ನೀವು ಕೆನರಾ ಬ್ಯಾಂಕ್ ನಲ್ಲಿ ಎಫ್‌ಡಿ ಮಾಡಿಸಿದರೆ ಎಷ್ಟು ತೆರಿಗೆ ಕಟ್ಟಬೇಕು ಎಂದು ತಿಳಿಯಿರಿ
ಸ್ನೇಹಿತರೇ ಎಫ್‌ಡಿ (ಫಿಕ್ಸೆಡ್ ಡೆಪಾಸಿಟ್) ಸಾರ್ವಜನಿಕರಲ್ಲಿ ತುಂಬಾ ಜನಪ್ರಿಯವಾದ ಹೂಡಿಕೆಗಳು ಅಂತಾನೆ ಹೇಳಬಹುದು, ಏಕೆಂದರೆ ಅವು ಜನರಿಗೆ ಸುರಕ್ಷಿತ ಮತ್ತು ಖಚಿತ ಆದಾಯವನ್ನು ನೀಡುತ್ತವೆ. ಆದಾಗ್ಯೂ ನೀವು ಕೆನರಾ ಬ್ಯಾಂಕಿನಲ್ಲಿ ಹೂಡಿಕೆ ಮಾಡಿದ್ದರೆ, ನಿಮ್ಮ ಹೂಡಿಕೆಗಳಿಂದ ಲಭ್ಯವಾಗುವ ಬಡ್ಡಿ ಆದಾಯಕ್ಕೆ ಸಂಬದಿಸಿದ ತೆರಿಗೆಗಳನ್ನು ಅರ್ಥಮಾಡಿಕೊಳ್ಳುವುದು ಇಂದು ತುಂಬಾ ಪ್ರಮುಖವಾಗಿದೆ.
ಹೌದು ಸ್ನೇಹಿತರೇ, ಕೆನರಾ ಬ್ಯಾಂಕ್ಎಫ್‌ಡಿ ಗಳಿಂದ ಲಭ್ಯವಾಗುವ ಆದಾಯವು ಸಂಪೂರ್ಣವಾಗಿ ಒಳಪಡುತ್ತದೆ. ಈ ಎಫ್‌ಡಿ ಬಡ್ಡಿಯ ಆದಾಯವನ್ನು ಒಂದು ಆರ್ಥಿಕ ವರ್ಷದ ಒಟ್ಟು ಆದಾಯಕ್ಕೆ ಸೇರಿಸಲಾಗುತ್ತದೆ ಮತ್ತು ತೆರಿಗೆ ಶ್ರೇಣಿಯ ಪ್ರಕಾರ ತೆರಿಗೆ ವಿಧಿಸಲಾಗುತ್ತದೆ. ಉದಾಹರಣೆಗೆ ನೀವು 10% ತೆರಿಗೆ ಶ್ರೇಣಿಯಲ್ಲಿ ಇದ್ದರೆ ಈ ಬಡ್ಡಿ ಆದಾಯಕ್ಕೆ 10% ತೆರಿಗೆ ವಿಧಿಸಲಾಗುವುದು.
ಟಿಡಿಎಸ್
ಒಂದು ವರ್ಷದಲ್ಲಿ ಕೆನರಾ ಬ್ಯಾಂಕ್ ನಲ್ಲಿರುವ ನಿಮ್ಮ ಎಫ್‌ಡಿ ಬಡ್ಡಿ ಆದಾಯವು ರೂ 40,000 (ಹಿರಿಯ ನಾಗರಿಕರಿಗೆ ರೂ 50,000) ಮೀರಿದರೆ ಕೆನರಾ ಬ್ಯಾಂಕ್ 10% ಟಿಡಿಎಸ್ ದರವನ್ನು ಕಡಿತಗೊಳಿಸುವುದು. ಒಂದು ವೇಳೆ ನಿವೇನಾದರೂ ನಿಮ್ಮ ಪ್ಯಾನ್ (PAN) ನೀಡದಿದ್ದರೆ 20% ಟಿಡಿಎಸ್ ಅನ್ನು ಕಡಿತಗೊಳಿಸುವುದು.
ಟಿಡಿಎಸ್ ತಪ್ಪಿಸುವುದು ಹೇಗೆ?
ಸ್ನೇಹಿತರೇ ನಿಮ್ಮ ಒಟ್ಟು ಆದಾಯ ತೆರಿಗೆ ಮಿತಿಯನ್ನು ಮೀರುತ್ತಿದೆ ಎಂಬುದು ನಿಮಗೆ ಸ್ಪಷ್ಟವಾದರೆ ಫಾಮ್ 15ಜಿ (60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗಾಗಿ) ಅಥವಾ ಫಾಮ್ 15ಎಚ್ (ಹಿರಿಯ ನಾಗರಿಕರಿಗಾಗಿ) ಅನ್ನು ಕೆನರಾ ಬ್ಯಾಂಕ್ ಗೆ ಸಲ್ಲಿಸಬಹುಡ್. ಇದರಿಂದ ನಿಮ್ಮ ಎಫ್‌ಡಿ ಬಡ್ಡಿ ಆದಾಯದ ಮೇಲಿನ ಟಿಡಿಎಸ್ ಕಡಿತಗೊಳ್ಳುವುದು ತಪ್ಪುತ್ತದೆ.
ಟ್ಯಾಕ್ಸ್ ಸೇವರ್ ಫಿಕ್ಸೆಡ್ ಡೆಪಾಸಿಟ್ಸ್ ಉಳಿತಾಯ ಯೋಜನೆಯು 5 ವರ್ಷದ ಕಾಲ ಮಿತಿಯ ಯೋಜನೆಯಾಗಿದ್ದು ಇದರಲ್ಲಿ ಹೂಡಿಕೆ ಮಾಡಿದವರು ಆದಾಯ ತೆರಿಗೆ ಸೆಕ್ಷನ್ 80ಸಿ ಅಡಿಯಲ್ಲಿ ರೂ 1.5 ಲಕ್ಷದವರೆಗೆ ಒಟ್ಟು ಆದಾಯದಲ್ಲಿ ಕಡಿತಕ್ಕೆ ಅರ್ಹವಾಗಿರುತ್ತಾರೆ.
ಈ ಮೇಲಿನ ಮಾಹಿತಿಯು ನಿಮಗೆ ಕೆನರಾ ಬ್ಯಾಂಕ್ ಎಫ್‌ಡಿ ಗಳ ಮೇಲಿನ ತೆರಿಗೆಯನ್ನು ಅರ್ಥ ಮಾಡಿಕೊಳ್ಳಲು ಸಹಾಯಕಾರಿಯಾಗುವುದು. ನಿಮ್ಮ ಹೂಡಿಕೆಗಳನ್ನು ಸರಿಯಾದ ಕ್ರಮದಲ್ಲಿ ಹೂಡಿಸುವುದು ಮತ್ತು ಅನಿರೀಕ್ಷಿತ ತೆರಿಗೆ, ಟಿಡಿಎಸ್ ಮತ್ತು ಬಡ್ಡಿ ಆದಾಯ ಸಂಬಂದಿತ ಮಾಹಿತಿಯನ್ನು ಪಡೆದು ನಾವು ಜಾಗರೂಕರಾಗಿರುವ ಅವಶ್ಯಕತೆ ಇದೆ.