SIDBI ಗ್ರೇಡ್ B ಮ್ಯಾನೇಜರ್ ನೇಮಕಾತಿ 2024: ಬ್ಯಾಂಕಿನಲ್ಲಿ ಕೆಲಸ ಪಡೆಯಲು ಇಂದೇ ಅರ್ಜಿ ಸಲ್ಲಿಸಿ

SIDBI ಗ್ರೇಡ್ B ಮ್ಯಾನೇಜರ್ ನೇಮಕಾತಿ 2024: ಬ್ಯಾಂಕಿನಲ್ಲಿ ಕೆಲಸ ಪಡೆಯಲು ಇಂದೇ ಅರ್ಜಿ ಸಲ್ಲಿಸಿ

ಸ್ನೇಹಿತರೇ ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರೇಡ್ ಬಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಭಾರತದ ವಿವಿಧ ಶಾಖೆ ಕಚೇರಿಗಳಲ್ಲಿ ಒಟ್ಟು 35 ಹುದ್ದೆಗಳು ಖಾಲಿ ಇವೆ. ಈ ನೇಮಕಾತಿ ನಿಯಮಿತ (Deputation) ಅವಧಿಯದಾಗಿದೆ. ಆಯ್ಕೆಗೊಂಡ ಅಭ್ಯರ್ಥಿಗಳಿಗೆ ರೂ 55,200 ರಿಂದ ರೂ 99,750 ವೇತನ ನೀಡಲಾಗುವುದು. ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ ತಮ್ಮ ಪದವಿಯನ್ನು ಪೂರ್ಣಗೊಳಿಸಿರಬೇಕು. MBA, CA, CFA ಹೀಗೆ ಇನ್ನಿತರ ಪ್ರಮಾಣಪತ್ರವನ್ನು ಹೊಂದಿರುವ ಅಭ್ಯರ್ಥಿಗಳಿಗೆ ಹೆಚ್ಚು ಆದ್ಯತೆ ನೀಡಲಾಗುವುದು.ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು ಆಗಸ್ಟ್ 31, 2024 ರೊಳಗಾಗಿ 37 ವರ್ಷ ದಾಟಿರಬಾರದು.

ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಶಾರ್ಟ್ ಲಿಸ್ಟಿಂಗ್ ಮತ್ತು ಸಂದರ್ಶನದ ಮೂಲಕ ಮಾಡಲಾಗುವುದು. ಆಸಕ್ತ ಅಭ್ಯರ್ಥಿಗಳು ತಮ್ಮ ಏಲ್ಲ ಅಗತ್ಯ ದಾಖಲೆಗಳನ್ನು ಸೇರಿಸಿಕೊಂಡು ಸೆಪ್ಟೆಂಬರ್ 30, 2024 ರೊಳಗಾಗಿ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ. ಅರ್ಜಿಗಳನ್ನು ಮುಂಬೈನಲ್ಲಿನ CGM(HRDV), SWAVALAMBAN ಭವನ, ಬಂಡ್ರಾ ಕುರ್ಡ್ಲಾ ಕಾಂಪ್ಲೆಕ್ಸ್, ಮುಂಬೈ – 400051, ಮಹಾರಾಷ್ಟ್ರ ಅಥವಾ recruitment@sidbi.in ಇಮೇಲ್ ಮೂಲಕ ಕಳುಹಿಸಬಹುದು. ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲರುವುದಿಲ್ಲ.

SIDBI ಗ್ರೇಡ್ B ಮ್ಯಾನೇಜರ್ ನೇಮಕಾತಿ 2024 ಪ್ರಮುಖ ದಿನಾಂಕಗಳು

  • ಅಧಿಸೂಚನೆಯ ಪ್ರಕಟಣೆ: 11 ಸೆಪ್ಟೆಂಬರ್ 2024
  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 11 ಸೆಪ್ಟೆಂಬರ್ 2024
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 30 ಸೆಪ್ಟೆಂಬರ್ 2024

SIDBI ಗ್ರೇಡ್ B ಮ್ಯಾನೇಜರ್ ನೇಮಕಾತಿ 2024 ಹುದ್ದೆಗಳ ವಿವರ

SIDBI ಗ್ರೇಡ್ B ಮ್ಯಾನೇಜರ್ ನೇಮಕಾತಿ 2024 ರಲ್ಲಿ ಒಟ್ಟು 35 ಹುದ್ದೆಗಳ ಭರ್ತಿಗೆ ಆದೇಶ ನೀಡಲಾಗಿದ್ದು ಹುದ್ದೆಗಳ ವಿವರ ಹೀಗಿದೆ.

  • ಮ್ಯಾನೇಜರ್ (ಗ್ರೇಡ್ ‘ಬಿ’ – ಸಾಮಾನ್ಯ ಸ್ಟ್ರೀಮ್): 30 ಹುದ್ದೆಗಳು
  • ಮ್ಯಾನೇಜರ್ (ರಿಸ್ಕ್ ಮ್ಯಾನೇಜ್ಮೆಂಟ್ ವರ್ಟಿಕಲ್): 2 ಹುದ್ದೆಗಳು
  • ಮ್ಯಾನೇಜರ್ (ಟ್ರೆಜರಿ ಮತ್ತು ರಿಸೋರ್ಸ್ ಮ್ಯಾನೇಜ್ಮೆಂಟ್ ವರ್ಟಿಕಲ್): 5 ಹುದ್ದೆಗಳು

SIDBI ಗ್ರೇಡ್ B ಮ್ಯಾನೇಜರ್ ನೇಮಕಾತಿ 2024 ವಿದ್ಯಾರ್ಹತೆ

  • ಮ್ಯಾನೇಜರ್ (ಗ್ರೇಡ್ ‘ಬಿ’ – ಸಾಮಾನ್ಯ ಸ್ಟ್ರೀಮ್): ಯಾವುದೇ ಶ್ರೇಣಿಯ ಪದವಿಯನ್ನು ಹೊಂದಿರಬೇಕು. MBA, CA, CFA ಅಥವಾ ಸಮಾನ ಪ್ರಮಾಣಪತ್ರಗಳಿಗೆ ಆದ್ಯತೆ ನೀಡಲಾಗಿದೆ.
  • ಮ್ಯಾನೇಜರ್ (ರಿಸ್ಕ್ ಮ್ಯಾನೇಜ್ಮೆಂಟ್ ವರ್ಟಿಕಲ್): ಯಾವುದೇ ಶ್ರೇಣಿಯ ಪದವಿಯನ್ನು ಹೊಂದಿರಬೇಕು. ಜೊತೆಗೆ MBA/PGDM (ಫೈನಾನ್ಸ್), MSc ರಿಸ್ಕ್ ಮ್ಯಾನೇಜ್ಮೆಂಟ್ ಅಥವಾ BE/BTech (ರಿಸ್ಕ್ ಮ್ಯಾನೇಜ್ಮೆಂಟ್ ನಲ್ಲಿ ಪ್ರಮಾಣಪತ್ರಗಳೊಂದಿಗೆ) ಪೂರ್ಣಗೋಳಿಸಿರಬೇಕು.
  • ಮ್ಯಾನೇಜರ್ (ಟ್ರೆಜರಿ ಮತ್ತು ರಿಸೋರ್ಸ್ ಮ್ಯಾನೇಜ್ಮೆಂಟ್ ವರ್ಟಿಕಲ್): ಯಾವುದೇ ಶ್ರೇಣಿಯ ಪದವಿಯನ್ನು ಹೊಂದಿರಬೇಕು. MBA/PGDM (ಫೈನಾನ್ಸ್) ಅಥವಾ ಸಮಾನ ಪ್ರಮಾಣಪತ್ರಗಳು ಹೊಂದಿರುವ ಅಭ್ಯರ್ಥಿಗಳಿಗೆ ಹೆಚ್ಚು ಆದ್ಯತೆ ನೀಡಲಾಗುವುದು.

SIDBI ಗ್ರೇಡ್ B ಮ್ಯಾನೇಜರ್ ನೇಮಕಾತಿ 2024 ವಯೋಮಿತಿ

SIDBI ಗ್ರೇಡ್ B ಮ್ಯಾನೇಜರ್ ನೇಮಕಾತಿ 2024 ಅರ್ಜಿ ಸಲ್ಲಿಕೆಗೆ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ಮತ್ತು ಆಗಸ್ಟ್ 31, 2024 ರಂದು 37 ವರ್ಷ ದಾಟಿರಬಾರದು.

SIDBI ಗ್ರೇಡ್ B ಮ್ಯಾನೇಜರ್ ನೇಮಕಾತಿ 2024 ವೇತನ

SIDBI ಗ್ರೇಡ್ B ಮ್ಯಾನೇಜರ್ ನೇಮಕಾತಿ 2024 ರಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹55,200 – ₹99,750 ವೇತನ ನೀಡಲಾಗುವುದು.

SIDBI ಗ್ರೇಡ್ B ಮ್ಯಾನೇಜರ್ ನೇಮಕಾತಿ 2024 ಅರ್ಜಿ ಶುಲ್ಕ

SIDBI Grade B Manager ಹುದ್ದೆಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿಲ್ಲ. ಎಲ್ಲಾ ಅಭ್ಯರ್ಥಿಗಳು ಮುಕ್ತವಾಗಿ ಮತ್ತು ಯಾವುದೇ ಶುಲ್ಕವಿಲ್ಲದೆ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು

SIDBI ಗ್ರೇಡ್ B ಮ್ಯಾನೇಜರ್ ನೇಮಕಾತಿ 2024 ಆಯ್ಕೆ ಪ್ರಕ್ರಿಯೆ

  • ಮೊದಲು ಅಭ್ಯರ್ಥಿಗಳ ಅರ್ಜಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುವುದು.
  • ವೈಯಕ್ತಿಕ ಸಂದರ್ಶನ: ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳನ್ನು ವೈಯಕ್ತಿಕ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಈ ಸಂದರ್ಶನವು ಆನ್‌ಲೈನ್ ಅಥವಾ ಮುಖಾಮುಖಿ ರೂಪದಲ್ಲಿ ನಡೆಯಬಹುದು.
  • ಅಂತಿಮ ಆಯ್ಕೆ: ಸಂದರ್ಶನದ ಫಲಿತಾಂಶದ ಆಧಾರದಲ್ಲಿ ಅಂತಿಮ ಆಯ್ಕೆ ನಡೆಯುತ್ತದೆ.

SIDBI ಗ್ರೇಡ್ B ಮ್ಯಾನೇಜರ್ ನೇಮಕಾತಿ 2024 ಅರ್ಜಿ ಸಲ್ಲಿಕೆ

  • ಅರ್ಜಿ ಸಲ್ಲಿಕೆ ಮೊದಲು ಅಭ್ಯರ್ಥಿಗಳು SIDBI ಅಧಿಕೃತ ವೆಬ್ಸೈಟ್‌ ಬೇಟಿ ನೀಡಿ ಅಧಿಕ್ರತ ಅಧಿಸೂಚನೆಯಲ್ಲಿ ನೀಡಿರುವ ಎಲ್ಲ ಮಾಹಿತಿಯನ್ನು ಓದಿ ಅರ್ಥೈಸಿಕೊಳ್ಳಬೇಕು.
  • SIDBI ಅಧಿಕೃತ ವೆಬ್ಸೈಟ್‌ ಬೇಟಿ ನೀಡಿ ಅರ್ಜಿ ನಮೂನೆಯನ್ನು ಪಡೆಯಿರಿ.
  • ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ, ಅದರಲ್ಲಿ ಬೇಕಾದ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ.
  • ಪ್ರಮಾಣಪತ್ರಗಳು, ಪಾಸ್ಪೋರ್ಟ್‌ ಸೈಜ್‌ ಫೋಟೋ, ಮತ್ತು ಇತರ ಅಗತ್ಯ ಡಾಕ್ಯುಮೆಂಟ್‌ಗಳನ್ನು ಅರ್ಜಿಯೊಂದಿಗೆ ಸೇರಿಸಿ.
  • ಮೈಲ್ ಮೂಲಕ: ಅರ್ಜಿಯನ್ನು ಕೆಳಗಿನ ವಿಳಾಸಕ್ಕೆ ಕಳುಹಿಸಿ: CGM(HRDV), SWAVALAMBAN BHAVAN, Plot No. C-11, ‘G’ Block, Bandra Kurla Complex, Bandra (East), Mumbai – 400051, Maharashtra.
  • ಇಮೇಲ್ ಮೂಲಕ: recruitment@sidbi.in ಗೆ ಇಮೇಲ್ ಮೂಲಕ ಸಲ್ಲಿಸಿ
  • ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು 2024 ರ ಸೆಪ್ಟೆಂಬರ್ 30 ರೊಳಗಾಗಿ ಸಲ್ಲಿಸತಕ್ಕದ್ದು.

SIDBI ಗ್ರೇಡ್ B ಮ್ಯಾನೇಜರ್ ನೇಮಕಾತಿ 2024 ಪ್ರಮುಖ ಲಿಂಕುಗಳು

ಲೇಖನವನ್ನು ಶೇರ್ ಮಾಡಿ

Leave a Reply

Your email address will not be published. Required fields are marked *