NHAI ನೇಮಕಾತಿ 2024: ಮ್ಯಾನೇಜರ್ ಹುದ್ದೆಗಾಗಿ ಹೊಸ ಅಧಿಸೂಚನೆ ಪ್ರಕಟ
ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯ (NHAI) 2024 ನೇ ಸಾಲಿನ ಹೊಸ ನೇಮಕಾತಿ ಅಧಿಸೂಚನೆಯನ್ನು ಪ್ರಕಟಗೊಳಿಸಿದ್ದು ಸಂಷೆಯಲ್ಲಿ ಖಾಲಿ ಇರುವ ಜನರಲ್ ಮ್ಯಾನೇಜರ್, ಡೆಪ್ಯುಟಿ ಮ್ಯಾನೇಜರ್ ಮತ್ತು ಮ್ಯಾನೇಜರ್ ನ ಒಟ್ಟು 60 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. NHAI ನೇಮಕಾತಿಯು 3 ವರ್ಷಗಳ ಅವಧಿಗಾಗಿ ನಡೆಯಲಿದ್ದು ಆಯ್ಕೆಯಾದ ಅಭ್ಯರ್ಥಿಗಳು NHAI ಅನುಮೋದನೆಯೊಂದಿಗೆ ಹೆಚ್ಚುವರಿ 01 ವರ್ಷ ವಿಸ್ತರಣೆ ಪಡೆಯುವ ಆಯ್ಕೆ ಹೊಂದಿರುತ್ತಾರೆ.
ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು NHAI ನೇಮಕಾತಿ 2024 ರ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ ಅರ್ಜಿ ಹಾಕಿರಿ.
NHAI ನೇಮಕಾತಿ 2024 ವಿವರ
ಸಂಸ್ಥೆಯ ಹೆಸರು | ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯ (NHAI) |
ಹುದ್ದೆಯ ಹೆಸರು | ಜನರಲ್ ಮ್ಯಾನೇಜರ್, ಡೆಪ್ಯುಟಿ ಮ್ಯಾನೇಜರ್ ಮತ್ತು ಮ್ಯಾನೇಜರ್ |
ಒಟ್ಟು ಹುದ್ದೆಗಳು | 60 |
ವೇತನ | ಪೆ ಸ್ಕೇಲ್ 13, ಪೆ ಸ್ಕೇಲ್ 12, ಪೆ ಸ್ಕೇಲ್ 11 |
ಅಧಿಕ್ರತ ಪೋರ್ಟಲ್ | nhai.gov.in |
ಕೆಲಸದ ಸ್ವಭಾವ | ಡೆಪ್ಯುಟೇಶನ್ (3+1) |
NHAI ನೇಮಕಾತಿ 2024 ಪ್ರಮುಖ ದಿನಾಂಕಗಳು
NHAI ನೇಮಕಾತಿ 2024 ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆರಂಭಗೊಂಡಿದ್ದು ಆಸಕ್ತ ಅಭ್ಯರ್ಥಿಗಳಿಗೆ ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 23-09-2024 ಆಗಿರುತ್ತದೆ ಮತ್ತು ಅರ್ಜಿಯ ಹಾರ್ಡ್ ಕಾಫಿ ಸಲ್ಲಿಸಲು ಕೊನೆಯ ದಿನಾಂಕ 22-10-2024 ಆಗಿರುತ್ತದೆ.
NHAI ನೇಮಕಾತಿ 2024 ವಯೋಮಿತಿ
NHAI ನೇಮಕಾತಿ 2024ರ ಸದರಿ ಹುದ್ದೆಗಳ ಆಯ್ಕೆಗೆ ಅಭ್ಯರ್ಥಿಗಳ ಗರಿಷ್ಠ ವಯಸ್ಸು 56 ವರ್ಷಗಳು.
NHAI ನೇಮಕಾತಿ 2024 ವಿದ್ಯಾರ್ಹತೆ
ಹುದ್ದೆ ಹೆಸರು | ವಿದ್ಯಾರ್ಹತೆ |
ಜನರಲ್ ಮ್ಯಾನೇಜರ್ | ಮಾನ್ಯತೆ ಪಡೆದ ವಿಶ್ವವಿದ್ಯಾಲದಿಂದ ಸಿವಿಲ್ ಇಂಜಿನಿಯರಿಂಗ್ನಲ್ಲಿ ಡಿಗ್ರಿ +14 ವರ್ಷಗಳ ಅನುಭವ, ಅದರಲ್ಲಿ 9 ವರ್ಷ ರಾಷ್ಟ್ರೀಯ/ರಾಜ್ಯ ಹೆದ್ದಾರಿ ಯೋಜನೆಗಳಲ್ಲಿ. |
ಡೆಪ್ಯುಟಿ ಮ್ಯಾನೇಜರ್ | ಮಾನ್ಯತೆ ಪಡೆದ ವಿಶ್ವವಿದ್ಯಾಲದಿಂದ ಸಿವಿಲ್ ಇಂಜಿನಿಯರಿಂಗ್ನಲ್ಲಿ ಡಿಗ್ರಿ + ರಾಷ್ಟ್ರೀಯ/ರಾಜ್ಯ ಹೆದ್ದಾರಿ ಯೋಜನೆಗಳಲ್ಲಿ 9 ವರ್ಷ ಅನುಭವ |
ಮ್ಯಾನೇಜರ್ | ಮಾನ್ಯತೆ ಪಡೆದ ವಿಶ್ವವಿದ್ಯಾಲದಿಂದ ಸಿವಿಲ್ ಇಂಜಿನಿಯರಿಂಗ್ನಲ್ಲಿ ಡಿಗ್ರಿ + ರಾಷ್ಟ್ರೀಯ/ರಾಜ್ಯ ಹೆದ್ದಾರಿ ಯೋಜನೆಗಳಲ್ಲಿ 3 ವರ್ಷ ಅನುಭವ |
NHAI ನೇಮಕಾತಿ 2024 ಆಯ್ಕೆ ವಿಧಾನ
NHAI ನೇಮಕಾತಿ 2024 ಆಯ್ಕೆಯು ಕ್ವಾಲಿಫಿಕೇಶನ್, ಅನುಭವ ಪರಿಶೀಲನೆ ಮತ್ತು ಸಂದರ್ಶನವನ್ನು ಒಳಗೊಂಡಿರುತ್ತದೆ.
NHAI ನೇಮಕಾತಿ 2024 ಅರ್ಜಿ ಸಲ್ಲಿಕೆ
- NHAI ನೇಮಕಾತಿ 2024 ಅರ್ಜಿ ಸಲ್ಲಿಕೆಗೆ ಅಭ್ಯರ್ಥಿಗಳು NHAI ಅಧಿಕ್ರತ ಪೋರ್ಟಲ್ ಗೆ ಭೇಟಿ ನೀಡಿ ಅಲ್ಲಿರುವ ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ ಆನ್ಲೈನ್ ನಲ್ಲಿ ಸಲ್ಲಿಕೆ ಮಾಡಬೇಕು. ಆನ್ಲೈನ್ ಅರ್ಜಿಯನ್ನು ಅಭ್ಯರ್ಥಿಗಳು ಸೆಪ್ಟೆಂಬರ್ 23, 2024 ರ ಒಳಗಾಗಿ ಸಲ್ಲಿಸಬೇಕಾಗುತ್ತದೆ.
- ಭರ್ತಿಯಾದ ಆನ್ಲೈನ್ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಮುದ್ರಿಸಬೇಕು. ನಂತರ ಕಡ್ಡಾಯವಾಗಿ ಮುದ್ರಿತ ಅರ್ಜಿ ನಮೂನೆಯನ್ನು ಮತ್ತು ಅಗತ್ಯ ದಾಖಲೆಗಳನ್ನು ಪೋಸ್ಟ್ ಮೂಲಕ ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ. ಮುದ್ರಿತ ಅರ್ಜಿ ನಮೂನೆಯ ದಿನಾಂಕ 22-10-2024 ರ ಒಳಗಾಗಿ NHAI ಗೆ ತಲುಪಬೇಕಾಗುತ್ತದೆ.
- ಅರ್ಜಿ ಸಲ್ಲಿಕೆ ವಿಳಾಸ: DGM (HR/ADMN)-III, NHAI
Plot No. G-5 ಮತ್ತು 6, Sector-10
Dwarka, New Delhi-110075
NHAI ನೇಮಕಾತಿ 2024 ಪ್ರಮುಖ ಲಿಂಕುಗಳು
ಅರ್ಜಿ ಸಲ್ಲಿಕೆ | ಇಲ್ಲಿ ಒತ್ತಿ |
ನೋಟಿಫಿಕೇಶನ್ | ಇಲ್ಲಿ ಒತ್ತಿ |