KEA: ಪಿಎಸ್‌ಐ ಪರೀಕ್ಷೆಗೆ ಈ ಉಡುಪನ್ನು ಧರಿಸುವ ಹಾಗಿಲ್ಲ! ವಿಧ್ಯಾರ್ಥಿಗಳಿಗೆ ಮಹತ್ವದ ಸೂಚನೆ
ಸ್ನೇಹಿತರೇ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 402 ಹುದ್ದೆಗಳ ನೇಮಕಾತಿಯು ಸೆಪ್ಟೆಂಬರ್ 22, 2024 ರಂದು ನಡೆಯಲಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರೀಕ್ಷೆಗೆ ಹಾಜರಾಗುವಾಗ ಅಭ್ಯರ್ಥಿಗಳು ಯಾವ ತರಹದ ಉಡುಪನ್ನು ಧರಿಸಬೇಕು ಯಾವೆಲ್ಲ ಉಡುಪುಗಳು ನಿಷಿದ್ದ ಎಂಬುದನ್ನು ಸುತ್ತೋಲೆ ಬಿಡುಗಡೆ ಮಾಡುವುದರ ಮೂಲಕ ಸೂಚಿಸಲಾಗಿದೆ.
ಹೌದು ರಾಜ್ಯ ಸರ್ಕಾರ ಈ ಹಿಂದೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಲವು ಪ್ರಕರಣಗಳನ್ನು ಗಮನಿಸಿದ್ದು, ಸೆಪ್ಟೆಂಬರ್ 22, 2024 ರಂದು ನಡೆಯಲಿರುವ ಪಿಎಸ್‌ಐ (PSI) ಪರೀಕ್ಷೆಯಲ್ಲಿ ಯಾವುದೇ ರೀತಿಯ ತಪ್ಪುಗಳು ಮತ್ತು ಹಗರಣಗಳು ನಡೆಯಬಾರದು ಎಂದು ಸರ್ಕಾರ ಕೆಈಏ (KEA) ಗೆ ಆದೇಶ ನೀಡಿದೆ. ಈ ಕಾರಣಕ್ಕಾಗಿ ಎಚ್ಚೆತ್ತುಕ್ಕೊಂಡ ಅಧಿಕಾರಿಗಳು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುವಾಗ ಯಾವ ತರಹದ ಸಮವಸ್ತ್ರ ಧರಿಸಬೇಕು ಎಂದು ಸೂಚಿಸಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.
ಹೌದು ಈ ಬಾರಿ ಸುಮಾರು 66 ಸಾವಿರ ಅಭ್ಯರ್ಥಿಗಳು ಪಿಎಸ್‌ಐ ಪರೀಕ್ಷೆಗೆ ಹಾಜರಾಗಲಿದ್ದು, ಪರೀಕ್ಷೆಯ ಪ್ರವೇಶ ಪತ್ರವನ್ನು ಪರೀಕ್ಷೆ ನಡೆಯವ ದಿನಾಂಕದ ಒಂದು ವಾರ ಮೊದಲು ಬಿಡುಗಡೆ ಮಾಡಲಾಗುವುದು. ಅಭ್ಯರ್ಥಿಗಳು ಕುರ್ತಾ, ಪೈಜಾಮ, ಜೀನ್ಸ್ ಪ್ಯಾಂಟ್ ನಂತಹ ಉಡುಪು ಧರಿಸುವುದನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಿಷೇಧಿಸಲಾಗಿದೆ.
ಪುರುಷ ಅಭ್ಯರ್ಥಿಗಳು ಯಾವ ತರಹದ ಉಡುಪನ್ನು ಧರಿಸಬೇಕು?
- ಪುರುಷ ಅಭ್ಯರ್ಥಿಗಳು ಪೂರ್ಣ ತೋಳಿನ ಅಂಗಿಯನ್ನು ಧರಿಸುವುದು ನಿಷೇಧಿಸಲಾಗಿದೆ. ಹೀಗಾಗಿ ಅರ್ಧ ತೋಳಿನ (ಹಾಫ್ ಸ್ಲೀವ್) ಅಂಗಿಯನ್ನು ಧರಿಸಬೇಕು. ಕಾಲರ್ ರಹಿತ ಅಂಗಿಯನ್ನು ಧರಿಸುವುದಕ್ಕೆ ಆದ್ಯತೆ ನೀಡಲಾಗಿದೆ.
- ಜೇಬುಗಳ್ಳಿದ ಅಥವಾ ಕಡಿಮೆ ಜೇಬು ಇರುವ ಅಂಗಿಯನ್ನು ಧರಿಸಬಹುದು.
- ದೊಡ್ಡ ಬಟನ್, ಜಿಪ್ ಪಾಕೆಟ್ ಗಳು ಅಥವಾ ದೊಡ್ಡ ಕಸೂತಿ ಇರುವ ಉಡುಪನ್ನು ಧರಿಸಬಾರದು.
- ಅಭ್ಯರ್ಥಿಗಳು ಸ್ಯಾಂಡಲ್ ಅಥವಾ ತೆಳು ಅಡಿಭಾಗ ಇರುವ ಚಪ್ಪಲಿಗಳನ್ನು ಧರಿಸುವುದು ಉತ್ತಮ ಎಂದು ಸೂಚಿಸಲಾಗಿದೆ.
ಮಹಿಳಾ ಅಭ್ಯರ್ಥಿಗಳು ಯಾವ ತರಹದ ಉಡುಪನ್ನು ಧರಿಸಬೇಕು?
- ಮಹಿಳಾ ಅಭ್ಯರ್ಥಿಗಳು ಮಂಗಳಸೂತ್ರ ಮತ್ತು ಕಾಲುಂಗುರ ಧರಿಸುವುದಕ್ಕೆ ಅವಕಾಶ ನೀಡಲಾಗಿದ್ದು, ಇನ್ನವುದೇ ತರಹದ ಲೋಹದ ಆಭರಣಗಳನ್ನು (ವಸ್ತುಗಳು) ಧರಿಸುವುದಕ್ಕೆ ಅವಕಾಶ ಮಾಡಿಕೊಡಲಾಗುವುದಿಲ್ಲ.
- ಹೂಗಳು, ವಿಸ್ತಾರವಾದ ಕಸೂತಿ ಮತ್ತು ದೊಡ್ಡ ಬಟನ್ ಗಳನ್ನು ಹೊಂದಿರುವ ಉಡುಪನ್ನು ಧರಿಸುದಕ್ಕೆ ನಿರ್ಭಂದವಿರುತ್ತದೆ.
- ದಪ್ಪ ಅಡಿಭಾಗ ಅಥವಾ ಎತ್ತರದ ಹಿಮ್ಮಡಿಯ ಚಪ್ಪಲಿ ಮತ್ತು ಶೂ ಗಳನ್ನು ಧರಿಸಲು ನಿರ್ಭಂದವಿದೆ. ಹೀಗಾಗಿ ಮಹಿಳಾ ಅಭ್ಯರ್ಥಿಗಳು ಅಡಿಭಾಗ ತೆಳುವಿರುವ ಚಪ್ಪಲಿಯನ್ನು ಧರಿಸಬೇಕು.
ಈ ಮೇಲೆ ತಿಳಿಸಿದ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಬಿಡುಗಡೆ ಮಾಡಲಾದ ಸೂಚನೆಗಳನ್ನು ಪಾಲಿಸದೆ ಇದ್ದರೆ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳು ಸಮಸ್ಯೆಯನ್ನು ಎದುರಿಸಬಹುದು.