ಕರ್ನಾಟಕ ಅಂಗನವಾಡಿ ನೇಮಕಾತಿ 2024: ಒಟ್ಟು 1476 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳ ಭರ್ತಿಗೆ ಆದೇಶ

ಕರ್ನಾಟಕ ಅಂಗನವಾಡಿ ನೇಮಕಾತಿ 2024: ಒಟ್ಟು 1476 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳ ಭರ್ತಿಗೆ ಆದೇಶ

ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವ್ರದ್ದಿ ಇಲಾಖೆ ವಿವಿಧ ಜಿಲ್ಲೆಗಳ ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಒಟ್ಟು 1,476 ಹುದ್ದೆಗಳ ಭರ್ತಿಗೆ ಆದೇಶ ನೀಡಲಾಗಿದ್ದು, ಮಂಡ್ಯ,ದಕ್ಷಿಣ ಕನ್ನಡ, ರಾಜಚೂರು, ರಾಮನಗರ ಮತ್ತು ಉಡುಪಿ ಸೇರಿದಂತೆ ಇತರ ಪ್ರಮುಖ ಜಿಲ್ಲೆಗಳಲ್ಲಿ ಈ ಹುದ್ದೆಗಳು ಖಾಲಿ ಇವೆ. ಆಸಕ್ತ ಮತ್ತುಯ ಅರ್ಹ ಅಭ್ಯರ್ಥಿಗಳು ಈ ಅವಕಾಶಗಳನ್ನು ಬಳಸಿಕೊಂಡು ಸಾಮೂಹಿಕ ಅಭಿವ್ರದ್ದಿ ಮತ್ತು ಕಲ್ಯಾಣ ಕಾರ್ಯಗಳ್ಳಿ ಪಾಲ್ಗೊಳ್ಳಲು ಅರ್ಜಿ ಸಲ್ಲಿಸಬಹುದು.

ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ ಪಿಯುಸಿ (12ನೇ ತರಗತಿ) ತೇರ್ಗಡೆ ಹೊಂದಿರಬೇಕು ಹಾಗೂ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಯಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಓದಿರಬೇಕು. ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಯಲ್ಲಿ ಪಾಸಾಗಿರಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 10,000 ರೂ ವೇತನ ಮತ್ತು ಅಂಗನವಾಡಿ ಸಹಾಯಕಿಯರಿಗೆ ಮಾಸಿಕ 5,000 ರೂ ವೇತನ ನೀಡಲಾಗುವುದು.

ಅಭ್ಯರ್ಥಿಗಳ ವಯೋಮಿತಿ 18 ರಿಂದ 36 ವರ್ಷಗಳ ನಡುವೆ ಇರತಕ್ಕದ್ದು ಹಾಗೂ ವಿಕಲಚೇತನರಿಗೆ 10 ವರ್ಷಗಳ ವಯೋಮಿತಿ ಸಡಳಿಕೆ ನೀಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಕರ್ನಾಟಕ ಅಂಗನವಾಡಿ ನೇಮಕಾತಿ 2024 ಕ್ಕೆ ನಿಗದಿತ ಅವದಿಯೊಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಯನ್ನು ಮಾಡಬೇಕು. ಯಾವುದೇ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿರುವುದಿಲ್ಲ. ಅರ್ಜಿ ಸಲ್ಲಿಸುವ ಮೊದಲು ಅಧಿಕ್ರತ ಅಧಿಸೂಚನೆಯನ್ನು ಓದಿ ಅರ್ಜಿ ಸಲ್ಲಿಕೆಯನ್ನು ಮಾಡಿ.

ಕರ್ನಾಟಕ ಅಂಗನವಾಡಿ ನೇಮಕಾತಿ 2024 ಪ್ರಮುಖ ದಿನಾಂಕಗಳು

ಕರ್ನಾಟಕ ಅಂಗನವಾಡಿ ನೇಮಕಾತಿ 2024 ರ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕಗಳು ಹೀಗಿವೆ.

  • ಮಂಡ್ಯ: 20 ಸೆಪ್ಟೆಂಬರ್ 2024
  • ದಕ್ಷಿಣ ಕನ್ನಡ: 29 ಸೆಪ್ಟೆಂಬರ್ 2024
  • ರಾಯಚೂರು: 30 ಸೆಪ್ಟೆಂಬರ್ 2024
  • ರಾಮನಗರ: 30 ಸೆಪ್ಟೆಂಬರ್ 2024
  • ಉಡುಪಿ: 30 ಸೆಪ್ಟೆಂಬರ್ 2024

ಕರ್ನಾಟಕ ಅಂಗನವಾಡಿ ನೇಮಕಾತಿ 2024 ಹುದ್ದೆಗಳ ವಿವರ

  • ಮಂಡ್ಯ ಜಿಲ್ಲೆಯಲ್ಲಿ 341 ಅಂಗನವಾಡಿ ಕಾರ್ಯಕರ್ತೆ ಮತ್ತು 106 ಅಂಗನವಾಡಿ ಸಹಾಯಕಿಯ ಹುದ್ದೆಗಳಿವೆ.
  • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 335 ಅಂಗನವಾಡಿ ಕಾರ್ಯಕರ್ತೆ ಮತ್ತು 108 ಅಂಗನವಾಡಿ ಸಹಾಯಕಿಯ ಹುದ್ದೆಗಳಿವೆ.
  • ರಾಯಚೂರು ಜಿಲ್ಲೆಯಲ್ಲಿ 391 ಅಂಗನವಾಡಿ ಕಾರ್ಯಕರ್ತೆ ಮತ್ತು 120 ಅಂಗನವಾಡಿ ಸಹಾಯಕಿಯ ಹುದ್ದೆಗಳಿವೆ.
  • ರಾಮನಗರ ಜಿಲ್ಲೆಯಲ್ಲಿ 216 ಅಂಗನವಾಡಿ ಕಾರ್ಯಕರ್ತೆ ಮತ್ತು 72 ಅಂಗನವಾಡಿ ಸಹಾಯಕಿಯ ಹುದ್ದೆಗಳಿವೆ.
  • ಉಡುಪಿ ಜಿಲ್ಲೆಯಲ್ಲಿ 193 ಅಂಗನವಾಡಿ ಕಾರ್ಯಕರ್ತೆ ಮತ್ತು 71 ಅಂಗನವಾಡಿ ಸಹಾಯಕಿಯ ಹುದ್ದೆಗಳಿವೆ.

ಕರ್ನಾಟಕ ಅಂಗನವಾಡಿ ನೇಮಕಾತಿ 2024 ವಿದ್ಯಾರ್ಹತೆ

  • ಅಂಗನವಾಡಿ ಕಾರ್ಯಕರ್ತೆ: ಕನಿಷ್ಠ ಪಿಯುಸಿ (12ನೇ ತರಗತಿ) ವಿದ್ಯಾರ್ಹತೆಯನ್ನು ಹೊಂದಿರಬೇಕು. ಎಸ್‌ಎಸ್‌ಎಲ್‌ಸಿ ನಲ್ಲಿ ಕನ್ನಡ ಭಾಷೆ ಪ್ರಥಮ ಅಥವಾ ದ್ವಿತೀಯ ಭಾಷೆಯಂತೆ ಓದಿರಬೇಕು.
  • ಅಂಗನವಾಡಿ ಸಹಾಯಕಿ: ಎಸ್‌ಎಸ್‌ಎಲ್‌ಸಿ (10ನೇ ತರಗತಿ) ಅಥವಾ ತತ್ಸಮಾನ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

ಕರ್ನಾಟಕ ಅಂಗನವಾಡಿ ನೇಮಕಾತಿ 2024 ವಯೋಮಿತಿ

  • ಅಂಗನವಾಡಿ ಕಾರ್ಯಕರ್ತೆ/ಸಹಾಯಕಿ ಹುದ್ದೆಗಳಿಗೆ: ಅರ್ಜಿ ಸಲ್ಲಿಸಲು 18 ರಿಂದ 35 ವರ್ಷ ವಯೋಮಿತಿಯ ಒಳಗಿನ ಮಹಿಳಾ ಅಭ್ಯರ್ಥಿಗಳು ಅರ್ಹರಾಗಿದ್ದಾರೆ.
  • ವಯೋಮಿತಿ ಸಡಿಲಿಕೆ: ವಿಕಲಚೇತನರಿಗೆ 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಕರ್ನಾಟಕ ಅಂಗನವಾಡಿ ನೇಮಕಾತಿ 2024 ವೇತನ

  • ಅಂಗನವಾಡಿ ಕಾರ್ಯಕರ್ತೆ: ₹10,000/- ಮಾಸಿಕ ವೇತನ
  • ಅಂಗನವಾಡಿ ಸಹಾಯಕಿ: ₹5,000/- ಮಾಸಿಕ ವೇತನ

ಕರ್ನಾಟಕ ಅಂಗನವಾಡಿ ನೇಮಕಾತಿ 2024 ಅರ್ಜಿ ಶುಲ್ಕ

ಕರ್ನಾಟಕ ಅಂಗನವಾಡಿ ನೇಮಕಾತಿ 2024 ಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.

ಕರ್ನಾಟಕ ಅಂಗನವಾಡಿ ನೇಮಕಾತಿ 2024 ಆಯ್ಕೆ ವಿಧಾನ

  • ಹುದ್ದೆ ಸ್ಥಳ: ಹುದ್ದೆ ಖಾಲಿಯಿರುವ ಅಥವಾ ಹೊಸ ಅಂಗನವಾಡಿ ಕೇಂದ್ರ ಪ್ರಾರಂಭಿಸುವ ಗ್ರಾಮದಲ್ಲಿ ವಾಸಿಸುತ್ತಿರುವ ಸಹಾಯಕಿಯು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
  • ಅರ್ಜಿ ಸಲ್ಲಿಸುವ ಸಹಾಯಕಿಯ ಶ್ರೇಣಿಗಳು: ಎಸ್ ಎಸ್ ಎಲ್ ಸಿ ಉತ್ತೀರ್ಣ, ಕನಿಷ್ಠ 3 ವರ್ಷ ಸೇವೆ ಸಲ್ಲಿಸಿದ, 45 ವರ್ಷ ವಯೋಮಿತಿಯೊಳಗಿನ, ಮತ್ತು ಆ ಅಂಗನವಾಡಿ ಕೇಂದ್ರದಿಂದ 3 ಕಿ.ಮೀ. ವ್ಯಾಪ್ತಿಯೊಳಗಿನ ತಾಣದಲ್ಲಿ ವಾಸಿಸುತ್ತಿರುವವರು.
  • ಆಯ್ಕೆ ಪ್ರಕ್ರಿಯೆ: ಈ ರೀತಿಯ ಸಹಾಯಕಿಯು ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸಿದಾಗ, ಆ ಹುದ್ದೆಗೆ ಬೇರೆ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗುವುದಿಲ್ಲ.

ಕರ್ನಾಟಕ ಅಂಗನವಾಡಿ ನೇಮಕಾತಿ 2024 ಅರ್ಜಿ ಸಲ್ಲಿಕೆ

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆನ್ಲೈನ್ ಮೂಲಕ ನಡೆಯುತ್ತದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಹೊಂದಿಸಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಸಂಪೂರ್ಣ ಓದಿ, ಅಗತ್ಯ ಮಾಹಿತಿ ಪರಿಶೀಲಿಸಬೇಕು. ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ತಪ್ಪದೇ ಗಮನಿಸಬೇಕು, ಅದಕ್ಕೂ ಮುನ್ನ ಅರ್ಜಿ ಸಲ್ಲಿಸಲು ಅವಶ್ಯಕ ಕ್ರಮಗಳನ್ನು ಕೈಗೊಳ್ಳಿ.

ಕರ್ನಾಟಕ ಅಂಗನವಾಡಿ ನೇಮಕಾತಿ 2024 ಪ್ರಮುಖ ಲಿಂಕುಗಳು

ಅರ್ಜಿ ಸಲ್ಲಿಕೆ ಇಲ್ಲಿ ಒತ್ತಿ
ನೋಟಿಫಿಕೇಶನ್ ಮಂಡ್ಯ / ದಕ್ಷಿಣ ಕನ್ನಡ / ರಾಯಚೂರು / ರಾಮನಗರ / ಉಡುಪಿ
ಲೇಖನವನ್ನು ಶೇರ್ ಮಾಡಿ

Leave a Reply

Your email address will not be published. Required fields are marked *