ಆರ್‌ಆರ್‌ಸಿ ಪೂರ್ವ ರೈಲು ಅಪ್ರೆಂಟೀಸ್ ನೇಮಕಾತಿ 2024: ಒಟ್ಟು 3115 ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ
ಸ್ನೇಹಿತರೇ ಆರ್‌ಆರ್‌ಸಿ ಪೂರ್ವ ರೈಲು 1962 ಅಪ್ರೆಂಟೀಸ್ ಕಾಯ್ದೆಯಡಿ 3,115 ಹುದ್ದೆಗಳ ನೇಮಕಕ್ಕೆ ಆದೇಶ ನೀಡಲಾಗಿದೆ. ಅರ್ಹ ಅಭ್ಯರ್ಥಿಗಳು 10 ನೇ ತರಗತಿ ತೇರ್ಗಡೆ ಹೊಂದಿರಬೇಕು ಹಾಗೂ ಸಂಬಂದಿತ ವ್ರತ್ತಿಯಲ್ಲಿ ರಾಷ್ಟ್ರೀಯ ವ್ರತ್ತಿ (ಟ್ರೇಡ್) ಪ್ರಮಾಣಪತ್ರವನ್ನು (ಐಟಿಐ) ಹೊಂದಿರಬೇಕು. ಈ ನೇಮಕಾತಿ ಹುದ್ದೆಗಳು ಹಾವಾಡ, ಸಿಯಾಲ್ದಾ, ಲಿಲುಹ್ ಮತ್ತು ಜಮಾಲ್ಪುರ ಕಾರ್ಯಾಗಾರ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಲಭ್ಯವಿರುತ್ತವೆ.
ಆರ್‌ಆರ್‌ಸಿ ಪೂರ್ವ ರೈಲು ಅಪ್ರೆಂಟೀಸ್ ನೇಮಕಾತಿ 2024 ರ ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸೆಪ್ಟೆಂಬರ್ 24 ರಂದು ಆರಂಭಗೊಳ್ಳಲಿದ್ದು, ಅಕ್ಟೋಬರ್ 23. 2024 ರಂದು ಕೊನೆಗೊಳ್ಳಲಿದೆ. ಈ ನೇಮಕಾತಿಯ ಮೂಲಕ ಆಯ್ಕೆಯಾದ ಅಭ್ಯರ್ಥಿಗಳನ್ನು ಪೂರ್ವ ರೈಲು ವಿಭಾಗಗಳು ಮತ್ತು ಕಾರ್ಯಾಗಾರಗಳಲ್ಲಿ ನಿಯೋಜಿಸಲಾಗುವುದು. ಅರ್ಜಿ ಸಲ್ಲಿಸುವ ಸಾಮಾನ್ಯ/ಓಬಿಸಿ/ಈಡಬಲ್ಯುಎಸ್ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವು 100 ರೂ ಆಗಿರುತ್ತದೆ. ಆದರೆ ಎಸ್‌ಸಿ/ಎಸ್‌ಟಿ/ಪಿಡಬಲ್ಯುಡಿಬಿ/ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಪಾವತಿ ಇರುವುದಿಲ್ಲ. ಅಭ್ಯರ್ಥಿಗಳು 15 ರಿಂದ 24 ವರ್ಷಗಳ ನಡುವಿನ ವಯೋಮಿತಿಯನ್ನು ಹೊಂದಿರಬೇಕು. ಅಭ್ಯರ್ಥಿಗಳ ಆಯ್ಕೆಯನ್ನು ಮ್ಯಾಟ್ರಿಕ್ಯುಲೇಶನ್ ಹಾಗೂ ಐಟಿಐ ಅಂಕಗಳನ್ನು ಆಧರಿಸಿ ಮೆರಿಟ್ ಪಟ್ಟಿಯಿಂದ ಮಾಡಲಾಗುವುದು.
ಆರ್‌ಆರ್‌ಸಿ ಪೂರ್ವ ರೈಲು ಅಪ್ರೆಂಟೀಸ್ ನೇಮಕಾತಿ 2024 ಪ್ರಮುಖ ದಿನಾಂಕಗಳು
- ನೋಟಿಫಿಕೇಶನ್ ಬಿಡುಗಡೆ ದಿನಾಂಕ: ಸೆಪ್ಟೆಂಬರ್ 09, 2024
- ಆನ್ಲೈನ್ ಅರ್ಜಿ ಸಲ್ಲಿಕೆ ದಿನಾಂಕ: ಸೆಪ್ಟೆಂಬರ್ 24, 2024
- ಆನ್ಲೈನ್ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: ಅಕ್ಟೋಬರ್ 23, 2024
- ಅರ್ಜಿ ಶುಲ್ಕ ಪಾವತಿಯ ಕೊನೆಯ ದಿನಾಂಕ: ಅಕ್ಟೋಬರ್ 23, 2024
ಆರ್‌ಆರ್‌ಸಿ ಪೂರ್ವ ರೈಲು ಅಪ್ರೆಂಟೀಸ್ ನೇಮಕಾತಿ 2024 ಹುದ್ದೆಗಳ ವಿವರ
ಆರ್‌ಆರ್‌ಸಿ ಪೂರ್ವ ರೈಲು ಅಪ್ರೆಂಟೀಸ್ ನೇಮಕಾತಿ 2024 ರಲ್ಲಿ ಒಟ್ಟು 3,115 ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಯಲಾಗಿದೆ. ವಿವಿಧ ವಿಬಾಗ ಮತ್ತು ಕಾರ್ಯಗಳಲ್ಲಿ ಈ ಹುದ್ದೆಗಳು ಲಭ್ಯವಿದಾವೆ.
- ಹಾವಡ ವಿಭಾಗ: 659 ಹುದ್ದೆಗಳು
- ಲಿಲುಹ್ ಕಾರ್ಯಾಗಾರ: 612 ಹುದ್ದೆಗಳು
- ಸಿಯಾಲ್ದಾ ವಿಭಾಗ: 440 ಹುದ್ದೆಗಳು
- ಕಾಂಚ್ರಪಾರ ಕಾರ್ಯಾಗಾರ: 187 ಹುದ್ದೆಗಳು
- ಮಾಲ್ಡಾ ವಿಭಾಗ: 138 ಹುದ್ದೆಗಳು
- ಅಸನ್ಸೋಲ್ ವಿಭಾಗ: 412 ಹುದ್ದೆಗಳು
- ಜಮಾಲ್ಪುರ ಕಾರ್ಯಾಗಾರ: 667 ಹುದ್ದೆಗಳು
ಆರ್‌ಆರ್‌ಸಿ ಪೂರ್ವ ರೈಲು ಅಪ್ರೆಂಟೀಸ್ ನೇಮಕಾತಿ 2024 ವಿದ್ಯಾರ್ಹತೆ
ಆರ್‌ಆರ್‌ಸಿ ಪೂರ್ವ ರೈಲು ಅಪ್ರೆಂಟೀಸ್ ನೇಮಕಾತಿ 2024 ಅರ್ಜಿ ಸಲ್ಲಿಕೆಗೆ ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು ಮತ್ತು ಸಂಬಂದಿತ ವ್ರತ್ತಿಯಲ್ಲಿ ಐಟಿಐ ಅಥವಾ ರಾಷ್ಟ್ರೀಯ ವ್ರತ್ತಿ ಪ್ರಮಾಣಪತ್ರವನ್ನು ಹೊಂದಿರಬೇಕು.
ಆರ್‌ಆರ್‌ಸಿ ಪೂರ್ವ ರೈಲು ಅಪ್ರೆಂಟೀಸ್ ನೇಮಕಾತಿ 2024 ವಯೋಮಿತಿ
ಆರ್‌ಆರ್‌ಸಿ ಪೂರ್ವ ರೈಲು ಅಪ್ರೆಂಟೀಸ್ ನೇಮಕಾತಿ 2024 ಅರ್ಜಿ ಸಲ್ಲಿಕೆಗೆ ಅಭ್ಯರ್ಥಿಗಳ ಕನಿಷ್ಠ ವಯಸ್ಸು 15 ವರ್ಷ ಮತ್ತು ಗರಿಷ್ಠ 24 ವರ್ಷಗಳ ನಡುವೆ ಇರಬೇಕು (ಅರ್ಜಿ ಸಲ್ಲಿಸುವ ಕೊನೆ ದಿನಾಂಕಕ್ಕೆ, ಅಕ್ಟೋಬರ್ 23, 2024).
ವಯೋಮಿತಿಯಲ್ಲಿ ಸಡಿಲಿಕೆ (Relaxation for Reserved Categories):
- SC/ST: 5 ವರ್ಷ ಸಡಿಲಿಕೆ (ಗರಿಷ್ಠ ವಯಸ್ಸು 29 ವರ್ಷ)
- OBC (Non-Creamy Layer): 3 ವರ್ಷ ಸಡಿಲಿಕೆ (ಗರಿಷ್ಠ ವಯಸ್ಸು 27 ವರ್ಷ)
- PwBD (ವಿಕಲಚೇತನ): 10 ವರ್ಷ ಸಡಿಲಿಕೆ
ಆರ್‌ಆರ್‌ಸಿ ಪೂರ್ವ ರೈಲು ಅಪ್ರೆಂಟೀಸ್ ನೇಮಕಾತಿ 2024 ಅರ್ಜಿ ಶುಲ್ಕ
- ಸಾಮಾನ್ಯ (Gen)/ಒಬಿಸಿ (OBC)/ಇಡಬ್ಲ್ಯೂಎಸ್ (EWS): ₹100
- ಎಸ್‌ಸಿ (SC)/ಎಸ್‌ಟಿ (ST)/ಪಿಡಬ್ಲ್ಯುಡಿಬಿ (PwBD)/ಮಹಿಳಾ ಅಭ್ಯರ್ಥಿಗಳು: ಶುಲ್ಕವಿಲ್ಲ (₹0)
ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಆನ್‌ಲೈನ್‌ನಲ್ಲಿ ಪಾವತಿಸಬಹುದು
ಆರ್‌ಆರ್‌ಸಿ ಪೂರ್ವ ರೈಲು ಅಪ್ರೆಂಟೀಸ್ ನೇಮಕಾತಿ 2024 ಆಯ್ಕೆ ಪ್ರಕ್ರಿಯೆ
- ಅಭ್ಯರ್ಥಿಗಳ 10ನೇ ತರಗತಿಯ ಹಾಗೂ ಐಟಿಐ/ವೃತ್ತಿ ಪ್ರಮಾಣಪತ್ರದ ಅಂಕಗಳನ್ನು ಅವಲಂಬಿಸಿ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.
- 10ನೇ ತರಗತಿಯ ಮತ್ತು ಐಟಿಐ/ಎನ್‌ಸಿವಿಟಿ ಪರೀಕ್ಷೆಗಳಲ್ಲಿನ ಅಂಕಗಳ ಸರಾಸರಿ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
- ಮೆರಿಟ್ ಪಟ್ಟಿಯಲ್ಲಿ ಸ್ಥಾನ ಪಡೆದ ಅಭ್ಯರ್ಥಿಗಳನ್ನು ಡಾಕ್ಯುಮೆಂಟ್ ಪರಿಶೀಲನೆಗಾಗಿ ಕರೆ ಮಾಡಲಾಗುತ್ತದೆ.
- ಇಬ್ಬರು ಅಭ್ಯರ್ಥಿಗಳಿಗೆ ಒಂದೇ ರೀತಿಯ ಅಂಕಗಳು ಬಂದಲ್ಲಿ, ಹಿರಿಯ ಅಭ್ಯರ್ಥಿಯ ಅಥವಾ 10ನೇ ತರಗತಿಯ ಪರೀಕ್ಷೆಯನ್ನು ಮೊದಲು ಉತ್ತೀರ್ಣರಾದ ಅಭ್ಯರ್ಥಿಯು ಮೇಲುಗೈ ಹೊಂದುತ್ತಾರೆ.
ಆರ್‌ಆರ್‌ಸಿ ಪೂರ್ವ ರೈಲು ಅಪ್ರೆಂಟೀಸ್ ನೇಮಕಾತಿ 2024 ಅರ್ಜಿ ಸಲ್ಲಿಕೆ
- ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಧಿಕ್ರತ ಅಧಿಸೂಚನೆಯಲ್ಲಿ ನೀಡಿರುವ ಮಾಹಿತಿಯನ್ನು ಪೂರ್ತಿಯಾಗಿ ಓದಿ, ನೇಮಕಾತಿ ಸಂಬಂದಿತ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳಬೇಕು.
- ನಂತರ ಆನ್‌ಲೈನ್ ಅರ್ಜಿ ಫಾರ್ಮ್‌ನಲ್ಲಿ ಎಲ್ಲಾ ಅಗತ್ಯ ವಿವರಗಳನ್ನು ನಮೂದಿಸಿ, ಮತ್ತು 10ನೇ ತರಗತಿ ಪ್ರಮಾಣಪತ್ರದ ಮಾಹಿತಿಯೊಂದಿಗೆ ಹೊಂದಿಸುವಂತೆ ನೋಡಿಕೊಳ್ಳಬೇಕು
- ವಯಕ್ತಿಕ ಮಾಹಿತಿಯೊಂದಿಗೆ ಅಗತ್ಯ ದಾಖಲೆಗಳನ್ನು (ಪೋಟೋ, ಸಹಿ, ಶ್ರೇಣೀ ಪತ್ರ, ಇತ್ಯಾದಿ) ಅಪ್ಲೋಡ್ ಮಾಡಿ.
- ಕೊನೆಯಲ್ಲಿ ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಿ.
ಆರ್‌ಆರ್‌ಸಿ ಪೂರ್ವ ರೈಲು ಅಪ್ರೆಂಟೀಸ್ ನೇಮಕಾತಿ 2024 ಪ್ರಮುಖ ಲಿಂಕುಗಳು
- ಅಧಿಕೃತ ಅಧಿಸೂಚನೆ: ಇಲ್ಲಿ ಒತ್ತಿ
- ಆನ್ಲೈನ್ ಅರ್ಜಿಯ ವೆಬ್ಸೈಟ್: ಇಲ್ಲಿ ಒತ್ತಿ