ನೀವು ಈಎಮ್‌ಐ ಪಾವತಿಯನ್ನು ಮಿಸ್ ಮಾಡಿದರೆ ಎನಾಗುತ್ತೆ ಗೊತ್ತಾ
ಸ್ನೇಹಿತರೇ ಭಾರತದಲ್ಲಿ ಪ್ರಸ್ತುತ ಸಾಮಾನ್ಯವಾಗಿ ಎಲ್ಲ ಜನರು ಮನೆ ಖರೀದಿ, ಕಾರು ಖರೀದಿ ಅಥವಾ ವಿದ್ಯಾಭ್ಯಾಸಕ್ಕಾಗಿ ಅಥವಾ ಇನ್ನಿತರ ಕೆಲಸ ಕಾರ್ಯಗಳಿಗೆ ಸಾಲದಾತರಿಂದ ಸಾಲವನ್ನು ಪಡೆದು ತಮ್ಮ ತಮ್ಮ ಇಷ್ಟ ಕಷ್ಟಗಳನ್ನು ಪೂರೈಸಿಕೊಳ್ಳುತ್ತಾರೆ. ಈಎಮ್‌ಐ ಗಳು ಸಾಲವನ್ನು ಸುಲಭವಾಗಿ ಪಾವತಿಸಲು ಅನುಕೂಲವನ್ನು ಮಾಡಿಕೊಳ್ಳುತ್ತವೆ. ಆದರೆ ಕೆಲವೊಮ್ಮೆ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕಾರಣದಿಂದ ಈಎಮ್‌ಐ(EMI) ಪಾವತಿಯಲ್ಲಿ ವಿಳಂಬ ಆಗಬಹುದು. ಇಂತಹ ಸಮಯದಲ್ಲಿ ಎನಾಗುತ್ತೆ ಎಂಬುದನ್ನೂ ಈ ಲೇಖನದಲ್ಲಿ ತಿಳಿಯೋನ ಬನ್ನಿ.
ಈಎಮ್‌ಐ ಪಾವತಿಯನ್ನು ಮಿಸ್ ಮಾಡಿದರೆ ಉಂಟಾಗುವ ಮೊದಲ ಪರಿನಾಮ ಏನೆಂದರೆ ಅದು “ತಡ ಪಾವತಿ ಶುಲ್ಕ”. ಹೌದು, ಸಾಲದಾತರು ನೀವು ಮಿಸ್ ಮಾಡಿದ ಪ್ರತಿಯೊಂದು ಈಎಮ್‌ಐ ಗೂ ಪಾವತಿ ದಂಡವನ್ನು ವಿಧಿಸುತ್ತಾರೆ. ಇದು ಬಾಕಿ ಇರುವ ಮೊತ್ತದ ಮೇಲಿನ ಬಡ್ಡಿಯನ್ನು ಸೇರುವುದರಿಂದ ಸಾಲದ ಒಟ್ಟು ವೆಚ್ಚವನ್ನು ಹೆಚ್ಚಿಸುತ್ತದೆ.
ನೀವೇನಾದರೂ ಈಎಮ್‌ಐ ಪಾವತಿಯನ್ನು ಮಿಸ್ ಮಾಡಿದರೆ ಅದು ನಿಮ್ಮ ಕ್ರೆಡಿಟ್ ಸ್ಕೋರ್ ಗೆ ಹಾನಿಯನ್ನುಂಟು ಮಾಡಬಹುದು. ಏಕೆಂದರೆ ಸಾಲದಾತರು ಮಿಸ್ ಮಾಡಿದ ಈಎಮ್‌ಐ ಪಾವತಿಗಳನ್ನು ಕ್ರೆಡಿಟ್ ಬ್ಯುರೋ ಗೆ ವರದಿ ಮಾಡುತ್ತಾರೆ. ಇದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಭಾರಿ ಇಳಿಕೆಯಾಗಬಹುದು.
ಸ್ನೇಹಿತರೇ ಈಎಮ್‌ಐ ಗಳನ್ನು ಹೆಚ್ಚು ಬಾರಿ ಮಿಸ್ ಮಾಡುವುದರಿಂದ ನಿಮ್ಮ ಸಾಲವನ್ನು ಅಶಕ್ತ ಸಾಲ (NPA) ಎಂದು ಘೋಷಿಸಲಾಗುತ್ತದೆ. ಇದರ ಪರಿಣಾಮವಾಗಿ ಸಾಲದಾತರು ನೀವು ಬಾಕಿ ಕಟ್ಟ ಬೇಕಾಗಿರುವ ಮೊತ್ತವನ್ನು ವಾಪಸ್ ಪಡೆಯಲು ಕಾನೂನು ಕ್ರಮ ಕೈಗೊಳ್ಳುತ್ತಾರೆ. ಇದರಿಂದ ಮನೆಯ ಅಥವಾ ಕಾರು ಅಡ ಇರುವ ಆಸ್ತಿಗಳನು ವಶಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ.
ಹೀಗಾಗಿ ನಿವೇನಾದರೂ ಈಎಮ್‌ಐ ಪಾವತಿ ಮಿಸ್ ಮಾಡಿದರೆ ನಿಮ್ಮ ಆರ್ಥಿಕ ಸ್ಥಿತಿಯ ಮೇಲೆ ಭಾರಿ ಪರಿಣಾಮ ಬೀಳಲಿದೆ. ಇದನ್ನು ತಪ್ಪಿಸಲು ನೀವು ಈಎಮ್‌ಐ ಪಾವತಿಯನ್ನು ಸಮಯಕ್ಕೆ ಸರಿಯಾಗಿ ಪಾವತಿಸಲು ಸಾಧ್ಯವಾಗದೆ ಇದ್ದರೆ ನಿಮ್ಮ ಸಾಲದಾತರೊಂದಿಗೆ ಚರ್ಚಿಸಿ ಡೀಫಾಲ್ಟ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿ.