ಗ್ರಹಲಕ್ಷ್ಮಿ ಯೋಜನೆಗೆ ಕತ್ತರಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದೇನು ಗೊತ್ತಾ
ಸ್ನೇಹಿತರೇ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖ ಮತ್ತು ಮಹಿಳಾ ಪರವಾದ ಗ್ರಹಲಕ್ಷ್ಮಿ ಯೋಜನೆಯನ್ನು ಸರ್ಕಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎನ್ನುವ ಊಹಾಪೋಹಗಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿರುಗೇಟು ನೀಡಿದ್ದಾರೆ. ಹಾಗಾದರೆ ಅವರು ಹೇಳಿದ್ದಾದರು ಏನು? ತಿಳಿಯೋನ ಬನ್ನಿ.
ಹೌದು ಗ್ರಹಲಕ್ಷ್ಮಿ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರ ಮನೆ ಯಜುಮಾನಿಯ ಬ್ಯಾಂಕ್ ಖಾತೆಯಲ್ಲಿ ಮಾಸಿಕವಾಗಿ 2,000 ರೂಪಾಯಿಯನ್ನು ಜಮೆ ಮಾಡುತ್ತದೆ. ಈ ಅನುಕೂಲತೆಯಿಂದ ಹೆಚ್ಚು ಜನಪ್ರಿಯತೆ ಗಳಿಸಿರುವ ಗ್ರಹಲಕ್ಷ್ಮಿ ಯೋಜನೆಯನ್ನು ಸ್ಥಗಿತಗೊಳಿಸಿದರೆ ಹೇಗಿರುತ್ತೆ ಹೇಳಿ? ಹೌದು ಕೆಲವು ದಿನಗಳಿಂದ ಸಾಮಾಜಿಕ ಜಾಲಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳದ್ದೆ ಸುದ್ದಿ.
ರಾಜ್ಯ ಸರ್ಕಾರ ಇತರ ಅಭಿವ್ರದ್ದಿ ಕಾರ್ಯಗಳಿಗೆ ಹಣ ಖರ್ಚು ಮಾಡಲು ಸಾದ್ಯವಾಗದೆ ಪರದಾಡುತ್ತಿದೆ. ರಾಜ್ಯದ ಬೊಕ್ಕಸದಲ್ಲಿರುವ ಪೂರ್ತಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡುತ್ತಿದೆ ಅಂತ ಹಲವಾರು ಪ್ರವೀಣರು ಅಭಿಪ್ರಾಯ ಪಟ್ಟಿದ್ದಾರೆ.
ಈ ಹಿಂದೆ ಪ್ರತಿ ತಿಂಗಳಿಗೆ ಸಮಯಕ್ಕೆ ಸರಿಯಾಗಿ ಜಮೆ ಆಗುತ್ತಿದ್ದ ಗ್ರಹಲಕ್ಷ್ಮಿ ಯೋಜನೆಯ ಹಣವು ಕಳೆದ ಎರಡು ತಿಂಗಳಿನಿಂದ ಜಮೆ ಆಗದಿರುವುದು ಈ ಊಹಾಪೋಹಗಳಿಗೆ ಮತ್ತಷ್ಟು ಬಲ ನೀಡಿದೆ ಅಂತಾ ಹೇಳಬಹುದು.
ಆದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈ ಬಗ್ಗೆ ಮಾತನಾಡಿ ತಿರುಗೇಟು ನೀಡಿದ್ದಾರೆ. ಹೌದು ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಗ್ರಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆಯಲ್ಲಿ ವಿಳಂಬವಾಗಿದ್ದು, ಇದರರ್ಥ ಗ್ರಹಲಕ್ಷ್ಮಿ ಯೋಜನೆಯ ಸ್ಥಗಿತವಲ್ಲ. ರಾಜ್ಯ ಸರ್ಕಾರ ನೀಡುತ್ತಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವ ಯಾವುದೇ ಚರ್ಚೆಗಳು ನಡೆದಿಲ್ಲ. ಇದರಿಂದ ಈ ಯೋಜನೆಗಳು ಪ್ರಾರಂಭದಲ್ಲಿ ಹೇಗಿದ್ದವೋ ಹಾಗೆ ಮುಂದುವರೆಯಲಿವೆ ಅಂತ ಸ್ಪಷ್ಟಪಡಿಸಿದರು.
ಪಂಚ ಗ್ಯಾರಂಟಿ ಯೋಜನೆಗಳನ್ನು ಚುನಾವಣಾ ಲಾಭಕ್ಕಾಗಿ ಅಥವಾ ಚುನಾವಣೆಯಲ್ಲಿ ವೋಟ್ ಗಳಿಸಿ ಅಧಿಕಾರಕ್ಕೆ ಏರುವ ದ್ರಷ್ಟಿಯಿಂದ ಜಾರಿಗೊಳಿಸಿದ್ದಲ್ಲ. ಪಂಚ ಗ್ಯಾರಂಟಿ ಯೋಜನೆಗಳನ್ನು ಸಾಮಾನ್ಯ ಜನರ ಬದುಕಿನಲ್ಲಿ ಬದಲಾವಣೆಯನ್ನು ತರಲು ಮತ್ತು ಮಹಿಳೆಯರ ಸಬಲಿಕರಣಕ್ಕೆ ರಾಜ್ಯ ಸರ್ಕಾರದ ಒಂದು ಉಪಾಯವಾಗಿದೆ.