RRB NTPC Graduate Level Recruitment 2024: ರೈಲ್ವೆ ಇಲಾಖೆಯಲ್ಲಿ ಬ್ರಹತ್ ನೇಮಕಾತಿ

RRB NTPC Graduate Level Recruitment 2024: ರೈಲ್ವೆ ಇಲಾಖೆಯಲ್ಲಿ ಬ್ರಹತ್ ನೇಮಕಾತಿ

ಸ್ನೇಹಿತರೇ, ಇದೀಗ ರೈಲ್ವೆ ನೇಮಕಾತಿ ಮಂಡಳಿ (RRB) ಬಹು ನಿರೀಕ್ಷಿತ RRB NTPC 2024 ರ ಅಧಿಕ್ರತ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು ಈ ಮೂಲಕ ಗ್ರ್ಯಾಜುಯೇಟ್ (ಲೆವೆಲ್ 5 ಮತ್ತು 6) ಮತ್ತು ಅಂಡರ್ ಗ್ರ್ಯಾಜುಯೇಟ್ (ಲೆವೆಲ್ 2 ಮತ್ತು 3) ಹುದ್ದೆಗಳ ಭರ್ತಿಗೆ ಆದೇಶ ನೀಡಲಾಗಿದೆ. ಈ ನೇಮಕಾತಿಯು ಸುಮಾರು 11,558 ಹುದ್ದೆಗಳ ಭರ್ತಿಯನ್ನು ಮಾಡಲಿದ್ದು, ಹುದ್ದೆಗಳ ಪಟ್ಟಿಯಲ್ಲಿ ಜ್ಯೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್, ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್, ಟ್ರೇನ್ಸ್ ಕ್ಲರ್ಕ್, ಮತ್ತು ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್ ಮುಂತಾದವುಗಳು ಸೇರಿವೆ. ಪದವೀಧರರಿಗೆ ಗೂಡ್ಸ್ ಟ್ರೇನ್ ಮ್ಯಾನೇಜರ್, ಮುಖ್ಯ ಕಮರ್ಷಿಯಲ್ ಕಮ್ ಟಿಕೆಟ್ ಸೂಪರ್‌ವೈಸರ್, ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್, ಜ್ಯೂನಿಯರ್ ಅಕೌಂಟ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್, ಮತ್ತು ಸ್ಟೇಷನ್ ಮಾಸ್ಟರ್ ಹುದ್ದೆಗಳು ಲಭ್ಯವಿವೆ.

RRB NTPC 2024 ನೇಮಕಾತಿಯು (RRB NTPC 2024 Recruitment) 12 ನೇ ತರಗತಿಯಲ್ಲಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳಿಗೆ ಮತ್ತು ಪದವೀಧರರಿಗೆ ಭಾರತೀಯ ರೈಲ್ವೇಯಲ್ಲಿ ಸೇರಲು ಉತ್ತಮ ಅವಕಾಶ ಒದಗಿಸಲಿದೆ. ನೇಮಕಾತಿ ಆಯ್ಕೆ ಪ್ರಕ್ರಿಯೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT-1 ಮತ್ತು CBT-2), ಕೌಶಲ್ಯ ಪರೀಕ್ಷೆ, ದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ. ಪದವಿ ಹುದ್ದೆಗಳ ಅಧಿಸೂಚನೆಯನ್ನು 2024 ಸೆಪ್ಟೆಂಬರ್ 13 ರಂದು ಬಿಡುಗಡೆ ಮಾಡಲಾಗಿದ್ದು, ಆನ್ಲೈನ್ ಅರ್ಜಿಗಳನ್ನು ದಿನಾಂಕ ಸೆಪ್ಟೆಂಬರ್ 14, 2024 ರಿಂದ ಅಕ್ಟೋಬರ್ 13, 2024 ರವರೆಗೆ ಸಲ್ಲಿಸಬಹುಹುದಾಗಿದೆ. ಪದವಿ ಪೂರ್ವ ಹುದ್ದೆಗಳಿಗಾಗಿ ಅಧಿಸೂಚನೆಯನ್ನು ಸೆಪ್ಟೆಂಬರ್ 20, 2024 ರಂದು ಲಭ್ಯವಿರಲಿದ್ದು ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 21, 2024 ರಿಂದ ಅಕ್ಟೋಬರ್ 20, 2024 ರವರೆಗೆ ಕಾಲಾವಕಾಶ ನೀಡಲಾಗುವುದು.

RRB NTPC 2024 (ಗ್ರ್ಯಾಜುಯೇಟ್) ನೇಮಕಾತಿ ಪ್ರಮುಖ ದಿನಾಂಕಗಳು

  • ಸೂಚನೆ ಬಿಡುಗಡೆ ದಿನಾಂಕ: RRB NTPC 2024 ನೇಮಕಾತಿಗೆ ಸಂಬಂಧಿಸಿದಂತೆ ಅಧಿಕೃತ ಪ್ರಕಟಣೆ ಎರಡು ಹಂತಗಳಲ್ಲಿ ಹೊರಬಿಡಲಾಗುತ್ತದೆ. ಪಿಜಿ ಹುದ್ದೆಗಳಿಗಾಗಿ 13 ಸೆಪ್ಟೆಂಬರ್ 2024 ಮತ್ತು ಅಂಡರ್‌ಗ್ರ್ಯಾಜುಯೇಟ್ ಹುದ್ದೆಗಳಿಗಾಗಿ 20 ಸೆಪ್ಟೆಂಬರ್ 2024 ರಂದು ಪ್ರಕಟಣೆ ಹೊರಬೀಳಲಿದೆ.
  • ಆನ್‌ಲೈನ್ ಅರ್ಜಿ ಪ್ರಾರಂಭ ದಿನಾಂಕ: ಪಿಜಿ ಹುದ್ದೆಗಳಿಗಾಗಿ ಆನ್‌ಲೈನ್ ಅರ್ಜಿ ಪ್ರಕ್ರಿಯೆ 14 ಸೆಪ್ಟೆಂಬರ್ 2024 ರಿಂದ ಪ್ರಾರಂಭವಾಗುತ್ತಿದ್ದು, ಅಂಡರ್‌ಗ್ರ್ಯಾಜುಯೇಟ್ ಹುದ್ದೆಗಳಿಗಾಗಿ 21 ಸೆಪ್ಟೆಂಬರ್ 2024 ರಂದು ಪ್ರಾರಂಭವಾಗಲಿದೆ.
  • ಅರ್ಜಿಯ ಕೊನೆ ದಿನಾಂಕ: RRB NTPC 2024 ನೇಮಕಾತಿಗಾಗಿ ಪಿಜಿ ಹುದ್ದೆಗಳ ಅರ್ಜಿ ಸಲ್ಲಿಸಲು 13 ಅಕ್ಟೋಬರ್ 2024 ಕೊನೆಯ ದಿನವಾಗಿದ್ದು, ಅಂಡರ್‌ಗ್ರ್ಯಾಜುಯೇಟ್ ಹುದ್ದೆಗಳ ಅರ್ಜಿ ಸಲ್ಲಿಸಲು 20 ಅಕ್ಟೋಬರ್ 2024 ಕೊನೆಯ ದಿನವಾಗಿರುತ್ತದೆ.
  • ಶುಲ್ಕ ಪಾವತಿಸುವ ಕೊನೆಯ ದಿನಾಂಕ: ಅಭ್ಯರ್ಥಿಗಳು 14 ಮತ್ತು 15 ಅಕ್ಟೋಬರ್ 2024 ಒಳಗಾಗಿ ತಮ್ಮ ಪರೀಕ್ಷಾ ಶುಲ್ಕವನ್ನು ಪಾವತಿಸಬೇಕು.
  • ಅರ್ಜಿಯಲ್ಲಿ ತಿದ್ದುಪಡಿ ದಿನಾಂಕ: ಅರ್ಜಿ ಸಲ್ಲಿಸಿದ ನಂತರ, ಯಾವುದೇ ತಿದ್ದುಪಡಿ ಮಾಡಬೇಕಾದರೆ 16 ರಿಂದ 25 ಅಕ್ಟೋಬರ್ 2024ರವರೆಗೆ ಅವಕಾಶ ಕಲ್ಪಿಸಲಾಗುವುದು.

RRB NTPC 2024 (ಗ್ರ್ಯಾಜುಯೇಟ್) ನೇಮಕಾತಿ ಹುದ್ದೆಗಳ ವಿವರ

RRB NTPC 2024 (ಗ್ರ್ಯಾಜುಯೇಟ್) ನೇಮಕಾತಿಯು ವಿವಿಧ 8113 ಹುದ್ದೆಗಳ ಭರ್ತಿಗೆ ನಡೆಯಲಿದ್ದು, ಹುದ್ದೆಗಳ ವಿವರ ಈ ಕೆಳಗಿನಂತಿದೆ.

  • ಚೀಫ್ ಕಮರ್ಷಿಯಲ್ ಕಮ್ ಟಿಕೆಟ್ ಸುಪರ್ವೈಸರ್ (1,736 ಹುದ್ದೆಗಳು)
  • ಸ್ಟೇಷನ್ ಮಾಸ್ಟರ್ (994 ಹುದ್ದೆಗಳು)
  • ಗೂಡ್ಸ್ ಟ್ರೈನ್ ಮ್ಯಾನೇಜರ್ (3,144 ಹುದ್ದೆಗಳು)
  • ಜೂನಿಯರ್ ಅಕೌಂಟ್ ಅಸಿಸ್ಟಂಟ್ ಕಮ್ ಟೈಪಿಸ್ಟ್ (1507 ಹುದ್ದೆಗಳು)
  • ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ (723 ಹುದ್ದೆಗಳು)

RRB NTPC 2024 (ಗ್ರ್ಯಾಜುಯೇಟ್) ನೇಮಕಾತಿ ವಿದ್ಯಾರ್ಹತೆ

  • ಚೀಫ್ ಕಮರ್ಷಿಯಲ್ ಕಾಂ ಟಿಕೆಟ್ ಸುಪರ್ವೈಸರ್, ಸ್ಟೇಟ್ ಮಾಸ್ಟರ್, ಗುಡ್ ಟ್ರೈನ್ ಮ್ಯಾನೇಜರ್ ಹುದ್ದೆಗಳಿಗೆ ಅಭ್ಯರ್ಥಿಗಳು ಭಾರತದಲ್ಲಿ ಯಾವುದೇ ಮಾನ್ಯತೆಯನ್ನು ಹೊಂದಿರುವ ವಿಶ್ವವಿದ್ಯಾಲಯದಿಂದ ಪದವಿಯನ್ನು ಪೂರ್ಣಗೊಳಿಸಿರಬೇಕು.
  • ಜೂನಿಯರ್ ಅಕೌಂಟ್ ಅಸಿಸ್ಟಂಟ್ ಕಾಂ ಟೈಪಿಸ್ಟ್, ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ ಹುದ್ದೆಗಳಿಗೆ ಅಭ್ಯರ್ಥಿಗಳು ಭಾರತದಲ್ಲಿ ಯಾವುದೇ ಮಾನ್ಯತೆಯನ್ನು ಹೊಂದಿರುವ ವಿಶ್ವವಿದ್ಯಾಲಯದಿಂದ ಪದವಿಯನ್ನು ಪೂರ್ಣಗೊಳಿಸಿರಬೇಕು ಮತ್ತು ಇಂಗ್ಲೀಷ್ ಹಾಗೂ ಹಿಂದಿಯಲ್ಲಿ ಕಂಪ್ಯೂಟರ್ ಟೈಪಿಂಗ್ ಕೌಶಲ್ಯವನ್ನು ಹೊಂದಿರಬೇಕು.

RRB NTPC 2024 (ಗ್ರ್ಯಾಜುಯೇಟ್) ನೇಮಕಾತಿ ವಯೋಮಿತಿ

  • ಗ್ರಾಜುಯೇಟ್ ಮಟ್ಟದ ಹುದ್ದೆಗಳು: ಕನಿಷ್ಟ ವಯೋಮಿತಿ 18 ವರ್ಷ ಮತ್ತು ಗರಿಷ್ಠ ವಯೋಮಿತಿ 36 ವರ್ಷ
  • ಅಂಡರ್‌ಗ್ರಾಜುಯೇಟ್ ಮಟ್ಟದ ಹುದ್ದೆಗಳು: ಕನಿಷ್ಟ ವಯೋಮಿತಿ 18 ವರ್ಷ ಮತ್ತು ಗರಿಷ್ಠ ವಯೋಮಿತಿ 33 ವರ್ಷ.
  • ವಯೋ ಸಡಲಿಕೆ: SC/ST: 5 ವರ್ಷ, OBC (ನಾನ್-ಕ್ರೀಮಿ ಲೇಯರ್): 3 ವರ್ಷ, (PWD): 10 ವರ್ಷ (SC/ST ಗೆ 15 ವರ್ಷ ಮತ್ತು OBC ಗೆ 13 ವರ್ಷ)

RRB NTPC 2024 (ಗ್ರ್ಯಾಜುಯೇಟ್) ನೇಮಕಾತಿ ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು OBC (ನಾನ್-ಕ್ರೀಮಿ ಲೇಯರ್): ₹500
  • SC/ST, ಮಹಿಳಾ ಅಭ್ಯರ್ಥಿಗಳು, ಮತ್ತು PWD: ₹250

RRB NTPC 2024 (ಗ್ರ್ಯಾಜುಯೇಟ್) ನೇಮಕಾತಿ ವೇತನ

  • ಗೂಡ್ಸ್ ಟ್ರೈನ್ ಮ್ಯಾನೇಜರ್ ಮತ್ತು ಜೂನಿಯರ್ ಅಕೌಂಟ್ ಅಸಿಸ್ಟಂಟ್ ಕಮ್ ಟೈಪಿಸ್ಟ್ ₹29,200
  • ಚೀಫ್ ಕಮರ್ಷಿಯಲ್ ಕಮ್ ಟಿಕೆಟ್ ಸುಪರ್ವೈಸರ್ ಮತ್ತು ಸ್ಟೇಷನ್ ಮಾಸ್ಟರ್: ₹35,400

ಗಮನಿಸಿ: ವೇತನವು ನಿಖರ ಹುದ್ದೆಗಳನ್ನು ಆಧರಿಸಿ ಬದಲಾಗಬಹುದು.

RRB NTPC 2024 (ಗ್ರ್ಯಾಜುಯೇಟ್) ನೇಮಕಾತಿ ಆಯ್ಕೆ ಪ್ರಕ್ರಿಯೆ

  • ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT 1): ಮೊದಲನೇ ಹಂತದ ಆನ್‌ಲೈನ್ ಪರೀಕ್ಷೆ
  • ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT 2): ಎರಡನೇ ಹಂತದ ಆನ್‌ಲೈನ್ ಪರೀಕ್ಷೆ
  • ಸ್ಕಿಲ್ ಟೆಸ್ಟ್: ಕೌಶಲ್ಯ ಪರೀಕ್ಷೆ
  • ಡಾಕುಮೆಂಟ್ ವೆರಿಫಿಕೇಶನ್: ದಾಖಲೆಗಳ ಪರಿಶೀಲನೆ
  • ಮೆಡಿಕಲ್ ಎಕ್ಸಾಮಿನೇಶನ್: ಆರೋಗ್ಯದ ಪರಿಶೀಲನೆ

RRB NTPC 2024 (ಗ್ರ್ಯಾಜುಯೇಟ್) ನೇಮಕಾತಿ ಅರ್ಜಿ ಸಲ್ಲಿಕೆ

  • ಅಧಿಕ್ರತ ಪೋರ್ಟಲ್ ಗೆ ಭೇಟಿ ನೀಡಿ.
  • ನಿಮ್ಮ ಇಮೇಲ್ ಮತ್ತು ಮೊಬೈಲ್ ಸಂಖ್ಯೆಯನ್ನು ಬಳಸಿ ನಿಂದನಿ ಮಾಡಿ.
  • ಅರ್ಜಿ ಫಾರ್ಮ್ ಭರ್ತಿ ಮಾಡಲು ಎಲ್ಲ ಮಾಹಿತಿಯನ್ನು ನಿಖರವಾಗಿ ತುಂಬಿ.
  • ಪೋಟೋ, ಸಹಿ ಮತ್ತು ಇತರ ಡಾಕ್ಯುಮೆಂಟ್‌ಗಳನ್ನು ಸ್ಕಾನ್ ಮಾಡಿ.
  • ಆನ್ಲೈನ್ ಮೂಲಕ ಶುಲ್ಕವನ್ನು ಪಾವತಿಸಿ.

RRB NTPC 2024 (ಗ್ರ್ಯಾಜುಯೇಟ್) ನೇಮಕಾತಿ ಪ್ರಮುಖ ಲಿಂಕುಗಳು

ಲೇಖನವನ್ನು ಶೇರ್ ಮಾಡಿ

Leave a Reply

Your email address will not be published. Required fields are marked *