SBIF ಆಶಾ ಸ್ಕಾಲರ್ಷಿಪ್ ಪ್ರೋಗ್ರಾಮ್ 2024: ಎಲ್ಲ ವಿದ್ಯಾರ್ಥಿಗಳಿಗೆ 7 ಲಕ್ಷದವರೆಗೆ ವಿದ್ಯಾರ್ಥಿವೇತನ
ಸ್ನೇಹಿತರೆ ಪ್ರತಿಭಾವಂತ ಮತ್ತು ಉನ್ನತ ಶಿಕ್ಷಣ ಪಡೆಯಲು ಬಯಸಿರುವ ವಿದ್ಯಾರ್ಥಿಗಳ ಜೀವನದಲ್ಲಿ ಹಣಕಾಸಿನ ತೊಡಕು ಉಂಟಾಗುವುದು ನಾವು ಪ್ರತಿನಿತ್ಯಾ ಗಮನಿಸುತ್ತೇವೆ. ವಿದ್ಯಾರ್ಥಿಗಳ ಕುಟುಂಬದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕಾರಣದಿಂದ ಉನ್ನತ ಶಿಕ್ಷಣ ಪಡೆದುಕೊಂಡು ದೊಡ್ಡ ಹುದ್ದೆಗಳಲ್ಲಿ ಉದ್ಯೋಗಾವಕಾಶವನ್ನು ಪಡೆದುಕೊಳ್ಳುವ ಕನಸು ಅರ್ಧದಲ್ಲೇ ಉಳಿದು ಬಿಡುತ್ತದೆ. ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಯಾವುದೇ ಒಂದು ರೂಪದಲ್ಲಿ ಹಣಕಾಸಿನ ನೆರವು ಸಿಕ್ಕರೆ ಅದು ಅವರ ಶೈಕ್ಷಣಿಕ ಪ್ರಗತಿಗೆ ತುಂಬಾ ಸಹಾಯಕಾರಿಯಾಗುತ್ತದೆ.
ಇಂತಹ ಸಮಯದಲ್ಲಿ ಹಲವು ಸಂಸ್ಥೆಗಳು ನೀಡುತ್ತಿರುವ ವಿದ್ಯಾರ್ಥಿವೇತನಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇಂತಹದ್ದೇ ಒಂದು ವಿದ್ಯಾರ್ಥಿವೇತನ ದೇಶದ ಪ್ರಮುಖ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡುತ್ತಿದೆ. “SBIF ಆಶಾ ಸ್ಕಾಲರ್ಷಿಪ್ ಪ್ರೋಗ್ರಾಮ್”ದ ಅಡಿಯಲ್ಲಿ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಹಣಕಾಸಿನ ನೆರವನ್ನು ಘೋಷಣೆ ಮಾಡಿ ಅವರ ಮೇಲಿದ್ದ ಹಣಕಾಸಿನ ಚಿಂತನೆಯ ಭಾರವನ್ನು ಕಡಿಮೆ ಮಾಡಿದೆ.
“SBIF ಆಶಾ ಸ್ಕಾಲರ್ಷಿಪ್ ಪ್ರೋಗ್ರಾಮ್” ಎಸ್‌ಬಿಐ ಫೌಂಡೇಶನ್ ಮತ್ತು ಇಂಟಿಗ್ರೇಟೆಡ್ ಲರ್ನಿಂಗ್ ಮಿಷನ್ ಎಂಬ ಶಿಕ್ಷಣ ವಿಭಾಗದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಯಕ್ರಮವಾಗಿದ್ದು, ಈ ವಿದ್ಯಾರ್ಥಿವೇತನಕ್ಕೆ 6 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳು ಮತ್ತು ಉನ್ನತ ಶಿಕ್ಷಣವನ್ನು ಅಂದರೆ NIRF ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸುಗಳನ್ನು ಅನುಸರಿಸುತ್ತಿರುವ ವಿದ್ಯಾರ್ಥಿಗಳು ಮತ್ತು IIT ಗಳಲ್ಲಿ ಓಡುತ್ತಿರುವ ವಿದ್ಯಾರ್ಥಿಗಳು ಅಥವಾ IIM ಗಳಲ್ಲಿ MBA/PGDM ಕೋರ್ಸುಗಳನ್ನು ಅನುಸರಿಸುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ಉದ್ದೇಶಗಳಿಗಾಗಿ ಹಣಕಾಸಿನ ನೆರವಿನ ರೂಪದಲ್ಲಿ 7.5 ಲಕ್ಷ ರೂ. ವರೆಗೆ ವಿದ್ಯಾರ್ಥಿವೇತನವನ್ನು ನೀಡಲಾಗುವುದು.
SBIF ಆಶಾ ಸ್ಕಾಲರ್ಷಿಪ್ ಪ್ರೋಗ್ರಾಮ್ ಅರ್ಹತಾ ಮಾನದಂಡಗಳು
ಸ್ನೇಹಿತರೆ SBIF ಆಶಾ ಸ್ಕಾಲರ್ಷಿಪ್ ಪ್ರೋಗ್ರಾಮ್ ಅಡಿಯಲ್ಲಿ 6 ರಿಂದ 12 ನೇ ತರಗತಿಯಲ್ಲಿ ಓದುತ್ತಿರುವ ಮತ್ತು ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಅರ್ಹತಾ ಮಾನದಂಡಗಳು ಈ ಕೆಳಗಿನಂತಿವೆ.
6 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳ ಅರ್ಹತೆ?
- ಅರ್ಜಿದಾರರು ಭಾರತೀಯ ನಾಗರಿಕರಾಗಿರಬೇಕು.
- 6 ರಿಂದ 12 ನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಪಡೆಯುತ್ತಿರಬೇಕು.
- ಹಿಂದಿನ ವರ್ಷದ ತರಗತಿಯಲ್ಲಿ ಕನಿಷ್ಠ 75% ಅಂಕಗಳನ್ನು ಪಡೆದಿರಬೇಕು.
- ಅರ್ಜಿದಾರರ ವಾರ್ಷಿಕ ಆದಾಯ 3 ಲಕ್ಷ ರೂ ದಾಟಿರಬಾರದು.
- 50% ವಿದ್ಯಾರ್ಥಿವೇತನವು ಹೆಣ್ಣು ಮಕ್ಕಳಿಗೆ ಮೀಸಲೀಡಲಾಗಿದ್ದು, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗಿದೆ.
ಉನ್ನತ ಶಿಕ್ಷಣ ವಿದ್ಯಾರ್ಥಿಗಳ ಅರ್ಹತೆ?
- ಅರ್ಜಿದಾರರು ಭಾರತೀಯ ನಾಗರಿಕರಾಗಿರಬೇಕು.
- ಹಿಂದಿನ ವರ್ಷದ ತರಗತಿಯಲ್ಲಿ ಕನಿಷ್ಠ 75% ಅಂಕಗಳನ್ನು ಪಡೆದಿರಬೇಕು.
- ಅರ್ಜಿದಾರರು ಟಾಪ್ 100 NIRF ರ್ಯಾಂಕಿಂಗ್ ಗಳಲ್ಲಿ ಸೇರಿರುವ ವಿದ್ಯಾಸಂಸ್ಥೆಗಳಲ್ಲಿ ಅಥವಾ NIT ಎಂದು ಗುರುತಿಸಲ್ಪಟ್ಟ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರಬೇಕು.
- ಅರ್ಜಿದಾರರ ವಾರ್ಷಿಕ ಆದಾಯ 6 ಲಕ್ಷ ರೂ ದಾಟಿರಬಾರದು.
- 50% ವಿದ್ಯಾರ್ಥಿವೇತನವು ಹೆಣ್ಣು ಮಕ್ಕಳಿಗೆ ಮೀಸಲೀಡಲಾಗಿದ್ದು, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗಿದೆ.
ಯಾರಿಗೆ ಎಷ್ಟು ವಿದ್ಯಾರ್ಥಿವೇತನ?
- 6 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ: 15,000 ರೂ
- ಗ್ರಾಜುಯೇಷನ್/ಪದವಿ ವಿದ್ಯಾರ್ಥಿಗಳಿಗೆ: 50,000 ರೂ
- ಪೋಸ್ಟ್ ಗ್ರಾಜುಯೇಷನ್/ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ: 70,000 ರೂ
- III ಸಂಸ್ಥೆಯಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ: 2,00,000 ರೂ
- IIM ಸಂಸ್ಥೆಯಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ: 7,50,00 ರೂ
ಅಗತ್ಯ ದಾಖಲೆಗಳು
- ವಿದ್ಯಾರ್ಥಿಗಳ ಹಿಂದಿನ ವರ್ಷದ ತರಗತಿಯ ಅಂಕಪಟ್ಟಿ (ಅಂಕಗಳ ಪರಿಶೀಲನೆಗೆ)
- ಆಧಾರ್ ಕಾರ್ಡ್
- ಪ್ರಸ್ತುತ ವರ್ಷದ ಶುಲ್ಕ ರಶೀದಿ (ಫೀ ರಿಸೀಟ್)
- ಬೋನಾಫೈಡ್ ಪ್ರಮಾಣಪತ್ರ
- ಆದಾಯ ಪ್ರಮಾಣಪತ್ರ
- ಅರ್ಜಿದಾರರ ಭಾವಚಿತ್ರ
- ಜಾತಿ ಪ್ರಮಾಣಪತ್ರ
- ಅರ್ಜಿದಾರರ ಬ್ಯಾಂಕ್ ಖಾತೆ ವಿವರಗಳು
ಅರ್ಜಿ ಸಲ್ಲಿಕೆ ಹೇಗೆ?
SBIF ಆಶಾ ಸ್ಕಾಲರ್ಷಿಪ್ ಪ್ರೋಗ್ರಾಮ್ ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 01, 2024 ಕೊನೆಯ ದಿನಾಂಕವಾಗಿದ್ದು ಆಸಕ್ತರು ನಿಗದಿತ ದಿನಾಂಕದೊಳಗಾಗಿ ಅರ್ಜಿ ಸಲ್ಲಿಕೆಯನ್ನು ಮಾಡಬೇಕು.
- ಅರ್ಜಿದಾರರು ಮೊದಲು ಇಲ್ಲಿ ಕೊಟ್ಟಿರುವ ಲಿಂಕನ್ನು (https://www.sbifoundation.in/focus-area-detail/SBIF-Asha-Scholarship) ಓಪೆನ್ ಮಾಡಬೇಕು.
- ನಂತರ ನಿಮ್ಮ ಇಮೇಲ್/ಮೊಬೈಲ್/ಜೀಮೇಲ್ ಬಳಸಿಕೊಂಡು ಅಪ್ಲಿಕೇಷನ್ ಐಡಿ ಮತ್ತು ಪಾಸ್ ವರ್ಡ್ ರಚಿಸಿ ಲಾಗಿನ್ ಆಗಬೇಕು.
- ಆನ್ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯ ವಿವರಗಳನ್ನು ಭರ್ತಿ ಮಾಡಿ, ಅಲ್ಲಿ ಕೇಳಲಾಗುವ ದಾಖಲೆಗಳನ್ನು ಅಪ್ಲೋಡ್ ಮಾಡಬೇಕ
- ‘ನಿಯಮಗಳು ಮತ್ತು ಶರತ್ತುಗಳನ್ನು’ ಒಪ್ಪಿಸಿದ ನಂತರ ‘ಪ್ರೀವ್ಯೂ’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ನೀವು ನಮೂದಿಸಿರುವ ಎಲ್ಲ ವಿವರಗಳು ಸರಿಯಾಗಿದೆಯೇ ಎಂದು ಚೆಕ್ ಮಾಡಿ. ನಂತರ ಅಪ್ಲೈ ಬಟನ್ ಮೇಲೆ ಕ್ಲಿಕ್ ಮಾಡಿ.