Unified Pension Scheme: ಏಕೀಕ್ರತ ಪಿಂಚಣಿ ಯೋಜನೆಯಿಂದ ಏನೆಲ್ಲಾ ಬದಲಾವಣೆ ಆಗಲಿವೆ ಗೊತ್ತಾ

Unified Pension Scheme: ಏಕೀಕ್ರತ ಪಿಂಚಣಿ ಯೋಜನೆಯಿಂದ ಏನೆಲ್ಲಾ ಬದಲಾವಣೆ ಆಗಲಿವೆ ಗೊತ್ತಾ

ಸ್ನೇಹಿತರೇ ಕೆಂದ್ರ ಸರ್ಕಾರಿ ನೌಕರರ ಬಹುಕಾಲದ ಬೇಡಿಕೆ ಸಂಬಂದಿತ ಮಹತ್ವದ ನಿರ್ಧಾರವನ್ನು ಪ್ರಧಾನಿ ಮೋದಿ ನೇತ್ರತ್ವದ ಸಚಿವ ಸಂಪುಟ ಸಭೆ ಕೈಗೊಂಡಿದೆ.

ಹೌದು ಸರ್ಕಾರಿ ನೌಕರರ ಪ್ರಸ್ತುತ ಹಳೆಯ ಪಿಂಚಣಿ ಯೋಜನೆ ಮತ್ತು ಹೊಸ ಪಿಂಚಣಿ ಯೋಜನೆಯ ಬದಲಾಗಿ ಏಕೀಕ್ರತ ಪಿಂಚಣಿ ಯೋಜನೆಗೆ (Unified Pension Scheme) ಕೆಂದ್ರ ಸಚಿವ ಸಂಪುಟ ಶನಿವಾರ ಅನುಮೋದನೆ ನೀಡಿದೆ. ಈ ಪಿಂಚಣಿ ಯೋಜನೆ ವ್ಯಾಪ್ತಿ ಅಡಿಯಲ್ಲಿ ಕೆಂದ್ರಸರ್ಕಾರದ ಎಲ್ಲ ನೌಕರರು ಬರಲಿದ್ದು, ಸರ್ಕಾರಿ ನೌಕರರಿಗೆ ಏಕೀಕ್ರತ ಪಿಂಚಣಿ ಯೋಜನೆಯಿಂದ ಹೆಚ್ಚು ಲಾಭವಾಗಲಿದೆ ಎಂದು ತಿಳಿದು ಬಂದಿದೆ.

ಸ್ನೇಹಿತರೇ ಕೇಂದ್ರ ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ನೀಡಿರುವ ಮಾಹಿತಿ ಪ್ರಕಾರ, ಹೊಸ ಪಿಂಚಣಿ ಸುಧಾರಣೆಗೆ ಹೆಚ್ಚು ಬೇಡಿಕೆಗಳು ಬಂದಿರುವುದರಿಂದ ನರೇಂದ್ರ ಮೋದಿಜಿ ಅವರು 2023 ರಲ್ಲಿ ಟಿ ವಿ ಸೋಮನಾಥನ್ ಅವರ ನೇತ್ರತ್ವದಲ್ಲಿ ಸಮಿತಿ ರಚಿಸಿ, ಈ ಕುರಿತು ಅಧ್ಯಯನ ನಡೆಸಿ ಶಿಫಾರಸ್ಸು ನೀಡಲು ಸೂಚಿಸಿದ್ದರು.

ಹೀಗಾಗಿ ಟಿ ವಿ ಸೋಮನಾಥನ್ ನೇತ್ರತ್ವದ ಸಮಿತಿಯು ಹಳೆಯ ಪಿಂಚಣಿ ಮತ್ತು ಹೊಸ ಪಿಂಚಣಿಯ ಯೋಜನೆ ಬದಲಾಗಿ ಏಕೀಕ್ರತ ಪಿಂಚಣಿ ಯೋಜನೆ ಶಿಫಾರಸ್ಸು ಮಾಡಿರುತ್ತದೆ. ಇದರಿಂದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಎಲ್ಲರ ಸಮ್ಮತಿಯಿಂದ ಏಕೀಕ್ರತ ಪಿಂಚಣಿ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು. ಮತ್ತು ಈ ಯೋಜನೆಯು ಮುಂದಿನ ಏಪ್ರಿಲ್ 1, 2025 ರಿಂದ ಅನ್ವಯವಾಗಲಿದೆ.

ಏನಿದು ಏಕೀಕ್ರತ ಪಿಂಚಣಿ ಯೋಜನೆ (Unified Pension Scheme)

ಖಚಿತ ಪಿಂಚಣಿ: ಸ್ನೇಹಿತರೇ 25 ವರ್ಷಗಳ ಸಮಯ ಸರ್ಕಾರಿ ಸೇವೆಯನ್ನು ಪೂರ್ಣಗೊಳಿಸಿದ ನೌಕರರಿಗೆ ಅವರ ನೀವ್ರತ್ತಿಯ ಹಿಂದಿನ 12 ತಿಂಗಳ ಮೂಲವೇತನದ 50% ಪಿಂಚನಿಯನ್ನು ನೀಡಲಾಗುವುದು.

ಖಚಿತ ಕುಟುಂಬ (ಫ್ಯಾಮಿಲಿ) ಪಿಂಚಣಿ: ಏಕೀಕ್ರತ ಪಿಂಚಣಿ ಯೋಜನೆ ಅಡಿಯಲ್ಲಿ ಸರ್ಕಾರಿ ನೌಕರರು ಸೇವೆಯಲ್ಲಿದ್ದಾಗ ಮ್ರತಪಟ್ಟರೆ ನೌಕರರ ವೇತನದ 60% ಪಿಂಚಣಿಯನ್ನು ಕುಟುಂಬಸ್ಥರಿಗೆ ನೀಡಲಾಗುವುದು.

ಖಚಿತ ಕನಿಷ್ಠ ಪಿಂಚಣಿ: ನೌಕರರು ಕನಿಷ್ಠ 10 ವರ್ಷಗಳ ಸರ್ಕಾರಿ ಸೇವೆಯನ್ನು ಸಲ್ಲಿಸಿದರೆ ಸಾಕು, ಅಂತವರಿಗೆ ನೀವ್ರತ್ತಿಯ ನಂತರ ಯೂ‌ಪಿ‌ಎಸ್ ಮಾಸಿಕವಾಗಿ 10,000 ರೂ ನೀಡಲಾಗುವುದು.

ಹಣದುಬ್ಬರ: ಈ ಮೇಲೆ ತಿಳಿಸಿದ ಮೂರು ಖಚಿತ ಪಿಂಚಣಿಗಳ ಮೇಲೆ ಏಕೀಕ್ರತ ಪಿಂಚಣಿ ಯೋಜನೆ ಅಡಿಯಲ್ಲಿ ಹಣದುಬ್ಬರ ಸೂಚ್ಯಂಕವನ್ನು ಒದಗಿಸಿದೆ.

ಲೇಖನವನ್ನು ಶೇರ್ ಮಾಡಿ

Leave a Reply

Your email address will not be published. Required fields are marked *