RRB NTPC 10+2(Under Graduate) Recruitment 2024: ರೈಲ್ವೆಯಲ್ಲಿ ಅಂಡರ್ ಗ್ರಾಜುಯೇಟ್ 3345 ಹುದ್ದೆಗಳ ಅರ್ಜಿ ಸಲ್ಲಿಕೆ ಆರಂಭ
Indian Railway Recruitment Board (RRB) NTPC 10+2 ಅಡಿಗ್ರಾಜುಯೇಟ್ ಹುದ್ದೆಗಳ ನೇಮಕಾತಿ ಅಧಿಸೂಚನೆ (CEN 06/2024) ಬಿಡುಗಡೆ ಮಾಡಿದೆ. ಈ ಅಧಿಸೂಚನೆಯಡಿಯಲ್ಲಿ 3445 ಹುದ್ದೆಗಳ ಭರ್ತಿ ನಡೆಯಲಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ನೀಡಿರುವ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಬಹುದು. 10+2 ಮಧ್ಯಮ ಪರೀಕ್ಷೆ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
RRB NTPC 2024 ನೇಮಕಾತಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ 2024 ಸೆಪ್ಟೆಂಬರ್ 21 ರಂದು ಆರಂಭವಾಗಲಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2024 ಅಕ್ಟೋಬರ್ 20 ಆಗಿದೆ. ಸಾಮಾನ್ಯ/ಒಬಿಸಿ/ಈಡಬ್ಲ್ಯುಎಸ್ ವರ್ಗದ ಅಭ್ಯರ್ಥಿಗಳಿಗೆ ₹500 ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು, SC/ST/PH ವರ್ಗದವರು ಮತ್ತು ಮಹಿಳಾ ಅಭ್ಯರ್ಥಿಗಳಿಗೆ ₹250 ಶುಲ್ಕವನ್ನು ನಿಗದಿಪಡಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ನಂತರ, ಮೊದಲ ಹಂತದ ಪರೀಕ್ಷೆಗೆ ಹಾಜರಾದ ಸಾಮಾನ್ಯ/ಒಬಿಸಿ/ಈಡಬ್ಲ್ಯುಎಸ್ ವರ್ಗದ ಅಭ್ಯರ್ಥಿಗಳಿಗೆ ₹400 ಶುಲ್ಕವನ್ನು ಹಿಂದಿರಿಸಲಾಗುತ್ತದೆ.
ಪ್ರಮುಖ ದಿನಾಕಗಳು
- ಅರ್ಜಿ ಪ್ರಾರಂಭ ದಿನಾಂಕ: RRB NTPC 2024 ನೇಮಕಾತಿಗಾಗಿ ಆನ್‌ಲೈನ್ ಅರ್ಜಿ ಸಲ್ಲಿಕೆ 21 ಸೆಪ್ಟೆಂಬರ್ 2024 ರಿಂದ ಆರಂಭವಾಗಲಿದೆ. ಅಭ್ಯರ್ಥಿಗಳು ಈ ದಿನಾಂಕದಿಂದಲೇ ಅರ್ಜಿಯನ್ನು ಸಲ್ಲಿಸಲು ಶುರುಮಾಡಬಹುದು.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20 ಅಕ್ಟೋಬರ್ 2024 ಆಗಿದ್ದು, ಈ ದಿನಾಂಕದೊಳಗೆ ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಸಲ್ಲಿಸಬೇಕು.
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: ಅರ್ಜಿಗೆ ಸಂಬಂಧಿಸಿದ ಶುಲ್ಕವನ್ನು 20 ಅಕ್ಟೋಬರ್ 2024ರೊಳಗೆ ಪಾವತಿಸಬೇಕಾಗಿದೆ. ಈ ದಿನಾಂಕದ ನಂತರ ಅರ್ಜಿ ಶುಲ್ಕ ಪಾವತಿಸಲು ಅವಕಾಶವಿರುವುದಿಲ್ಲ.
ಹುದ್ದೆಗಳ ವಿವರ
RRB NTPC 10+2 Recruitment 2024 ಅಧಿಸೂಚನೆಯ ಪ್ರಕಾರ, ಕಮರ್ಶಿಯಲ್ ಕಮ್ ಟಿಕೆಟ್ ಕ್ಲರ್ಕ್, ಟ್ರೈನ್ ಕ್ಲರ್ಕ್, ಅಕೌಂಟ್ ಕ್ಲರ್ಕ್ ಕಮ್ ಟೈಪಿಸ್ಟ್ ಮತ್ತು ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ ಸೇರಿಂದಂತೆ ಒಟ್ಟು 3445 ಹುದ್ದೆಗಳ ಭರ್ತಿಗೆ ಆದೇಶ ನೀಡಲಾಗಿದೆ.
- ಕಮರ್ಶಿಯಲ್ ಕಮ್ ಟಿಕೆಟ್ ಕ್ಲರ್ಕ್: 2022 ಹುದ್ದೆಗಳು
- ಟ್ರೈನ್ ಕ್ಲರ್ಕ್: 72 ಹುದ್ದೆಗಳು
- ಅಕೌಂಟ್ ಕ್ಲರ್ಕ್ ಕಮ್ ಟೈಪಿಸ್ಟ್: 361 ಹುದ್ದೆಗಳು
- ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್: 990 ಹುದ್ದೆಗಳು
ವಿದ್ಯಾರ್ಹತೆ
RRB NTPC 10+2 Recruitment 2024 ರ ಪ್ರಕಾರ, ಸದರಿ ಹುದ್ದೆಗಳಿಗೆ ಹುದ್ದೆಗಳಿಗೆ ಈ ಕೆಳಗಿನ ವಿದ್ಯಾರ್ಹತೆಗಳನ್ನು ಹೊಂದಿರಬೇಕು:
1) ಕಮರ್ಶಿಯಲ್ ಕಮ್ ಟಿಕೆಟ್ ಕ್ಲರ್ಕ್ (Commercial Cum Ticket Clerk):
ಕನಿಷ್ಠ 10+2 ಮಧ್ಯಮ ಪರೀಕ್ಷೆ (Intermediate Exam.) ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಮಾನ್ಯತೆ ಹೊಂದಿದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ಉತ್ತಿರ್ಣರಾಗಿರಬೇಕು.
2) ಟ್ರೈನ್ ಕ್ಲರ್ಕ್ (Train Clerk):
10+2 ಮಧ್ಯಮ ಪ್ರಮಾಣಪತ್ರ (Intermediate Certificate) ಹೊಂದಿರಬೇಕು.
3) ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್ (Accounts Clerk Cum Typist):
- 10+2 ಮಧ್ಯಮ ಪರೀಕ್ಷೆ (Intermediate Exam) ಮಾನ್ಯತೆ ಪಡೆದ ಬೋರ್ಡ್‌ನಿಂದ ಉತ್ತೀರ್ಣರಾಗಿರಬೇಕು.
- ಕಂಪ್ಯೂಟರ್‌ನಲ್ಲಿ ಟೈಪಿಂಗ್ ಕೌಶಲ್ಯ ಅಗತ್ಯ: ಇಂಗ್ಲಿಷ್‌ನಲ್ಲಿ 30 ಶಬ್ದಗಳು ಪ್ರತಿ ನಿಮಿಷ ಅಥವಾ ಹಿಂದಿಯಲ್ಲಿ 25 ಶಬ್ದಗಳು ಪ್ರತಿ ನಿಮಿಷದ ಟೈಪಿಂಗ್ ವೇಗವನ್ನು ಹೊಂದಿರಬೇಕು.
4) ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ (Junior Clerk Cum Typist):
- ಕನಿಷ್ಠ 10+2 ಮಧ್ಯಮ ಪ್ರಮಾಣಪತ್ರ (Intermediate Certificate) ಹೊಂದಿರಬೇಕು.
- ಟೈಪಿಂಗ್ ಕೌಶಲ್ಯ: ಇಂಗ್ಲಿಷ್‌ನಲ್ಲಿ 35 ಶಬ್ದಗಳ ಪ್ರತಿ ನಿಮಿಷ ಅಥವಾ ಹಿಂದಿಯಲ್ಲಿ 30 ಶಬ್ದಗಳ ಪ್ರತಿ ನಿಮಿಷದ ಟೈಪಿಂಗ್ ವೇಗ ಅಗತ್ಯವಿದೆ.
ವಯೋಮಿತಿ
RRB NTPC 10+2 Recruitment 2024 ರ ಪ್ರಕಾರ, ಅಭ್ಯರ್ಥಿಯಕನಿಷ್ಠ 18 ಮತ್ತು ಗರಿಷ್ಠ ವಯಸ್ಸು 33 ವರ್ಷಗಳಾಗಿರಬೇಕು. ಮೀಸಲು ವರ್ಗದ ಅಭ್ಯರ್ಥಿಗಳಿಗೆ ವಯೋ ಸಡಲಿಕೆ ಈ ಕೆಳಗಿನಂತಿದೆ:
- SC/ST: 5 ವರ್ಷಗಳ ಸಡಲಿಕೆ
- OBC ನಾನ್ ಕ್ರೀಮಿ ಲೆಯರ್ : 3 ವರ್ಷಗಳ ಸಡಲಿಕೆ
- PwBD: 10 ವರ್ಷಗಳ ಸಡಲಿಕೆ (SC/ST PWD: 15 ವರ್ಷಗಳು ಹೆಚ್ಚುವರಿ, OBC PWD: 13 ವರ್ಷಗಳು ಹೆಚ್ಚುವರಿ)
ವೇತನ
RRB NTPC 10+2 Recruitment 2024 ಪ್ರಕಾರ, ವಿವಿಧ ಹುದ್ದೆಗಳ ವೇತನ ಶ್ರೇಣಿಯು ಈ ಕೆಳಗಿನಂತಿದೆ.
- ಕಮರ್ಶಿಯಲ್ ಕಮ್ ಟಿಕೆಟ್ ಕ್ಲರ್ಕ್: ₹21,700/- (Level-3)
- ಟ್ರೈನ್ ಕ್ಲರ್ಕ್: ₹19,900/- (Level-2)
- ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್: ₹19,900/- (Level-2)
- ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್: ₹19,900/- (Level-2)
ಅರ್ಜಿ ಶುಲ್ಕ
RRB NTPC 10+2 Recruitment 2024 ರ ಪ್ರಕಾರ, ವಿವಿಧ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವು ಈ ಕೆಳಗಿನಂತಿದೆ:
- ಸಾಮಾನ್ಯ / ಓಬಿಸಿ / ಇಡಬ್ಲ್ಯೂಎಸ್: ₹500/-
- ಎಸ್‌ಸಿ / ಎಸ್‌ಟಿ / ಶಾರೀರಿಕ ಅಶಕ್ತತೆ (PH): ₹250/-
- ಎಲ್ಲಾ ವರ್ಗದ ಮಹಿಳೆಯರು: ₹250/-
ಮೊದಲ ಹಂತದ ಪರೀಕ್ಷೆಯಲ್ಲಿ ಹಾಜರಾಗಿದ ಬಳಿಕ ಅರ್ಜಿ ಶುಲ್ಕದ ಮರುಪಾವತಿ ಇರುತ್ತದೆ.
- ಸಾಮಾನ್ಯ / ಓಬಿಸಿ / ಇಡಬ್ಲ್ಯೂಎಸ್: ₹400/- ಮರುಪಾವತಿ
- ಎಸ್‌ಸಿ / ಎಸ್‌ಟಿ / ಶಾರೀರಿಕ ಅಶಕ್ತತೆ / ಮಹಿಳೆಯರು: ₹250/- ಮರುಪಾವತಿ
ಆಯ್ಕೆ ಪ್ರಕ್ರಿಯೆ
RRB NTPC 10+2 Recruitment 2024 ನೇಮಕಾತಿ ಪ್ರಕ್ರಿಯೆಯು ಹೀಗೆ ನಡೆಯಲಿದೆ:
- ಲಿಖಿತ ಪರೀಕ್ಷೆ: ಅಭ್ಯರ್ಥಿಗಳು ಮೊದಲ ಹಂತದಲ್ಲಿ ಲಿಖಿತ ಪರೀಕ್ಷೆಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ.
- ಟೈಪಿಂಗ್ ಕೌಶಲ್ಯ ಪರೀಕ್ಷೆ: ಮೊದಲ ಹಂತದ ಪರೀಕ್ಷೆಯಲ್ಲಿ ಯಶಸ್ವಿಯಾಗಿದ ನಂತರ, ಕೆಲ ಹುದ್ದೆಗಳಿಗಾಗಿ (ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್ ಮತ್ತು ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್) ಟೈಪಿಂಗ್ ಕೌಶಲ್ಯ ಪರೀಕ್ಷೆಗಾಗಿಯೂ ಅರ್ಜಿ ಸಲ್ಲಿಸಬೇಕು.
- ಅಂತಿಮ ಆಯ್ಕೆ: ಲಿಖಿತ ಪರೀಕ್ಷೆ ಮತ್ತು ಟೈಪಿಂಗ್ ಕೌಶಲ್ಯ ಪರೀಕ್ಷೆಯಲ್ಲಿ ಪಡೆದ ಒಟ್ಟು ಅಂಕಗಳ ಆಧಾರದ ಮೇಲೆ ಅಂತಿಮ ಆಯ್ಕೆ ಮಾಡಲಾಗುತ್ತದೆ.
- ಮೆಡಿಕಲ್ ಪರೀಕ್ಷೆ: ಆಯ್ಕೆಯಾದ ಅಭ್ಯರ್ಥಿಗಳನ್ನು ಮೆಡಿಕಲ್ ಪರೀಕ್ಷೆಗೆ ಕಳುಹಿಸಲಾಗುತ್ತದೆ.
ಅರ್ಜಿ ಸಲ್ಲಿಕೆ
- RRB NTPC 10+2 Recruitment 2024 ರ ಅರ್ಜಿ ಸಲ್ಲಿಕೆಯ ಮೊದಲು ಅಭ್ಯರ್ಥಿಗಳು ಅಧಿಕ್ರತ ಅಧಿಸೂಚನೆಯಲ್ಲಿ ನೀಡಿರುವ ಎಲ್ಲ ಅರ್ಹತಾ ಮಾನದಂಡಗಳನ್ನು (ವಿದ್ಯಾರ್ಹತೆ ಮತ್ತು ವಯೋಮಿತಿ) ಪರಿಶೀಲಿಸಿ ತಾವು ತಾವು ಅರ್ಹರು ಎಂದು ಖಚಿತ ಪಡಿಸಿಕೊಳ್ಳಬೇಕು.
- ನಂತರ ಭಾರತೀಯ ರೈಲ್ವೆ (RRB) ಅಧಿಕ್ರತ ಪೋರ್ಟಲ್ ಗೆ ಭೇಟಿ ನೀಡಿ.
- ಪ್ರೊಫೈಲ್‌ನಲ್ಲಿ ಲಾಗಿನ್ ಮಾಡಲು ಆಯ್ಕೆ ಪಡೆಯುವಿರಿ, ನಿಮ್ಮ ಇಮೇಲ್ ಅಥವಾ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ನೊಂದಣಿಯನ್ನು ಮಾಡಿಸಿಕೊಳ್ಳಿ.
- ಅರ್ಜಿ ನಮೂನೆಯನ್ನು ಎಲ್ಲ ಅಗತ್ಯ ಮಾಹಿತಿಯೊಂದಿಗೆ ಭರ್ತಿ ಮಾಡಿದ ಬಳಿಕ ಶೈಕ್ಷಣಿಕ ಪ್ರಮಾಣಪತ್ರಗಳು, ಐಡಿ ಪ್ರೂಫ್, ಇತ್ತೀಚಿನ ಭಾವಚಿತ್ರ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
- ನಿಮ್ಮ ವರ್ಗಕ್ಕೆ ಸಂಬಂದಿತ ಅರ್ಜಿ ಶುಲ್ಕವನ್ನು ನೆಟ್ ಬ್ಯಾಂಕಿಂಗ್, ಕ್ರೆಡಿಟ್/ಡೆಬಿಟ್ ಕಾರ್ಡ್ ಅಥವಾ ಯೂಪಿಐ ಮೂಲಕ ಪಾವತಿಸಿ.
- ಅರ್ಜಿಯಲ್ಲಿ ನಮೂದಿಸಿರುವ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.
ಪ್ರಮುಖ ಲಿಂಕುಗಳು
- ಅರ್ಜಿ ಸಲ್ಲಿಕೆ: ಇಲ್ಲಿ ಒತ್ತಿ
- ಶಾರ್ಟ್ ನೋಟಿಸ್: ಇಲ್ಲಿ ಒತ್ತಿ