UCMS Junior Assistant Recruitment 2024: 29 ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಆದೇಶ

UCMS Junior Assistant Recruitment 2024: 29 ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಆದೇಶ

ದೆಹಲಿ ಯುನಿವರ್ಸಿಟಿ ಅಥವಾ ಯುನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್ (UCMS) ಇದೀಗ 29 ಜೂನಿಯರ್ ಅಸಿಸ್ಟೆಂಟ್ (Junior Assistant) ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿ (New recruitment) ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು UCMS ಅಧಿಕೃತ ಅಧಿಸೂಚನೆಯಲ್ಲಿ (UCMS Official notification) ನೀಡಿರುವ ಅರ್ಹತಾ ಮಾನದಂಡಗಳ ಮಾಹಿತಿಯನ್ನು ಪಡೆದುಕೊಂಡು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಕನಿಷ್ಠ 10+2 ಸ್ಕೂಲ್ ಸೀನಿಯರ್ ಸೆಕಂಡರಿ ಶಾಲಾ ಪ್ರಮಾಣಪತ್ರ (Senior Secondary School Certificate) ಪಡೆದಿರಬೇಕು ಮತ್ತು ಇಂಗ್ಲಿಷ್‌ನಲ್ಲಿ 35 ಶಬ್ದಗಳು ಪ್ರತಿ ನಿಮಿಷ ಅಥವಾ ಹಿಂದಿಯಲ್ಲಿ 30 ಶಬ್ದಗಳು ಪ್ರತಿ ನಿಮಿಷದ ಟೈಪಿಂಗ್ ವೇಗ ಹೊಂದಿರಬೇಕು.

UCMS ನೇಮಕಾತಿ 2024 ರ ಅರ್ಜಿ ಪ್ರಕ್ರಿಯೆಯು ಸೆಪ್ಟೆಂಬರ್ 19, 2024 ರಂದು ಆರಂಭಗೊಂಡಿದ್ದು, ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ ಅಕ್ಟೋಬರ್ 9, 2024 ಆಗಿದೆ. ಸಾಮಾನ್ಯ/ಈ‌ಡಬಲ್ಯು‌ಎಸ್/ಓ‌ಬಿ‌ಸಿ ವರ್ಗದ ಅಭ್ಯರ್ಥಿಗಳು ₹500 ಅರ್ಜಿ ಶುಲ್ಕ ಪಾವತಿಸಬೇಕಾಗಿದ್ದು, SC/ST ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ. UCMS ನೇಮಕಾತಿ 2024 ರ ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆ, ಟೈಪಿಂಗ್ ಕೌಶಲ್ಯ ಪರೀಕ್ಷೆಯ ಒಟ್ಟು ಅಂಕಗಳನ್ನು ಆಧರಿಸಿ ಅಂತಿಮ ಆಯ್ಕೆಯನ್ನು ನಿಗದಿಪಡಿಸಲಾಗುತ್ತದೆ.

ಪ್ರಮುಖ ದಿನಾಂಕಗಳು

UCMS Recruitment 2024 ರ ಅಧಿಸೂಚನೆಯು ಸೆಪ್ಟೆಂಬರ್ 19, 2024 ರಂದು ಬಿಡುಗಡೆಯಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸೆಪ್ಟೆಂಬರ್ 19, 2024 ರಂದು ಆರಂಭವಾಗಿದ್ದು, ಅಕ್ಟೋಬರ್ 9, 2024 ರಂದು ಕೊನೆಗೊಳ್ಳಲಿದೆ.

ಹುದ್ದೆಗಳ ವಿವರ

UCMS Recruitment 2024 ಅಧಿಸೂಚನೆಯ ಪ್ರಕಾರ, ಒಟ್ಟು 29 ಜೂನಿಯರ್ ಅಸಿಸ್ಟೆಂಟ್ (Group-C, Ministerial) ಹುದ್ದೆಗಳ ಭರ್ತಿಗೆ ಆದೇಶ ನೀಡಲಾಗಿದೆ.

ಒಟ್ಟು 29 ಹುದ್ದೆಗಳನ್ನು ವಿವಿಧ ವರ್ಗದ ಅಭ್ಯರ್ಥಿಗಳಿಗೆ ಈ ಕೆಳಗಿನಂತೆ ಹಂಚಲಾಗಿದೆ:

  • Unreserved (UR): 12
  • Scheduled Caste (SC): 4
  • Scheduled Tribe (ST): 2
  • Other Backward Classes (OBC): 7
  • Economically Weaker Section (EWS): 2
  • Persons with Benchmark Disabilities (PwBD): 2

ವಿದ್ಯಾರ್ಹತೆ

UCMS Recruitment 2024 ರ ಪ್ರಕಾರ, ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಈ ಕೆಳಗಿನ ವಿದ್ಯಾರ್ಹತೆಗಳನ್ನು ಹೊಂದಿರಬೇಕು:

  • 10+2 ಸೀನಿಯರ್ ಸೆಕಂಡರಿ ಶಾಲಾ ಪ್ರಮಾಣಪತ್ರ
  • ಇಂಗ್ಲಿಷ್‌ನಲ್ಲಿ 35 ಶಬ್ದಗಳು ಪ್ರತಿ ನಿಮಿಷದ ಟೈಪಿಂಗ್ ವೇಗ ಅಥವಾ ಹಿಂದಿಯಲ್ಲಿ 30 ಶಬ್ದಗಳು ಪ್ರತಿ ನಿಮಿಷದ ಟೈಪಿಂಗ್ ವೇಗ

ವಯೋಮಿತಿ

UCMS Recruitment 2024 ರ ಪ್ರಕಾರ, ಅಭ್ಯರ್ಥಿಯಕನಿಷ್ಠ 18 ಮತ್ತು ಗರಿಷ್ಠ ವಯಸ್ಸು 27 ವರ್ಷಗಳಾಗಿರಬೇಕು. ಮೀಸಲು ವರ್ಗದ ಅಭ್ಯರ್ಥಿಗಳಿಗೆ ವಯೋ ಸಡಲಿಕೆ ಈ ಕೆಳಗಿನಂತಿದೆ:

  • SC/ST: 5 ವರ್ಷಗಳ ಸಡಲಿಕೆ
  • OBC: 3 ವರ್ಷಗಳ ಸಡಲಿಕೆ
  • PwBD: 10 ವರ್ಷಗಳ ಸಡಲಿಕೆ (SC/ST: 5 ವರ್ಷಗಳು ಹೆಚ್ಚುವರಿ, OBC: 3 ವರ್ಷಗಳು ಹೆಚ್ಚುವರಿ)

ವೇತನ

UCMS Recruitment 2024 ಪ್ರಕಾರ, ಜೂನಿಯರ್ ಅಸಿಸ್ಟೆಂಟ್ ಹುದ್ದೆಯ ವೇತನ ಶ್ರೇಣಿಯು ₹19,900 – ₹63,200 (Level 2 as per 7th CPC) ಆಗಿದೆ.

ಅರ್ಜಿ ಶುಲ್ಕ

UCMS Recruitment 2024 ರ ಪ್ರಕಾರ, ಅರ್ಜಿ ಶುಲ್ಕ ಈ ಕೆಳಗಿನಂತಿದೆ:

  • ಯೂ‌ಆರ್/ಓ‌ಬಿ‌ಸಿ/ಈ‌ಡಬಲ್ಯು‌ಎಸ್: ₹500
  • ಎಸ್‌ಸಿ/ಎಸ್‌ಟಿ/ಪಿ‌ಡಬಲ್ಯು‌ಬಿ‌ಡಿ/ಮಹಿಳೆ: ವಿನಾಯಿತಿ

ಆಯ್ಕೆ ಪ್ರಕ್ರಿಯೆ

UCMS Recruitment 2024 ನೇಮಕಾತಿ ಪ್ರಕ್ರಿಯೆಯು ಹೀಗೆ ನಡೆಯಲಿದೆ:

  • ಲಿಖಿತ ಪರೀಕ್ಷೆ: ಸಾಮಾನ್ಯ ಜ್ಞಾನ, ತರ್ಕ ಸಾಮರ್ಥ್ಯ, ಗಣಿತ ಸಾಮರ್ಥ್ಯ, ಭಾಷಾ ಪ್ರವೀಣತೆ, ಪ್ರಬಂಧ ಮತ್ತು ಸಮಗ್ರ ಪರೀಕ್ಷೆಯನ್ನು ಒಳಗೊಂಡಿರುತ್ತದೆ.
  • ಟೈಪಿಂಗ್ ಕೌಶಲ್ಯ ಪರೀಕ್ಷೆ: ಇಂಗ್ಲಿಷ್‌ನಲ್ಲಿ 35 ಶಬ್ದಗಳು ಪ್ರತಿ ನಿಮಿಷ ಅಥವಾ ಹಿಂದಿಯಲ್ಲಿ 30 ಶಬ್ದಗಳು ಪ್ರತಿ ನಿಮಿಷದ ವೇಗವನ್ನು ಹೊಂದಿರಬೇಕು.
  • ಅಂತಿಮ ಆಯ್ಕೆ: ಲಿಖಿತ ಮತ್ತು ಟೈಪಿಂಗ್ ಕೌಶಲ್ಯ ಪರೀಕ್ಷೆಯ ಒಟ್ಟು ಅಂಕಗಳನ್ನು ಆಧರಿಸಿ.

ಅರ್ಜಿ ಸಲ್ಲಿಕೆ

  • UCMS Recruitment 2024 ರ ಅರ್ಜಿ ಸಲ್ಲಿಕೆಯ ಮೊದಲು ಅಭ್ಯರ್ಥಿಗಳು ಅಧಿಕ್ರತ ಅಧಿಸೂಚನೆಯಲ್ಲಿ ನೀಡಿರುವ ಎಲ್ಲ ಅರ್ಹತಾ ಮಾನದಂಡಗಳನ್ನು (ವಿದ್ಯಾರ್ಹತೆ ಮತ್ತು ವಯೋಮಿತಿ) ಪರಿಶೀಲಿಸಿ ತಾವು ತಾವು ಅರ್ಹರು ಎಂದು ಖಚಿತ ಪಡಿಸಿಕೊಳ್ಳಬೇಕು.
  • ನಂತರ ಯುನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್ (UCMS) ಅಧಿಕ್ರತ ಪೋರ್ಟಲ್ ಗೆ ಭೇಟಿ ನೀಡಿ.
  • ಪ್ರೊಫೈಲ್‌ನಲ್ಲಿ ಲಾಗಿನ್ ಮಾಡಲು ಆಯ್ಕೆ ಪಡೆಯುವಿರಿ, ನಿಮ್ಮ ಇಮೇಲ್ ಅಥವಾ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ನೊಂದಣಿಯನ್ನು ಮಾಡಿಸಿಕೊಳ್ಳಿ.
  • ಅರ್ಜಿ ನಮೂನೆಯನ್ನು ಎಲ್ಲ ಅಗತ್ಯ ಮಾಹಿತಿಯೊಂದಿಗೆ ಭರ್ತಿ ಮಾಡಿದ ಬಳಿಕ ಶೈಕ್ಷಣಿಕ ಪ್ರಮಾಣಪತ್ರಗಳು, ಐ‌ಡಿ ಪ್ರೂಫ್, ಇತ್ತೀಚಿನ ಭಾವಚಿತ್ರ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
  • ನಿಮ್ಮ ವರ್ಗಕ್ಕೆ ಸಂಬಂದಿತ ಅರ್ಜಿ ಶುಲ್ಕವನ್ನು ನೆಟ್ ಬ್ಯಾಂಕಿಂಗ್, ಕ್ರೆಡಿಟ್/ಡೆಬಿಟ್ ಕಾರ್ಡ್ ಅಥವಾ ಯೂ‌ಪಿ‌ಐ ಮೂಲಕ ಪಾವತಿಸಿ.
  • ಅರ್ಜಿಯಲ್ಲಿ ನಮೂದಿಸಿರುವ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.

ಪ್ರಮುಖ ಲಿಂಕುಗಳು

ಲೇಖನವನ್ನು ಶೇರ್ ಮಾಡಿ

Leave a Reply

Your email address will not be published. Required fields are marked *