ಉಜ್ಜ್ವಲಾ 2.0: ಅರ್ಜಿ ಸಲ್ಲಿಸಿದವರಿಗೆ ಉಚಿತ ಸಿಲಿಂಡರ್!

ಉಜ್ಜ್ವಲಾ 2.0: ಅರ್ಜಿ ಸಲ್ಲಿಸಿದವರಿಗೆ ಉಚಿತ ಸಿಲಿಂಡರ್!

ಸ್ನೇಹಿತರೇ ಪ್ರಧಾನ್ ಮಂತ್ರಿ ಉಜ್ಜ್ವಲಾ ಯೋಜನೆ ಭಾರತ ಸರ್ಕಾರದ ಅತೀ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿರುವ ಯೋಜನೆಗಳಲ್ಲಿ ಒಂದಾಗಿದ್ದು, ಈ ಯೋಜನೆಯಡಿಯಲ್ಲಿ ಆರ್ಥಿಕವಾಗಿ ದುರ್ಬಲ ಹೊಂದಿರುವ ಅಥವಾ ಬಿ‌ಪಿ‌ಎಲ್ ಕುಟುಂಬಗಳ ಮಹಿಳೆಯರಿಗೆ ನೂತನ ಎಲ್‌ಪಿ‌ಜಿ ಸಂಪರ್ಕವನ್ನು ಒದಗಿಸಿ ಕೊಡಲಾಗುತ್ತದೆ.

ಪ್ರಧಾನ್ ಮಂತ್ರಿ ಉಜ್ಜ್ವಲಾ ಯೋಜನೆಯ (PMUY) ಪ್ರಮುಖ ಅಂಶಗಳು

  • PMUY ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಮುಖ್ಯವಾಗಿ ಬಿ‌ಪಿ‌ಎಲ್ ಕುಟುಂಬಗಳ ಮಹಿಳೆಯರಿಗೆ ಒಂದು ಉಚಿತ ಎಲ್‌ಪಿ‌ಜಿ ಸಿಲಿಂಡರ್ ಜೊತೆಗೆ ಉಚಿತ ಒಲೆಯನ್ನು ನೀಡಲಾಗುತ್ತದೆ.
  • ಈ ಯೋಜನೆ ಅಡಿಯಲ್ಲಿ ಪ್ರತಿ ಸಂಪರ್ಕಕ್ಕೆ ರೂ 3,200 ರೂ ಸಹಾಯಧನವನ್ನು ನೀಡಲಾಗುತ್ತಿದ್ದು ಕೇಂದ್ರ ಸರ್ಕಾರ  ಮತ್ತು ತೈಲ ಉತ್ಪಾದನಾ ಕಂಪನಿಗಳು ತಲಾ ರೂ 1,600 ಅನ್ನು ನೀಡುತ್ತವೆ.
  • ಪ್ರಥಮವಾಗಿ ಒಂದು ಉಚಿತ ಸಿಲಿಂಡರ್ ನೀಡಿದ ನಂತರ ಫಲಾನುಭವಿಗಳು ನಂತರದ ರೀಫಿಲ್ ಗಳನ್ನು ಸಬ್ಸಿಡಿ ಬೆಲೆಯಲ್ಲಿ (ರೂ 300 subsidy) ಖರೀದಿಸಬೇಕಾಗುತ್ತದೆ.

ಉಜ್ಜ್ವಲಾ 2.0

ಸ್ನೇಹಿತರೇ ಉಜ್ಜ್ವಲಾ 2.0 ಅಂದರೆ ಈ ಮೇಲಿನ ಯೋಜನೆಯ ಹೆಚ್ಚುವರಿ ರೂಪ ಅಂತ ಹೇಳಬಹುದು. ಏಕೆಂದರೆ ಕೇಂದ್ರ ಸರ್ಕಾರ ಇದೀಗ ಹೊಸದಾಗಿ ರಚನೆಗೊಂಡ ಕುಟುಂಬಗಳಿಗೆ ಹೆಚ್ಚುವರಿ ಪ್ರಯೋಜನವನ್ನು ಒದಗಿಸಲು ಜಾರಿಗೊಳಿಸಿರುವುದಾಗಿದೆ. ಆಸಕ್ತರು PMUY ಯೋಜನೆಯ ಅರ್ಹತೆಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.

ಉಜ್ಜ್ವಲಾ 2.0 ಅಡಿಯಲ್ಲಿ ಅರ್ಜಿ ಸಲ್ಲಿಸಲು ಮಹಿಳೆಗೆ 18 ವರ್ಷ ತುಂಬಿರಬೇಕು ಮತ್ತು ಆ ಮನೆಯಲ್ಲಿ ಬೇರೆ ಯಾರು ಸಹ (ಕುಟುಂಬದ ಸದಸ್ಯರು) ಎಲ್‌ಪಿ‌ಜಿ ಸಂಪರ್ಕವನ್ನು ಈ ಮೊದಲು ಪಡೆದಿರಬಾರದು.

ಆಗಸ್ಟ್ 13, 2024 ರ ತನಕ PMUY ಯೋಜನೆ ಅಡಿಯಲ್ಲಿ ಒಟ್ಟು 10,33,43,911 ಎಲ್‌ಪಿ‌ಜಿ ಸಂಪರ್ಕವನ್ನು ನೀಡಲಾಗಿದ್ದು, ಉಜ್ಜ್ವಲಾ 2.0 ಯೋಜನೆ ಅಡಿಯಲ್ಲಿ 2,34,87,282 ಸಂಪರಕಗಳನ್ನು ಕಲ್ಪಿಸಲಾಗಿದೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರ ಉಜ್ಜ್ವಲಾ 2.0 ಒಟ್ಟಾರೆಯಾಗಿ 126 ಮಿಲಿಯನ್ ಮನೆಗಳಿಗೆ ಎಲ್‌ಪಿ‌ಜಿ ಸಂಪರ್ಕವನ್ನು ಒದಗಿಸಿರುವುದು ಗಮನಾರ್ಹ.

PMUY ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು

  • ಆಧಾರ್ ಕಾರ್ಡ್
  • ಮೊಬೈಲ್ ಸಂಖ್ಯೆ
  • ಭಾವಚಿತ್ರ
  • ಬಿ‌ಪಿ‌ಎಲ್ ರೇಷನ್ ಕಾರ್ಡ್
  • ಬ್ಯಾಂಕ್ ಖಾತೆಯ ವಿವರ

PMUY ಅರ್ಜಿ ಸಲ್ಲಿಕೆ ಹೇಗೆ?

ಈ ಮೇಲಿನ ದಾಖಲೆಗಳೊಂದಿಗೆ ಹತ್ತಿರದ ಗ್ಯಾಸ್ ಡೀಲರ್ ಬಳಿ ಭೇಟಿ ನೀಡಿ ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ.

ಲೇಖನವನ್ನು ಶೇರ್ ಮಾಡಿ

Leave a Reply

Your email address will not be published. Required fields are marked *