ನಿಮ್ಮ LIC ಪಾಲಿಸಿಯಿಂದ ಎಷ್ಟು ಸಾಲ ಪಡೆಯಬಹುದು ತಿಳಿಯಿರಿ
ಸ್ನೇಹಿತರೇ ಸಾಮಾನ್ಯವಾಗಿ ಜನರು ತುರ್ತು ಪರಿಸ್ಥಿಯಲ್ಲಿ ಹಣದ ಅಗತ್ಯವಿದ್ದಾಗ ಬ್ಯಾಂಕ್ ಗಳಿಗೆ ಭೇಟಿ ಕೊಡುತ್ತಾರೆ. ಆದರೆ ಬ್ಯಾಂಕುಗಳು ಶರತ್ತುಗಳನ್ನು ಪೂರೈಸದೆ ಇದ್ದರೆ ಸಾಲವನ್ನು ಕೊಡಲು ಹಿಂಜರಿಯುವುದು ನಾವು ದಿನನಿತ್ಯ ಕಾಣುತ್ತೇವೆ. ಇಂತಹ ಸಮಯದಲ್ಲಿ ಜನರು ತಾವು ಈ ಹಿಂದೆ ಹೂಡಿಕೆ ಮಾಡಿರುವ ಎಲ್‌ಐಸಿ ಪಾಲಿಸಿಯ ಮೇಲೆ ಸಾಲ ದೊರಕುವುದೇ ಎಂದು ಯೋಚಿಸಬಹುದು. ನಿಮ್ಮ ಈ ಪ್ರಶ್ನೆಗೆ ಉತ್ತರ ಈ ಲೇಖನದಲ್ಲಿ ದೊರೆಯಲಿದ್ದು, ಈ ಪ್ರಕ್ರಿಯೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಯೋನ ಬನ್ನಿ.
ನೀವು ಎಲ್‌ಐಸಿ ಪಾಲಿಸಿಯ (LIC Policy) ಮೇಲಿನ ಸಾಲವನ್ನು(Loan) ಪಡೆಯಲು ಮುಂದಾಗಿದ್ದರೆ, ಅದಕ್ಕೂ ಮೊದಲು ನೀವು ಕೆಲವು ಶರತ್ತುಗಳನ್ನು ಪೂರೈಸಬೇಕಾಗುತ್ತದೆ.
ಅರ್ಹತಾ ಮಾನದಂಡ
- ಪ್ರಮುಖವಾಗಿ ತಿಳಿಯಬೇಕಾಗಿರುವುದೇನೆಂದರೆ ಎಲ್ಲ ಎಲ್‌ಐಸಿ ಪಾಲಿಸಿಗಳು ಫಲಾನುಭವಿಗಳಿಗೆ ಸಾಲವನ್ನು ಒದಗಿಸುವುದಿಲ್ಲ. ಇದರಲ್ಲಿ ಪ್ರಮುಖವಾಗಿ ಎಂಡೋಮೆಂಟ್ ಪ್ಲಾನ್ಸ್, ಜೀವನಾವಧಿ ಪಾಲಿಸಿಗಳು ಮತ್ತು ಮನಿ ಬ್ಯಾಕ್ ಪ್ಲಾನ್ಸ್ ಯೋಜನೆಯ ಫಲಾನುಭವಿಗಳು ಸಾಲವನ್ನು ಪಡೆಯಲು ಅರ್ಹರಾಗಿರುತ್ತಾರೆ.
- ಟರ್ಮ್ ಇನ್ಸುರೆನ್ಸ್ ಪಾಲಿಸಿಯ ಫಲಾನುಭವಿಗಳು ಸಾಮಾನ್ಯವಾಗಿ ಸಾಲಕ್ಕೆ ಅರ್ಹರಾಗಿರುವುದಿಲ್ಲ. ಟರ್ಮ್ ಇನ್ಸುರೆನ್ಸ್ ಪಾಲಿಸಿಯನ್ನು ಅಕಾಲಿಕ ಮರಣದ ಸಮಯದಲ್ಲಿ ಜನರಿಗೆ ಆರ್ಥಿಕ ಭದ್ರತೆ ಮತ್ತು ಸುರಕ್ಷತೆ ನೀಡಲು ವಿನ್ಯಾಸಗೊಳಿಸಲಾಗಿದೆ. ಹೀಗಾಗಿ ಇಂತಹ ಪಾಲಿಸಿಗಳ ಮೇಲೆ ಸಾಲ ಪಡೆಯಲು ಸಾಧ್ಯವಾಗುವುದಿಲ್ಲ
- ಪಾಲಿಸಿದಾರರು ತನ್ನ ಪಾಲಿಸಿಯ ಎಲ್ಲ ಕಂತುಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿರಬೇಕು ಮತ್ತು ನಿಮ್ಮ ಪಾಲಿಸಿಯನ್ನು ಮಾಡಿ ಕನಿಷ್ಠ ಮೂರು ವರ್ಷಗಳಾಗಿರಬೇಕು.
- ನಿಮ್ಮ ಪ್ರೀಮಿಯಮ್ ಪಾವತಿಗಳು ನವೀಕರಣ ಹೊಂದಿರಬೇಕು (up to date).
ಸಾಲದ ಮೊತ್ತ ಮತ್ತು ಬಡ್ಡಿದರ
- ಸ್ನೇಹಿತರೇ ಸಾಮಾನ್ಯವಾಗಿ ಎಲ್‌ಐಸಿ ಸಾಲದ ಮೊತ್ತವು ನಿಮ್ಮ ಎಲ್‌ಐಸಿ ಪಾಲಿಸಿಯ ಮರುಪಾವತಿ ಮೌಲ್ಯದ 85% ರಿಂದ 90% ರಷ್ಟು ಸಾಲವನ್ನು ಪಡೆಯಬಹುದಾಗಿದೆ
- ಎಲ್‌ಐಸಿ ಪಾಲಿಸಿಯ ಮೇಲಿನ ಸಾಲದ ಬಡ್ಡಿದರವು (10-12%) ಸಾಮಾನ್ಯವಾಗಿ ವೈಯಕ್ತಿಕ ಸಾಲಗಳಿಗಿಂತ ಕಡಿಮೆ ಇರುತ್ತದೆ. ಇದರಿಂದ ಜನರಿಗೆ ಎಲ್‌ಐಸಿ ಪಾಲಿಸಿಯ ಮೇಲಿನ ಸಾಲ ಪಡೆದುಕೊಳ್ಳಲು ಉತ್ತಮ ಆಯ್ಕೆಯಾಗಿದೆ.
ಎಲ್‌ಐಸಿ ಪಾಲಿಸಿಯ ಮೇಲಿನ ಸಾಲವನ್ನು ಪಡೆಯಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.
- ನೀವು ಎಲ್‌ಐಸಿ ಅಧಿಕ್ರತ ಪೋರ್ಟಲ್ ಗೆ ಭೇಟಿ ನೀಡಿ ಅಥವಾ ನಿಮ್ಮ ಹತ್ತಿರದ ಎಲ್‌ಐಸಿ ಶಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
- ಸಾಲ ಪಡೆಯಲು ಪ್ರಮುಖವಾಗಿ ಎಲ್‌ಐಸಿ ಕಚೇರಿಯಿಂದ ಪಡೆದ ಸಾಲದ ಅರ್ಜಿ ಫಾರ್ಮ್, ನಿಮ್ಮ ಪಾಲಿಸಿಯ ಸಂಪೂರ್ಣ ದಾಖಲೆಗಳು ಮತ್ತು ಗುರುತಿನ ಚೀಟಿಯ ಅಗತ್ಯವಿರುತ್ತದೆ.
- ನಿಮ್ಮ ಅರ್ಜಿ ಸಲ್ಲಿಕೆಯಾದ ನಂತರ ಸಾಲವು ಸಾಮಾನ್ಯವಾಗಿ ಕೆಲವು ದಿನಗಳ ನಂತರ ಮಂಜೂರಾಗುವುದು ಮತ್ತು ಹಣವನ್ನು ನೇರವಾಗಿ ನಿಮ್ಮ ಖಾತೆಗೆ ವರ್ಗಾಯಿಸಲಾಗುತ್ತದೆ.