ಕರ್ನಾಟಕ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ ನೇಮಕಾತಿ 2024: ಬೆಂಗಳೂರು ಮತ್ತು ಮಂಗಳೂರಿನಲ್ಲಿ ಉದ್ಯೋಗ ಪಡೆಯಲು ಇಂದೇ ಅರ್ಜಿ ಸಲ್ಲಿಸಿ

ಕರ್ನಾಟಕ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ ನೇಮಕಾತಿ 2024: ಬೆಂಗಳೂರು ಮತ್ತು ಮಂಗಳೂರಿನಲ್ಲಿ ಉದ್ಯೋಗ ಪಡೆಯಲು ಇಂದೇ ಅರ್ಜಿ ಸಲ್ಲಿಸಿ

ಸ್ನೇಹಿತರೇ ನಿವೇನಾದರೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವನ್ನು ಪಡೆಯಲು ಬಯಸಿದ್ದರೆ, ಕರ್ನಾಟಕ ಬ್ಯಾಂಕ್ ನಿಮಗೊಂದು ಆ ಉದ್ಯೋಗವನ್ನು ಪಡೆಯಲು ಸುವರ್ಣಾವಕಾಶ ಕಲ್ಪಿಸಿಕೊಟ್ಟಿದೆ. ಹೌದು ಕರ್ನಾಟಕ ಬ್ಯಾಂಕ್ ಮಂಗಳೂರು ಮತ್ತು  ತಂತ್ರಜ್ನಾನದ ಡಿಜಿಟಲ್ ಹಬ್ ಬೆಂಗಳೂರು ನಲ್ಲಿ ಖಾಲಿ ಇರುವ ಒಟ್ಟು 07 ಸ್ಪೆಷಲಿಸ್ಟ್  ಆಫೀಸರ್ ಹುದ್ದೆಗಳ ಭರ್ತಿಗೆ ಅಧಿಕ್ರತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಕರ್ನಾಟಕ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ ನೇಮಕಾತಿ 2024 ರ( karnataka bank specialist officer recruitment) ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು. ಆಸಕ್ತ ಅಭ್ಯರ್ಥಿಗಳು ನೇಮಕಾತಿ ಸಂಬಂದಿತ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ.

ವಿದ್ಯಾರ್ಹತೆ

  • AWS ಕ್ಲೌಡ್ ಆಡ್ಮಿನಿಸ್ಟ್ರೇಟರ್: ಇಂಜಿನಿಯರಿಂಗ್/BTech/MTech/MCA ಮತ್ತು ಕ್ಲೌಡ್ ಎಂಜಿನಿಯರಿಂಗ್‌ನಲ್ಲಿ ಕನಿಷ್ಟ 5 ವರ್ಷದ ಅನುಭವ ಹೊಂದಿರಬೇಕು.
  • ಸೀನಿಯರ್ ಡೇಟಾ ಎಂಜಿನಿಯರ್: ಇಂಜಿನಿಯರಿಂಗ್/BTech/MTech/MCA ಮತ್ತು ಡೇಟಾ ಎಂಜಿನಿಯರಿಂಗ್‌ನಲ್ಲಿ ಕನಿಷ್ಠ 5 ವರ್ಷಗಳ ಅನುಭವ ಹೊಂದಿರಬೇಕು.
  • ಸೀನಿಯರ್ ಡೇಟಾ ಸೈನ್ಟಿಸ್ಟ್: B.E/B.Tech ಅಥವಾ ಮಾಸ್ಟರ್‌ಸ್ ಇನ್ ಸ್ಟಾಟಿಸ್ಟಿಕ್ಸ್, ಕನಿಷ್ಠ 5 ವರ್ಷಗಳ ಡೇಟಾ ಸೈನ್ಸ್ ಮತ್ತು ಬಿಸಿನೆಸ್ ಅನಾಲಿಟಿಕ್ಸ್‌ನಲ್ಲಿನ ಅನುಭವ ಹೊಂದಿರಬೇಕು.
  • ಜೂನಿಯರ್ ಡೇಟಾ ಸೈನ್ಟಿಸ್ಟ್: B.E/B.Tech ಅಥವಾ ಮಾಸ್ಟರ್‌ಸ್ ಇನ್ ಸ್ಟಾಟಿಸ್ಟಿಕ್ಸ್, 2+ ವರ್ಷಗಳ ಡೇಟಾ ಸೈನ್ಸ್ ಮತ್ತು ಬಿಸಿನೆಸ್ ಅನಾಲಿಟಿಕ್ಸ್‌ನಲ್ಲಿನ ಅನುಭವ ಹೊಂದಿರಬೇಕು.
  • ಡೇಟಾ ವಿಸ್ಯುಲೈಸೇಶನ್- ಅನಾಲಿಟಿಕ್ಸ್: ಇಂಜಿನಿಯರಿಂಗ್, ಗಣಿತ, ಕಂಪ್ಯೂಟರ್ ಸೈನ್ಸ್, ಅಂಕಿ ಗಣಿತ ಅಥವಾ ಸಂಬಂಧಿಸಿದ ಪಠ್ಯದಲ್ಲಿ ಬ್ಯಾಚುಲರ್ ಪದವಿ ಮತ್ತು 3-5 ವರ್ಷಗಳ ಡೇಟಾ ಅನಾಲಿಟಿಕ್ಸ್‌ನಲ್ಲಿನ ಅನುಭವ.
  • ಸ್ಟ್ರಾಟಜೀ ಮತ್ತು ಪೋರ್ಟ್ಫೋಲಿಯೋ ವಿಶ್ಲೇಷಕ: ಬಿಸಿನೆಸ್ ಅನಾಲಿಟಿಕ್ಸ್‌ನಲ್ಲಿ ಮಾಸ್ಟರ್ ಪದವಿ ಹೊಂದಿರಬೇಕು, TIER 1/TIER 2 ಕಾಲೇಜುಗಳಿಂದ ಇಂಜಿನಿಯರಿಂಗ್ (BTech/BE) ಹಿನ್ನೆಲೆಯುಳ್ಳವರು, ಕನಿಷ್ಟ 6 ವರ್ಷಗಳ ಅನುಭವವಿರಬೇಕು.

ಅಭ್ಯರ್ಥಿಗಳು ಕರ್ನಾಟಕ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ ನೇಮಕಾತಿ ವಿದ್ಯಾರ್ಹತೆ ಸಂಬಂದಿತ ಯಾವುದೇ ಗೊಂದಲಗಳಿದ್ದರೆ ಕೆಳಗಡೆ ಕೊಟ್ಟಿರುವ ಅಧಿಕ್ರತ ಅಧಿಸೂಚನೆಯ ಲಿಂಕ್ ಮೇಲೆ ಕ್ಲಿಕ್ ಮಾಡಿ ವಿದ್ಯಾರ್ಹತೆಯನ್ನು ಪರಿಶೀಲಿಸಬಹುದು.

ಹುದ್ದೆಗಳ ವಿವರ ಮತ್ತು ವೇತನ

  • AWS ಕ್ಲೌಡ್ ಆಡ್ಮಿನಿಸ್ಟ್ರೇಟರ್: 01 ಹುದ್ದೆ (ವೇತನಶ್ರೇಣಿ: ಪೇ ಸ್ಕೆಲ್  III/IV)
  • ಸೀನಿಯರ್ ಡೇಟಾ ಎಂಜಿನಿಯರ್: 01 ಹುದ್ದೆ (ವೇತನಶ್ರೇಣಿ: ಪೇ ಸ್ಕೆಲ್ III/IV)
  • ಸೀನಿಯರ್ ಡೇಟಾ ಸೈನ್ಟಿಸ್ಟ್: 01 ಹುದ್ದೆ (ವೇತನಶ್ರೇಣಿ: ಪೇ ಸ್ಕೆಲ್ III/IV)
  • ಜೂನಿಯರ್ ಡೇಟಾ ಸೈನ್ಟಿಸ್ಟ್: 01 ಹುದ್ದೆ (ವೇತನಶ್ರೇಣಿ: ಪೇ ಸ್ಕೆಲ್  I/II/III)
  • ಡೇಟಾ ವಿಸ್ಯುಲೈಸೇಶನ್- ಅನಾಲಿಟಿಕ್ಸ್: 01 ಹುದ್ದೆ (ವೇತನಶ್ರೇಣಿ: ಪೇ ಸ್ಕೆಲ್ I/II/III)
  • ಸ್ಟ್ರಾಟಜೀ ಮತ್ತು ಪೋರ್ಟ್ಫೋಲಿಯೋ ವಿಶ್ಲೇಷಕ: 02 ಹುದ್ದೆಗಳು (ವೇತನಶ್ರೇಣಿ: ಪೇ ಸ್ಕೆಲ್ I/II/III)

ಆಯ್ಕೆ ಪ್ರಕ್ರಿಯೆ

ಕರ್ನಾಟಕ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ ನೇಮಕಾತಿ ಆಯ್ಕೆ ಪ್ರಕ್ರಿಯೆಯು ಸಂದರ್ಶನದ ಮೂಲಕ ನಡೆಯಲಿದ್ದು, ಅಭ್ಯರ್ಥಿಗಳ ಅರ್ಹತಾ ಮಾನದಂಡ, ಅನುಭವ, ವಿದ್ಯಾರ್ಹತೆ ಮತ್ತು ಪರಸ್ಪರ ಸಂದರ್ಶದಲ್ಲಿ ಅಭ್ಯರ್ಥಿಗಳ ಪ್ರದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ

ಕರ್ನಾಟಕ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ ನೇಮಕಾತಿಯ ಅರ್ಜಿ ಸಲ್ಲಿಕೆಗೆ ಅಭ್ಯರ್ಥಿಗಳು ತಮ್ಮ ರೆಸುಮೆಯನ್ನು (Resume) ತಯಾರಿಸಿ acoe.recruitment@ktkbank.com ಗೆ ಕಳುಹಿಸಬೇಕಾಗುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ ಸಂಬಂದಿಸಿ ಯಾವುದೇ ಗೊಂದಲವಿದ್ದರೆ ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಬ್ಯಾಂಕ್ ಅಧಿಕ್ರತ ಪೋರ್ಟಲ್ ಗೆ ಭೇಟಿ ಕೊಡಬಹುದು.

ಅಭ್ಯರ್ಥಿಗಳು ಸಂದರ್ಶನದ ದಿನಾಂಕ ಮತ್ತು ಇನ್ನೂ ಹೆಚ್ಚಿನ ಅಪ್ಡೇಟ್ ಗಳಿಗಾಗಿ ಕರ್ನಾಟಕ ಬ್ಯಾಂಕ್ ಅಧಿಕ್ರತ ವೆಬ್ಸೈಟ್ ಗೆ ನಿರಂತರವಾಗಿ ಭೇಟಿ ನೀಡಬೇಕು.

ಪ್ರಮುಖ ಲಿಂಕುಗಳು

ಅಧಿಕ್ರತ ನೋಟಿಫಿಕೇಶನ್: ಇಲ್ಲಿ ಒತ್ತಿ

ಅಧಿಕ್ರತ ಪೋರ್ಟಲ್: ಇಲ್ಲಿ ಒತ್ತಿ

ಲೇಖನವನ್ನು ಶೇರ್ ಮಾಡಿ

Leave a Reply

Your email address will not be published. Required fields are marked *