ರೈಲ್ವೆ ಜೆಈ ನೇಮಕಾತಿ 2024: ಒಟ್ಟು 7951 ಹುದ್ದೆಗಳ ಭರ್ಜರಿ ನೇಮಕಾತಿಗೆ ಅರ್ಜಿ ಸಲ್ಲಿಸಿ
ಸ್ನೇಹಿತರೇ, ರೈಲ್ವೆ ನೇಮಕಾತಿ ಮಂಡಳಿಯು ಹೊಸ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು ಆಸಕ್ತರು ಜೂನಿಯರ್ ಇಂಜಿನಿಯರ್, ಡಿಪೊಟ್ ಮೇಟಿರಿಯಲ್ ಸುಪಿರಿಟೆಂಡೆಂಟ್, ಖೆಮಿಕಲ್ ಮತ್ತು ಮೆಟಲರ್ಜಿಕಲ್ ಅಸಿಸ್ಟಂಟ್, ಖೆಮಿಕಲ್ ಮತ್ತು ಮೆಟಲರ್ಜಿಕಲ್ ಸುಪರ್ವೈಸರ್ ಸೇರಿದಂತೆ ಒಟ್ಟು 7951 ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ರೈಳ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದ್ದು ಆಸಕ್ತ ಅಭ್ಯರ್ಥಿಗಳು ಆರ್‌ಆರ್‌ಬಿ ಅಧಿಕ್ರತ ಪೋರ್ಟಲ್ ಗೆ ಭೇಟಿ ನೀಡುವ ಮೂಲಕ ಆಗಸ್ಟ್ 29, 2024 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ವಿದ್ಯಾರ್ಹತೆ
- ಜೂನಿಯರ್ ಇಂಜಿನಿಯರ್: ಇಂಜಿನಿಯರಿಂಗ್ ವಿಭಾಡಲ್ಲಿ 3 ವರ್ಷದ ಡಿಪ್ಲೋಮಾ
- ಮೆಟಲರ್ಜಿಕಲ್ ಸುಪರ್ವೈಸರ್: ಮೆಟಲರ್ಜಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿಯನ್ನು ಹೊಂದಿರಬೇಕು ಅಥವಾ ತತ್ಸಮಾನ.
- ಖೆಮಿಕಲ್ ಸುಪರ್ವೈಸರ್ (ರೀಸರ್ಚ್): ಪದವಿ ಪೂರ್ಣಗೊಂಡಿರಬೇಕು ಅಥವಾ ಸಂಬದಿತ ವಿಭಾಗದಲ್ಲಿ ತತ್ಸಮಾನ.
ಸದರಿ ಹುದ್ದೆಗಳ ವಿದ್ಯಾರ್ಹತೆ ಸಂಬಂದಿತ ಸಂಪೂರ್ಣ ಮಾಹಿತಿಯನ್ನು ಪರಿಶೀಲಿಸಲು ಅಭ್ಯರ್ಥಿಗಳು ಕೆಳಗೆ ಕೊಟ್ಟಿರುವ ಅಧಿಕ್ರತ ನೋಟಿಫಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಗೂಂಡಾಲ ನಿವಾರಣೆ ಮಾಡಿಕೊಳ್ಳಬಹುದು.
ಅರ್ಜಿ ಶುಲ್ಕ
ಎಸ್‌ಸಿ/ಎಸ್‌ಟಿ, ಈಬಿಸಿ, ಪಿಡಬಲ್ಯುಬಿಡಿ, ಮಹಿಳೆಯರು, ನೀವ್ರತ್ತ ಸೈನಿಕ ಅಭ್ಯರ್ಥಿಗಳು ಮತ್ತು ಅಲ್ಪ ಸಂಖ್ಯಾತ ಸಮುದಾಯಗಳ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವು ರೂ 250 (ರಿಫಂಡೆಬಲ್) ಆಗಿರುತ್ತದೆ. ಸಾಮಾನ್ಯ ಮತ್ತು ಓಬಿಸಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವು ರೂ 500 (ನಾನ್ ರಿಫಂಡೆಬಲ್) ಆಗಿರುತ್ತದೆ.
ವಯೋಮಿತಿ
ಅಭ್ಯರ್ಥಿಗಳ ವಯೋಮಿತಿಯು ಕನಿಷ್ಠ 18 ವರ್ಷ ಮತ್ತು ಗರಿಷ್ಠ 36 ವರ್ಷದ ನಡುವಿರಬೇಕು. ಅಭ್ಯರ್ಥಿಗಳಿಗೆ ವಯೋ ಸಡಲಿಕೆಯ ಆಯ್ಕೆಯನ್ನು ನೀಡಲಾಗಿದ್ದು ಓಬಿಸಿ ಅಭ್ಯರ್ಥಿಗಳಿಗೆ 03 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 05 ಮತ್ತು ಪಿಡಬಲ್ಯುಡಿಬಿ ಅಭ್ಯರ್ಥಿಗಳಿಗೆ 10 ವರ್ಷಗಳ ವಯಸ್ಸಿನ ಸದಳಿಕೆಯನ್ನು ಮಾಡಲಾಗಿದೆ.
ವೇತನ
- ಖೆಮಿಕಲ್ (ರೀಸರ್ಚ್) ಮತ್ತು ಮೆಟಲರ್ಜಿಕಲ್ ಸುಪರ್ವೈಸರ್ (ರೀಸರ್ಚ್) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳ ವೇತನವು ರೂ 44,900 ನೀಡಲಾಗುವುದು.
- ಜೂನಿಯರ್ ಇಂಜಿನಿಯರ್, ಡಿಪೊಟ್ ಮೇಟಿರಿಯಲ್ ಸುಪಿರಿಟೆಂಡೆಂಟ್, ಖೆಮಿಕಲ್ ಮತ್ತು ಮೆಟಲರ್ಜಿಕಲ್ ಅಸಿಸ್ಟಂಟ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳ ವೇತನವು ರೂ 35,400 ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ
ರೈಲ್ವೆ ಜೆಈ ನೇಮಕಾತಿ 2024 ರ ಆಯ್ಕೆ ಪ್ರಕ್ರಿಯೆಯು ನಾಲ್ಕು ಹಂತಗಳಲ್ಲಿ ನಡೆಯಲಿದ್ದು, ಅಭ್ಯರ್ಥಿಗಳನ್ನು ಈ ಕೆಳಗೆ ತಿಳಿಸಿದ ಹಂತಗಳಲ್ಲಿ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುವುದು.
- ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT-1)
- ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT-1)
- ದಾಖಲೆಗಳ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
ರೈಲ್ವೆ ಜೆಈ ನೇಮಕಾತಿ 2024 ಅರ್ಜಿ ಸಲ್ಲಿಕೆ ಪ್ರಕ್ರಿಯೆ
- ಅಧಿಕ್ರತ ಆರ್‌ಆರ್‌ಬಿ ಅರ್ಜಿ ಪೋರ್ಟಲ್ ಗೆ ಭೇಟಿ ನೀಡಿ.
- ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಅನ್ನು ಓಟಿಪಿ ಮೂಲಕ ಪರಿಶೀಲಿಸಿ.
- ನೊಂದಣಿ ಸಮಯದಲ್ಲಿ ನೀವು ಅರ್ಜಿ ಸಲ್ಲಿಸಲು ಬಯಸುವ ಆರ್‌ಆರ್‌ಬಿ ಬೋರ್ಡ್ ಅನ್ನು ಆಯ್ಕೆ ಮಾಡಿ, ಈ ಆಯ್ಕೆಯು ಅಂತಿಮವಾಗಿರುತ್ತದೆ.
- ನಿಮ್ಮ ಬೇಸಿಕ್ ವಿವರಗಳು (ಹೆಸರು, DOB, ಆಧಾರ್ ) ಇತ್ಯಾದಿಗಳನ್ನು ನಮೂದಿಸಿ ಮತ್ತು ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಕೊನೆಯದಾಗಿ ಅರ್ಜಿ ಶುಲ್ಕವನ್ನು ಪಾವತಿಸಿ.
ರೈಲ್ವೆ ಜೆಈ ನೇಮಕಾತಿ 2024 ರ ಅರ್ಜಿ ಸಲ್ಲಿಕೆ ಮಾಡಲು ಆಗಸ್ಟ್ 29, 2024 ಕೊನೆಯ ದಿನಾಂಕವಾಗಿದ್ದು, ನಿಗದಿತ ದಿನಾಂಕದೊಳಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಾಗುತ್ತದೆ.
ಪ್ರಮುಖ ಲಿಂಕುಗಳು
ಅರ್ಜಿ ಸಲ್ಲಿಕೆ ಲಿಂಕ್: ಇಲ್ಲಿ ಒತ್ತಿ
ಅಧಿಕ್ರತ ನೋಟಿಫಿಕೇಶನ್ ಲಿಂಕ್: ಇಲ್ಲಿ ಒತ್ತಿ