SSC GD ಕಾನ್ಸ್‌ಟೇಬಲ್ ನೇಮಕಾತಿ 2025: ಬ್ರಹತ್ ನೇಮಕಾತಿಗೆ ಅರ್ಜಿ ಸಲ್ಲಿಸಿ
ಸ್ನೇಹಿತರೇ ಸ್ಟಾಫ್ ಸೆಳೆಕ್ಷನ್ ಕಮಿಷನ್ (SSC) 2025 ರ SSC GD ಕಾನ್ಸ್ಟೆಬಲ್ ನೇಮಕಾತಿಯ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಸೆಂಟ್ರಲ್ ಆರ್ಮ್ಡ್ ಪೊಲೀಸ್ ಫೋರ್ಸ್ (CAPFs), ನ್ಯಾಷನಲ್ ಇನ್ವೆಸ್ಟಿಗೇಶನ್ ಏಜೆನ್ಸಿ (NIA), ಸೆಕ್ರೆಟೇರಿಯಟ್ ಸೆಕ್ಯುರಿಟಿ ಫೋರ್ಸ್ (SSF), ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ ಕಾನ್ಸ್‌ಟೇಬಲ್ (ಜನರಲ್ ಡ್ಯೂಟಿ) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. SSC GD ಕಾನ್ಸ್ಟೆಬಲ್ ನೇಮಕಾತಿಯು ಭಾರತದ ಭದ್ರತಾ ಪಡೆಗಳಲ್ಲಿ ಸಲ್ಲಿಸಲು ಆಸಕ್ತರಾಗಿರುವ ಎಲ್ಲ್ ಅಭ್ಯರ್ಥಿಗಳಿಗೆ ಸುವರ್ಣಾವಕಾಶವನ್ನು ಒದಗಿಸಿದೆ. ಅರ್ಜಿ ಪ್ರಕ್ರಿಯೆಯು ಆಗಸ್ಟ್ 27, 2024 ರಂದು ಪ್ರಾರಂಭವಾಗಲಿದ್ದು, ಮತ್ತು ಅಕ್ಟೋಬರ್ 05, 2024 ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಧಿಕ್ರತ SSC ಪೋರ್ಟಲ್ ಗೆ ಭೇಟಿ ಕೊಡುವುದರ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.
SSC GD ಕಾನ್ಸ್‌ಟೇಬಲ್ ನೇಮಕಾತಿ 2025 ಕ್ಕೆ ಅರ್ಹರಾಗಲು ಅಭ್ಯರ್ಥಿಗಳು ನಿರ್ಧಿಷ್ಟ ಮಾನದಂಡಗಳನ್ನು ಪೂರೈಸತಕ್ಕದ್ದು. 2024 ರ ಜನವರಿ ರಂದು ಅರ್ಜಿದಾರರ ವಯೋಮಿತಿ 18 ರಿಂದ 23 ವರ್ಷಗಳ ನಡುವೆ ನಿಗದಿಪಡಿಸಲಾಗಿದೆ. ಆದರೆ ಮೀಸಲು ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಲಿಕೆಯನ್ನು ನೀಡಲಾಗಿದೆ.ಶೆಡ್ಯೂಲ್ ಕಾಸ್ಟ್ (SC) ಮತ್ತು ಶೆಡ್ಯೂಲ್ ಟ್ರೈಬ್ಸ್ (ST) ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ ಮತ್ತು ಇತರ ಹಿಂದುಳಿದ ವರ್ಗಗಳ (OBC) ಅಭ್ಯರ್ಥಿಗಳಿಗೆ 3 ವರ್ಷಗಳ ಸಡಿಲಿಕೆ ಒದಗಿಸಲಾಗಿದೆ. ಹೆಚ್ಚುವರಿಯಾಗಿ, ಮಾಜಿ ಸೈನಿಕರು ತಮ್ಮ ವಾಸ್ತವಿಕ ವಯಸ್ಸಿನಿಂದ ಸೈನಿಕ ಸೇವೆಯನ್ನು ಕಡಿತಗೊಳಿಸಿದ ನಂತರ 3 ವರ್ಷಗಳ ವಯೋಮಿತಿಯ ಸಡಲಿಕೆಯನ್ನು ಪಡೆಯಲು ಅರ್ಹರಾಗಿರುತ್ತಾರೆ. ಶೈಕ್ಷಣಿಕ ಅರ್ಹತೆಯನ್ನು ಪೂರೈಸಲು, ಅಭ್ಯರ್ಥಿಗಳು ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
SSC GD ಕಾನ್ಸ್‌ಟೇಬಲ್ ನೇಮಕಾತಿ 2025 ರ ಅರ್ಜಿ ಶುಲ್ಕ ₹100. ಆದರೆ, ಕೆಲವು ಮೀಸಲು ವರ್ಗಗಳಿಗೆ ಅರ್ಜಿ ಶುಲ್ಕದ ವಿನಾಯಿತಿ ನೀಡಲಾಗಿದೆ. ಮಹಿಳಾ ಅಭ್ಯರ್ಥಿಗಳು, SC, ST, ಮತ್ತು ಮಾಜಿ ಸೈನಿಕರಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ. ಆಸಕ್ತ ಅರ್ಜಿದಾರರು ಅರ್ಜಿ ಪ್ರಕ್ರಿಯೆಯ ಸಮಯದಲ್ಲಿ ಅಪ್‌ಲೋಡ್ ಮಾಡಲು ಅಗತ್ಯವಿರುವ ಎಲ್ಲಾ ಅಗತ್ಯ ದಾಖಲೆಗಳು, ಫೋಟೋ ಮತ್ತು ಸಹಿಯನ್ನು ಸಿದ್ಧಪಡಿಸತಕ್ಕದ್ದು.
SSC GD ಕಾನ್ಸ್‌ಟೇಬಲ್ ನೇಮಕಾತಿ 2025 ಬಹಳಷ್ಟು ಹುದ್ದೆಗಳು ಅಂದರೆ ಸುಮಾರು 46,000 ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಅಧಿಕ್ರತ ಅಧಿಸೂಚನೆಯನ್ನು ಎಸ್‌ಎಸ್‌ಸಿ (SSC) ತನ್ನ ಅಧಿಕ್ರತ ಪೋರ್ಟಲ್ ನಲ್ಲಿ ದಿನಾಂಕ 27-08-2024 ರಂದು ಬಿಡುಗಡೆ ಮಾಡಲಿದೆ. ನಿಖರವಾದ ಹುದ್ದೆಗಳ ಸಂಖ್ಯೆಯನ್ನು ಅಭ್ಯರ್ಥಿಗಳಿಗೆ ಅಧಿಕ್ರತ ಅಧಿಸೂಚನೆಯಲ್ಲಿ ವಿವರಿಸಲಾಗುತ್ತದೆ.
SSC GD ಕಾನ್ಸ್‌ಟೇಬಲ್ ನೇಮಕಾತಿ 2025 ರ ಅರ್ಹತಾ ಮಾನದಂಡಗಳು
- ಪುರುಷ ಅಭ್ಯರ್ಥಿಗಳು (ಜನರಲ್/OBC/SC): ಕನಿಷ್ಠ ಎತ್ತರ 170 ಸೆಂ.ಮೀ. ಮತ್ತು ಚೆಸ್ಟ್ 80-85 ಸೆಂ.ಮೀ. ಇರಬೇಕು. 24 ನಿಮಿಷಗಳಲ್ಲಿ 5 ಕಿ.ಮೀ ಓಡಬೇಕು.
- ಪುರುಷ ಅಭ್ಯರ್ಥಿಗಳು (ST): ಕನಿಷ್ಠ ಎತ್ತರ 162.5 ಸೆಂ.ಮೀ. ಮತ್ತು ಚೆಸ್ಟ್ 76-80 ಸೆಂ.ಮೀ. ಇರಬೇಕು. 24 ನಿಮಿಷಗಳಲ್ಲಿ 5 ಕಿ.ಮೀ ಓಡಬೇಕು.
- ಮಹಿಳಾ ಅಭ್ಯರ್ಥಿಗಳು (ಜನರಲ್/OBC/SC): ಕನಿಷ್ಠ ಎತ್ತರ 157 ಸೆಂ.ಮೀ. ಇರಬೇಕು. 8.5 ನಿಮಿಷಗಳಲ್ಲಿ 1.6 ಕಿ.ಮೀ ಓಡಬೇಕು.
- ಮಹಿಳಾ ಅಭ್ಯರ್ಥಿಗಳು (ST): ಕನಿಷ್ಠ ಎತ್ತರ 150 ಸೆಂ.ಮೀ. ಇರಬೇಕು. 8.5 ನಿಮಿಷಗಳಲ್ಲಿ 1.6 ಕಿ.ಮೀ ಓಡಬೇಕು.
- ಮಹಿಳಾ ಅಭ್ಯರ್ಥಿಗಳಿಗೆ ಚೆಸ್ಟ್ ಅಳತೆ ಅನ್ವಯಿಸುವುದಿಲ್ಲ.
ಆಯ್ಕೆ ಪ್ರಕ್ರಿಯೆ
- ಕಂಪ್ಯೂಟರ್ ಆಧಾರಿತ ಪರೀಕ್ಷೆ (CBE)
- ದೈಹಿಕ ದಕ್ಷತಾ ಪರೀಕ್ಷೆ (PET)
- ದೈಹಿಕ ಪ್ರಮಾಣ ಪರೀಕ್ಷೆ (PST)
- ವೈದ್ಯಕೀಯ ಪರೀಕ್ಷೆ
- ದಾಖಲೆಗಳ ಪರಿಶೀಲನೆ
ಅರ್ಜಿ ಸಲ್ಲಿಕೆ
- ಸ್ಟಾಫ್ ಸೆಲೆಕ್ಷೆನ್ ಕಮಿಷನ್ ಸಂಸ್ಥೆಯು SSC GD ಕಾನ್ಸ್‌ಟೇಬಲ್ ನೇಮಕಾತಿ 2025 ರ ಅಧಿಕ್ರತ ಅಧಿಸೂಚನೆಯನ್ನುದಿನಾಂಕ 27-08-2024 ರಂದು SSC ಅಧಿಕ್ರತ ಪೋರ್ಟಲ್ ನಲ್ಲಿ ಬಿಡುಗಡೆ ಮಾಡಲಿದ್ದು ಅಭ್ಯರ್ಥಿಗಳು ಅಫೀಷಿಯಲ್ ನೋಟಿಫಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
- ಅದೇ ದಿನ (27-08-2024) SSC ಆನ್ಲೈನ್ ಅರ್ಜಿ ಫಾರ್ಮ್ ಅನ್ನು ಬಿಡುಗಡೆ ಮಾಡಲಾಗಿದ್ದು, ಅಭ್ಯರ್ಥಿಗಳು ಎಲ್ಲ ವಿವರಗಳನ್ನು ನಮೂದಿಸುವುದರ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
- ಅಭ್ಯರ್ಥಿಗಳು ಎಸ್‌ಎಸ್‌ಸಿ ಅಧಿಕ್ರತ ಪೋರ್ಟಲ್ ಹೋಗಿ ಹೋಮ್ ತೆರೆಯಬೇಕು ಮತ್ತು “ಅಪ್ಲೈ” ಆಯ್ಕೆಯನ್ನು ಹುಡುಕಿ. “ಕಾನ್‌ಸ್ಟೇಬಲ್ – GD” ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಎಲ್ಲ ವಿವರಗಳನ್ನು ನಮೂದಿಸಿ ಅರ್ಜಿ ಸಲ್ಲಿಸಿ.
ಪ್ರಮುಖ ಲಿಂಕುಗಳು
ಅರ್ಜಿ ಸಲ್ಲಿಕೆ | ಇಲ್ಲಿ ಒತ್ತಿ |
ನೋಟಿಫಿಕೇಶನ್ | soon |