ನೀವು ಕೆನರಾ ಬ್ಯಾಂಕ್ ಎಫ್‌ಡಿ ಮೇಲೆ ಎಷ್ಟು ಸಾಲ ಪಡೆಯಬಹುದು ಗೊತ್ತಾ!
ಸ್ನೇಹಿತರೇ, ನೀವೇನಾದರು ಕೆನರಾ ಬ್ಯಾಂಕಿನಲ್ಲಿ ಎಫ್‌ಡಿ ಖಾತೆಯನ್ನು ಹೊಂದಿ, ನೀವು ಹೂಡಿಕೆ ಮಾಡಿರುವ ಹಣದ ಮೇಲೆ ಕೆನರಾ ಬ್ಯಾಂಕಿನಿಂದ ಸಾಲವನ್ನು ಪಡೆಯಲು ಬಯಸಿದ್ದರೆ ಕೂಡಲೇ ಇಲೇಖವನ್ನು ಓದಿರಿ. ಏಕೆಂದರೆ ಈ ಲೇಖನದಲ್ಲಿ ನಾವು ಎಫ್‌ಡಿ ಯಲ್ಲಿ ಹೂಡಿಕೆ ಮಾಡಿರುವ ಹಣದ ಮೇಲೆ ಎಷ್ಟು ಸಾಲ ಪಡೆಯಬಹುದು ಅಥವಾ ಸಾಲದ ಮೇಲಿನ ಬಡ್ಡಿದರವೇನು ಮತ್ತು ಸಾಲವನ್ನು ಪಡೆಯಲು ಯಾರ್ಯಾರು ಅರ್ಹರು ಎಂಬುದನ್ನೂ ನೋಡೊಣ ಬನ್ನಿ.
ಅರ್ಹತೆಗಳು
- ಸಾಲ ಪಡೆಯಲು ಬಯಸಿದರೆ ನೀವು ಕೆನರಾ ಬ್ಯಾಂಕಿನ ಗ್ರಾಹಕರಾಗಿರಬೇಕು.
- ಫಿಕ್ಸೆಡ್ ಡೆಪಾಸಿಟ್ ಗಳನ್ನು ಹೊಂದಿರುವ ಎಲ್ಲ ಗ್ರಾಹಕರು ಮತ್ತು ಜಾಯಿಂಟ್ ಫಿಕ್ಸೆಡ್ ಡೆಪಾಸಿಟ್ ಗಳನ್ನು ಹೊಂದಿರುವ ವ್ಯಕ್ತಿಗಳು ಸಹ ಅರ್ಹತೆಯನ್ನು ಪಡೆದುಕೊಳ್ಳುತ್ತಾರೆ.
- ನೀವೇನಾದರು ಟ್ಯಾಕ್ಸ್ ಸೇವಿಂಗ್ ಎಫ್‌ಡಿ ಮೇಲೆ ಸಾಲವನ್ನು ಪಡೆಯಲು ಬಯಸಿದರೆ ಅದು ಸಾಧ್ಯವಿಲ್ಲ.
ಸಾಲದ ಮೊತ್ತ
ಸ್ನೇಹಿತರೇ ನಾವು ಕೆನರಾ ಬ್ಯಾಂಕಿನಲ್ಲಿ ಎಫ್‌ಡಿ ಮಾಡಿಸಿದರೆ ನಾವು ಎಷ್ಟು ಸಾಲವನ್ನು ಪಡೆಯಬಹುದು ಅನ್ನುವ ವಿಚಾರ ನಿಮ್ಮ ತಲೆಯಲ್ಲಿ ಬಂದಿರುತ್ತೆ.
ಕೆನರಾ ಬ್ಯಾಕಿನಿಂದ ಸಾಲವನ್ನು ಪಡೆಯಬೇಕಾದರೆ ಆ ಸಾಲದ ಕನಿಷ್ಠ ಅಥವಾ ಗರಿಷ್ಠ ಮೊತ್ತವು ನಿಮ್ಮ ಎಫ್‌ಡಿ ಬಾಕಿಯ ಮೇಲೆ ಅವಲಂಬಿತವಾಗಿರುತ್ತದೆ. ನೀವು ಎಫ್‌ಡಿ ಮೊತ್ತದ ಒಟ್ಟು 90% ರಿಂದ 95% ರಷ್ಟು ಸಾಲವನ್ನು ಪಡೆಯಲು ಅರ್ಹರಾಗಿರುತ್ತಿರಾ.
ಬಡ್ಡಿದರ
ವಿಶೇಷ ಏನೆಂದರೆ ಎಫ್‌ಡಿ ವಿರುದ್ದದ ಸಾಲಗಳಿಗೆ ಬಡ್ಡಿದರ ಸಾಮಾನ್ಯವಾಗಿ ವೈಯಕ್ತಿಕ ಸಾಲಗಳಿಗೆ ಹೊಲಿಸಿದರೆ 2% ರಿಂದ 2.5% ಕಡಿಮೆ ಇರುತ್ತದೆ. ಸಾಮಾನ್ಯವಾಗಿ ಬ್ಯಾಂಕ್ ಗಳು 0.5% ರಿಂದ 2% ಬಡ್ಡಿಯವರೆಗೆ ಎಫ್‌ಡಿ ಮೇಲೆ ಸಾಲವನ್ನು ನೀಡುತ್ತವೆ.
ಸ್ನೇಹಿತರೇ ನಿವೇನಾದರೂ ಕೆನರಾ ಬ್ಯಾಂಕಿನಲ್ಲಿ ಸಾಲವನ್ನು ಪಡೆಯಲು ಬಯಸಿದರೆ ಎಫ್‌ಡಿ ವಿರುದ್ದದ ಸಾಲಕ್ಕೆ ಅರ್ಹತೆಯನ್ನು ನಿಗದಿಪಡಿಸಲು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಪರಿಗಣಿಸಲಾಗುವುದಿಲ್ಲ. ಕಡಿಮೆ ಕ್ರೆಡಿಟ್ ಸ್ಕೋರ್ ಇದ್ದರೂ ಸಾಲವನ್ನು ಗ್ರಾಹಕರಿಗೆ ನೀಡಲಾಗುತ್ತದೆ.
ಕೆನರಾ ಬ್ಯಾಂಕ್ ನಲ್ಲಿ ಎಫ್‌ಡಿ ಮೇಲಿನ ಸಾಲವನ್ನು ಪಡೆಯಲು ಹತ್ತಿರದ ಕೆನರಾ ಬ್ಯಾಂಕ್ ಕಚೇರಿಗೆ ಭೇಟಿ ನೀಡಬೇಕು. ದಾಖಲೆಗಳ ಪರಿಶೀಲನೆಯ ನಂತರ ಕೆನರಾ ಬ್ಯಾಂಕಿನಿಂದ ನಿಮಗೆ ಸಾಲವನ್ನು ಅನುಮೋದಿಸಲಾಗುವುದು.