SBI Recruitment 2024: 1511 ಡೆಪ್ಯೂಟಿ ಮ್ಯಾನೇಜರ್ ಮತ್ತು ಸಹಾಯಕ ಮ್ಯಾನೇಜರ್ ಹುದ್ದೆಗಳ ಬ್ರಹತ್ ನೇಮಕಾತಿ
ಸ್ನೇಹಿಯರೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಸಂಸ್ಥೆಯಲ್ಲಿ ಖಾಲಿ ಇರುವ ಒಟ್ಟು 1511 ಡೆಪ್ಯೂಟಿ ಮ್ಯಾನೇಜರ್ ಮತ್ತು ಸಹಾಯಕ ಮ್ಯಾನೇಜರ್ (Deputy Manager and Assistant Manager) ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿ (New recruitment) ಆದೇಶವನ್ನು ನೀಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಅಧಿಕ್ರತ ಅಧಿಸೂಚನೆಯಲ್ಲಿ (SBI Official Notification) ನೀಡಿರುವ ಅರ್ಹತಾ ಮಾನದಂಡಗಳ ಮಾಹಿತಿಯನ್ನು ಪಡೆದು ಅರ್ಜಿ ಸಲ್ಲಿಸಬಹುದು. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕನಿಷ್ಠ B,Tech/B.E, MCA ಅಥವಾ ಸದರಿ ಹುದ್ದೆಗೆ ಸಂಬಂದಿತ ತತ್ಸಮಾನ ಪದವಿಯನ್ನು (Degree jobs) ಹೊಂದಿರಬೇಕು. ಅಭ್ಯರ್ಥಿಗಳು ಕನಿಷ್ಠ ವಯಸ್ಸು 21 ಮತ್ತು ಗರಿಷ್ಠ ವಯೋಮಿತಿಯನ್ನು 35 ವರ್ಷಗಳಿಗೆ ನಿಗದಿಪಡಿಸಲಾಗಿದೆ.
ಎಸ್‌ಬಿಐ ನೇಮಕಾತಿ 2024 (SBI Recruitment 2024) ರ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭಗೊಂಡಿದ್ದು ದಿನಾಂಕ 04.10.2024 ರ ಒಳಗಾಗಿ ಆಸಕ್ತರು ಅರ್ಜಿ ಸಲ್ಲಿಸತಕ್ಕದ್ದು. ಸಾಮಾನ್ಯ/ಈಡಬಲ್ಯುಎಸ್/ಓಬಿಸಿ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವು ರೂ 750 ಆಗಿರುತ್ತದೆ. ಆದರೆ ಎಸ್‌ಸಿ/ಎಸ್‌ಟಿ/ಪಿಡಬಲ್ಯುಬಿಡಿ ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ. ಸದರಿ ಹುದ್ದೆಗಳ ಆಯ್ಕೆ ಪ್ರಕ್ರಿಯೆಯು ಶಾರ್ಟ್ ಲಿಸ್ಟಿಂಗ್, ಸಂದರ್ಶನ ಆನ್ಲೈನ್ ಪರೀಕ್ಷೆ ಇನ್ನಿತರ ಹಂತಗಳನ್ನು ಒಳಗೊಂಡಿರುತ್ತದೆ.
ಪ್ರಮುಖ ದಿನಾಂಕಗಳು
SBI Recruitment 2024 ರ ಅರ್ಜಿ ಸಲ್ಲಿಕೆ ಈಗಾಗಲೇ ಸೆಪ್ಟೆಂಬರ್ 14, 2024 ರಿಂದ ಆರಂಬಗೊಂಡಿದ್ದು ದಿನಾಂಕ 04.10.2024 ರ ಒಳಗಾಗಿ ಆಸಕ್ತರು ಅರ್ಜಿ ಮತ್ತು ಅರ್ಜಿ ಶುಲ್ಕವನ್ನು ಪಾವತಿಸತಕ್ಕದ್ದು.
ಹುದ್ದೆಗಳ ವಿವರ
SBI Recruitment 2024 ರ ಮೂಲಕ ಡೆಪ್ಯೂಟಿ ಮ್ಯಾನೇಜರ್ ಮತ್ತು ಸಹಾಯಕ ಮ್ಯಾನೇಜರ್ (Deputy Manager and Assistant Manager)ಗಳ 1511 ಹುದ್ದೆಗಳ ಭರ್ತಿ ಮಾಡಲಾಗುವುದು
- ಡಿಪ್ಯೂಟಿ ಮ್ಯಾನೇಜರ್ (ಸಿಸ್ಟಮ್ಸ್) – ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಮತ್ತು ಡೆಲಿವರಿ
- ಡಿಪ್ಯೂಟಿ ಮ್ಯಾನೇಜರ್ (ಸಿಸ್ಟಮ್ಸ್) – ಇನ್ಫ್ರಾ ಸಪೋರ್ಟ್ ಮತ್ತು ಕ್ಲೌಡ್ ಓಪರೇಶನ್ಸ್
- ಡಿಪ್ಯೂಟಿ ಮ್ಯಾನೇಜರ್ (ಸಿಸ್ಟಮ್ಸ್) – ನೆಟ್ವರ್ಕಿಂಗ್ ಓಪರೇಶನ್ಸ್
- ಡಿಪ್ಯೂಟಿ ಮ್ಯಾನೇಜರ್ (ಸಿಸ್ಟಮ್ಸ್) – ಐಟಿ ಆರ್ಕಿಟೆಕ್ಟ್
- ಡಿಪ್ಯೂಟಿ ಮ್ಯಾನೇಜರ್ (ಸಿಸ್ಟಮ್ಸ್) – ಮಾಹಿತಿಯ ಸುರಕ್ಷೆ
- ಸಹಾಯಕ ಮ್ಯಾನೇಜರ್ (ಸಿಸ್ಟಮ್)
ವಿದ್ಯಾರ್ಹತೆ
- ಡಿಪ್ಯೂಟಿ ಮ್ಯಾನೇಜರ್ (ಸಿಸ್ಟಮ್ಸ್) – ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಮತ್ತು ಡೆಲಿವರಿ: B.Tech / B.E. / MCA / M.Tech / M.Sc. (ಕಂಪ್ಯೂಟರ್ ಸೈನ್ಸ್ / ಇನ್ಫರ್ಮೇಶನ್ ಟೆಕ್ನಾಲಜಿ / ಸಾಫ್ಟ್ ವೇರ್ ಎಂಜಿನಿಯರಿಂಗ್) ಕನಿಷ್ಠ 50% ಅಂಕಗಳೊಂದಿಗೆ ತೇರ್ಗಡೆ. ಹಾಗೂ ಕನಿಷ್ಠ 4 ವರ್ಷಗಳ ಸಾಫ್ಟ್‌ವೇರ್ ಅಭಿವೃದ್ಧಿಯ ಅನುಭವ.
- ಡಿಪ್ಯೂಟಿ ಮ್ಯಾನೇಜರ್ (ಸಿಸ್ಟಮ್ಸ್) – ಇನ್ಫ್ರಾ ಸಪೋರ್ಟ್ ಮತ್ತು ಕ್ಲೌಡ್ ಓಪರೇಶನ್ಸ್: B.Tech / B.E. / MCA / M.Tech / M.Sc. (ಕಂಪ್ಯೂಟರ್ ಸೈನ್ಸ್ / ಇನ್ಫರ್ಮೇಶನ್ ಟೆಕ್ನಾಲಜಿ) ಕನಿಷ್ಠ 50% ಅಂಕಗಳೊಂದಿಗೆ ತೇರ್ಗಡೆ. ಹಾಗೂ ಕನಿಷ್ಠ 4 ವರ್ಷಗಳ ಐಟಿ ಕ್ಷೇತ್ರದ ಅನುಭವ.
- ಡಿಪ್ಯೂಟಿ ಮ್ಯಾನೇಜರ್ (ಸಿಸ್ಟಮ್ಸ್) – ನೆಟ್ವರ್ಕಿಂಗ್ ಓಪರೇಶನ್ಸ್: B.Tech / B.E. / M.Tech (ಕಂಪ್ಯೂಟರ್ ಸೈನ್ಸ್ / ಇನ್ಫರ್ಮೇಶನ್ ಟೆಕ್ನಾಲಜಿ) ಕನಿಷ್ಠ 50% ಅಂಕಗಳೊಂದಿಗೆ ತೇರ್ಗಡೆ. ಹಾಗೂ ಕನಿಷ್ಠ 4 ವರ್ಷಗಳ ಐಟಿ ಕ್ಷೇತ್ರದ ಅನುಭವ.
- ಡಿಪ್ಯೂಟಿ ಮ್ಯಾನೇಜರ್ (ಸಿಸ್ಟಮ್ಸ್) – ಐಟಿ ಆರ್ಕಿಟೆಕ್ಟ್: B.Tech / B.E. / MCA / M.Tech / M.Sc. (ಕಂಪ್ಯೂಟರ್ ಸೈನ್ಸ್ / ಇನ್ಫರ್ಮೇಶನ್ ಟೆಕ್ನಾಲಜಿ) ಕನಿಷ್ಠ 50% ಅಂಕಗಳೊಂದಿಗೆ ತೇರ್ಗಡೆ. ಹಾಗೂ ಕನಿಷ್ಠ 4 ವರ್ಷಗಳ ಐಟಿ ಕ್ಷೇತ್ರದ ಅನುಭವ.
- ಸಹಾಯಕ ಮ್ಯಾನೇಜರ್ (ಸಿಸ್ಟಮ್): B.Tech / B.E. / MCA (ಕಂಪ್ಯೂಟರ್ ಸೈನ್ಸ್ / ಇನ್ಫರ್ಮೇಶನ್ ಟೆಕ್ನಾಲಜಿ) ಕನಿಷ್ಠ 50% ಅಂಕಗಳೊಂದಿಗೆ ತೇರ್ಗಡೆ. ಹಾಗೂ ಸಂಬಂದಿತ ಕ್ಷೇತ್ರದಲ್ಲಿ 1-2 ವರ್ಷಗಳ ಅನುಭವ.
ವಯೋಮಿತಿ
SBI Recruitment 2024 ರ ಅಧಿಕ್ರತ ಅಧಿಸೂಚನೆಯಲ್ಲಿ ನೀಡುರುವ ಪ್ರಕಾರ ಡಿಪ್ಯೂಟಿ ಮ್ಯಾನೇಜರ್ (ಸಿಸ್ಟಮ್ಸ್) ಹುದ್ದೆಗೆ 25 ರಿಂದ 35 ವರ್ಷಗಳ ವಯೋಮಿತಿ ಮತ್ತು ಸಹಾಯಕ ಮ್ಯಾನೇಜರ್ (ಸಿಸ್ಟಮ್) ಹುದ್ದೆಗೆ 21 ರಿಂದ 30 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
ಅರ್ಜಿ ಶುಲ್ಕ
SBI Recruitment 2024 ರ ಅಧಿಕ್ರತ ಅಧಿಸೂಚನೆಯಲ್ಲಿ ನೀಡುರುವ ಪ್ರಕಾರ ಜನರಲ್/EWS/OBC ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ₹750 ಆಗಿದ್ದು, SC/ST/PwBD ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಅರ್ಜಿ ಶುಲ್ಕವನ್ನು ಪಾವತಿಸಿದ ನಂತರ ರೀಫಂಡ್ ಆಯ್ಕೆ ಇರುವುದಿಲ್ಲ.
ಆಯ್ಕೆ ಪ್ರಕ್ರಿಯೆ
- ಡಿಪ್ಯೂಟಿ ಮ್ಯಾನೇಜರ್ (ಸಿಸ್ಟಮ್ಸ್): ಈ ಹುದ್ದೆಗೆ ಅಭ್ಯರ್ಥಿಗಳನ್ನು ಮೊದಲ ಹಂತದಲ್ಲಿ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಶಾರ್ಟ್‌ಲಿಸ್ಟಾದ ಅಭ್ಯರ್ಥಿಗಳನ್ನು ಸಂದರ್ಶನ ಹಾಗೂ CTC (Cost to Company) ಮಾತುಕತೆ ಮೂಲಕ ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ.
- ಸಹಾಯಕ ಮ್ಯಾನೇಜರ್ (ಸಿಸ್ಟಮ್): ಈ ಹುದ್ದೆಗೆ ಅಭ್ಯರ್ಥಿಗಳು ಆನ್ಲೈನ್ ಲಿಖಿತ ಪರೀಕ್ಷೆ ಮತ್ತು ಸಂಬಂಧಿತ ಸಂದರ್ಶನ ಮುಖಾಂತರ ಆಯ್ಕೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ವೈಜ್ಞಾನಿಕ, ಸಿಸ್ಟಮ್ ನೋಟಗಳು ಮತ್ತು ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಒಳಗೊಂಡಿರುತ್ತದೆ. ಲಿಖಿತ ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಲಾಗುವುದು.
SBI Recruitment 2024 ರ ಆಯ್ಕೆ ಪ್ರಕ್ರಿಯೆ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ.
ಅರ್ಜಿ ಸಲ್ಲಿಕೆ
- ಎಸ್‌ಬಿಐ ಅಧಿಕ್ರತ ಪೊರ್ರ್ತಲ್ ಗೆ ಭೇಟಿ ನೀಡಿ ‘ಅರ್ಜಿ ಸಲ್ಲಿಕೆ’ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಅರ್ಜಿಯ ನೋಂದಣಿ ಪೇಜ್ ತೆರೆಯುತ್ತದೆ. ಇಲ್ಲಿ, ನೀವು ಹೊಸ ಪ್ರೊಫೈಲ್ ಸೃಷ್ಟಿ ಮಾಡಲು ಅಥವಾ ಈಗಾಗಲೇ ಇರುವ ಪ್ರೊಫೈಲ್‌ನಲ್ಲಿ ಲಾಗಿನ್ ಮಾಡಲು ಆಯ್ಕೆ ಪಡೆಯುವಿರಿ.
- ಅರ್ಜಿ ನಮೂನೆಯನ್ನು ನಿಮ್ಮ ಎಲ್ಲ ವಿವರವಾದ ಮಾಹಿತಿಯೊಂದಿಗೆ ಭರ್ತಿ ಮಾಡಿದ ಬಳಿಕ ಇತ್ತೀಚಿನ ಭಾವಚಿತ್ರ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
- ನಂತರ ನಿಮ್ಮ ವರ್ಗಕ್ಕೆ ಸಂಬಂದಿಸಿದ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ.
- ಅರ್ಜಿಯಲ್ಲಿ ನಮೂದಿಸಿರುವ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.
ಪ್ರಮುಖ ಲಿಂಕುಗಳು
- ಅರ್ಜಿ ಸಲ್ಲಿಕೆ: ಇಲ್ಲಿ ಒತ್ತಿ
- ನೋಟಿಫಿಕೇಶನ್: ಇಲ್ಲಿ ಒತ್ತಿ