೆಗಳು, ಓಬಿಸಿ 27 ಹುದ್ದೆಗಳು, ಎಸ್‌ಸಿ 15 ಹುದ್ದೆಗಳು, ಎಸ್‌ಟಿ 7 ಹುದ್ದೆಗಳು ಮತ್ತು ಈಡಬಲ್ಯುಎಸ್ ವರ್ಗದ ಅಭ್ಯರ್ಥಿಗಳಿಗೆ 02 ಹುದ್ದೆಗಳು.
ವಿದ್ಯಾರ್ಹತೆ
HSFC Recruitment 2024 ರ ಅಧಿಕ್ರತ ಅಧಿಸೂಚನೆಯಲ್ಲಿ ನೀಡಿರುವ ಪ್ರಕಾರ ವಿವಿಧ ಹುದ್ದೆಗಳಿಗೆ ವಿದ್ಯಾರ್ಹತೆ ಮಾನದಂಡವು ಈ ಕೆಳಗಿನಂತಿದೆ.
- ಮೆಡಿಕಲ್ ಆಫೀಸರ್ ಎಸ್‌ಡಿ (ಏವಿಯೇಷನ್ ಮೆಡಿಸಿನ್ /ಸ್ಪೋರ್ಟ್ಸ್ ಮೆಡಿಸಿನ್): ಸಂಬಂದಿತ ವಲಯದಲ್ಲಿ MBBS ನೊಂದಿಗೆ MD ಪೂರ್ಣಗೊಳಿಸಿರಬೇಕು
- ಮೆಡಿಕಲ್ ಆಫೀಸರ್ ಎಸ್‌ಸಿ: MBBS + 2 ವರ್ಷಗಳ ಅನುಭವ
- ಸೈಂಟಿಸ್ಟು/ಎಂಜಿನಿಯರ್ ಎಸ್‌ಸಿ: ಸಂಬಂದಿತ ವಲಯದಲ್ಲಿ ME/M.Tech ಪದವಿಯನ್ನು ಪೂರ್ಣಗೊಳಿಸಿರಬೇಕು.
- ಟೆಕ್ನಿಕಲ್ ಅಸಿಸ್ಟೆಂಟ್: ಸಂಬಂದಿತ ವಲಯದಲ್ಲಿ ಡಿಪ್ಲೋಮಾ ಎಂಜಿನಿಯರಿಂಗ್ ಪೂರ್ಣಗೊಳಿಸಿರಬೇಕು
- ಸೈಂಟಿಫಿಕ್ ಅಸಿಸ್ಟೆಂಟ್: ಸಂಬಂದಿತ ವಲಯದಲ್ಲಿ B.Sc ಪದವಿಯನ್ನು ಪೂರ್ಣಗೊಳಿಸಿರಬೇಕು
- ಟೆಕ್ನಿಕಲ್ ಬಿ: ಸಂಬಂದಿತ ಟ್ರೇಡ್ ನಲ್ಲಿ SSLC/SSC ನೊಂದಿಗೆ ITI/NTC/NAC ಪೂರ್ಣಗೊಳಿಸಿರಬೇಕು
- Draughtsman: Draughtsman ಟ್ರೇಡ್ ನಲ್ಲಿ SSLC/SSC ನೊಂದಿಗೆ ITI/NTC/NAC
- ಅಸಿಸ್ಟೆಂಟ್ (rajbhasha): ಹಿಂದಿ ವಿಷಯದಲ್ಲಿ ಗ್ರಾಜುಯೇಶನ್ ಪೂರ್ಣಗೊಳಿಸಿರಬೇಕು.
ವಯೋಮಿತಿ
HSFC Recruitment 2024 ರ ಅಧಿಕ್ರತ ಅಧಿಸೂಚನೆಯಲ್ಲಿ ನೀಡಿರುವ ಪ್ರಕಾರ ಸದರಿ ಹುದ್ದೆಗಳ ಗರಿಷ್ಠ ವಯೋಮಿತಿಯು 35 ವರ್ಷಗಳಿಗೆ ನಿಗದಿಪಡಿಸಲಾಗಿದೆ. ಹಾಗೂ ಓಬಿಸಿ ವರ್ಗದ ಅಭ್ಯರ್ಥಿಗಳಿಗೆ 03 ವರ್ಷ, ಎಸ್‌ಸಿ/ಎಸ್‌ಟಿ ವರ್ಗದ ಅಭ್ಯರ್ಥಿಗಳಿಗೆ 05 ವರ್ಷ, ಪಿಡಬಲ್ಯುಡಿ ವರ್ಗದ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋ ಸಡಲಿಕೆಯನ್ನು ನೀಡಲಾಗಿದೆ.
ವೇತನ
HSFC Recruitment 2024 ರ ಅಧಿಕ್ರತ ಅಧಿಸೂಚನೆಯ ಪ್ರಕಾರ ಸದರಿ ಹುದ್ದೆಗಳ ವೇತನ ಶ್ರೇಣಿಯು ಈ ಕೆಳಗಿನಂತಿದೆ.
- ಮೆಡಿಕಲ್ ಆಫೀಸರ್ ಎಸ್‌ಡಿ (ಏವಿಯೇಷನ್ ಮೆಡಿಸಿನ್ /ಸ್ಪೋರ್ಟ್ಸ್ ಮೆಡಿಸಿನ್): ಲೆವೆಲ್ 10
- ಮೆಡಿಕಲ್ ಆಫೀಸರ್ ಎಸ್‌ಸಿ: ಲೆವೆಲ್ 10
- ಸೈಂಟಿಸ್ಟು/ಎಂಜಿನಿಯರ್ ಎಸ್‌ಸಿ: ಲೆವೆಲ್ 10
- ಟೆಕ್ನಿಕಲ್ ಅಸಿಸ್ಟೆಂಟ್: ಲೆವೆಲ್ 7
- ಸೈಂಟಿಫಿಕ್ ಅಸಿಸ್ಟೆಂಟ್: ಲೆವೆಲ್ 6
- ಟೆಕ್ನಿಕಲ್ ಬಿ: ಲೆವೆಲ್ ಲೆವೆಲ್ 3
- Draughtsman: ಲೆವೆಲ್ 3
- ಅಸಿಸ್ಟೆಂಟ್ (rajbhasha): ಲೆವೆಲ್ 6
ಅರ್ಜಿ ಶುಲ್ಕ
HSFC Recruitment 2024 ರ ಅಧಿಕ್ರತ ಅಧಿಸೂಚನೆಯ ಪ್ರಕಾರ ಸದರಿ ಹುದ್ದೆಗಳ ಅರ್ಜಿ ಸಲ್ಲಿಸಲು ಜನರಲ್ ಮತ್ತು ಓಬಿಸಿ (General/OBC) ವರ್ಗದ ಅಭ್ಯರ್ಥಿಗಳಿಗೆ,
ಹುದ್ದೆಗಳ ಸಂಖ್ಯೆ 01-14:
- ನಾನ್ ರಿಫಂಡೆಬಲ್ ಅರ್ಜಿ ಶುಲ್ಕ : ₹250/-
- ಪ್ರಾರಂಭಿಕ ಪ್ರಕ್ರಿಯಾ ಶುಲ್ಕ (processing fee): ₹750/-
- ಲಿಖಿತ ಪರೀಕ್ಷೆ ಅಥವಾ ಸಂದರ್ಶನಕ್ಕೆ ಹಾಜರಾಗಿದವರಿಗೆ ಪ್ರಕ್ರಿಯಾ ಶುಲ್ಕ ಹಿಂತಿರುಗಿಸಲಾಗುತ್ತದೆ
ಹುದ್ದೆಗಳ ಸಂಖ್ಯೆ 15-26:
- ಅರ್ಜಿಯ ಶುಲ್ಕ: ₹100/-
- ಪ್ರಾರಂಭಿಕ ಪ್ರಕ್ರಿಯಾ ಶುಲ್ಕ: ₹500/-
- ಲಿಖಿತ ಪರೀಕ್ಷೆಗೆ ಹಾಜರಾಗಿದವರಿಗೆ ಪ್ರಕ್ರಿಯಾ ಶುಲ್ಕ ಹಿಂತಿರುಗಿಸಲಾಗುತ್ತದೆ.
ಆದರೆ ಎಸ್‌ಸಿ/ಎಸ್‌ಟಿ/ಪಿಡಬಲ್ಯುಡಿ/ಎಕ್ಸ್ ಸೇರ್ವಿಸ್ ಮ್ಯಾನ್/ಮಹಿಳೆಯರಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ
HSFC Recruitment 2024 ರ ಅಧಿಕ್ರತ ಅಧಿಸೂಚನೆಯಲ್ಲಿ ನೀಡಿರುವ ಪ್ರಕಾರ ವಿವಿಧ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ಈ ಕೆಳಗಿನಂತೆ ನಡೆಯಲಿದೆ.
- ಮೆಡಿಕಲ್ ಆಫೀಸರ್ ಎಸ್‌ಡಿ (SD) (ಏವಿಯೇಷನ್ ಮೆಡಿಸಿನ್ /ಸ್ಪೋರ್ಟ್ಸ್ ಮೆಡಿಸಿನ್) ಮತ್ತು ಮೆಡಿಕಲ್ ಆಫೀಸರ್ ಎಸ್‌ಸಿ (SC) ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸ್ಕ್ರೀನಿಂಗ್ ಮತ್ತು ಸಂದರ್ಶನ ನಡೆಸುವುದರ ಮೂಲಕ ಆಯ್ಕೆ ಮಾಡಲಾಗುವುದು.
- ಸೈಂಟಿಸ್ಟು/ಎಂಜಿನಿಯರ್ ಎಸ್‌ಸಿ, ಟೆಕ್ನಿಕಲ್ ಅಸಿಸ್ಟೆಂಟ್, ಸೈಂಟಿಫಿಕ್ ಅಸಿಸ್ಟೆಂಟ್, ಟೆಕ್ನಿಕಲ್ ಬಿ, Draughtsman, ಅಸಿಸ್ಟೆಂಟ್ (rajbhasha) ಸೇರಿದಂತೆ ಈ ಎಲ್ಲ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸುವುದರ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆ
- HSFC Recruitment 2024 ರ ಅರ್ಜಿ ಸಲ್ಲಿಕೆ ಮೊದಲು ಅಭ್ಯರ್ಥಿಗಳು ಅಧಿಕ್ರತ ಅಧಿಸೂಚನೆಯಲ್ಲಿ ನೀಡಿರುವ ಎಲ್ಲ ಅರ್ಹತಾ ಮಾನದಂಡಗಳನ್ನು (ವಿದ್ಯಾರ್ಹತೆ ಮತ್ತು ವಯೋಮಿತಿ) ಪರಿಶೀಲಿಸಿ ತಾವು ತಾವು ಅರ್ಹರು ಎಂದು ಖಚಿತ ಪಡಿಸಿಕೊಳ್ಳಬೇಕು.
- ನಂತರ ಇಸ್ರೋ (ISRO) ಅಧಿಕ್ರತ ಪೋರ್ಟಲ್ ಗೆ ಭೇಟಿ ನೀಡಿ.
- ಅರ್ಜಿಯ ನೋಂದಣಿ ಪೇಜ್ ತೆರೆಯುತ್ತದೆ. ಇಲ್ಲಿ, ನೀವು ಹೊಸ ಪ್ರೊಫೈಲ್ ಸೃಷ್ಟಿ ಮಾಡಲು ಅಥವಾ ಈಗಾಗಲೇ ಇರುವ ಪ್ರೊಫೈಲ್‌ನಲ್ಲಿ ಲಾಗಿನ್ ಮಾಡಲು ಆಯ್ಕೆ ಪಡೆಯುವಿರಿ.
- ಅರ್ಜಿ ನಮೂನೆಯನ್ನು ನಿಮ್ಮ ಎಲ್ಲ ವಿವರವಾದ ಮಾಹಿತಿಯೊಂದಿಗೆ ಭರ್ತಿ ಮಾಡಿದ ಬಳಿಕ ಶೈಕ್ಷಣಿಕ ಪ್ರಮಾಣಪತ್ರಗಳು, ಐಡಿ ಪ್ರೂಫ್, ಇತ್ತೀಚಿನ ಭಾವಚಿತ್ರ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
- ನಿಮ್ಮ ವರ್ಗಕ್ಕೆ ಸಂಬಂದಿತ ಅರ್ಜಿ ಶುಲ್ಕವನ್ನು ಪಾವತಿಸಿ.
- ಅರ್ಜಿಯಲ್ಲಿ ನಮೂದಿಸಿರುವ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ: ಇಲ್ಲಿ ಒತ್ತಿ
- ನೋಟಿಫಿಕೇಶನ್: ಇಲ್ಲಿ ಒತ್ತಿ