KPSC Recruitment 2024: ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿಗಳು ಸೇರಿದಂತೆ 945 ಗ್ರೂಪ್ ಬಿ (Group B) ಹುದ್ದೆಗಳ ಭರ್ತಿಗೆ ಆದೇಶ

KPSC Recruitment 2024: ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿಗಳು ಸೇರಿದಂತೆ 945 ಗ್ರೂಪ್ ಬಿ (Group B) ಹುದ್ದೆಗಳ ಭರ್ತಿಗೆ ಆದೇಶ

ಕರ್ನಾಟಕ ಲೋಕಸೇವಾ ಸೇವಾ ಆಯೋಗ (KPSC) ಇದೀಗ ಕೃಷಿ ಅಧಿಕಾರಿಗಳು (Agricultural Officers) ಮತ್ತು ಸಹಾಯಕ ಕೃಷಿ ಅಧಿಕಾರಿಗಳು (Assistant Agricultural Officers) ಸೇರಿದಂತೆ 945 ಗ್ರೂಪ್ ಬಿ (Group B) ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು KPSC ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ಅರ್ಹತಾ ಮಾನದಂಡಗಳ ಮಾಹಿತಿಯನ್ನು ಪಡೆದುಕೊಂಡು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು B.Sc ಅಥವಾ B.Tech ನಲ್ಲಿ ಆಹಾರ ಮತ್ತು ವಿಜ್ಞಾನ ತಂತ್ರಜ್ಞಾನ/ಬಯೋಟೆಕ್ನಾಲಜಿ/ಕೃಷಿ ಇಂಜಿನಿಯರಿಂಗ್ ಪದವಿ ಹೊಂದಿರಬೇಕು.

KPSC ನೇಮಕಾತಿಯ ಅರ್ಜಿ ಪ್ರಕ್ರಿಯೆಯು 2024 ಅಕ್ಟೋಬರ್ 7 ರಂದು ಆರಂಭಗೊಂಡಿದ್ದು, ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ 2024 ನವೆಂಬರ್ 7 ಆಗಿದೆ. SC/ST/Cat-I/PWD ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ, Cat-2A/2B/3A/3B ಅಭ್ಯರ್ಥಿಗಳಿಗೆ ₹300, ಸಾಮಾನ್ಯ ಅಭ್ಯರ್ಥಿಗಳಿಗೆ ₹600, ಮತ್ತು ಎಕ್ಸ್-ಸರ್ವಿಸ್‌ಮೆನ್ ಅಭ್ಯರ್ಥಿಗಳಿಗೆ ₹50 ಮಾತ್ರ. ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆಯು ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಹಂತಗಳನ್ನು ಒಳಗೊಂಡಿರುತ್ತದೆ.

ಪ್ರಮುಖ ದಿನಾಂಕಗಳು

  • ಅರ್ಜಿ ಪ್ರಾರಂಭ ದಿನಾಂಕ: KPSC ನೇಮಕಾತಿಗಾಗಿ ಆನ್‌ಲೈನ್ ಅರ್ಜಿ ಸಲ್ಲಿಕೆ 2024 ಅಕ್ಟೋಬರ್ 7 ರಿಂದ ಆರಂಭವಾಗಲಿದೆ.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2024 ನವೆಂಬರ್ 7.
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 2024 ನವೆಂಬರ್ 7.

ಹುದ್ದೆಗಳ ವಿವರ:

KPSC ಅಧಿಸೂಚನೆಯ ಪ್ರಕಾರ, 945 ಹುದ್ದೆಗಳ ಭರ್ತಿಗೆ ಆದೇಶ ನೀಡಲಾಗಿದೆ:

  • ಹುದ್ದೆಯ ಹೆಸರು: ಕೃಷಿ ಅಧಿಕಾರಿ (Agricultural Officers) – 128 ಹುದ್ದೆಗಳು
  • ಹುದ್ದೆಯ ಹೆಸರು: ಸಹಾಯಕ ಕೃಷಿ ಅಧಿಕಾರಿ (Assistant Agricultural Officers) – 817 ಹುದ್ದೆಗಳು

ವಿಭಾಗವಾರು ಹುದ್ದೆಗಳ ಹಂಚಿಕೆ:

ಕೃಷಿ ಅಧಿಕಾರಿ (Agricultural Officers) – 128 ಹುದ್ದೆಗಳು:

  • ಜನರಲ್: 64
  • SC: 19
  • ST: 9
  • Cat-I: 5
  • Cat-2A: 12
  • Cat-2B: 6
  • Cat-3A: 7
  • Cat-3B: 6

ಸಹಾಯಕ ಕೃಷಿ ಅಧಿಕಾರಿ (Assistant Agricultural Officers) – 817 ಹುದ್ದೆಗಳು:

  • ಜನರಲ್: 409
  • SC: 122
  • ST: 61
  • Cat-I: 32
  • Cat-2A: 77
  • Cat-2B: 38
  • Cat-3A: 41
  • Cat-3B: 37

ವಿದ್ಯಾರ್ಹತೆ:

KPSC ಅಧಿಸೂಚನೆ ಪ್ರಕಾರ, ಸದರಿ ಹುದ್ದೆಗಳಿಗೆ ಹುದ್ದೆಗಳಿಗೆ ಈ ಕೆಳಗಿನ ವಿದ್ಯಾರ್ಹತೆಗಳನ್ನು ಹೊಂದಿರಬೇಕು:

  • ಕೃಷಿ ಅಧಿಕಾರಿ (Agricultural Officers): B.Sc ಅಥವಾ B.Tech ನಲ್ಲಿ ಆಹಾರ ಮತ್ತು ವಿಜ್ಞಾನ ತಂತ್ರಜ್ಞಾನ/ಬಯೋಟೆಕ್ನಾಲಜಿ/ಕೃಷಿ ಇಂಜಿನಿಯರಿಂಗ್ ಪದವಿ.
  • ಸಹಾಯಕ ಕೃಷಿ ಅಧಿಕಾರಿ (Assistant Agricultural Officers): B.Sc ಅಥವಾ B.Tech ನಲ್ಲಿ ಆಹಾರ ಮತ್ತು ವಿಜ್ಞಾನ ತಂತ್ರಜ್ಞಾನ/ಬಯೋಟೆಕ್ನಾಲಜಿ/ಕೃಷಿ ಇಂಜಿನಿಯರಿಂಗ್ ಪದವಿ.

ವಯೋಮಿತಿ:

KPSC ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷ ಮತ್ತು ಗರಿಷ್ಠ 38 ವರ್ಷಗಳ ವಯಸ್ಸು ಹೊಂದಿರಬೇಕು. ಮೀಸಲು ವರ್ಗದ ಅಭ್ಯರ್ಥಿಗಳಿಗೆ ವಯೋ ಸಡಲಿಕೆ ಈ ಕೆಳಗಿನಂತಿದೆ:

  • SC/ST/Cat-I: 5 ವರ್ಷಗಳ ಸಡಲಿಕೆ
  • Cat-2A/2B/3A/3B: 3 ವರ್ಷಗಳ ಸಡಲಿಕೆ
  • PWD/Widow: 10 ವರ್ಷಗಳ ಸಡಲಿಕೆ

ವೇತನ:

KPSC ಪ್ರಕಾರ, ವಿವಿಧ ಹುದ್ದೆಗಳ ವೇತನ ಶ್ರೇಣಿಯು ಈ ಕೆಳಗಿನಂತಿದೆ:

  • ಕೃಷಿ ಅಧಿಕಾರಿ (Agricultural Officers): ₹43,100 – ₹83,900/- ಮಾಸಿಕ
  • ಸಹಾಯಕ ಕೃಷಿ ಅಧಿಕಾರಿ (Assistant Agricultural Officers): ₹40,900 – ₹78,200/- ಮಾಸಿಕ

ಅರ್ಜಿ ಶುಲ್ಕ:

KPSC ಪ್ರಕಾರ, ವಿವಿಧ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವು ಈ ಕೆಳಗಿನಂತಿದೆ:

  • SC/ST/Cat-I/PWD: ಅರ್ಜಿಶುಲ್ಕವಿಲ್ಲ
  • Ex-Servicemen: ₹50/-
  • Cat-2A/2B/3A/3B: ₹300/-
  • General: ₹600/-
  • ಪಾವತಿ ವಿಧಾನ: ಆನ್‌ಲೈನ್

ಆಯ್ಕೆ ಪ್ರಕ್ರಿಯೆ:

  • KPSC ನೇಮಕಾತಿಯು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಎರಡು ಹಂತಗಳಲ್ಲಿ ನಡೆಸುತ್ತದೆ. ಮೊದಲ ಹಂತದಲ್ಲಿ ಕನ್ನಡ ಭಾಷಾ ಪರೀಕ್ಷೆ ನಡೆಯಲಿದ್ದು, ಈ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಕನ್ನಡ ಭಾಷೆಯ ಮೇಲೆ ಹೊಂದಿರುವ ಜ್ಞಾನವನ್ನು ಪರಿಶೀಲಿಸಲಾಗುತ್ತದೆ.
  • ಕನ್ನಡ ಭಾಷಾ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳು ನಂತರದ ಹಂತದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಯು ಬಹು ಆಯ್ಕೆ ಪ್ರಶ್ನೆಗಳಾದ (Multiple Choice Questions) ರೂಪದಲ್ಲಿ ನಡೆಯಲಿದ್ದು, ಇದರಲ್ಲಿನ ಅಂಕಗಳನ್ನು ಆಧರಿಸಿ, ಅಂತಿಮ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.

ಅರ್ಜಿ ಸಲ್ಲಿಕೆ:

  • KPSC ಅರ್ಜಿ ಸಲ್ಲಿಕೆಯ ಮೊದಲು ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಬಹುದು.
  • KPSC ಅಧಿಕೃತ ಪೋರ್ಟಲ್‌ಗೆ (kpsconline.karnataka.gov.in) ಭೇಟಿ ನೀಡಿ.
  • ಪ್ರೊಫೈಲ್‌ನಲ್ಲಿ ಲಾಗಿನ್ ಮಾಡಲು ಆಯ್ಕೆ ಪಡೆಯುವಿರಿ, ನಿಮ್ಮ ಇಮೇಲ್ ಅಥವಾ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ನೊಂದಣಿಯನ್ನು ಮಾಡಿಸಿಕೊಳ್ಳಿ.
  • ಅರ್ಜಿ ನಮೂನೆಯನ್ನು ಎಲ್ಲ ಅಗತ್ಯ ಮಾಹಿತಿಯೊಂದಿಗೆ ಭರ್ತಿ ಮಾಡಿದ ಬಳಿಕ ಶೈಕ್ಷಣಿಕ ಪ್ರಮಾಣಪತ್ರಗಳು, ಐ‌ಡಿ ಪ್ರೂಫ್, ಇತ್ತೀಚಿನ ಭಾವಚಿತ್ರ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
  • ನಿಮ್ಮ ವರ್ಗಕ್ಕೆ ಸಂಬಂದಿತ ಅರ್ಜಿ ಶುಲ್ಕವನ್ನು ನೆಟ್ ಬ್ಯಾಂಕಿಂಗ್, ಕ್ರೆಡಿಟ್/ಡೆಬಿಟ್ ಕಾರ್ಡ್ ಅಥವಾ ಯೂ‌ಪಿ‌ಐ ಮೂಲಕ ಪಾವತಿಸಿ.
  • ಅರ್ಜಿಯಲ್ಲಿ ನಮೂದಿಸಿರುವ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ

ಪ್ರಮುಖ ಲಿಂಕುಗಳು:

ಲೇಖನವನ್ನು ಶೇರ್ ಮಾಡಿ

Leave a Reply

Your email address will not be published. Required fields are marked *