RRC Western Railway Apprentices Recruitment 2024: ರೈಲ್ವೆಯಲ್ಲಿ 5066 ಹುದ್ದೆಗಳ ಬ್ರಹತ್ ನೇಮಕಾತಿ
ಸ್ನೇಹಿತರೇ ವೆಸ್ಟರ್ನ್ ರೈಲ್ವೆ ಆರ್‌ಆರ್‌ಸಿ ಮುಂಬೈ (Western Railway RRC Mumbai) ಇದೀಗ 5066 ವಿವಿಧ ಟ್ರೇಡ್ ಅಪ್ಪ್ರೆಂಟೈಸ್ (Trade Apprentices) ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿ (New recruitment) ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ವೆಸ್ಟರ್ನ್ ರೈಲ್ವೆ ಆರ್‌ಆರ್‌ಸಿ ಮುಂಬೈ ಅಧಿಕೃತ ಅಧಿಸೂಚನೆಯಲ್ಲಿ (Official notification) ನೀಡಿರುವ ಅರ್ಹತಾ ಮಾನದಂಡಗಳ ಮಾಹಿತಿಯನ್ನು ಪಡೆದುಕೊಂಡು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು 10 ನೇ ತರಗತಿಯಲ್ಲಿ (ಹೈ ಸ್ಕೂಲ್ ಪರೀಕ್ಷೆಯಲ್ಲಿ) ಕನಿಷ್ಠ 50% ಅಂಕಗಳು ಮತ್ತು ಸಂಬಂಧಿತ ಟ್ರೇಡ್ ITI ಪ್ರಮಾಣಪತ್ರವನ್ನು ಹೊಂದಿರಬೇಕು.
ವೆಸ್ಟರ್ನ್ ರೈಲ್ವೆ ಆರ್‌ಆರ್‌ಸಿ ಮುಂಬೈ ಅಪ್ಪ್ರೆಂಟೈಸ್ ನೇಮಕಾತಿ 2024ರ ಅರ್ಜಿ ಪ್ರಕ್ರಿಯೆಯು 23 ಸೆಪ್ಟೆಂಬರ್ 2024ಆರಂಭಗೊಳ್ಳಲಿದ್ದು, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 22 ಅಕ್ಟೋಬರ್ 2024 ಆಗಿದೆ.
ಪ್ರಮುಖ ದಿನಾಂಕಗಳು
- ಅರ್ಜಿ ಪ್ರಾರಂಭ ದಿನಾಂಕ: 23 ಸೆಪ್ಟೆಂಬರ್ 2024.
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22 ಅಕ್ಟೋಬರ್ 2024, ಮಧ್ಯಾಹ್ನ 05:00 ಗಂಟೆಗೆ.
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 22 ಅಕ್ಟೋಬರ್ 2024.
ಹುದ್ದೆಗಳ ವಿವರ
- ಆರ್‌ಆರ್‌ಸಿ ವೆಸ್ಟರ್ನ್ ರೈಲ್ವೆ ಟ್ರೇಡ್ ಅಪ್ರೆಂಟಿಸ್ (RRC WR Trade Apprentice): ಒಟ್ಟು ಹುದ್ದೆಗಳ ಸಂಖ್ಯೆ 5066
- ವಿದ್ಯಾರ್ಹತೆ: ಕ್ಲಾಸ್ 10 ಹೈ ಸ್ಕೂಲ್ ಪರೀಕ್ಷೆಯಲ್ಲಿ 50% ಅಂಕಗಳು ಮತ್ತು ಸಂಬಂಧಿತ ವ್ಯಾಪಾರದಲ್ಲಿ ITI ಪ್ರಮಾಣಪತ್ರ.
ವಿಭಾಗೋತ್ತರ ಹುದ್ದೆಗಳ ವಿವರ:
- BCT ವಿಭಾಗ: 971
- BRC ವಿಭಾಗ: 599
- ADI ವಿಭಾಗ: 923
- RTM ವಿಭಾಗ: 558
- RJT ವಿಭಾಗ: 238
- BVP ವಿಭಾಗ: 255
- PL W/Shop: 634
- MX W/Shop: 125
- BVP W/Shop: 143
- DHD W/Shop: 415
- PRTN W/Shop: 86
- SBI ಇಂಜಿನೀಯರ್ W/Shop: 60
- SBI ಸಿಗ್ನಲ್ W/Shop: 25
- ಹೆಡ್ ಕ್ವಾರ್ಟರ್ ಕಚೇರಿ: 34
ವಿದ್ಯಾರ್ಹತೆ
ಆರ್‌ಆರ್‌ಸಿ ವೆಸ್ಟರ್ನ್ ರೈಲ್ವೆ ಟ್ರೇಡ್ ಅಪ್ರೆಂಟಿಸ್ 2024 ರ ಅರ್ಜಿ ಸಲ್ಲಿಕೆಗೆ ಅಭ್ಯರ್ಥಿಗಳು 10ನೇ ತರಗತಿಯಲ್ಲಿ (ಹೈ ಸ್ಕೂಲ್ ಪರೀಕ್ಷೆಯಲ್ಲಿ) ಕನಿಷ್ಠ 50% ಅಂಕಗಳನ್ನು ಪಡೆದಿರಬೇಕು ಮತ್ತು ಸಂಬಂಧಿತ ಟ್ರೇಡ್ ನಲ್ಲಿ ITI ಪ್ರಮಾಣಪತ್ರ ಹೊಂದಿರಬೇಕು.
ವಯೋಮಿತಿ
- ಕನಿಷ್ಟ ವಯಸ್ಸು: 15 ವರ್ಷ
- ಗರಿಷ್ಠ ವಯಸ್ಸು: 24 ವರ್ಷ
ಮೀಸಲು ವರ್ಗದ ಅಭ್ಯರ್ಥಿಗಳಿಗೆ ವಯೋ ಸಡಲಿಕೆ:
- SC/ST: 5 ವರ್ಷ
- OBC: 3 ವರ್ಷ
- PwBD: 10 ವರ್ಷ (SC/ST ಮತ್ತು OBC ಗೆ ಹೆಚ್ಚುವರಿ 5 ಮತ್ತು 3 ವರ್ಷ)
- ಮಹಿಳೆಯರು: 5 ವರ್ಷ
- ಎಕ್ಸ್ ಸರ್ವೀಸ್ ಮ್ಯಾನ್: ಸರ್ಕಾರದ ನಿಯಮಗಳಂತೆ
ವೇತನ
ಆರ್‌ಆರ್‌ಸಿ ವೆಸ್ಟರ್ನ್ ರೈಲ್ವೆ ಟ್ರೇಡ್ ಅಪ್ರೆಂಟಿಸ್ 2024 ನೇಮಕಾತಿಯ ಅಪ್ರೆಂಟಿಸ್‌ಗಳಿಗೆ ನೀಡಲಾಗುವ ವೇತನವು ತರಬೇತಿ ಅವಧಿಯಲ್ಲಿ ಮಾಸಿಕ ಸ್ಟೈಪೆಂಡ್ ರೂಪದಲ್ಲಿ ನೀಡಲಾಗುತ್ತದೆ. ಈ ಸ್ಟೈಪೆಂಡ್ ₹6000 ರಿಂದ ₹10000 ವರೆಗೆ ಇರಬಹುದು.
ಅರ್ಜಿ ಶುಲ್ಕ
ಆರ್‌ಆರ್‌ಸಿ ವೆಸ್ಟರ್ನ್ ರೈಲ್ವೆ ಟ್ರೇಡ್ ಅಪ್ರೆಂಟಿಸ್ 2024 ನೇಮಕಾತಿಗೆ ಅರ್ಜಿ ಶುಲ್ಕ ಈ ಕೆಳಗಿನಂತಿದೆ:
- ಸಾಮಾನ್ಯ (UR), ಓಬಿಸಿ (OBC), ಮತ್ತು ಆರ್ಥಿಕವಾಗಿ ದುರ್ಬಲ ವರ್ಗ (EWS): ₹100/-
- ಎಸ್‌ಸಿ (SC), ಎಸ್‌ಟಿ (ST), ದಿವ್ಯಾಂಗ (PWD), ಮತ್ತು ಮಹಿಳಾ ಅಭ್ಯರ್ಥಿಗಳು: ಶುಲ್ಕವಿಲ್ಲ
- ಅರ್ಜಿಯನ್ನು ಆನ್‌ಲೈನ್ ಮೂಲಕ ಪಾವತಿಸಬಹುದು, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಯುಪಿಐ ಮೂಲಕ.
ಆಯ್ಕೆ ಪ್ರಕ್ರಿಯೆ
ಆರ್‌ಆರ್‌ಸಿ ವೆಸ್ಟರ್ನ್ ರೈಲ್ವೆ ಟ್ರೇಡ್ ಅಪ್ರೆಂಟಿಸ್ 2024 ನೇಮಕಾತಿಯ ಆಯ್ಕೆ ಪ್ರಕ್ರಿಯೆ ಈ ಕೆಳಗಿನಂತಿದೆ:
- ಮೆರಿಟ್ ಪಟ್ಟಿ: 10ನೇ ತರಗತಿ ಮತ್ತು ಐಟಿಐ (ITI) ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ತಯಾರಿಸಲಾಗುತ್ತದೆ.
- ದಾಖಲೆಗಳ ಪರಿಶೀಲನೆ: ಮೆರಿಟ್ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ದಾಖಲೆಗಳ ಪರಿಶೀಲನೆಗೆ ಕರೆಯಲಾಗುತ್ತದೆ.
- ವೈದ್ಯಕೀಯ ಪರೀಕ್ಷೆ: ಅಂತಿಮವಾಗಿ ಅಭ್ಯರ್ಥಿಗಳಿಗೆ ನಿಗದಿತ ಮಾನದಂಡಗಳ ಪ್ರಕಾರ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು.
ಅರ್ಜಿ ಸಲ್ಲಿಕೆ
- ಆರ್‌ಆರ್‌ಸಿ ವೆಸ್ಟರ್ನ್ ರೈಲ್ವೆ ಟ್ರೇಡ್ ಅಪ್ರೆಂಟಿಸ್ 2024 ರ ಅರ್ಜಿ ಸಲ್ಲಿಕೆಯ ಮೊದಲು ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ಎಲ್ಲ ಅರ್ಹತಾ ಮಾನದಂಡಗಳನ್ನು (ವಿದ್ಯಾರ್ಹತೆ ಮತ್ತು ವಯೋಮಿತಿ) ಪರಿಶೀಲಿಸಿ ಖಚಿತ ಪಡಿಸಿಕೊಳ್ಳಬೇಕು.
- ನಂತರ RRC Western Railway ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ.
- ಪ್ರೊಫೈಲ್‌ನಲ್ಲಿ ಲಾಗಿನ್ ಮಾಡಲು ಆಯ್ಕೆ ಪಡೆಯುವಿರಿ, ನಿಮ್ಮ ಇಮೇಲ್ ಅಥವಾ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ನೊಂದಣಿಯನ್ನು ಮಾಡಿಸಿಕೊಳ್ಳಿ.
- ಅರ್ಜಿ ನಮೂನೆಯನ್ನು ಎಲ್ಲ ಅಗತ್ಯ ಮಾಹಿತಿಯೊಂದಿಗೆ ಭರ್ತಿ ಮಾಡಿದ ಬಳಿಕ ಶೈಕ್ಷಣಿಕ ಪ್ರಮಾಣಪತ್ರಗಳು, ಐಡಿ ಪ್ರೂಫ್, ಇತ್ತೀಚಿನ ಭಾವಚಿತ್ರ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
- ನಿಮ್ಮ ವರ್ಗಕ್ಕೆ ಸಂಬಂಧಿತ ಅರ್ಜಿ ಶುಲ್ಕವನ್ನು ನೆಟ್ ಬ್ಯಾಂಕಿಂಗ್, ಕ್ರೆಡಿಟ್/ಡೆಬಿಟ್ ಕಾರ್ಡ್ ಅಥವಾ ಯೂಪಿಐ ಮೂಲಕ ಪಾವತಿಸಿ.
- ಅರ್ಜಿಯಲ್ಲಿ ನಮೂದಿಸಿರುವ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.
ಪ್ರಮುಖ ಲಿಂಕುಗಳು
- ಅರ್ಜಿ ಸಲ್ಲಿಕೆ: ಇಲ್ಲಿ ಒತ್ತಿ
- ನೋಟಿಫಿಕೇಶನ್: ಇಲ್ಲಿ ಒತ್ತಿ